July 23, 2026
Mumbai News Kannada
ಮುಂಬಯಿ

ಬಿಲ್ಲವರ ಅಸೋಸಿಯೇಶನಿನ ಭಾಂಡುಪ್ ಸ್ಥಳೀಯ ಕಚೇರಿಯಲ್ಲಿ ಆಟಿದ ನೆನಪು ಕಾರ್ಯಕ್ರಮ.







ಅಸೋಸಿಯೇಷನ್ ನಾಡಿನ ಸಂಸ್ಕೃತಿಯ ಬೆಳೆಸುವಿಕೆಗೆ ಸದಾ ಪ್ರೋತ್ಸಾಹ ನೀಡುತ್ತಿದೆ- ಹರೀಶ್ ಜಿ ಅಮೀನ್.

ಚಿತ್ರ, ವರದಿ: ಉಮೇಶ್ ಕೆ.ಅಂಚನ್.

ಹಿಂದಿನ ಆಟಿ ತಿಂಗಳನ್ನು ನೆನಪಿಸುವಂತಹ ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ಆಯೋಜಿಸಿ ಆಟಿ ತಿಂಗಳ ಮಹತ್ವದ ಬಗ್ಗೆ ಮಾಹಿತಿ ನೀಡಿದ ತಮಗೆಲ್ಲರಿಗೂ ಅಭಿನಂದನೆಗಳು. ಇದರಿಂದ ನನ್ನಂತೆ ಮುಂಬಯಿಯಲ್ಲಿ ಹುಟ್ಟಿ ಬೆಳೆದವರಿಗೆ ಊರಿನ ಸಂಸ್ಕೃತಿ, ಆಚರಣೆ ತಿಳಿಯಲು ಸಾಧ್ಯವಾಗುತ್ತದೆ. ಬಿಲ್ಲವರ ಅಸೋಸಿಯೇಶನ್ ತುಳುನಾಡ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಂತಹ ಕಾರ್ಯಗಳಿಗೆ ಸದಾ ಪ್ರೋತ್ಸಾಹ ನೀಡುತ್ತಿದೆ ಹಾಗೂ ಸಮಾಜಪರ ಕಾರ್ಯಗಳಿಗೆ ಹೊಸ ಹೊಸ ಯೋಜನೆಗಳನ್ನು ಹಾಕಿಕೊಂಡು ನಡೆಯುತ್ತಿದೆ. ಅಸೋಸಿಯೇಶನಿನ ಪ್ರಗತಿಗೆ ತಮ್ಮೆಲ್ಲರ ಸಹಕಾರ ಅಗತ್ಯ ಎಂದು ಬಿಲ್ಲವರ ಅಸೋಸಿಯೇಶನಿನ ಅದ್ಯಕ್ಷ ಹರೀಶ್ ಜಿ.ಅಮೀನ್ ಹೇಳಿದರು.
ಅವರು ಅ.11ರಂದು ಬಿಲ್ಲವರ ಅಸೋಸಿಯೇಶನಿನ ಬಾಂಡುಪ್ ಸ್ಥಳೀಯ ಕಚೇರಿಯವರು ಆಯೋಜಿಸಿದ್ದ ‘ಆಟಿದ ನೆನಪು’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕೇಂದ್ರ ಕಚೇರಿಯ ಶೈಕ್ಷಣಿಕ ಉಪಸಮಿತಿಯ ಕಾರ್ಯದರ್ಶಿ ಹರೀಶ್ ಪೂಜಾರಿ ಕೊಕ್ಕರ್ಣೆಯವರು ಹಿಂದಿನ ಹಾಗೂ ಇಂದಿನ ಆಟಿ ತಿಂಗಳ ಬಗ್ಗೆ ಮಾಹಿತಿ ನೀಡಿದರು.
ಬಿಲ್ಲವರ ಅಸೋಸಿಯೇಶನ್ ಇದರ ಉಪಾಧ್ಯಕ್ಷೆ ಜಯಂತಿ ವರದ್ ಉಳ್ಳಾಲ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಕುಂತಳಾ ಕೆ.ಕೋಟ್ಯಾನ್ ಸಂದರ್ಭೋಚಿತವಾಗಿ ಮಾತನಾಡಿದರು.
ಸ್ಥಳೀಯ ಸಮಿತಿಯ ಉಪಾಧ್ಯಕ್ಷ ಎಮ್.ಬಿ.ಸನಿಲ್ ಮಾತನಾಡಿ ಸಮಾಜಕ್ಕೆ ಒಳ್ಳೆಯ ನೇತೃತ್ವವನ್ನು ಅದ್ಯಕ್ಷರಾದ ಹರೀಶ್ ಜಿ. ಅಮೀನ್ ರವರು ನೀಡಿದ್ದಾರೆ. ಸಮಾಜವನ್ನು ಮತ್ತಷ್ಟು ಬಲಿಷ್ಠ ಗೊಳಿಸಲು ಅವರಿಗೆ ನಾವೆಲ್ಲ ಸಹಕರಿಸೋಣ ಎಂದರು


