September 6, 2026
Mumbai News Kannada
ಮುಂಬಯಿ

ಬಾಂಬೆ ಬಂಟ್ಸ್ ಅಸೋಸಿಯೇಶನ್ ಉನ್ನತ ಶಿಕ್ಷಣ ಸಂಸ್ಥೆಯ ರಾತ್ರಿ ಕಾಲೇಜಿನ ದಶಮಾನೋತ್ಸವ ಸಂಭ್ರಮ





     ತಂದೆ-ತಾಯಿ ಮತ್ತು ಶಿಕ್ಷಕರು ವಿದ್ಯಾ ರ್ಥಿಗಳನ್ನು ಕತ್ತಲೆಯಿಂದ ಬೆಳಕಿನತ್ತ ಕೊಂಡೊಯ್ಯುವವರು   : ಸಿಎ ಸುರೇಂದ್ರ ಕೆ. ಶೆಟ್ಟಿ

ನಮುಂಬಯಿ, ಮಾಡಿ 2.ಬಾಂಬೆ ಬಂಟ್ಸ್ ಆಸೋಸಿಯೇಶನ್‌ನ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳ ಸಂಸ್ಕೃತಿ, ಸಂಸ್ಕಾರವನ್ನು ಬಿಂಬಿಸುವ ಕಾರ್ಯಕ್ರಮಗಳನ್ನು ಕಂಡಾಗ ಸಂತೋಷವಾಗುತ್ತಿದೆ.ಎಲ್ಲ ವಿದ್ಯಾರ್ಥಿಗಳು ಇಂದು ಉತ್ತಮವಾಗಿ ತಮ್ಮ ಜವಾಬ್ದಾರಿ ಯನ್ನು ನಿರ್ವಹಿಸಿದ್ದಾರೆ. ಉತ್ತಮ ಪ್ರದ ರ್ಶನಗಳನ್ನು ನೀಡುವುದರೊಂದಿಗೆ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದ್ದಾರೆ. ಸಂಸ್ಥೆಯು ದಶಮಾನೋತ್ಸವವನ್ನು ಆಚ ರಿಸಿರುವುದು ಹೆಮ್ಮೆಯ ವಿಷಯವಾಗಿದೆ. ಸಂಸ್ಥೆಯ ಅಭಿವೃದ್ಧಿಯಲ್ಲಿ ಪ್ರಾಂಶು ಪಾಲರು, ಶಿಕ್ಷಕರು, ಸಿಬಂದಿ ಹಾಗೂ ವಿದ್ಯಾರ್ಥಿಗಳ ಪಾತ್ರ ಮಹತ್ತರವಾಗಿದೆ. ತಂದೆ-ತಾಯಿ ಮತ್ತು ಶಿಕ್ಷಕರು ವಿದ್ಯಾ ರ್ಥಿಗಳನ್ನು ಕತ್ತಲೆಯಿಂದ ಬೆಳಕಿನತ್ತ ಕೊಂಡೊಯ್ಯುವವರು. ಆದ್ದರಿಂದ ಗುರು ಗಳು ಮತ್ತು ತಂದೆ-ತಾಯಿಯನ್ನು ಅತ್ಯಂತ ಗೌರವದಿಂದ ಕಾಣುವುದು ವಿದ್ಯಾರ್ಥಿ ಗಳ ಕರ್ತವ್ಯವಾಗಿದೆ ಎಂದು ಬಾಂಬೆ ಬಂಟ್ಸ್ ಅಸೋಸಿಯೇಶನ್ ಅಧ್ಯಕ್ಷಸಿಎ ಸುರೇಂದ್ರ ಕೆ. ಶೆಟ್ಟಿ ಅವರು ನುಡಿದರು.

