July 23, 2026
Mumbai News Kannada
ಪ್ರಕಟಣೆ

ಏಪ್ರಿಲ್ 4ರಿಂದ ಕುರುಡುಂಜೆ ಗರಡಿಯಲ್ಲಿ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ನೇಮೋತ್ಸವ ಸಂಭ್ರಮ







ಬ್ರಹ್ಮಾವರ: ತಾಲ್ಲೂಕಿನ ಆರೂರು ಗ್ರಾಮದ ಕುರುಡುಂಜೆಯ ಶ್ರೀ ಆದಿಶಕ್ತಿ ಮತ್ತು ಬ್ರಹ್ಮಬೈದರ್ಕಳ ಹಾಗೂ ಶಿವರಾಯ ದೈವಗಳ ಗರಡಿಯಲ್ಲಿ ಏಪ್ರಿಲ್ 4ರಿಂದ 6ರವರೆಗೆ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ಏಪ್ರಿಲ್ 10ರಿಂದ 12ರವರೆಗೆ ವರ್ಷಾವಧಿ ನೇಮೋತ್ಸವ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಜರುಗಲಿದೆ.

ಧಾರ್ಮಿಕ ವಿಧಿವಿಧಾನಗಳು:

ಕೊರಂಗ್ರಪಾಡಿ ವಿದ್ವಾನ್ ಶ್ರೀ ಕೆ.ಪಿ. ಕುಮಾರಗುರು ತಂತ್ರಿಗಳ ಹಾಗೂ ವೇದಮೂರ್ತಿ ಕುರುಡುಂಜೆ ನರಸಿಂಹ ಭಟ್ಟರ ನೇತೃತ್ವದಲ್ಲಿ ಧಾರ್ಮಿಕ ವಿಧಿಗಳು ನಡೆಯಲಿವೆ.

  • ಏಪ್ರಿಲ್ 3: ಸಂಜೆ 4 ಗಂಟೆಗೆ ಆರೂರು ಹಾಲೆಕಟ್ಟೆ ವೃತ್ತದಿಂದ ಭವ್ಯ ‘ಹಸಿರು ಹೊರೆಕಾಣಿಕೆ’ ಮೆರವಣಿಗೆ ಸಾಗಲಿದೆ.
  • ಏಪ್ರಿಲ್ 4: ನಾಗದೇವರಿಗೆ ನವಕಪ್ರದಾನ, ಆಶ್ಲೇಷಾ ಬಲಿದಾನ, ವಿಶ್ವಕರ್ಮ ಪೂಜೆ ಹಾಗೂ ರಾಕ್ಷೆಘ್ನಯಾಗ ನಡೆಯಲಿದೆ.
  • ಏಪ್ರಿಲ್ 5: ಬಿಂಬಶುದ್ಧಿ, ನವಗ್ರಹ ಹೋಮ ಹಾಗೂ ಅಮ್ಮನವರ ಪ್ರತಿಷ್ಠಾಪನೆ ನೆರವೇರಲಿದೆ.
  • ಏಪ್ರಿಲ್ 6: ಬೆಳಿಗ್ಗೆ 7.30ಕ್ಕೆ ದಿವ್ಯ ಸಾನ್ನಿಧ್ಯಗಳ ಭವ್ಯ ಪ್ರತಿಷ್ಠೆ ಹಾಗೂ ಬ್ರಹ್ಮಕಲಶಾಭಿಷೇಕ ಜರುಗಲಿದ್ದು, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಲಿದೆ.

ಸಭಾ ಕಾರ್ಯಕ್ರಮ ಮತ್ತು ಅತಿಥಿಗಳು:

ಏಪ್ರಿಲ್ 6ರಂದು ಸಂಜೆ 6.30ಕ್ಕೆ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀ ಅರುಣ್ ಕುಮಾರ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶ್ರೀ ಸಂತೋಷ್ ಕುಮಾರ್ ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

​ಮುಖ್ಯ ಅತಿಥಿಗಳಾಗಿ ಸಂಸದ ಶ್ರೀ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಶ್ರೀ ಯಶಪಾಲ್ ಎ. ಸುವರ್ಣ, ಮಾಜಿ ಸಚಿವರಾದ ಶ್ರೀ ಕೆ. ಜಯಪ್ರಕಾಶ ಹೆಗ್ಡೆ, ಶ್ರೀ ಪ್ರಮೋದ್ ಮಧ್ವರಾಜ್, ಮಾಜಿ ಶಾಸಕ ಶ್ರೀ ಕೆ. ರಘುಪತಿ ಭಟ್, ಪ್ರಧಾನ ಅರ್ಚಕ ಶ್ರೀ ನರಸಿಂಹ ಭಟ್, ಉದ್ಯಮಿ ಶ್ರೀ ಪ್ರಸಾದ್ ರಾಜ್ ಕಾಂಚನ್, ನೀಲಮ್ಮ ಚಾರಿಟೇಬಲ್ ಟ್ರಸ್ಟ್‌ನ ಶ್ರೀ ಆರೂರು ನಾರಾಯಣ ಶೆಟ್ಟಿ ಸೇರಿದಂತೆ ಪ್ರಮುಖರಾದ ಶ್ರೀ ದುಗ್ಗಪ್ಪ ಅಂತಯ್ಯ ಶೆಟ್ಟಿ, ಶ್ರೀ ರಾಜೇಶ್ ಶೆಟ್ಟಿ ಬಿರ್ತಿ, ಮುಕ್ಕಾಲಿ ಶ್ರೀ ಅಶೋಕ್ ಶೆಟ್ಟಿ, ಶ್ರೀ ಸತೀಶ್ ಶೆಟ್ಟಿ, ಶ್ರೀ ಶಿವರಾಮ ಶೆಟ್ಟಿ, ಶ್ರೀ ನಾರಾಯಣ ಶೆಟ್ಟಿ ಹಾಗೂ ಅರ್ಚಕ ಶ್ರೀ ದೇಜು ಪೂಜಾರಿ ಭಾಗವಹಿಸಲಿದ್ದಾರೆ.

