July 23, 2026
Mumbai News Kannada
ಮುಂಬಯಿ

ಬಿಲ್ಲವರ ಅಸೋಸಿಯೇಷನ್ ಬೊರಿವಿಲಿ ದಹಿಸರ್ ಸ್ಥಳೀಯ ಕಚೇರಿ ತುಳು ಸಂಪ್ರದಾಯ ಕಾರ್ಯಕ್ರಮ ಆಟಿಡೊಂಜಿ ಕೂಟ







ಸಮಾಜದ ಉನ್ನತಿ ಗೆ ಫಲಾಪೇಕ್ಷೆ ಇಲ್ಲದ ಸೇವೆ ಅಗತ್ಯ : ಹರೀಶ್ ಜಿ ಅಮೀನ್

ಚಿತ್ರ, ವರದಿ: ರಮೇಶ್ ಉದ್ಯಾವರ

ಬೊರಿವಲಿ, 29 :ಸಮಾಜ ಉನ್ನತಿಗಾಗಿ ನಿಷ್ಠೆ ನಿಷ್ಪಕ್ಷಪಾತ  ಸೇವೆಯೇ  ಸಮಾಜಕ್ಕೆ ನಾವು ನೀಡುವ ಅತಿ ದೊಡ್ಡ ಕೊಡುಗೆ.  ಸಾರ್ವಜನಿಕ ಸೇವೆಯಲ್ಲಿ ಫಲಾಪೇಕ್ಷೆ ಬಯಸದೆ ಸಮಾಜದ ಉನ್ನತಿಗೆ ಮಾಡುವ ಕಾಯಕ ನಿಜವಾದ ಸಮಾಜ ಸೇವೆ. ಅದಕ್ಕಾಗಿ ಸಾರ್ವಜನಿಕ ಸಮಾಜ ಸೇವೆಯಲ್ಲಿ ತ್ಯಾಗದ ಮನೋಭಾವ ಅಗತ್ಯ.  ಬ್ರಹ್ಮಶ್ರೀ ನಾರಾಯಣ ಗುರುಗಳ ಬೋಧನೆ ತತ್ವ ಸಿದ್ಧಾಂತದಲ್ಲಿ ಜರುಗಿದ ಈ ಕಾರ್ಯಕ್ರಮ ಎಲ್ಲರ ಪ್ರೀತಿಗೆ ಪಾತ್ರವಾಗಿದೆ. ಆ ಮೂಲಕ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಮೋಹನ್ ಬಿ ಅಮೀನ್ ಮತ್ತು ಕಾರ್ಯಕಾರಿ ಸಮಿತಿಯ ತಂಡದ ಸಾಮಾಜಿಕ ದೃಷ್ಟಿಕೋನ ಮೆಚ್ಚುವಂತದ್ದು ಎಂದು ಬಿಲ್ಲವರ ಅಸೋಸಿಯೇಷನ್ ಮುಂಬೈ ಅಧ್ಯಕ್ಷರಾದ ಹರೀಶ್ ಜಿ ಅಮೀನ್ ಅಭಿಪ್ರಾಯ ವ್ಯಕ್ತಪಡಿಸಿದರು. 