ಫೆ 5ರಂದು ಜೂಯಿ ನಗರದ ಬಾಂಬೆ ಬಂಟ್ಸ್ ಅಸೋಸಿಯೇಶನ್ ಇದರ ಬಂಟ್ಸ್ ಸೆಂಟರ್ನ ಶಶಿಕಲಾ, ಮನಮೋಹನ ಶೆಟ್ಟಿ ಕಾಂಪ್ಲೆಕ್ಸ್‌ನ ಸೌಮ್ಯಲತಾ ಸದಾ ನಂದ ಶೆಟ್ಟಿ ಅಡಿಟೋರಿಯಂನಲ್ಲಿ ನಡೆದ ಆಸೋಸಿಯೇಶನ್‌ನ ಉನ್ನತ ಶಿಕ್ಷಣ ಸಂಸ್ಥೆಯ ರಾತ್ರಿ ಶಾಲೆಯ ದಶಮಾನೋ ತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ. ಮಾತನಾಡಿದ ಅವರು, ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿ ಗಳು ಯುವ ಮನಸ್ಸನ್ನು ಹೊಂದಿದ್ದು ನಮ್ಮ ದೇಶದ ಮುಂದಿನ ಭವಿಷ್ಯವು ನೀವಾಗಿದ್ದೀರಿ. ನಮ್ಮ ಹಿರಿಯರು ಮುಖ್ಯ ವಾಗಿ ನಮ್ಮ ಮಾಜಿ ಟ್ರಸ್ಟಿಗಳ ಹಾಗೂ ಮಾಜಿ ಅಧ್ಯಕ್ಷರು, ದಾನಿಗಳ ಪ್ರಯತ್ನ ದಿಂದ ಇಂದು ಈ ಶಿಕ್ಷಣ ಸಂಸ್ಥೆಯು ಎಲ್ಲ ಸೌಲಭ್ಯವನ್ನು ಹೊಂದಿದೆ. ವಿದ್ಯಾರ್ಥಿಗಳು

ಇದರ ಪ್ರಯೋಜನವನ್ನು ಪಡೆಯಬೇಕು. ನಮ್ಮ ಶಿಕ್ಷಣ ಸಂಸ್ಥೆಯ ಮಕ್ಕಳು ಅಂತರ್ ಕಾಲೇಜ್ ಸ್ಪರ್ಧೆಯಲ್ಲಿ ಯಶಸ್ಸನ್ನು ಸಾಧಿಸಿ ಶಿಕ್ಷಣ ಸಂಸ್ಥೆಗೆ ಹೆಸರು ತರುತ್ತಿದ್ದಾರೆ. ವಿದ್ಯಾರ್ಥಿಗಳು ಚೆನ್ನಾಗಿ ಕಲಿಯುವುದ ರೊಂದಿಗೆ ತಾಯಿ-ತಂದೆ ಶಿಕ್ಷಕರನ್ನು ಹಿರಿಯರನ್ನು ಹಾಗೂ ಶಿಕ್ಷಣ ಸಂಸ್ಥೆಯನ್ನು ಪ್ರೀತಿಸಿದ್ದಲ್ಲಿ ಯಶಸ್ಸು ಕಂಡಿತವಾಗಿ ಲಭಿಸುತ್ತದೆ ಎಂದರು.

 ಬಾಂಬೆ ಬಂಟ್ಸ್ ಅಸೋಸಿಯೇಶ ಉಪಾಧ್ಯಕ್ಷ ನ್ನ್ಯಾಯವಾದಿ ಡಿ. ಕೆ. ಶೆಟ್ಟಿ ಮಾತನಾಡುತ್ತಾ ಇಲ್ಲಿ ಸೇರಿದ ವಿದ್ಯಾರ್ಥಿಗಳ ಟೀಂವರ್ಕ್, ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಸ್ಫೂರ್ತಿಯನ್ನು ನೋಡಿ ಸಂತೋಷವಾಗಿದೆ. ಮುಂದೆಯೂ ಇದನ್ನು ಇದೇ ರೀತಿಯಲ್ಲಿ ನೀವು ಮುಂದುವರಿಸಬೇಕು. ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಅತಿ ಮುಖ್ಯ. ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ವಿಕಾಸನಗೊಳಿಸುತ್ತದೆ. ಈ ಕಾಲೇಜಿನಲ್ಲಿ ಕಲಿತ ನೀವು ಮುಂದೆ ಈ ಶಿಕ್ಷಣ ಸಂಸ್ಥೆಯ ಅಭಿವೃದ್ಧಿಗೆ ಸಹಕರಿಸುವಂತಾಗಬೇಕು. ಕಳೆದ ಹತ್ತು ವರ್ಷಗಳಲ್ಲಿ ಸಂಸ್ಥೆಯ ಸಾಧನೆ ಅಪಾರವಾಗಿದೆ ಎಂದು ನುಡಿದರು,

ಉನ್ನತ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷ ನ್ಯಾಯವಾದಿ ರತ್ನಾಕ್ಷರ ವಿ. ಶೆಟ್ಟಿ ಉನ್ನತ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಶ್ರೀಧರ ಕೆ. ಶೆಟ್ಟಿ ಆಸೋಸಿಯೇಶನ್‌ ಗೌರವ ಪ್ರಧಾನ ಕಾರ್ಯದರ್ಶಿ ಐಕಳ ಕಿಶೋರ್ ಕೆ. ಶೆಟ್ಟಿ ಅವರು ಸಂದರ್ಭೋಚಿತವಾಗಿ ಮಾತನಾಡಿ ಶುಭಹಾರೈಸಿದರು.