ವರ್ಷಾವಧಿ ನೇಮೋತ್ಸವ:

  • ಏಪ್ರಿಲ್ 10: ರಾತ್ರಿ ಅಗಲು ನೈವೇದ್ಯ.
  • ಏಪ್ರಿಲ್ 11: ಬೆಳಿಗ್ಗೆ ತನು ಸೇವೆ, ಸತ್ಯನಾರಾಯಣ ಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ ಹಾಗೂ ರಾತ್ರಿ ನೇಮೋತ್ಸವ.
  • ಏಪ್ರಿಲ್ 12: ಬೆಳಿಗ್ಗೆ 5.30ಕ್ಕೆ ಮೈಂದಾಳ್ತಿ ಕೋಲ ನಡೆಯಲಿದೆ.

ಸಾಂಸ್ಕೃತಿಕ ವೈಭವ:

ಏಪ್ರಿಲ್ 6ರಂದು ಬೆಳಿಗ್ಗೆ ಸ್ಥಳೀಯ ತಂಡಗಳಿಂದ ಭಜನೆ, ಮಧ್ಯಾಹ್ನ 12ಕ್ಕೆ ‘ಸುಸ್ವರ ಮೆಲೋಡೀಸ್’ ಅವರಿಂದ ಭಕ್ತಿ ಗಾನ ಸಂಭ್ರಮ ಹಾಗೂ ರಾತ್ರಿ 7.30ಕ್ಕೆ ಮಂಗಳೂರಿನ ಸಾಯಿಶಕ್ತಿ ಕಲಾಬಳಗದಿಂದ ‘ಜೋಡುಜೀಟಿಗೆ’ ಎಂಬ ತುಳು ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಸಮಿತಿಯ ಪದಾಧಿಕಾರಿಗಳಾದ ಶ್ರೀ ಸಂದೀಪ್ ಕುಮಾರ್ ಹೆಗ್ಡೆ ಹಾಗೂ ಶ್ರೀ ಗುರುರಾಜ ರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗರಡಿಯ ಜೀರ್ಣೋದ್ಧಾರ ಕಾರ್ಯಕ್ಕೆ ಭಕ್ತರು ಉದಾರವಾಗಿ ದೇಣಿಗೆ ನೀಡಲು ವಿನಂತಿಸಲಾಗಿದೆ.

  • ಬ್ಯಾಂಕ್ ವಿವರ: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ನೀಲಾವರ ಶಾಖೆ.
  • ಖಾತೆ ಸಂಖ್ಯೆ: 297622010001099 (IFSC: UBIN0929760).


Related posts

ಮುಂಬೈ ಘಾಟ್‌ಕೋಪರ್‌ನ ಶ್ರೀ ಕ್ಷೇತ್ರ ಗೀತಾಂಬಿಕಾ ದೇವಸ್ಥಾನದಲ್ಲಿ ಜೂನ್ 26 ರಂದು ಶ್ರೀ ದೇವಿಯ ದರ್ಶನ ಸೇವೆ ಮತ್ತು ಅನ್ನಸಂತರ್ಪಣೆ

Mumbai News Desk

ಮಾ. 28 : ದಿ ಮೊಗವೀರ ಕೋ-ಅಪರೇಟಿವ್ ಬ್ಯಾಂಕ್ ಎಂಪ್ಲಾಯೀಸ್ ಸ್ಪೋರ್ಟ್ಸ್ ಕ್ಲಬ್ ಮತ್ತು ಪೂಜಾ ಸಮಿತಿಯಿಂದ 44ನೇ ವಾರ್ಷಿಕ ಶ್ರೀ ಸತ್ಯನಾರಾಯಣ ಮಹಾಪೂಜೆ

Mumbai News Desk

 ನ 29,30 ಮತ್ತು ಡಿ 1 ಸತತ ಮೂರು ದಿವಸ  ಮಕ್ಕಳ ಕಲರವದಲ್ಲಿ ನಾಟಕೋತ್ಸವ, ಯಕ್ಷಗಾನೋತ್ಸವ, ವಾರ್ಷಿಕೋತ್ಸವಗಳ ವಿಜೃಂಭಣೆಯ ಮಹಾಮೇಳ.

Mumbai News Desk

ಬೊರಿವಲಿ ದೇವುಲ್ಪಾಡಾದ ಶ್ರೀಬ್ರಹ್ಮ ಬೈದರ್ಕಳ ಗರೋಡಿ ಜ. 25: ವಾರ್ಷಿಕ ಮಹಾಪೂಜೆ, ಬ್ರಹ್ಮ ಬೈದರ್ಕಳ ನೇಮೋತ್ಸವ

Mumbai News Desk

ಸೆ.14 ರಂದು ಕಲ್ವಾ ಸ್ಥಳೀಯ ಸಮಿತಿಯ ವತಿಯಿಂದ 171ನೇ ಬ್ರಹ್ಮ ಶ್ರೀ ನಾರಾಯಣ ಗುರು ಜಯಂತಿ ಸಮಾರಂಭ

Mumbai News Desk

ಫೆ.17ರಂದು ಸೃಜನಾ ಮುಂಬಯಿ ವತಿಯಿಂದ ಸಾಹಿತ್ಯ ವಿಮರ್ಶೆ, ಕೃತಿ ಬಿಡುಗಡೆ, ಜನಪದ ಹಾಡುಗಳ ಪ್ರಸ್ತುತಿ.

Mumbai News Desk