ವೇದಿಕೆಯಲ್ಲಿ ಕೇಂದ್ರ ಯವಾಭ್ಯುದಯ ಸಮಿತಿಯ ಕಾರ್ಯಾಧ್ಯಕ್ಷ ನೀಲೇಶ್ ಪೂಜಾರಿ ಪಲಿಮಾರು, ಕಾರ್ಯಕಾರಿ ಸಮಿತಿಯ ಸದಸ್ಯರಾದ ಶಂಕರ್ ಪೂಜಾರಿ, ಮೋಹನ್ ಕೋಟ್ಯಾನ್, ಸ್ಥಳೀಯ ಕಚೇರಿಯ ಗೌರವಾಧ್ಯಕ್ಷ ಶೇಖರ್ ಎಮ್.ಪೂಜಾರಿ , ಕೋಶಾಧಿಕಾರಿ ಕೆ.ಎ.ಪೂಜಾರಿ ಉಪಸ್ಥಿತರಿದ್ದರು.
ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಜನಾರ್ದನ ಪೂಜಾರಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಸದಾನಂದ್ ಪೂಜಾರಿ ವಂದಿಸಿದರು.


ಆರಂಭದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ಪೂಜೆಗೈದು ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಹಿಳಾ ವಿಭಾಗದ ಸದಸ್ಯೆಯರಿಂದ ನಾಟಿ ನೃತ್ಯ, ವೇದ ಸುವರ್ಣ ಮತ್ತು ರುಕ್ಮಿಣಿ ಸುವರ್ಣರವರಿಂದ ಆಟಿಕಡಂಜ ನೃತ್ಯ ನಡೆಯಿತು. ಪರಿಸರದ ಸಂಘಸಂಸ್ಥೆಗಳ ಪದಾಧಿಕಾರಿಗಳು ಹಾಗೂ ದಾನಿಗಳನ್ನು ಸತ್ಕರಿಸಲಾಯಿತು. ಮಹಿಳಾ ವಿಭಾಗದ ಸದಸ್ಯೆಯರಿಂದ ಆಟಿ ತಿಂಗಳಲ್ಲಿ ಲಭಿಸುವ ಸುಮಾರು 34 ಬಗೆಯ ತಿಂಡಿ ತಿನಿಸುಗಳೊಂದಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು, ಯುವ ವಿಭಾಗ, ಮಹಿಳಾ ವಿಭಾಗದ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ್ದರು.



Related posts

ಹಿಂದೂ ಧರ್ಮ ಸಂರಕ್ಷಣಾ ಮಹಾ ಸಮಾವೇಶ: ಸೆಪ್ಟೆಂಬರ್ 7ರಂದು ಪೂರ್ವಭಾವಿ ಸಭೆ

Mumbai News Desk

ಮೀರಾ-ಭಾಯಂದರ್ ಪರಿಸರದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ದಕ್ಷಿಣ ಭಾರತ ಭವನವನ್ನು ವೀಕ್ಷಿಸಿದ ಶಾಸಕ ಪ್ರತಾಪ್ ಸರ್ನಾಯಕ್

Mumbai News Desk

ಕರ್ನಾಟಕ ಸಂಘ, ಕಲ್ಯಾಣ: ವಿ. ಪ್ರತಿಮಾ ಕೋಡೂರುರವರಿಂದ ಹರಿಕಥಾ ಕಾರ್ಯಕ್ರಮ

Mumbai News Desk

ಶ್ರೀ ಜೈ ಭವಾನಿ ಶನೀಶ್ವರ ದೇವಸ್ಥಾನ, ಡೊಂಬಿವಲಿಯ ನೂತನ ಅಧ್ಯಕ್ಷರಾಗಿ ಸೂರಜ್ ಡಿ. ಸಪಲಿಗ ಆಯ್ಕೆ 

Mumbai News Desk

ಜಯಶ್ರಿಕೃಷ್ಣ ಪರಿಸರ ಪ್ರೇಮಿ ಸಮಿತಿಯಿಂದ ಜಾರ್ಜ್ ಫೆರ್ನಾಂಡಿಸ್ ರ 94ನೇ ಜನ್ಮದಿನಾಚರಣೆ 

Mumbai News Desk

ಸಾಯಿನಾಥ ಮಿತ್ರ ಮಂಡಳಿಯಿಂದ ಹೊರೆ ಕಾಣಿಕೆ ಮೆರವಣಿಗೆ

Mumbai News Desk