September 6, 2026
Mumbai News Kannada
ಸುದ್ದಿ

ಶ್ರೀ ಭಗವತೀ ಕ್ಷೇತ್ರ ಉಪ್ಪಳ, ಮುಂಬಯಿ ಸಮಿತಿ ರಚನೆ





ಮುಂಬಯಿ : ಉಪ್ಪಳದ ಶ್ರೀ ಭಗವತೀ ಕ್ಷೇತ್ರದ ಸುತ್ತು ಗೋಪುರದ ಹೆಚ್ಚಿನ ಕೆಲಸವು ಈಗಾಗಲೇ ಮುಗಿದಿದ್ದು ಮುಂಬಯಿಯಲ್ಲಿರುವ ಕ್ಷೇತ್ರದ ಹೆಚ್ಚಿನವರಿಗೆ ಈ ಬಗ್ಗೆ ತಿಳಿದಿರಲಿಕ್ಕಿಲ್ಲ. ಶ್ರೀ ಕ್ಷೇತ್ರಕ್ಕೆ ಸಂಮಂದಿಸಿದ ಇಲ್ಲಿನವರನ್ನು ಸಂಘಟಿಸುವುದು ಅಗತ್ಯ. ಇದರಿಂದ ಸಂಘಟಿತರಾಗಿ ಭಗವತಿ ಮಾತೆಯ ಸೇವೆ ಮಾಡುತ್ತಾ ನಮ್ಮವರ ಸಮಸ್ಯೆ ಬಗೆಯರಿಸಲು ಸಹಕರಿಸೋಣ ಎಂದು ಬೊಳ್ನಾಡ್ ಶ್ರೀ ಭಗವತೀ ಕ್ಷೇತ್ರದ ಜೀರ್ಣೊದ್ದಾರದ ರೂವಾರಿ, ಕೊಡುಗೈ ದಾನಿ ಕೃಷ್ಣ ಎನ್ ಉಚ್ಚಿಲ್ ನುಡಿದರು.


ಶ್ರೀ ಭಗವತೀ ಕ್ಷೇತ್ರ ಉಪ್ಪಳದ ಪದಾಧಿಕಾರಿಗಳು ಮುಂಬಯಿಗಾಗಮಿಸಿ ಜೂ. 30ರಂದು ಸಂಜೆ ಅಂಧೇರಿ ಪಶ್ಚಿಮ, ಜುಹು ಸಮೀಪದ ಮೇಯರ್ಸ್ ಹಾಲ್ ನಲ್ಲಿ ಮುಂಬಯಿಯ ಸದಸ್ಯರೊಂದಿಗೆ ನಡೆದ ಸಭೆಯಲ್ಲಿ ಮಾತನಾಡುತ್ತಾ ಬೊಳ್ನಾಡ್ ಶ್ರೀ ಭಗವತೀ ಕ್ಷೇತ್ರಕ್ಕೂ ಉಪ್ಪಳ ಶ್ರೀ ಭಗವತೀ ಕ್ಷೇತ್ರಕ್ಕೂ ನಿಕಟ ಸಂಪರ್ಕವಿದೆ. ನನ್ನ ತರವಾಡು ಮನೆ ಉಪ್ಪಳ ಕ್ಷೇತ್ರಕ್ಕೆ ಸೇರಿದ್ದು ನಾನೂ ಈ ಕ್ಷೇತ್ರಕ್ಕೆ ಒಳಪಟ್ಟಿರುವೆನು ಎನ್ನುತ್ತ ಅವರು ರೂ. 2ಲಕ್ಷ ನೀಡುತ್ತಾ ಮುಂದೆಯೂ ಸಹಕರಿಸುದಾಗಿ ತಿಳಿಸಿದರು.


