30.9 C
Mumbai
June 8, 2026
Mumbai News Kannada
ಮುಂಬಯಿ

ಅಖಿಲ ಕರ್ನಾಟಕ ಜೈನ ಸಂಘ, ಮುಂಬಯಿ ವತಿಯಿಂದ ಮಹಾವೀರ ಜಯಂತಿ ಆಚರಣೆ






ಮಹಾವೀರ ಭಗವಾನರು ಪ್ರಪಂಚಕ್ಕೆ ಶಾಂತಿ ಸಂದೇಶವನ್ನು ಸಾರಿದ ಪುಣ್ಯಪುರುಷರು : ಉದಯ ಅತಿಕಾರಿ

ಜೈನ ಧರ್ಮದ ವರ್ತಮಾನ ಕಾಲದ 24ನೆಯ ತೀರ್ಥಂಕರ 1008 ಭಗವಾನ್ ಶ್ರೀ ಮಹಾವೀರರ 2625ನೆಯ ಜನ್ಮ ಕಲ್ಯಾಣ ಮಹೋತ್ಸವವನ್ನು ಅಖಿಲ ಕರ್ನಾಟಕ ಜೈನ ಸಂಘ, ಮುಂಬಯಿ ಇದರ ವತಿಯಿಂದ ಮಾ. 31 ರಂದು ಮಂಗಳವಾರ ಮುಂಬಯಿಯ ಉಪನಗರ ಮುಲುಂಡ್ ಪಶ್ಚಿಮದ 1008 ಭಗವಾನ್ ಶ್ರೀ ಪಾರ್ಶ್ವನಾಥ ಜೈನ ಮಂದಿರದ ಆವರಣದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ಆರಂಭದಲ್ಲಿ ಭಗವಾನ್ ಪಾರ್ಶ್ವನಾಥ ಸ್ವಾಮಿಗೆ ಅಭಿಷೇಕ, ಪೂಜೆ ಹಾಗೂ ಭಗವಾನ್ ಬಾಹುಬಲಿ ಸ್ವಾಮಿಗೆ ಪಾದಪೂಜೆ ಮಾಡಲಾಯಿತು. ತದನಂತರ ಭಗವಾನ್ ಮಹಾವೀರ ಸ್ವಾಮಿಯ ಬಿಂಬವನ್ನು ಪಲ್ಲಕ್ಕಿಯಲ್ಲಿ ಪೂರ್ಣಕಳಶ ಹಾಗೂ ಬ್ಯಾಂಡ್ ವಾದ್ಯಗಳೊಂದಿಗೆ ಅದ್ಧೂರಿಯ ಮೆರವಣಿಗೆಯಲ್ಲಿ ಭಗವಾನ್ ಪಾರ್ಶ್ವನಾಥ ಸ್ವಾಮಿ ಮಂದಿರದ ಆವರಣಕ್ಕೆ ತೋರಣ ಮುಹೂರ್ತ ನೆರವೇರಿಸಿ ತರಲಾಯಿತು. ಸಂಘದ ಅಧ್ಯಕ್ಷರಾದ ಉದಯ ಅತಿಕಾರಿ ಹಾಗೂ ಪದಾಧಿಕಾರಿಗಳಿಂದ ಅಖಂಡ ಜ್ಯೋತಿ ಪ್ರಜ್ವಲನೆಯ ನಂತರ ಭಗವಾನ್ ಮಹಾವೀರ ಸ್ವಾಮಿಗೆ ವಿಶೇಷ ಜಲಾಭಿಷೇಕ, ವಿವಿಧ ದ್ರವ್ಯಾಭಿಷೇಕ, ಚತುಷ್ಕೋಣ ಕಲಶಾಭಿಷೇಕ, ಪೂರ್ಣ ಕುಂಭ ಕಲಶಾಭಿಷೇಕ ಹಾಗೂ ನಾಮಕರಣ ವಿಧಿ ವಿಧಾನಗಳು ಕ್ರಮಬದ್ಧವಾಗಿ ಕರ್ಕಾಳದ ಜಿನಸೇನ ಇಂದ್ರರ ಪೌರೋಹಿತ್ಯದಲ್ಲಿ ನೆರವೇರಿಸಲಾಯಿತು.


