July 23, 2026
Mumbai News Kannada
ಸುದ್ದಿ

ಹೋಟೆಲ್ ಉದ್ಯಮಿ, ಸಂಘಟಕ ದುರ್ಗಾಪ್ರಸಾದ್ ಸಾಲ್ಯಾನ್ ನಿಧನ







ಬಿಲ್ಲವರ ಎಸೋಸಿಯೇಷನ್ ಮುಂಬೈ ಇದರ ಸಕ್ರಿಯ ಸದಸ್ಯರು,ಜಯಸುವರ್ಣ ಅಭಿಮಾನಿ ಸಮಿತಿಯ ಉಪಾಧ್ಯಕ್ಷರು,ಮಹಾರಾಷ್ಟ್ರ ಹೋಟೆಲ್ ಮತ್ತು ರೆಸ್ಟೋರೆಂಟ್ ಫೆಡರೇಶನ್ ಇದರ ಗೌರವ ಪ್ರದಾನ ಕಾರ್ಯದರ್ಶಿ, ಹೋಟೆಲ್ ಉದ್ಯಮಿ, ಮೂಲ್ಕಿ ಮಾನಂಪಾಡಿ ಸಾಲ್ಯಾನ್ ಸ್ಟೇ ಹೌಸ್ ಮಾಲಕ ಶ್ರೀ ದುರ್ಗಾಪ್ರಸಾದ್ ಸಾಲಿಯಾನ್ ಅಲ್ಪ ಕಾಲದ ಅಸೌಖ್ಯದಿಂದಾಗಿ ಇಂದು ತನ್ನ ಮಲಾಡ್ ಸ್ವಗ್ರಹದಲ್ಲಿ ನಿಧನರಾದರು.

ಸರಳ ವ್ಯಕ್ತಿತ್ವದ, ನೇರ ನಡೆ ನುಡಿಯ ಸಾಲ್ಯಾನ್ ರವರು ತುಳುನಾಡು ದೈವ ಭಕ್ತ, ಖ್ಯಾತ ಸಂಘಟಕ, ಹಲವಾರು ಸಂಘ ಸಂಸ್ಥೆಗಳ ಸಕ್ರಿಯ ಕಾರ್ಯಕರ್ತ, ಸಮಾಜ ಸೇವಕ ಹಾಗೂ ಹಿತವಾದ ಮಿತಿ ಮಾತುಗಾರ.

ಮೃತರ ಅಂತಿಮಯಾತ್ರೆ ಅವರ ಮಲಾಡ್ ಪೂರ್ವದ ನಿವಾಸ A /401,ರಿಜ್ವಿ ಒಕ್,ರಹೇಜ ಕಾಂಪ್ಲೆಕ್ಸ್ ರೋಡ್,ಟೈಮ್ಸ್ ಆಫ್ ಇಂಡಿಯಾ ಪ್ರೆಸ್ ಹತ್ತಿರ,ಮಲಾಡ್ ಪೂರ್ವ ಇಲ್ಲಿಂದ ನಾಳೆ ಬೆಳಿಗ್ಗೆ 9.30 ಕ್ಕೆ ಹೊರಟು, ಗೊರೇಗಾವ್ ಶಿವಧಾಮ್ ರುದ್ರ ಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ. ಮೃತರ ನಿಧನಕ್ಕೆ ಜಯ ಸಿ ಸುವರ್ಣ ಅಭಿಮಾನಿಗಳು, ಶ್ರೀ ನಾರಾಯಣ ಗುರು ಭಜನಾ ಮಂಡಳಿ ಮುಂಬೈ, ಮತ್ತು ಮುಂಬೈ ಬಿಲ್ಲವರು ಹಾಗೂ ಭಾರತ್ ಬ್ಯಾಂಕ್ ಕಾರ್ಯಧ್ಯಕ್ಷರಾದ ಸೂರ್ಯಕಾಂತ್ ಜಯ ಸುವರ್ಣರು ,ಭಾರತ್ ಬ್ಯಾಂಕ್ ನಿರ್ದೇಶಕರುಗಳು ಸಂತಾಪ ವ್ಯಕ್ತಪಡಿಸಿದ್ದಾರೆ.



Related posts

ಅಕ್ಷಯಧಾರ ಕ್ರೆಡಿಟ್ ಸೊಸೈಟಿ ಕಾಪು – ಅಧ್ಯಕ್ಷರಾಗಿ ಲವ ಎನ್. ಕರ್ಕೇರ ಮರು ಆಯ್ಕೆ.

Mumbai News Desk

ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು : ಸಡಗರದ ದೀಪಾವಳಿ ಹಬ್ಬದ ಆಚರಣೆ

Mumbai News Desk

ಜಾಗತಿಕ ಬಂಟರ ಸಂಘಗಳ ಒಕ್ಕೂಟದ(ರಿ.) – ವೈದ್ಯಕೀಯ ಚಿಕಿತ್ಸೆಗೆ ನೆರವು.

Mumbai News Desk

ಮುಂಬಯಿ : ಥಾಣೆಯ ಮುಂಬ್ರಾ ಬಳಿ ಚಲಿಸುವ ರೈಲಿನಿಂದ ಬಿದ್ದು ಕನಿಷ್ಠ 5 ಪ್ರಯಾಣಿಕರು ಸಾವು

Mumbai News Desk

ಜೈ ಹಿಂದ್ ಸ್ಪೋರ್ಟ್ಸ್ ಕ್ಲಬ್ – 58 ನೇ ಆರ್ ಎನ್ ಉಚ್ಚಿಲ್ ಸ್ಮಾರಕ ವಾರ್ಷಿಕ ಅಥ್ಲೆಟಿಕ್ಸ್ ಮೀಟ್

Mumbai News Desk

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನನೂತನ ಗುಡಿಯೊಳಗೆ ಗೋನಿವಾಸ ಸಂಪನ್ನ

Mumbai News Desk