     ಅವರು ಇತ್ತೀಚೆಗೆ ಬಿಲ್ಲವರ ಎಸೋಸಿಯೇಷನ್ ಬೊರಿವಲಿ ದಹಿಸರ್ ಸ್ಥಳೀಯ ಕಚೇರಿ ಗೊರಾಯಿ ರೋಡ್, ಎಂ ಎಚ್ ಬಿ ಕೊಲನಿಯ ಸಾಯ್ಲಿ ಇಂಟರ್ನ್ಯಾಷನಲ್ ಕಾಲೇಜಿನ ಸಭಾಂಗಣದಲ್ಲಿ ಜರಗಿದ  ಸಾಂಪ್ರದಾಯಿಕ ಆಟಿಡೊಂಜಿ ಕೂಟ ತುಳು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಸಾಮಾಜಿಕ ಧಾರ್ಮಿಕ ಶೈಕ್ಷಣಿಕ ಹೀಗೆ ಹತ್ತು ಹಲವಾರು ಸಮಾಜಪರ ಕ್ಷೇತ್ರದ ಕಾರ್ಯಯೋಜನೆಗಳನ್ನು ಸಮಾಜದ ಆರ್ಥಿಕ ಹಿಂದಳಿದವರಿಗೆ ನೀಡಿದ ಬಿಲ್ಲವರ ಎಸೋಶಿಯೇಶನ್ ನ ಹಿರಿಯ ಅಧ್ಯಕ್ಷರುಗಳ ಕೊಡುಗೆ ಹಾಗೂ ಸುಧೀರ್ಘ ಆವಧಿಯ ಅಧ್ಯಕ್ಷ ರಾದ ಜಯ ಸಿ ಸುವರ್ಣರ ದೂರದೃಷ್ಟಿ ಚಿಂತನೆ ಮಹಾನಗರಲ್ಲಿ ಸಮಾಜದ ಸಡೃಢ ಸಂಸ್ಥೆಯ ಬೆಳವಣಿಗೆಗೆ ಕಾರಣೀಭೂತರಾಗಿದ್ದರು ಎಂದು ಹೇಳಿದರು.

      ಮುಖ್ಯ ಅತಿಥಿಯಾಗಿ ಆಗಮಿಸಿದ ಸಾಪಲ್ಯ ಮಾಸ ಪತ್ರಿಕೆಯ ಸಂಪಾದಕಿ, ಸಾಯನ್ ಕನ್ನಡ ಸಂಘದ ಗೌರವ ಕಾರ್ಯದರ್ಶಿ ಡಾ. ಜಿ. ಪಿ. ಕುಸುಮ  ಗೆಜ್ಜೆತ್ತಿಯ ಮೂಲಕ ಹಿಂಗಾರವನ್ನು ಅರಳಿಸಿ ಸಾಂಪ್ರದಾಯಿಕವಾಗಿ ಉದ್ಘಾಟಿಸಿ ಮಾತನಾಡಿದ  ತುಳುವರು ವ್ಯಾಪಾರ, ಉದ್ಯೋಗ ಅರಸಿ ಹೋದಲ್ಲೆಲ್ಲೆಡೆ ತಮ್ಮ ತುಳು ಸಂಸ್ಕೃತಿ ಉಳಿಸಿ ಬೆಳೆಸಿದ್ದಾರೆ. ಎಲ್ಲಿ ಸಂಘ ಸಂಸ್ಥೆಗಳು ಬಲಾಢ್ಯವಾಗಿರುತ್ತದೊ ಅಲ್ಲಿ ಸಂಸ್ಕೃತಿಗಳು ಗಟ್ಟಿಗೊಳ್ಳುತ್ತದೆ.  ಸದಸ್ಯರಲ್ಲಿಯೂ ಸಂಸ್ಕೃತಿ ಉಳಿವಿನ ಭಾವನೆ ಬೇಕು.  ಆ ಮೂಲಕ ಭಾಷೆ ಸಂಸ್ಕೃತಿಯ ಉನ್ನತಿಯ ಉಳಿವಿಗಾಗಿ ಪ್ರಯತ್ನ ಸಾಗಬೇಕು.  ಇಂದು ಮಕ್ಕಳಲ್ಲಿ ಮೊಬೈಲ್ ಫೋನ್ ಆನ್ಲೈನ್ ಆಹಾರ ಖರೀದಿಯಂತಹ ಕೆಟ್ಟ ಪದ್ಧತಿ ಗಳಿಗೆ ಮನೆಯವರ ಕಡಿವಾಣ ಅಗತ್ಯ,   ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ನಮಗೆ ಮಾತ್ರ ಸೀಮಿತವಾಗಿರದೆ ಯುವ ಜನಾಂಗ, ಮಕ್ಕಳು ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತಾಗಬೇಕು. ಮಕ್ಕಳಲ್ಲಿ ನಮ್ಮ ಭಾಷೆ ಪ್ರಾಮುಖ್ಯತೆ ನೀಡಿ, ನಮ್ಮಲ್ಲಿ ಭಾಷಾಭಿಮಾನ ಬೆಳೆದರೆ ಮಾತ್ರ  ನಮ್ಮ ಸಂಸ್ಕೃತಿ ಉಳಿಯಲು ಸಾಧ್ಯ ಎಂದು ಹೇಳಿದ ಅವರು ಆಟಿ, ಕಲಂಜ, ಆಷಾಢದ ಸಂಕಷ್ಟ ದಿನಗಳು ಆಟಿದ ಅಗರಣೆ ತುಳುನಾಡಿನ ಆಚಾರ ವಿಚಾರ ಮಾನವನ ದೌರ್ಜನ್ಯದಿಂದ  ಪ್ರಕೃತಿ ವಿಕೋಪ ಹಾಗೂ ಧಾರಾಕಾರ ಮಳೆಯಲ್ಲಿ ಹಳ್ಳಿ ಬದುಕಿನ ಚಿತ್ರಣದ ಬಗ್ಗೆ ಬೆಳಕು ಚೆಲ್ಲಿದರು.

