32 C
Mumbai
April 24, 2026
Mumbai News Kannada
ಸುದ್ದಿ

ಅಂಚೆ ಜನ ಸಂಪರ್ಕ ಅಭಿಯಾನ: ಕಂಬದ ಕೋಣೆ- ಕಾಲ್ತೊಡು





ಕಂಬದಕೋಣೆ,ಕಾಲ್ತೊಡು : ದಿನಾಂಕ 23 ಆಗಸ್ಟ್ 2024 ರ ಶುಕ್ರವಾರ ಭಾರತೀಯ ಅಂಚೆ ಇಲಾಖೆ ಉಡುಪಿ ವಿಭಾಗದ ವತಿಯಿಂದ ಕಾಲ್ತೋಡು ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಡಾಕ್ ಸೇವಾ; ಜನ್ ಸೇವಾ-ಅಂಚೆ ಜನ ಸಂಪರ್ಕ ಅಭಿಯಾನವನ್ನು ಕಾಲ್ತೊಡು ಅಂಬೇಡ್ಕರ್‍-ಭವನದಲ್ಲಿ ಆಯೋಜಿಸಲಾಗಿತ್ತು. ಅಭಿಯಾನವನ್ನು ಜ್ಯೊತಿ ಬೆಳಗಿಸಿ ಉದ್ಘಾಟಿಸಿ, ಮಾತನಾಡಿದ ಪಂಚಾಯತ್ ಅಧ್ಯಕ್ಷ ಅಣ್ಣಪ್ಫ ಶೆಟ್ಟಿ ಬಟ್ನಾಡಿ ಇಂತಹ ಕುಗ್ರಾಮದಲ್ಲೂ ಕೂಡ ಅಂಚೆ ಅಭಿಯಾನವನ್ನು ಆಯೋಜಿಸಿದಕ್ಕಾಗಿ ಅಂಚೆ ಇಲಾಖೆಯನ್ನು ಶ್ಲಾಘಿಸಿದರು. ಸಹಾಯಕ ಅಂಚೆ ಅಧೀಕ್ಷಕ ಕೃಷ್ಣರಾಜ ವಿಠ್ಠಲ ಭಟ್ ವಿವಿಧ ಅಂಚೆ ಸೇವೆಗಳ ಮಾಹಿತಿ ನೀಡಿದರು. ಅಂಚೆ ಅಧೀಕ್ಷಕ ರಮೇಶ್ ಪ್ರಭು, ಮತ್ತೊರ್ವ ಸಹಾಯಕ ಅಂಚೆ ಅಧೀಕ್ಷಕರಾದ ದಯಾನಂದ ದೇವಾಡಿಗ, ಪಿ.ಡಿ.ಓ. ದಿವಾಕರ ಶಾನುಭೋಗ ಮತ್ತು ಹೇರೂರು ಪಂಚಾಯತ್ ಸದಸ್ಯ ಸೂಲಿಯಣ್ಣ ಶೆಟ್ಟಿ ಉಪಸ್ಥಿತರಿದ್ದರು. ಪಂಚಾಯತ್ ಕಾರ್ಯದರ್ಶಿ ಆನಂದ್ ಬಿಲ್ಲವ ಕಾರ್ಯಕ್ರಮವನ್ನು ನಿರ್ವಹಿಸಿದರು. ನೂರಾರು ಗ್ರಾಮಸ್ತರು ಆಧಾರ್ ಹೊಸ ನೊಂದಣಿ/ಪರಿಷ್ಕರಣೆ ಹಾಗು ವಿವಿಧ ಅಂಚೆ ಸೌಲಭ್ಯಗಳ ಮಾಹಿತಿಯ ಪ್ರಯೋಜನವನ್ನು ಪಡೆದರು.



Related posts

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಆಶ್ರಯದಲ್ಲಿ ಸಿದ್ದ ಕಣ್ಣಿನ ಹನಿ ಕಾರ್ಯಕ್ರಮ,

Mumbai News Desk

ನಿಶಾ ಪೂಜಾರಿ ಸಿಎ ಪರೀಕ್ಷೆಯಲ್ಲಿ ಉತ್ತೀರ್ಣ

Mumbai News Desk

ಉಡುಪಿ ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ವತಿಯಿಂದ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿಯವರ ಮತ್ತು ಮಾಜಿ ಮುಖ್ಯಮಂತ್ರಿ ದೇವರಾಜ್ ಅರಸು ರವರ ಜನ್ಮ ದಿನಾಚರಣೆಯನ್ನು ಉಡುಪಿ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಆಚರಿಸಲಾಯಿತು

Mumbai News Desk

ಆಯೋದ್ಯ ಶ್ರೀರಾಮ ಮಂದಿರದಲ್ಲಿ ಹರೀಶ್ ಪೂಜಾರಿ ಅವರಿಂದ ಸೇಕ್ಸೋಪೋನ್ ವಾದನ

Mumbai News Desk

ಕಾಪು ಶ್ರೀ ಹೊಸಮಾರಿಗುಡಿ ವ್ಯವಸ್ಥಾಪನಾ ಸಮಿತಿಯಲ್ಲಿ ಮೊಗವೀರ ಸಮುದಾಯಕ್ಕೆ ಅವಕಾಶ ನೀಡಬೇಕು : ಕಾಪು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ವೈ. ಸುಕುಮಾರ್.

Mumbai News Desk

ಯುಎಇ ಬಂಟ್ಸ್ ಸಂಘದ ವತಿಯಿಂದ ನಡೆದ”ದುಬೈದ ಬಂಟೆರ್ನ ಆಟಿಡೊಂಜಿ ದಿನ”

Mumbai News Desk