ಅಸೋಸಿಯೇಶನ್ ಅಧ್ಯಕ್ಷ. ,ಸಿ ಎ  ಸುರೇಂದ್ರ ಕೆ. ಶೆಟ್ಟಿ ಅವರು ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಉನ್ನತ ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷನ್ಯಾಯವಾದಿ ಅಶೋಕ್ ಡಿ. ಶೆಟ್ಟಿ ಅಸೋಸಿಯೇಶನ್‌ನ ಕೋಶಾಧಿಕಾರಿ ಸಿಎ ವಿಶ್ವನಾಥ ಶೆಟ್ಟಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ತೇಜಾಕ್ಷೀ ಎಸ್. ಶೆಟ್ಟಿ, ಪ್ರಾಂಶುಪಾಲ ಎಸ್ ಎಸ್ ಭಂಡಾರಿ ಉಪಸ್ಥಿತರಿದ್ದರು.

ಶಿಕ್ಷಕರಾದ ಯೋಗಿತಾ ಪಾಟೀಲ್ ಮತ್ತು ಪ್ರೊ| ಗುರಾವ್, ಮನೀಷಾ ಪೂಜಾರಿ ಅವರು ಕಾರ್ಯಕ್ರಮವನ್ನು ನಿರ್ವಹಿಸಿ ವಂದಿಸಿದರು. ಪ್ರತಿಭಾವಂತ ವಿದ್ಯಾರ್ಥಿ ಗಳನ್ನು ಸಂಸ್ಥೆಯ ವತಿಯಿಂದ ಪ್ರತಿಭಾ ಪುರಸ್ಕಾರವನ್ನಿತ್ತು ಗೌರವಿಸಲಾಯಿತು. ಮನೋರಂಜನ ಕಾರ್ಯಕ್ರಮ ನಡೆಯಿತು.

ಬಾಂದೆ ಬಂಟ್ಸ್ ಅಸೋಸಿಯೇಶನ್ ಇದರ ಪದಾಧಿಕಾರಿಗಳು, ಶಿಕ್ಷಣ ಸಮಿತಿಯ ಪದಾಧಿಕಾರಿಗಳು ಉಪ ಸಮಿತಿಯ ಪದಾಧಿಕಾರಿಗಳು . ಶಿಕ್ಷಕ ವೃಂದದರು. ಶಿಕ್ಷಕೇತರ ಬಂದಿ, ವಿದ್ಯಾರ್ಥಿಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

————————-

ಶಿಕ್ಷಣ ಸಂಸ್ಥೆಯ ಮೂಲಕ ಅಸೋಸಿಯೇಶನ್‌ ಕೀರ್ತಿ ಬಹಳಷ್ಟು ಎತ್ತರಕ್ಕೆ ಬೆಳೆದಿದೆ. ಇಲ್ಲಿಯ ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಮಾಡಿ, ಉತ್ತಮ ಅಂಕಗಳನ್ನು ಪಡೆಯುತ್ತಿದ್ದಾರೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನು ಪೂರ್ತಿಗೊಳಿಸಿದ ಬಳಿಕ ಕೂಡ ನಮ್ಮ ಸಂಸ್ಥೆಯ ಸಂಬಂಧವನ್ನು ಉಳಿಸಿ ಬೆಳೆಸಿಕೊಳ್ಳಬೇಕು. ಕಳೆದ ಹತ್ತು ವರ್ಷಗಳಿಂದ ಸಂಸ್ಥೆಯು ಗುಣಮಟ್ಟದ ಶಿಕ್ಷಣವನ್ನು ನೀಡುವಲ್ಲಿ ಯಶಸ್ಸನ್ನು ಕಂಡಿದೆ. ಸಹಕರಿಸಿದ ಎಲ್ಲರನ್ನು ಈ ಸಂದರ್ಭದಲ್ಲಿ ಅಭಿನಂದಿಸುತ್ತಿದ್ದೇನೆ.

