29 C
Mumbai
August 29, 2026
Mumbai News Kannada
ಪ್ರಕಟಣೆ

ಶಹಾಡ್‌ನ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ 64ನೇ ವಾರ್ಷಿಕೋತ್ಸವ: ಏ. 12ರಿಂದ ಧಾರ್ಮಿಕ ಸಂಭ್ರಮ





ಕಲ್ಯಾಣ್: ಬಿರ್ಲಾಗೇಟ್ ಶಹಾಡ್‌ನ ಶ್ರೀ ನಿತ್ಯಾನಂದ ಮಿತ್ರ ಭಜನಾ ಮಂಡಳಿ ನಿರ್ವಹಣೆಯ ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನದಲ್ಲಿ ದೇವಿಯ 64ನೇ ವಾರ್ಷಿಕೋತ್ಸವ ಹಾಗೂ 11ನೇ ಪ್ರತಿಷ್ಠಾ ವರ್ಧಂತಿ ಉತ್ಸವವು ಏಪ್ರಿಲ್ 12ರಿಂದ 21ರವರೆಗೆ ಅತ್ಯಂತ ವೈಭವದಿಂದ ಜರುಗಲಿದೆ.

​ಡೊಂಬಿವಲಿಯ ಶ್ರೀ ಶಂಕರನಾರಾಯಣ ತಂತ್ರಿಗಳ ನೇತೃತ್ವದಲ್ಲಿ ಭಜನಾ ಸಪ್ತಾಹ, ಸಾಮೂಹಿಕ ಚಂಡಿಕಾಯಾಗ ಸೇರಿದಂತೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ದೇವಸ್ಥಾನದ ವ್ಯವಸ್ಥಾಪಕ ಮಂಡಳಿ ತಿಳಿಸಿದೆ.

​ಕಾರ್ಯಕ್ರಮದ ವಿವರ:

  • ಏ. 12: ಸಾಮೂಹಿಕ ಪ್ರಾರ್ಥನೆ, ಮಹಾಸಂಕಲ್ಪ, ಮಹಾಗಣಪತಿ ಹೋಮದೊಂದಿಗೆ ಉತ್ಸವಕ್ಕೆ ಚಾಲನೆ ದೊರೆಯಲಿದೆ.
  • ಏ. 17: ವಿಷ್ಣು ಸಹಸ್ರನಾಮ ಅರ್ಚನೆ, ಗುರು ಪಾದುಕಾ ಪೂಜೆ ಹಾಗೂ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸೇವೆ ನಡೆಯಲಿದೆ.
  • ಏ. 18: ನವಗ್ರಹ ಶಾಂತಿ, ರಾಕ್ಷೋಘ್ನ ಹೋಮ ಹಾಗೂ ವಾಸ್ತು ಪೂಜೆ ನೆರವೇರಲಿದೆ.
  • ಏ. 19: ಪಂಚಾಮೃತಾಭಿಷೇಕ, 108 ಸೀಯಾಳಾಭಿಷೇಕ, ತುಲಭಾರ ಸೇವೆ ಹಾಗೂ ಸಂಜೆ ರಥೋತ್ಸವ ಮತ್ತು ರಂಗಪೂಜೆ ಜರುಗಲಿದೆ.
  • ಏ. 20: ಬೆಳಿಗ್ಗೆ ಸಾಮೂಹಿಕ ಚಂಡಿಕಾಯಾಗ, ಧಾರ್ಮಿಕ ಸಭಾ ಕಾರ್ಯಕ್ರಮ ಹಾಗೂ ರಾತ್ರಿ 8 ಗಂಟೆಗೆ ಶ್ರೀ ಗೀತಾಂಬಿಕಾ ಕೃಪಾಪೋಷಿತ ಯಕ್ಷಗಾನ ಮಂಡಳಿಯಿಂದ ‘ದಕ್ಷಾಧ್ವರ’ ತುಳು ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.
  • ಏ. 21: ಸಂಪ್ರೋಕ್ಷಣೆ, ನವಕಲಶಾಧನೆ ಹಾಗೂ ಮಹಾಪೂಜೆಯೊಂದಿಗೆ ಉತ್ಸವ ಸಂಪನ್ನಗೊಳ್ಳಲಿದೆ.