ಅಧ್ಯಕ್ಷ ಉದಯ ಅತಿಕಾರಿ ಹಾಗೂ ಕಾಂಚನ ಅತಿಕಾರಿಯವರು ಸೌಧರ್ಮೇಂದ್ರ ಹಾಗೂ ಶಚೀದೇವಿಯಾಗಿ ಜಿನಬಾಲಕ ಮಹಾವೀರ ಸ್ವಾಮಿಯನ್ನು ಪಾಂಡುಕ ಶಿಲೆಯ ಮೇಲೆ ವಿರಾಜಮಾನರನ್ನಾಗಿಸಿ ಅಭಿಷೇಕ ಹಾಗೂ ವಿವಿಧ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿ ಪುಣ್ಯಪಾತ್ರರಾದರು. ಅಖಿಲ ಕರ್ನಾಟಕ ಜೈನ ಸಂಘ, ಮುಂಬಯಿ ಇದರ ಅಧ್ಯಕ್ಷ ಉದಯ ಅತಿಕಾರಿ ಈ ಸಂದರ್ಭದಲ್ಲಿ ಮಾತನಾಡುತ್ತಾ ಮಹಾವೀರ ಭಗವಾನರು ಪ್ರಪಂಚಕ್ಕೆ ಶಾಂತಿ ಸಂದೇಶವನ್ನು ಸಾರಿದ ಪುಣ್ಯಪುರುಷರು. ಇಂತಹ ಪುಣ್ಯಪುರುಷರ ಜನ್ಮ ಕಲ್ಯಾಣ ಮಹೋತ್ಸವವನ್ನು ಆಚರಿಸುವುದು ನಮ್ಮ ಕರ್ತವ್ಯ ಎಂದರು.
ಸಂಘದ ಅಧ್ಯಕ್ಷ ಉದಯ ಅತಿಕಾರಿ, ರಘುವೀರ್ ಹೆಗ್ಡೆ, ಮಹಾವೀರ್ ಎಸ್. ಜೈನ್, ಸಂಪತ್ ಕುಮಾರ್ ಜೈನ್, ಸುಭಾಷ್ ಚಂದ್ರ ರಾಜ್‌ ಜೈನ್, ಜಿನೇಶ್ ಎಮ್ ಜೈನ್, ಜಿನೇಶ್ ಜಿ ಜೈನ್, ಸತೀಶ್ ಅಜಲ , ವಾರಿಸೇನ ಜೈನ್, ಜೈನಿ ಪರಿವಾರ, ಪ್ರವೀಣಚಂದ್ರ ಜೈನ್, ದೇವ್ಯಮ್, ಚಂದ್ರಾವತಿ ಸುಕುಮಾರ್ ಜೈನ್,
ಜಯಮ್ಮ ಯಾದವ, ವಿನಯಾ ಜೈನ್, ಸುನೀತಾ ಬಲ್ಲಾಳ್ ಮತ್ತು ಅನಿತಾ ಜೈನ್, ಕುಮಾರಿಯರಾದ ಪ್ರತ್ಯುಕ್ಷಾ ಬಲ್ಲಾಳ್, ಸಮೀಕ್ಷಾ, ಸಾನಿಧ್ಯ ಜೈನ್ ಮುಂತಾದವರು ತಮ್ಮ ತಮ್ಮ ಪರಿವಾರದೊಂದಿಗೆ ಸ್ವಾಮಿಗೆ ವಿವಿಧ ದ್ರವ್ಯಗಳಿಂದ ಅಭಿಷೇಕ ಹಾಗೂ ಪೂಜೆಯನ್ನು ಮಾಡುವ ಸೌಭಾಗ್ಯವನ್ನು ಪಡೆದರು. ಅಕ್ಷತಾ ಸಂತೋಷ್ ಜೈನ್ ಪುಷ್ಪವೃಷ್ಟಿಗೈದರು. ರಾಜೇಂದ್ರ ಹೆಗ್ಡೆ ಮತ್ತು ಪರಿವಾರದವರು ಶಾಂತಿ ಮಂತ್ರ ಪಠಣದೊಂದಿಗೆ ಸ್ವಾಮಿಗೆ ಶಾಂತಿಧಾರೆಯನ್ನು ನೆರವೇರಿಸಿ ಧನ್ಯರಾದರು.
ಕೊನೆಯದಾಗಿ ಜೈನ್ ಭಗವಾನ್ ಮಹಾವೀರ ಸ್ತುತಿ ಹಾಗೂ ಶಿಮಂತಿ ವಿಜಯಮಾಲೆ ಕೊರಿಯವರು ಅತ್ತೆಯಾಗಿ ನಾಮಕರಣ ವಿಧಿವಿಧಾನಗಳನ್ನು ನೆರವೇರಿಸಿದರು. ಪ್ರತಿಭಾ (ವಾಣಿ) ವೈದ್ಯ ಮತ್ತು ಸಂಗಡಿಗರು ಮಹಾಮಂಗಳಾರತಿಯನ್ನು ನೆರವೇರಿಸಿದರು. ಉದಯ ಹೆಗ್ಡೆ, ಶ್ರೀಮತಿಯರಾದ ಸುಪ್ರಿಯಾ ಹೆಗ್ಡೆ, ನಿಶಾ ಹೆಗ್ಡೆ, ವಿನೋದಾ ಜೈನ್, ಪದ್ಮ ಪ್ರಿಯಾ ಬಲ್ಲಾಳ್ ಕುಮಾರಿ ಪ್ರತ್ಯುಶ್ಯಾ ಬಲ್ಲಾಳ್, ಅರ್ಘ್ಯ ಹೆಗ್ಡೆ, ಜಿಜ್ಞಾ ಜೈನ್ ಹಾಗೂ ಶ್ರೇಷ್ಠ ಜೈನ್ ರವರು ಸ್ತುತಿವಾಚನ ಮಾಡಿದ ಜಿನಭಜನೆಗಳು ಶ್ರೀ ದತ್ತಾತ್ರೇಯ ದಾಬಾರ್ ಹಾಗೂ ವಿವೇಕ್ ನಾಡ್ಕರ್ ರವರ ತಬಲಾದೊಂದಿಗೆ ಸೇರಿದ ಭಕ್ತ ಜನರಿಗೆ ಪ್ರಮೋದೋಲ್ಲಾಸ ನೀಡಿತು. ರಾಜಕುಮಾರ್ ಜೈನ್ ರವರು ಮಂಟಪದ ಅಲಂಕಾರವನ್ನು ಸುಂದರವಾಗಿ ಮಾಡಿದ್ದರು. ಮಕ್ಕಳಾದ ಪ್ರತ್ಯುಷ ಬಲ್ಲಾಳ್, ಅರ್ಗ್ಯ ಹೆಗ್ಡೆ, ಜಿಜ್ಞಾ ಜೈನ್, ಶ್ರೇಷ್ಠ ಜೈನ್, ಮನಶ್ರೀ ಜೈನ್ ಮತ್ತು ತನುಶ್ರೀ ಜೈನ್ ರವರ ಅತ್ಯಂತ ಸುಂದರವಾದ ಕುಣಿತ ಭಜನೆ ಶ್ಲಾಘನೀಯವಾಗಿತ್ತು. ಜೀವಂಧರ ಜೈನ್, ನಿರಂಜನ್ ಪೂವಾನಿ, ವಂಶ್ ವಾರಿಸೇನ ಜೈನ್, ಉದಯ ಹೆಗ್ಡೆ, ಭರತ್ ಅತಿಕಾರಿ, ಸಂತೋಷ್ ಅತಿಕಾರಿ, ಸುಕುಮಾರ್ ಜೈನ್, ಪ್ರಣೀತ ಚೈತನ್ಯ ಜೈನ್, ರವಿ ಜೈನ್, ಅರುಣಾ ಅನಂತದ್ರಾಜ್ ಜೈನ್, ಚಂದ್ರಾವತಿ ಜೈನ್, ತನುಜಾ ಜೈನ್, ಹರ್ಷ ಡಿ ಜೈನ್, ಕುಮಾರಿ ಪ್ರೇಕ್ಷಾ ಜೈನ್, ಅರ್ಘ್ಯ ಹೆಗ್ಡೆ ಪ್ರೀತಿ ಭೋಜನಕ್ಕೆ ತಮ್ಮ ಸಹಕಾರವನ್ನು ನೀಡಿದರು. ಜೀವನ್ ಹೆಗ್ಡೆ, ಅಜಿತ್ ಕುಮಾರ್ ಜೈನ್, ರತ್ನಕರ್ ಆಜ್ರಿ, ಸುದೇಶ್ ಶೆಟ್ಟಿ, ಮನೀಶ್ ಹೆಗ್ಡೆ, ಪ್ರವೀಣ್ ಜೈನ್, ಸ್ವಪನ್ ಜೈನ್ ಅಕ್ಷತಾ ಜೈನ್, ರಮ್ಯಾ ಜೈನ್, ಭಾರತಿ ಜೈನ್, ಸುಪ್ರಿಯಾ ಎಂ ಹೆಗ್ಡೆ, ಸುಶ್ಮಿತಾ ಜೈನ್, ಸುಪ್ರಿಯಾ ಬಾಹಿರ್ ಶೆಟ್, ಸಹಕರಿಸಿದರು. ಉದಯ ಅತಿಕಾರಿಯವರು ಈ ವರ್ಷದ ಭಗವಾನ್ ಮಹಾವೀರರ ಜನ್ಮ ಕಲ್ಯಾಣ ಮಹೋತ್ಸವವನ್ನು ಸಂಘವು ವಿಶೇಷವಾಗಿ ವಿಶ್ವ ಶಾಂತಿಗಾಗಿ ಆಚರಿಸುತ್ತಿದೆ ಹಾಗೂ ಹಾರೆಯಲ್ಲಿ ನಡೆಯುತ್ತಿರುವ ಯುದ್ಧ ವಿರಾಮಕ್ಕಾಗಿ ವಿಶೇಷ ಪ್ರಾರ್ಥನೆಯನ್ನು ನಡೆಸಲಾಯಿತು.
ಧಾರ್ಮಿಕ ಕಾರ್ಯಕ್ರಮದ ನಿರ್ವಹಣೆಯನ್ನು ಸಂಘದ ಗೌ. ಪ್ರಧಾನ ಕಾರ್ಯದರ್ಶಿ ಪವನಂಜಯ ಬಲ್ಲಾಳ್ ರವರು ಹಾಗೂ ಸಭಾ ಕಾರ್ಯಕ್ರಮದ ನಿರ್ವಹಣೆಯನ್ನು ಸಂಘದ ಜತೆ ಕಾರ್ಯದರ್ಶಿ ರಘುವೀರ್ ಹೆಗ್ಡೆಯವರು ನಡೆಸಿ ಧನ್ಯವಾದಗೈದರು.



