September 6, 2026
Mumbai News Kannada
ಸುದ್ದಿ

ನಾನಿಲ್ತಾರ್ ಅಭಿಮಾನಿ ಬಳಗ ಮುಂಬೈ, ಮುಂಡ್ಕೂರು ವತಿಯಿಂದ ಏರ್ ಕಂಡಿಷನರ್ ಸ್ಫೋಟಗೊಂಡ ದುರ್ಘಟನೆಯಲ್ಲಿ ಮೃತರಾದ ತಾರಾನಾಥ ವಿ ಬಂಜನ್ ಅವರಿಗೆ ಶ್ರದ್ಧಾಂಜಲಿ.





ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ( ಬಿಕೆಸಿ-ಜಿ ಬ್ಲಾಕ್) ಕಾರ್ಪೊರೇಟ್ ಕಟ್ಟಡದಲ್ಲಿ ಹೊರಾಂಗಣದ ಏರ್ ಕಂಡಿಷನರ್ ಸ್ಫೋಟಗೊಂಡ ದುರ್ಘಟನೆಯಲ್ಲಿ ಗಾಯಗೊಂಡು ನಿಧನರಾದ ನಾನಿಲ್ತಾರ್ ಅಭಿಮಾನಿ ಬಳಗ ಮುಂಬೈ ಮುಂಡ್ಕೂರು ಇದರು ಸಕ್ರಿಯ ಕಾರ್ಯಕರ್ತ ತಾರಾನಾಥ ವಾಮಯ ಬಂಜನ್ ಅವರ ಶ್ರದ್ಧಾಂಜಲಿ ಸಭೆ ಗೋರೆಗಾವ್ ಪೂರ್ವದ ಪ್ರಜ್ಞ ಪೋಜ್ಞ ಶಾಲೆಯ ಸಭಾಗ್ರದಲ್ಲಿ ಅಭಿಮಾನಿ ಬಳಗದ ಅಧ್ಯಕ್ಷ ಹರೀಶ್ ಮೂಲ್ಯ ಮುಂಡ್ಕೂರು ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ನಾನಿಲ್ತಾರ್ ಅಭಿಮಾನಿ ಬಳಗ ಮುಂಬಯಿ (ಮುಂಡ್ಕೂರು) ಸಂಚಾಲಕ ಕೃಷ್ಣ ಮೂಲ್ಯ ನಾಲಾಸೋಪಾರ ಅವರು ತಾರಾನಾಥ ಬಂಜನ್ ಅವರ ಸಾಮಾಜಿಕ ಸೇವಾ ಕಾರ್ಯಗಳನ್ನು ಮತ್ತು ಪರಿವಾರದ ಬಗ್ಗೆ ತಿಳಿಸಿದರು.
ಅಭಿಮಾನಿ ಬಳಗದ ಅಧ್ಯಕ್ಷ ಹರೀಶ್ ಮೂಲ್ಯ ಮುಂಡ್ಕೂರು ನುಡಿ ನಮನವನ್ನು ಸಲ್ಲಿಸುತ್ತಾ ನಮ್ಮ ವರಮಹಾಲಕ್ಷ್ಮಿ ಪೂಜಾ ಸಮಿತಿಯಲ್ಲಿ ಸಕ್ರಿಯರಾಗಿ ಭಾಗವಹಿಸುತ್ತಿದ್ದರು ಅಲ್ಲದೆ ಸಮಾಜದ ಬಂಧುಗಳ ಸೇವಾ ಕಾರ್ಯಗಳನ್ನು ಯಾವಾಗಲೂ ಆಸಕ್ತಿಯಿಂದ ಮಾಡುತಿದ್ದರು ಎಂದು ನುಡಿದರು.