​ಧಾರ್ಮಿಕ ಸಭೆ:

​ಏಪ್ರಿಲ್ 20ರಂದು ನಡೆಯುವ ಧಾರ್ಮಿಕ ಸಭೆಯಲ್ಲಿ ಮುಂಬೈ ಬಂಟ್ಸ್ ಸಂಘದ ಪ್ರಧಾನ ಕಾರ್ಯದರ್ಶಿ ಡಾ. ಆರ್.ಕೆ. ಶೆಟ್ಟಿ ಹಾಗೂ ಉಲ್ಲಾಸನಗರ ಮಹಾನಗರ ಪಾಲಿಕೆಯ ಮೇಯರ್ ಶ್ರೀಮತಿ ಅಶ್ವಿನಿ ಕೆ. ನಿಕಮ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಗೌರವ ಅತಿಥಿಗಳಾಗಿ ಭಾಸ್ಕರ್ ಟಿ. ಶೆಟ್ಟಿ, ರವೀಂದ್ರ ವೈ. ಶೆಟ್ಟಿ, ಸದಾನಂದ ಶೆಟ್ಟಿ, ನಂದೀಶ್ ಪೂಜಾರಿ, ದಿಲೀಪ್ ದಾಶರತ್ ಗಾಯಕ್ವಾಡ್, ಜಗದೀಶ್ ರಾಮ ಬಂಜನ್ ಹಾಗೂ ಸುನಿಲ್ ರಾಜು ಸಾಲಿಯಾನ್ ಉಪಸ್ಥಿತರಿರುವರು. ಇದೇ ಸಂದರ್ಭದಲ್ಲಿ ಉಮೇಶ್ ಬಂಗೇರ, ಅಶೋಕ್ ಬಿ. ಶೆಟ್ಟಿ ಮತ್ತು ಲತಾ ಪೂಜಾರಿ ಅವರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

​ದೇವಸ್ಥಾನದ ಅಭಿವೃದ್ಧಿ ಹಾಗೂ ಉತ್ಸವದ ಯಶಸ್ವಿಗಾಗಿ ಎಲ್ಲಾ ಭಕ್ತರು ತನು ಮನ ಧನ ದಿಂದ ಸಹಕರಿಸಿ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಬೇಕಾಗಿ ಅಧ್ಯಕ್ಷ ರಾಜೇಶ್ ಜೆ. ಶೆಟ್ಟಿ, ಚೇರ್ಮನ್ ಚಂದ್ರಕಾಂತ್ ಎಸ್. ಶೆಟ್ಟಿ, ಕಾರ್ಯದರ್ಶಿ ಜಗದೀಶ್ ಎಂ. ಶೆಟ್ಟಿ ಬೆಲಂಜೆ, ಕೋಶಾಧಿಕಾರಿ ಸಂತೋಷ್ ಎಚ್. ಶೆಟ್ಟಿ ಹಾಗೂ ಸಮಿತಿಯ ಎಲ್ಲಾ ಪದಾಧಿಕಾರಿಗಳು, ಟ್ರಸ್ಟಿಗಳು ಮತ್ತು ಸಲಹೆಗಾರರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.



Related posts

ಬಂಟರ ಸಂಘ ಮುಂಬಯಿ. ಗುರುಪೂರ್ಣಿಮೆ ಗೆ ಶ್ರೀ ಮಹಾವಿಷ್ಣು ಭಜನಾ ತಂಡ ಶುಭಾರಂಭ.

Mumbai News Desk

ವಸಯಿ ಕರ್ನಾಟಕ ಸಂಘ 38ನೇ ವಾರ್ಷಿಕೋತ್ಸವ ಸಂಭ್ರಮ, ನೃತ್ಯ ವೈಭವ, ಸನ್ಮಾನ

Mumbai News Desk

ಶ್ರೀ ರಜಕ ಸಂಘ ಮುಂಬಯಿ (ರಿ), ಜು. 21 ರಂದು 85ನೇ ವಾರ್ಷಿಕ ಮಹಾಸಭೆ

Mumbai News Desk

ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮೀರಾರೋಡ್, ನ.27 ರಂದು ವಾರ್ಷಿಕ ಶ್ರೀ ಅಯ್ಯಪ್ಪ ಮಹಾಪೂಜೆ.

Mumbai News Desk

ಶ್ರೀ ಮದ್ಭಾರತ ಮಂಡಳಿ ಮುಂಬೈ : ಫೆ. 21-22ರಂದು “148ನೇ ವಾರ್ಷಿಕ ಮಂಗಳೋತ್ಸವ” ಮತ್ತು “ಕುಮಾರವ್ಯಾಸ ಭಾರತ” ಗ್ರಂಥ ಪಾರಾಯಣದ ಸಮಾಪ್ತಿ ಮಂಗಳೋತ್ಸವ, 24ನೇ ಪ್ರತಿಷ್ಠಾ ವರ್ಧಂತಿ ಮಹೋತ್ಸವ

Mumbai News Desk

ಫೆ.15 ರಂದು ಶಹಾಡ್‌ನ ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಪ್ರಯುಕ್ತ 24 ಗಂಟೆಗಳ ಅಖಂಡ ಭಜನೆ

Mumbai News Desk