ಶ್ರೀ ಭಗವತೀ ಕ್ಷೇತ್ರ ಉಪ್ಪಳ ಇದರ ಸಮಿತಿಯ ಅಧ್ಯಕ್ಷರಾದ ಸುಕುಮಾರ್ ಯು ಮಾತನಾಡುತ್ತಾ ಮುಂಬಯಿಯ ಸಮಿತಿಯು ಗಟ್ಟಿಯಾದಲ್ಲಿ ಊರಿನವರಿಗೆ ಸುಲಭವಾಗಬಹುದು. ಕೃಷ್ಣ ಎನ್ ಉಚ್ಚಿಲ್ ರಂತವರಿಗೆ ಹಣ ಬಲಕ್ಕಿಂತ ಜನಬಲ ಮುಖ್ಯ. ಆಗ ಮಾತ್ರ ಎಲ್ಲವೂ ಸರಿಯಾಗಿ ನಡೆಯುತ್ತದೆ. ಕೃಷ್ಣ ಎನ್ ಉಚ್ಚಿಲ್ ರ ನೇತೃತ್ವದಲ್ಲಿರುವ ಮುಂಬಯಿ ಸಮಿತಿ ನಮ್ಮ ಅಡಿಪಾಯದಂತೆ ಎನ್ನುತ್ತಾ ಮುಂಬಯಿ ಸಮಿತಿಯ ಗೌರವ ಅಧ್ಯಕ್ಷರಾಗಿ ಕೃಷ್ಣ ಎನ್ ಉಚ್ಚಿಲ್, ಅಧ್ಯಕ್ಷರಾಗಿ ಕಲಾವತಿ ಲಾಜರ್ ಕೋಟ್ಯಾನ್, ಕ್ಷೇತ್ರದ ಮುಂಬಯಿಯ ಗುರಿಕಾರರನ್ನಾಗಿ ತಿಮ್ಮಪ್ಪ ಬಂಗೇರ ಹಾಗೂ ಮೂಪತ್ತಿಯಾಗಿ ಶೀಮತಿ ಅಮೀನ್ ಇವರ ಹೆಸರನ್ನು ಘೋಷಿಸಿದರು.
ಮುಂಬಯಿ ಸಮಿತಿಯ ಪ್ರಥಮ ಅಧ್ಯಕ್ಷರಾಗಿ ಅವಿರೋದವಾಗಿ ಆಯ್ಕೆಗೊಂಡ ಕಲಾವತಿ ಲಾಜರ್ ಕೋಟ್ಯಾನ್ ಮಾತನಾಡುತ್ತಾ ಈಗಾಗಲೇ ಉಪ್ಪಳ ಕ್ಷೇತ್ರಕ್ಕೆ ಸಮೀಪವಿರುವ ನಮ್ಮ ತಾಯಿಯ ಹೆಸರಲ್ಲಿರುವ ಸುಮಾರು ೨೮ ಸೆಂಟ್ಸ ಜಾಗವನ್ನು ಮಕ್ಕಳಾದ ನಾವು ಉಪ್ಪಳ, ಶ್ರೀ ಭಗವತೀ ಕ್ಷೇತ್ರಕ್ಕೆ ಉಚಿತವಾಗಿ ನೀಡಿರುತ್ತೇವೆ ಎಂದರು.
ಗಂಗಾಧರ ಕಲ್ಲಾಡಿ, ನ್ಯಾ. ಅರವಿಂದ ಕೋಟ್ಯಾನ್ ತಮ್ಮ ಅಭಿಪ್ರಾಯವನ್ನು ಮಂಡಿಸಿದರು.