     ಪ್ರಾಸ್ತಾವಿಕ ಮಾತನಾಡಿದ ಕವಿಲೇಖಕ ಶೀಮಂತೂರು ಚಂದ್ರಹಾಸ ಸುವರ್ಣ ಸಂಸ್ಕೃತಿ ಸಂಸ್ಕಾರ ತಿಂಡಿ ತಿನಿಸು ನೇಮ ಮುಂತಾದ ತುಳುನಾಡ ಸಂಸ್ಕೃತಿಯನ್ನು ಪ್ರತಿಬಿಂಬಿಸುವ  ಕಾರ್ಯಕ್ರಮಗಳಲ್ಲಿ ಮಕ್ಕಳ ಉಪಸ್ಥಿತಿ ಅಗತ್ಯ. ಹಿರಿಯರ ಸಂಸ್ಕೃತಿಯಿಂದ ಬೆಳೆದು ಬಂದ ನಾವು ಅದನ್ನು ಅಕ್ಷರಶಃ ಪಾಲಿಸಿಕೊಂಡು ಬಂದಲ್ಲಿ ಅದರ ಸೂಕ್ಷ್ಮತೆಯನ್ನು ಉಳಿಸಿ ಕೊಳ್ಳಲು ಸಾಧ್ಯ.  ದೈವ ದೇವರ ಪ್ರಸಾದ ಸ್ವೀಕರಿಸುವಾಗ ಮಹಿಳೆಯರು ಸೀರೆಯ ಸೆರಗಿನಲ್ಲಿ ಪ್ರಸಾದ ಸ್ವೀಕರಿಸಬೇಕು.  ಭಗವದ್ಗೀತೆ ಪವಿತ್ರ ಗ್ರಂಥವನ್ನು ಶೋಕೇಸ್ ನಲ್ಲಿ ಇಡದೆ ದೇವರ ಮಂಟಪದಲ್ಲಿಟ್ಟು ಪಠಣ ಮಾಡುವ ಪರಿಪಾಠ ಬೆಳೆಸಿಕೊಂಡರೆ ಧಾರ್ಮಿಕತೆಗೆ ನಾವು ನೀಡುವ ಗೌರವ, ಶ್ರದ್ಧಾಭಕ್ತಿ. ಬೊರಿವಲಿ ದಹಿಸರ್ ಕಚೇರಿಯ ಸದಸ್ಯರ ಅವಿರತ ಸಾಧನೆಯ ಮೂಲಕ ಕಳೆದ ಹದಿನಾರು ವರ್ಷಗಳಿಂದ ನಾವು ಮಹಾನಗರದಲ್ಲಿ ಪರಿಚಯಿಸಿದ ಈ ಕಾರ್ಯಕ್ರಮ ಯಶಸ್ವಿ ಕಂಡಿದೆ.  ಮಹಿಳಾ ಕವಿಗೋಷ್ಠಿ,  ಸಾಹಿತ್ಯ ಕಾರ್ಯಕ್ರಮಗಳನ್ನು ನೀಡಿದ ಸಾಧನೆ ನಮ್ಮ ಸಮಿತಿಯದು ಎಂದು ಹೇಳಿ ತುಳು ಆಚಾರ ವಿಚಾರ ಬ್ರಹ್ಮನ ಸೃಷ್ಟಿಯ ಶಕ್ತಿ  ಆಟಿಕಲಂಜ ಸೂಕ್ಷ್ಮತೆ ಬಗ್ಗೆ ಜನಪದ, ತುಳು ನಾಡಿನ ಸಂಸ್ಕೃತಿಯ ಬಗ್ಗೆ ವಿವರ ನೀಡಿದರು. 