Related posts

ಭಾರತ್ ಬ್ಯಾಂಕ್ ಸಿಬ್ಬಂದಿ ಆಶಾಲತಾ ಎಸ್ ಕೋಟ್ಯಾನ್ ಸೇವಾ ನಿವೃತ್ತಿ

Mumbai News Desk

ಮುಂಬೈ ನಿವಾಸಿಗಳಿಗೆ ಗುಡ್ ನ್ಯೂಸ್: 2016 ಕ್ಕಿಂತ ಹಳೆಯ ಕಟ್ಟಡಗಳಿಗೆ ‘OC’ ನೀಡಲು ಮಹಾನಗರ ಪಾಲಿಕೆ ನಿರ್ಧಾರ

Mumbai News Desk

ಬಂಟರ ಸಂಘ ಭಿವಂಡಿ- ಬದ್ಲಾಪುರ ಪ್ರಾದೇಶಿಕ ಸಮಿತಿ ಮಹಿಳಾ ವಿಭಾಗದಿಂದ ಆಷಾಢ ವೈಭವ ಮತ್ತು ಅಡುಗೆ ಸ್ಪರ್ಧೆ

Mumbai News Desk

ಶ್ರೀ ರಜಕ ಸಂಘ (ಮುಂಬಯಿ) ವಸಾಯಿ ಪ್ರಾದೇಶಿಕ ವಲಯದಿಂದ 14ನೇ ವರ್ಷದ ಶಾರದಾ ಪೂಜೆ ವೈಭವ

Mumbai News Desk

ಮಲಾಡ್ ಇರಾನಿ ಕಾಲನಿಯ ಶ್ರೀ ಶನಿ ಮಂದಿರದಲ್ಲಿ ಭಕ್ತಿ,ಸಡಗರದಿಂದ ನಡೆದ ಶ್ರೀ ಶನಿಜಯಂತ್ಯೋತ್ಸವ

Mumbai News Desk

ಯುವಕರು ದೇಶಪ್ರೇಮ ಹಾಗು ಸಾಮಾಜಿಕ ಹೊಣೆಗಾರಿಕೆ ಬೆಳೆಸಿಕೊಳ್ಳಬೇಕು ಎಂದು ಕಾರ್ಯಧ್ಯಕ್ಷ ಕೆ ಎಚ್ ದೇಶಪಾಂಡೆ ಕರೆ: ಜೆ.ವಿ.ಎಂ. ಮೆಹತಾ ಮಹಾವಿದ್ಯಾಲಯದಲ್ಲಿ ಸ್ವಾತಂತ್ರ್ಯ ದಿನಾಚರಣೆ

Mumbai News Desk