September 6, 2026
Mumbai News Kannada
ಪ್ರಕಟಣೆ

ಶ್ರೀ ಶನೀಶ್ವರ ಮಹತೋಭಾರ ದೇವಸ್ಥಾನ ಮಲಾಡ್ ಪೂರ್ವ ಕುರಾರ್ ವಿಲೇಜ್. ಶನಿ ಕಥೆ ಪ್ರವಚನ ಮತ್ತು  ಗ್ರಂಥ ವಾಚನ ಶಿಕ್ಷಣ ತರಬೇತಿ – 





ಶ್ರೀ ಶನೀಶ್ವರ ಮಹತೋಭಾರ ದೇವಸ್ಥಾನ, ಕುರಾರ್ ವಿಲೇಜ್ ನಲ್ಲಿ ಶನಿ ಕಥೆ ಪ್ರವಚನ ಮತ್ತು ಶನಿ ಗ್ರಂಥ ವಾಚನ ತರಬೇತಿಯ ಉದ್ಘಾಟನಾ ಕಾರ್ಯಕ್ರಮ ಜೂ.22 ಶನಿವಾರ, ಸಂಜೆ 6 ಗಂಟೆಗೆ ದೇವಸ್ಥಾನದ ಅಧ್ಯಕ್ಷರಾದ ಶ್ರೀನಿವಾಸ ಸಾಪಲ್ಯ ಹಾಗು ಸಲೆಹೆಗಾರರು ಮತ್ತು ಹಿರಿಯ ಶನಿ ಕಥಾ ಪ್ರವಚನಕಾರರಾದ ನಾರಾಯಣ್ ಶೆಟ್ಟಿ ಅವರ ಮುಖೆನ ಜರಗಲಿದೆ.

ಮುಂಬೈ ಮಹಾನಗರದಲ್ಲಿ ಸಮರ್ಥ ಅರ್ಥ ಹೇಳುವ ಶನಿ ಕಥಾ ಪ್ರವಚನಕಾರರ ಸಮಸ್ಸೆ ಈಗಾಗಲೇ ಎದ್ದು ಕಾಣುತ್ತಿದೆ, ಒಂದು ತಲೆಮಾರು ಕಳೆದ ನಂತರ ಮುಂದೆ ಶನಿ ಕಥೆ ಹೇಳುವ ಯುವ ಪ್ರತಿಭೆ ಈಗಾಗಲೇ ತಯಾರು ಮಾಡಬೇಕಿದೆ ಎನ್ನುವ ಕಾಳಜಿಯನ್ನು ಅರ್ಥೈಸಿಕೊಂಡ ಅಧ್ಯಕ್ಷರಾದ ಶ್ರೀನಿವಾಸ ಸಾಫಲ್ಯರು, ಯುವ ಪೀಳಿಗೆಗೆ ಶನಿ ಕಥೆ ಹೇಳುವ ರೀತಿ, ವಿಷಯ ಸಾಮ್ರಾಜ್ಯ, ಕಥೆಯಲ್ಲಿ ಅಡಕವಾದ ಒಳಅರ್ಥ ಮತ್ತು ಭಾವಾರ್ಥ, ಆದ್ಯಾತ್ಮಿಕ ಚೌಕಟ್ಟು, ಹಾಗು ಭಕ್ತಿ ಮಾರ್ಗ ಪ್ರಚೋದನೆ ಮತ್ತು ಗ್ರಂಥ ಪಠನೆಯ ರೀತಿ, ಪ್ರಾರಂಭ ಹಾಗು ಮುಕ್ತಾಯದ ಚೌಕಟ್ಟು, ಅಧ್ಯಾಯ ಮುಕ್ತಾಯದ ರೀತಿ ನೀತಿ ಯನ್ನು ಪ್ರತೀ ಭಾನುವಾರ ಸಂಜೆ 6 ರಿಂದ 8 ರ ತನಕ ದೇವಸ್ಥಾನದಲ್ಲಿ ಶ್ ಶ್ರೀನಿವಾಸ ಸಾಫಲ್ಯರು ಮತ್ತು ನಾರಾಯಣ್ ಶೆಟ್ಟಿ ಯವರು ಉಚಿತವಾಗಿ ತರಬೇತಿ ನೀಡಲಿದ್ದಾರೆ.

ಆಸಕ್ತಿಯುಳ್ಳ ಮಕ್ಕಳು, ಮಹಿಳೆಯರು ಮತ್ತು ಯುವಕರು, ಮಹನೀಯರು ಈ ತರಬೇತಿ ಯಲ್ಲಿ ಭಾಗವಹಿಸಬಹುದು. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಪೂಜಾ ಸಮಿತಿಯ ಉಪಾದ್ಯಕ್ಶರಾದ ರಮೇಶ್ ಆಚಾರ್ಯ ಇವರನ್ನು ಸಂಪರ್ಕಿಸಬಹುದು -೯೮೯೨೪೧೩೨೦೪. (9892413204)



Related posts

ಡೊಂಬಿವಲಿ ಶ್ರೀ ಜಗದಂಬಾ ಮಂದಿರ: ಏಪ್ರಿಲ್ 4 ಮತ್ತು 5ರಂದು 11ನೇ ವಾರ್ಷಿಕ ಮಹೋತ್ಸವ

Mumbai News Desk

ಕುಲಾಲ ಸಂಘ, ಮುಂಬಯಿ.  ನ 23: ಮಂಗಳೂರಿನ ಮಂಗಳ ದೇವಿ ಬಳಿ ಕುಲಾಲ ಭವನ ಲೋಕಾರ್ಪಣೆ

Mumbai News Desk

ಆ. 8: ವರ್ಲಿ ಶ್ರೀ ಸಿದ್ಧೇಶ್ವರ ಅನ್ನದಾತ ಅಪ್ಪಾಜಿ ಬೀಡು ಫೌಂಡೇಶನ್ ಆಶ್ರಯದಲ್ಲಿ ‘ತುಳುನಾಡ ಸಂಸ್ಕೃತಿದ ಆಟಿದ ಕೂಟ’

Mumbai News Desk

ಕುಮಾರ ಕ್ಷತ್ರಿಯ ಸಂಘ ಮುಂಬಯಿ: ಫೆ. 22ರಂದು ವಾರ್ಷಿಕ ಮಹಾಪೂಜೆ, ಮಹಾಸಭೆ

Mumbai News Desk

ರಾಜಲಕ್ಷ್ಮೀ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಯ 41ನೇ ವಾರ್ಷಿಕ ಸಭೆ

Mumbai News Desk

ಸಾರ್ವಜನಿಕ ಶ್ರೀ ಶನೀಶ್ವರ ಸೇವಾ ಸಮಿತಿ ವಸಯಿ,ಫೆ. 15ರಂದು, 26ನೇ ವಾರ್ಷಿಕ ಶ್ರೀ ಸತ್ಯನಾರಾಯಣ ಮಹಾಪೂಜೆ ಹಾಗೂ ಶ್ರೀ ಶನಿಮಹಾಪೂಜೆ

Mumbai News Desk