     ವೇದಿಕೆಯಲ್ಲಿ ಉಪಾಧ್ಯಕ್ಷರಾದ ಬಿಲ್ಲವರ ಎಸೋಸಿಯೇಷನ್ ಉಪಾಧ್ಯಕ್ಷರಾದ ಶಂಕರ ಡಿ ಪೂಜಾರಿ ಧರ್ಮಪಾಲ್ ಜಿ ಅಂಚನ್ ಗೌರವ ಪ್ರಧಾನ ಕಾರ್ಯದರ್ಶಿ ಹರೀಶ್ ಜಿ ಸಾಲ್ಯಾನ್ ಜೊತೆ ಕಾರ್ಯದರ್ಶಿ ಕೇಶವ ಕೋಟ್ಯಾನ್ ವಿದ್ಯಾ ಉಪ ಸಮಿತಿಯ ಕಾರ್ಯದರ್ಶಿ ಹರೀಶ್ ಪೂಜಾರಿ ಕೊಕ್ಕರ್ಣೆ  ಸ್ಥಳೀಯ ಸಮಿತಿಯ ಉಪಕಾರ್ಯಾಧ್ಯಕ್ಷರಾದ ರಮೇಶ್ ಡಿ ಕೋಟ್ಯಾನ್  ಪ್ರೇಮ್ ನಾಥ್ ಕೋಟ್ಯಾನ್,  ಪಲ್ಲವಿ ಸದಾನಂದ ಪೂಜಾರಿ, ತುಳು ಸಂಘ ಬೊರಿವಲಿ ಅಧ್ಯಕ್ಷರಾದ ಕರುಣಾಕರ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಹಿಳಾ ಸದಸ್ಯರಿಂದ, ಯುವ ಮಹಿಳಾ ಸದಸ್ಯರಿಂದ ತುಳು ಜಾನಪದ ನೃತ್ಯ ಹಾಗೂ ಲೇಖಕಿ ಸುಶೀಲಾ ಎಸ್ ಅಮೀನ್ ತುಳು ಗೀತೆ ಪ್ರಸ್ತುತ ಪಡಿಸಿದರು.

      ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಮೋಹನ್ ಬಿ ಅಮೀನ್ ಸ್ವಾಗತಿಸಿದರು.   ಕಾರ್ಯದರ್ಶಿ ರಜಿತ್ ಎಲ್ ಸುವರ್ಣ ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು ಜ್ಯೋತಿ ಪ್ರವೀಣ್ ಪೂಜಾರಿ ಅತಿಥಿಯವರನ್ನು ಪರಿಚಯಿಸಿದರು ಕಾರ್ಯದರ್ಶಿ ರಜಿತ್ ಎಲ್ ಸುವರ್ಣ ಧನ್ಯವಾದವಿತ್ತರು.  ಬಳಿಕ ಆಟಿದ ಅಗರಣೆ ತಿಂಡಿ ತಿನಸು ವಿತರಿಸಲಾಯಿತು. 