ನ್ಯಾಯವಾದಿ ರತ್ನಾಕರ ವಿ. ಶೆಟ್ಟಿ, ಕಾರ್ಯಾಧ್ಯಕ್ಷ ಬಾಂದೆ ಬಂಟ್ಸ್ ಅಸೋಸಿಯೇಶನ್ ಉನ್ನತ ಶಿಕ್ಷಣ ಸಮಿತಿ,

———-

ವಿದ್ಯಾರ್ಥಿಗಳು ಕೇವಲ ಶಿಕ್ಷಣವನ್ನು ಪಡೆದರೆ ಸಾಲದು, ಸಂಸ್ಕೃತಿ, ಸಂಸ್ಕಾರ, ಆಚಾರ ವಿಚಾರಗಳನ್ನು ಅಳವಡಿಸಿ: ಡಿ. ಕೆ. ಶೆಟ್ಟಿ 

ಸಮಾರಂಭದ ಮುಖ್ಯ ಅತಿಥಿ ಇನ್ನ ಹಾಸ್ಪಿಟಾಲಿಟಿ ಪ್ರೈವೇಟ್ ಲಿಮಿಟೆಡ್ ಇದರ ಎಂಡಿ ಡಿ. ಕೆ. ಶೆಟ್ಟಿ ಅವರು ಮಾತನಾಡಿ, ವಿದ್ಯಾರ್ಥಿಗಳು ಕೇವಲ ಶಿಕ್ಷಣವನ್ನು ಪಡೆದರೆ ಸಾಲದು, ಸಂಸ್ಕೃತಿ, ಸಂಸ್ಕಾರ, ಆಚಾರ ವಿಚಾರಗಳನ್ನು ಅಳವಡಿಸಿಕೊಂಡಾಗ ಬದುಕು ಬಂಗಾರವಾಗುತ್ತದೆ, ಸೋಲೆಂಬುದು ಯಶಸ್ವಿನ ಮೆಟ್ಟಲಿದ್ದಾಗೆ ಅದರಿಂದ ವಿದ್ಯಾರ್ಥಿಗಳು ಸೋಲನ್ನು ಗೆಲುವಾಗಿ ಸ್ವೀಕರಿಸಿ ಜೀವನದಲ್ಲಿ ಸಾಧನೆ ಎಂಬುದು ಮುಂದುವರಿಯುತ್ತಿರಲಿ, ಬಾಂಬೆ ಬಂಟ್ಸ್ ಆನೋಸಿಯೇಶನ್ ಈ ಶಿಕ್ಷಣ ಸಂಸ್ಥೆಯ ಮೂಲಕ ನಿಮ್ಮೆಲ್ಲರಿಗೆ ಉತ್ತಮವಾದ ವೇದಿಕೆಯನ್ನು ನೀಡಿದೆ ಬದುಕಲ್ಲಿ ಉತ್ತಮವಾದ ಬದಲಾವಣೆಯನ್ನು ತರಲು ಪ್ರಯತ್ನಿಸಿ ಎಂದರು.



Related posts

ಮುಂಬೈನಲ್ಲಿ 11 ಆರ್ಕೆಸ್ಟ್ರಾ ಬಾರ್‌ಗಳ ಪರವಾನಗಿ ಅಮಾನತು: ಪೊಲೀಸರ ಕ್ರಮಕ್ಕೆ ತಾರತಮ್ಯದ ಆರೋಪ

Mumbai News Desk

ಎಲ್ಲರ ಬದುಕಲ್ಲಿ ಧರ್ಮ ಕಾರ್ಯಗಳು ನಡೆಯಲಿ: ಸಾಣೂರು ಸಾಂತಿಂಜ ಜನಾರ್ದನ ಭಟ್‌

Mumbai News Desk

ಮುಲ್ಕಿ: ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಸಭಾಭವನ ಕಾಮಗಾರಿ ಕುರಿತು ಸಭೆ

Mumbai News Desk

ನಮೋ ಮೊಯರ್ ಗ್ಲೋಬಲ್ ಪೌಂಡೇಶನ್; ಗ್ರಾಮೀಣ ಪ್ರದೇಶದ ಶಾಲೆಯಲ್ಲಿ ಕಂಪ್ಯೂಟರ್ ವಿತರಣೆ,

Mumbai News Desk

ಶ್ರೀ ದೇವಿ ಯಕ್ಷಕಲಾ ನಿಲಯ ವಿರಾರ್- ನಾಲಾಸೋಪಾರ: ಯಕ್ಷಗಾನ  ಶಿಬಿರ, ಭರತ ನಾಟ್ಯ, ಭಜನೆ,, ಕನ್ನಡ ಕಲಿಕೆ  ಮುಹೂರ್ತ

Mumbai News Desk

ಕುಲಾಲ ಸಂಘದ ಗುರುವಂದನಾ ಭಜನಾ ಮಂಡಳಿಯ ಗುರು ಪೂರ್ಣಿಮೆಯ ಆಚರಣೆ.

Mumbai News Desk