ಶ್ರೀ ಭಗವತೀ ಕ್ಷೇತ್ರ ಉಪ್ಪಳ, ಮುಂಬಯಿ ಸಮಿತಿಯಲ್ಲಿ ಉಪಾಧ್ಯಕ್ಷರುಗಳನ್ನಾಗಿ ಚಂದ್ರಹಾಸ ಕೋಟ್ಯಾನ್, ವಿಜಯ ಅಂಬಾಡಿ, ಪದ್ಮನಾಭ ಸುವರ್ಣ ಮತ್ತು ಭಾಸ್ಕರ ಕರ್ಕೇರ, ಕಾರ್ಯದರ್ಶಿಯಾಗಿ ಈಶ್ವರ ಎಂ. ಐಲ್, ಜೊತೆ ಕಾರ್ಯದರ್ಶಿಗಳಾಗಿ ಶಶಿಪ್ರಭಾ ಶೈಲೇಶ್ ಬಂಗೇರ ಮತ್ತು ನ್ಯಾ. ಅರವಿಂದ್ ಕೋಟ್ಯಾನ್, ಕೋಶಾಧಿಕಾರಿಯಾಗಿ ಪ್ರಕಾಶ್ ಸುವರ್ಣ, ಸಮಿತಿಯ ಸದಸ್ಯರುಗಳಾಗಿ ಚಂದ್ರಾವತಿ ವಸಂತ್, ಗಂಗಾಧರ ಕಲ್ಲಾಡಿ, ಸತೀಷ್ ಕೋಟ್ಯಾನ್, ಸತೀಷ್ ಅಂಬಾಡಿ, ರಾಜೇಂದ್ರ ಸುವರ್ಣ, ನಾರಾಯಣ, ದಿನೇಶ್ ಸುವರ್ಣ, ಶೈಲೇಶ್ ಬಂಗೇರ, ಶೈಲಜಾ ನಾರಾಯಣ್, ತುಳಸಿ ಮತ್ತು ಲೋಕೇಶ್ ಸಾಲ್ಯಾನ್ ಇವರನ್ನು ಆಯ್ಕೆಮಾಡಲಾಯಿತು. ಶ್ರೀ ಭಗವತೀ ಕ್ಷೇತ್ರ ಉಪ್ಪಳದ ಉಪಾಧ್ಯಕ್ಷ ಮಾಧವ ಕೋಲಾರಗುಡ್ಡೆ ಉಪಸ್ಥಿತರಿದ್ದರು. ಕೋಶಾಧಿಕಾರಿ ಕಮಲಾಕ್ಷ ಪಂಜ ಮತ್ತು ಜೊತೆ ಕಾರ್ಯದರ್ಶಿ ಶಾಜಿ ಉಪ್ಪಳ ಸಭೆಯಲ್ಲಿ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಭಾಸ್ಕರ ಕೊಂಡೆವೂರು ಪ್ರಸ್ತಾವಿಕ ನುಡಿಗಳನ್ನಾಡಿ ಸಭೆಯನ್ನು ನಿರ್ವಹಿಸಿದರು.



Related posts

ಮಾತೃಭೂಮಿ  ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ. ಯಿಂದ ಮುಂಬೈ ಬಂಟರ ಸಂಘದ ನೂತನ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಅವರಿಗೆ ಅಭಿನಂದನೆ.

Mumbai News Desk

ಬೊಯಿಸರ್  ಶ್ರೀ ಸ್ವಾಮಿ ನಿತ್ಯಾನಂದ ಮಂದಿರದಲ್ಲಿ ಗುರುಪೂರ್ಣಿಮೆ

Mumbai News Desk

ಮುಂಬೈ : ಶ್ರೇಯಸ್ ಆರ್ ಪೂಜಾರಿ ಗೆ Jee Main ನಲ್ಲಿ ಶೇ. 99.36, ಎಚ್ ಎಸ್ ಸಿ ಯಲ್ಲಿ ಶೇ.89 ಅಂಕ

Mumbai News Desk

ಒಡಿಶಾ ಕರಾವಳಿಗೆ ಅಪ್ಪಳಿಸಿದ ಡಾನಾ ಚಂಡಮಾರುತ; ಭಾರಿ ಮಳೆ, ಹಲವೆಡೆ ಭೂಕುಸಿತ,

Mumbai News Desk

ಯುಎಇ ಬಂಟ್ಸ್ ಸಂಘದ ವತಿಯಿಂದ ನಡೆದ”ದುಬೈದ ಬಂಟೆರ್ನ ಆಟಿಡೊಂಜಿ ದಿನ”

Mumbai News Desk

ಭಾಂಡೂಪ್ : ಚಿಕ್ಕು ಅಣ್ಣಪ್ಪ ಪುತ್ರನ್ ನಿಧನ

Mumbai News Desk