      ಕೋಶಾಧಿಕಾರಿ ವತ್ಸಲಾ ಕೆ ಪೂಜಾರಿ ಜೊತೆ ಕೋಶಾಧಿಕಾರಿ ಉಮೇಶ್ ಜಿ ಕೋಟ್ಯಾನ್ ಸದಸ್ಯರಾದ ಕೃಷ್ಣರಾಜ್ ಸುವರ್ಣ ರಾಘು ಜಿ ಪೂಜಾರಿ ರವಿ ಪೂಜಾರಿ ರತ್ನ ಪೂಜಾರಿ  ಅಶೋಕ್ ಸಾಲ್ಯಾನ್ ಅಶೋಕ್ ನಿಂಜೂರು ಪ್ರವೀಣ್ ಪೂಜಾರಿ ಸುಂದರಿ ಪೂಜಾರಿ ಪ್ರೀತಿ ಅಮೀನ್ ಹರಿಣಾಕ್ಷಿ ಸುವರ್ಣ ಶರಣ್ಯ ಬಿಲ್ಲವ ಶಿಪ್ರಾ  ಸುವರ್ಣ ಸುಜಾತ ಕೆ ಪೂಜಾರಿ ವಾರಿಜಾ ಕೆ ಸನಿಲ್ ವಿಜಯ ಪೂಜಾರಿ ಶ್ರೀ ನಾಥ್ ಶೆಟ್ಟಿ  ಸ್ಥಳೀಯ ಕಚೇರಿ ಕಾರ್ಯಕಾರಿ ಸಮಿತಿ ಆಹ್ವಾನಿತ ಸದಸ್ಯರು, ಮಹಿಳಾ ಸದಸ್ಯರು, ಯುವ ಸದಸ್ಯರು ಮತ್ತು  ಭಾರತ್ ಬ್ಯಾಂಕ್ ನ ಸ್ಥಳೀಯ ಶಾಖೆಯ ಪ್ರಬಂಧಕರು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಸ್ಥಳೀಯ ಸಮಾಜ ಭಾಂಧವರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು.



Related posts

ಬಂಟರ ಸಂಘ ಮುಂಬಯಿ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿ: ನವರಾತ್ರಿ ಉತ್ಸವ, ದಾಂಡಿಯಾ ರಾಸ್

Mumbai News Desk

ಬಂಟರ ಸಂಘ ಮುಂಬಯಿ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿ “ಆಟಿದ ನೆನೆಪು – ಸ್ಕಿಲ್ಲ್ ಫಾರ್ ಎಂಪ್ಲಾಯ್” ಕಾರ್ಯಕ್ರಮ.

Mumbai News Desk

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ ಸಮೀಕ್ಷಾ ಪ್ರಶಾಂತ್ ಬಾಗಲ್ ಗೆ ಶೇ 86.4 ಅಂಕ.

Mumbai News Desk

ತೋನ್ಸೆ ಶ್ರೀ ಬ್ರಹ್ಮ ಬೈದರ್ಕಳ ಪಂಚಧೂಮಾವತಿ ಗರಡಿಯ ಪುನರ್ ನಿರ್ಮಾಣ ನಿಮಿತ್ತ ಸಮಾಲೋಚನಾ ಸಭೆ ಹಾಗೂ ಮನವಿ ಪತ್ರ ಬಿಡುಗಡೆ

Mumbai News Desk

ಬಿಲ್ಲವ ಸೇವಾ ಸಂಘ ಕುಂದಾಪುರ ಮುಂಬಯಿ – ವಿಜೃಂಭಣೆಯಿಂದ ಜರಗಿದ ಬ್ರಹ್ಮಶ್ರೀ ನಾರಾಯಣ ಗುರುವರ್ಯರ 170ನೇ ಜಯಂತ್ಯುತ್ಸವ

Mumbai News Desk

ಸಾಂತಾಕ್ರೂಜ್ ಪೇಜಾವರ ಮಠದಲ್ಲಿ ಶ್ರೀ ಮಧ್ವ ನವಮೀ ಆಚರಣೆ 

Mumbai News Desk