28 C
Mumbai
September 18, 2026
Mumbai News Kannada
ಸುದ್ದಿ

ಮುಂಬೈ : ಮೊಗವೀರ ಸಮುದಾಯದ ಹಿರಿಯ ಮುಖಂಡ ಗುಂಡಿ ವಿ. ಕೆ. ಸುವರ್ಣ ನಿಧನ





ಮೊಗವೀರ ಸಮುದಾಯದ ಹಿರಿಯ ಮುಖಂಡ, ಮೊಗವೀರ ಕೋ-ಆಪರೇಟಿವ್ ಬ್ಯಾಂಕಿನ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಹಾಗೂ ಮಾಜಿ ನಿರ್ದೇಶಕರಾದ ಗುಂಡಿ ವಿ. ಕೆ. ಸುವರ್ಣ (91 ವರ್ಷ) ಅವರು ಜೂನ್ 16ರ ಮಂಗಳವಾರ ಮುಂಜಾನೆ 5 ಗಂಟೆಗೆ ನಿಧನರಾಗಿದ್ದಾರೆ. ಮೃತರು ಬ್ಯಾಂಕಿಂಗ್ ಕ್ಷೇತ್ರ ಮಾತ್ರವಲ್ಲದೆ ಮುಂಬೈನ ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಸ್ಥೆಗಳಲ್ಲಿ ದೀರ್ಘಕಾಲ ಸಕ್ರಿಯವಾಗಿ ಸೇವೆ ಸಲ್ಲಿಸಿದ್ದರು. ಶ್ರೀಮದ್ಭಾರತ ಮಂಡಳಿಯ ಮಾಜಿ ಪ್ರಧಾನ ಕಾರ್ಯದರ್ಶಿಯಾಗಿ, ಮೊಗವೀರ ವ್ಯವಸ್ಥಾಪಕ ಮಂಡಳಿಯ ಮಾಜಿ ವ್ಯವಸ್ಥಾಪಕ ಸಮಿತಿ ಸದಸ್ಯರಾಗಿ ಹಾಗೂ ಮೊಗವೀರ ನೈಟ್ ಹೈಸ್ಕೂಲ್ ಹಳೆ ವಿದ್ಯಾರ್ಥಿ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿಯಾಗಿ ಅವರು ಮಹತ್ತರ ಕೊಡುಗೆ ನೀಡಿದ್ದಾರೆ. ಇದರೊಂದಿಗೆ ಗುಂಡಿ ಮೊಗವೀರ ಸಭಾ ಮುಂಬೈ ಮತ್ತು ಬಜೆ ಮೊಗವೀರ ಸುವರ್ಣ ಮೂಲಸ್ಥಾನ ಸಭಾ ಮುಂಬೈ ಸಂಸ್ಥೆಗಳ ಮಾಜಿ ಅಧ್ಯಕ್ಷರಾಗಿಯೂ ಅವರು ಸಮಾಜವನ್ನು ಮುನ್ನಡೆಸಿದ್ದರು. ಮೃತರ ಅಂತಿಮ ಸಂಸ್ಕಾರವು ಜೂನ್ 17ರ ಬುಧವಾರ ಸಂಜೆ 7 ಗಂಟೆಗೆ ಮುಂಬೈನ ಅಂಧೇರಿ ಪೂರ್ವದಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಹಿರಿಯ ಚೇತನದ ಅಗಲಿಕೆಗೆ ಮುಂಬೈ ಮತ್ತು ಕರಾವಳಿಯ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಮೃತರ ದಿವ್ಯ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.



Related posts

ರೋಮ್‌ನಲ್ಲಿ ಪ್ರಧಾನಿ ಮೋದಿಯಿಂದ ಮೆಲೋನಿಗೆ ‘ಮೆಲೊಡಿ’ ಚಾಕೊಲೇಟ್ ಉಡುಗೊರೆ: ಜಾಗತಿಕ ಮಟ್ಟದಲ್ಲಿ ಭಾರಿ ವೈರಲ್ ಆದ ಸಿಹಿ ರಾಜತಾಂತ್ರಿಕತೆ

Mumbai News Desk

ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆ, ಏಪ್ರಿಲ್ 19ರಿಂದ ಜೂನ್ 1ರ ತನಕ ಏಳು ಹಂತಗಳಲ್ಲಿ ಚುನಾವಣೆ.

Mumbai News Desk

ಮಂಗಳೂರಿನಲ್ಲಿ ಉದ್ಯಮಿ, ಶ್ರೀಮಂತರಿಗೆ 200 ಕೋಟಿಗೂ ಅಧಿಕ ವಂಚಿಸಿದ ಜಪ್ಪಿನಮೊಗರು ನಿವಾಸಿ ರೋಹನ್ ಸಲ್ಡಾನ ಅರೆಸ್ಟ್

Mumbai News Desk

ಜೆಸಿಐ ಕಾಪು ಘಟಕಕ್ಕೆ 2026ನೇ ಸಾಲಿನ ನೂತನ ಅಧ್ಯಕ್ಷ : ಜೆಸಿ ವಿಕ್ಕಿ ಪೂಜಾರಿ ಮಡುಂಬು

Mumbai News Desk

ರಂಗನಟ, ದೂರದರ್ಶನ ಕಲಾವಿದ ರಮೇಶ ಶಿವಪುರ ಅವರಿಗೆ ಮಾತೃ ವಿಯೋಗ

Mumbai News Desk

ನಿಟ್ಟೆಗುತ್ತು ಸುಮಿತ್ರಾ ಆರ್. ಶೆಟ್ಟಿ ನಿಧನ

Mumbai News Desk