ಉಪಾಧ್ಯಕ್ಷ ದಿನೇಶ್‌ ಮೂಲ್ಯ, ಅಂಧೇರಿ, ಕಾರ್ಯದರ್ಶಿ
ದಿನೇಶ್‌ ಬಂಗೇರ ಖಾರ್‌ದಾಂಡ , ಕೋಶಾಧಿಕಾರಿ ರೋಹಿದಾಸ್‌ ಕೆ ಬಂಜನ್ ನಾಲಾಸೋಪಾರ, ಜೊತೆ ಕಾರ್ಯದರ್ಶಿ ಲೋಕೇಶ್ ಮೂಲ್ಯ, ಗೊರೆಗಾಂವ್, ಅಂಧೇರಿ ಸಲಹಾ ಸಮಿತಿತ ಸದಸ್ಯರುಗಳಾದ , ಸರೋಜಾ ಎಚ್ ಮೂಲ್ಯ ಅಂದೇರಿ, ಅರ್ಚನಾ ಎಸ್ ಮೂಲ್ಯ ವಸಯಿ, ನಳಿನಿ ಎನ್. ಬಂಜನ್ ವಿರಾ‌ರ್,ಜ್ಯೋತಿ ಸಾಲ್ಯಾನ್, ಸುರೇಖಾ ಬಂಗೇರ ನಾಲಾಸೋಪರ, ಕವಿತಾ ಸಾಲ್ಯಾನ್ ಮೀರಾ ರೋಡ್, ಶಶಿಕಾಂತ್ ಮೂಲ್ಯ ವಿರಾರ್, ಸದಾಶಿವ ಮೂಲ್ಯ ವಿರಾರ್, ವಿವೇಕ್ ಬಂಜನ್ ಉಪಸ್ಥಿರಿದ್ದು ಬಂಜನ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರ.

ಮೂಲತಃ ಸೂರಿಂಜೆಯವರಾದ ತಾರಾನಾಥ ಬಂಜನ್ ಅವರು ಭಾಯಂದರ್ ಪೂರ್ವದ ಸಾಯಿ ಬಾಬಾ ನಗರ ಬಾಲಕೃಷ್ಣ ಅಪ್ಟ್ಮೆಂಟ್ ನಿವಾಸಿಯಾಗಿದ್ದು,
ಪತ್ನಿ , ಒಂದು ಹೆಣ್ಣು, ಒಂದು ಗಂಡು ಮಕ್ಕಳು, ಹಾಗೂ ಐವರು ಸೋದರರು, ಇಬ್ಬರು ಸೋದರಿಯರು ಮತ್ತು ಅಪಾರ ಬಂಧುಗಳನ್ನು ಅಗಲಿರುವರು.



Related posts

PM-RAHAT ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕೆ ಎಂಪಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಕಟ್ಟುನಿಟ್ಟಿನ ಸೂಚನೆ: ಗಾಯಾಳುಗಳಿಗೆ ಚಿಕಿತ್ಸೆ ನಿರಾಕರಿಸುವ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ

Mumbai News Desk

ಮೀರಾ ಭಾಯಂದರ್ ಮಹಾನಗರಪಾಲಿಕೆಯ ಚುನಾವಣೆಯಲ್ಲಿ ಗಣೇಶ್ ಗೋಪಾಲ್ ಶೆಟ್ಟಿ ವಿಜಯ

Mumbai News Desk

ವೆಸ್ಟರ್ನ್ ಇಂಡಿಯಾ ಶ್ರೀ ಶನಿಮಹಾತ್ಮ ಸೇವಾ ಸಮಿತಿಯ ವತಿಯಿಂದ ಶ್ರೀ ಶನಿಶಿಂಗ್ನಪುರದಲ್ಲಿ ಶ್ರೀ ಶನಿಗ್ರಂಥ ಪಾರಾಯಣ ಪೂಜೆ

Mumbai News Desk

ಬಂಟರ ಸಂಘ ಬಂಟವಾಳ  ಯುವ ವಿಭಾಗದ    ಹಬ್ಬ ದೀಪಾವಳಿ ಸಂಭ್ರಮದ  ಬೊಲ್ಪುದ ಐಸಿರಿ-೨ . ಬಂಟರ   ಸಂಸ್ಕೃತಿಯನ್ನು ಬಿಂಬಿಸಿದೆ:  ಐಕಳ ಹರೀಶ್ ಶೆಟ್ಟಿ

Mumbai News Desk

ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಅರ್ಹ ಸಂಶೋಧನ ವಿದ್ಯಾರ್ಥಿಗಳಿಗೆ ಜಯಲೀಲಾ ಟ್ರಸ್ಟ್ ನ ವತಿಯಿಂದ ಗೌರವ ಧನ

Mumbai News Desk

ಚೀನಾದ ಎಮ್‌.ಡಿ.ಆರ್‌.ಟಿ. ಗ್ಲೋಬಲ್ ಕಾನ್ಫರೆನ್ಸ್‌ನಲ್ಲಿ ಡಾ. ಆರ್. ಕೆ. ಶೆಟ್ಟಿ ಭಾಷಣ

Mumbai News Desk