September 6, 2026
Mumbai News Kannada
ಸುದ್ದಿ

ಸಂಗೀತ ಲೋಕದ ಧ್ರುವತಾರೆ ಆಶಾ ಭೋಂಸ್ಲೆ ಇನ್ನಿಲ್ಲ: ಭಾರತೀಯ ಚಿತ್ರರಂಗಕ್ಕೆ ತುಂಬಲಾರದ ನಷ್ಟ





ಭಾರತೀಯ ಚಿತ್ರರಂಗದ ಅಪ್ರತಿಮ ಗಾಯಕಿ, “ಗಾನ ಕೋಗಿಲೆ” ಲತಾ ಮಂಗೇಶ್ಕರ್ ಅವರ ಸಹೋದರಿ ಆಶಾ ಭೋಂಸ್ಲೆ ಅವರು ತಮ್ಮ 92ನೇ ವಯಸ್ಸಿನಲ್ಲಿ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಹೃದಯ ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ರಾತ್ರಿ ಕೊನೆಯುಸಿರೆಳೆದರು. ಈ ದುಃಖದ ಸುದ್ದಿಯನ್ನು ಅವರ ಪುತ್ರ ಆನಂದ್ ಅವರು ಖಚಿತಪಡಿಸಿದ್ದು, ಸಂಗೀತ ಲೋಕದ ಒಂದು ಸುದೀರ್ಘ ಯುಗ ಅಂತ್ಯಗೊಂಡಂತಾಗಿದೆ.

.1933 ರಲ್ಲಿ ಜನಿಸಿದ ಆಶಾ ಅವರು ಕೇವಲ 9ನೇ ವಯಸ್ಸಿನಲ್ಲಿಯೇ ವೃತ್ತಿಪರ ಗಾಯಕಿಯಾಗಿ ಪಯಣ ಆರಂಭಿಸಿದ್ದರು. ಸುಮಾರು ಎಂಟು ದಶಕಗಳ ಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಅವರು, 1943 ರಲ್ಲಿ ಮೊದಲ ಹಾಡನ್ನು ರೆಕಾರ್ಡ್ ಮಾಡಿದರು. ಆರಂಭದಲ್ಲಿ ಕ್ಯಾಬರೆ ಮತ್ತು ನೃತ್ಯದ ಹಾಡುಗಳಿಗೆ ಮಾತ್ರ ಸೀಮಿತವಾಗಿದ್ದ ಅವರು, ನಂತರ ‘ಉಮ್ರಾವ್ ಜಾನ್’ ಅಂತಹ ಚಿತ್ರಗಳ ಮೂಲಕ ಗಜಲ್ ಮತ್ತು ಶಾಸ್ತ್ರೀಯ ಶೈಲಿಯ ಹಾಡುಗಳಲ್ಲೂ ತಮ್ಮ ಅಪ್ರತಿಮ ಪಾಂಡಿತ್ಯವನ್ನು ಮೆರೆದರು.ತಮ್ಮ ಅದ್ಭುತ ಗಾಯನಕ್ಕಾಗಿ ಅವರು ಏಳು ಬಾರಿ ಫಿಲ್ಮ್‌ಫೇರ್ ಪ್ರಶಸ್ತಿ ಮತ್ತು ಎರಡು ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದರು. ಇತ್ತೀಚಿನ ವರ್ಷಗಳಲ್ಲಿ ಸಮಕಾಲೀನ ಸಂಗೀತದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಅವರು, ಹಳೆಯ ಗೀತೆಗಳು ಮತ್ತು ಶಾಸ್ತ್ರೀಯ ಸಂಗೀತದ ಮೇಲೆಯೇ ತಮ್ಮ ಒಲವನ್ನು ಉಳಿಸಿಕೊಂಡಿದ್ದರು. ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡರೂ, ಸಂಗೀತದ ಮೇಲಿನ ಅವರ ಶ್ರದ್ಧೆ ಕುಂದಿರಲಿಲ್ಲ. ಮೊಮ್ಮಗಳು ಜನೈ ಭೋಂಸ್ಲೆ ಅವರ ಕೊನೆಯ ದಿನಗಳಲ್ಲಿ ನೆರಳಾಗಿ ಜೊತೆಗಿದ್ದರು. ಆಶಾ ಅವರ ನಿಧನದಿಂದಾಗಿ ಭಾರತೀಯ ಸಂಗೀತ ಕಲೆ ಒಬ್ಬ ಶ್ರೇಷ್ಠ ಸಾಧಕಿಯನ್ನು ಕಳೆದುಕೊಂಡಿದೆ.



Related posts

ತೀಯಾ ಫ್ಯಾಮಿಲಿ (ತೀಯಾ ಸಮಾಜ) ಯು.ಎ.ಇ. ಅಧ್ಯಕ್ಷರಾಗಿ ಜಸ್ಮಿತಾ ವಿವೇಕಾನಂದ್

Mumbai News Desk

ಬಂಟ್ವಾಳ ವೀರ ವಿಕ್ರಮ ಜೋಡುಕರೆ ಕಂಬಳ,ಧಾರ್ಮಿಕ ಮುಖಂಡ ಡಾ. ಎಮ್ ‌ಜೆ ಪ್ರವೀಣ್ ಭಟ್ ಅವರಿಗೆ ಸನ್ಮಾನ,

Mumbai News Desk

“ಕಾಂತಾರ” ಸಿನಿಮಾದಿಂದ ದೈವಗಳಿಗೆ ಅಪಚಾರ ನಡೆದಿಲ್ಲ: ಐಕಳ ಹರೀಶ್ ಶೆಟ್ಟಿ

Mumbai News Desk

ನಾನಿಲ್ತಾರ್ ಅಭಿಮಾನಿ ಬಳಗ ಮುಂಬಯಿ (ಮುಂಡ್ಕೂರು) 16ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ

Mumbai News Desk

ಮುಂಬಯಿಯ ಉದ್ಯಮಿ ಸುರೇಶ್ ಕಾಂಚನ್ ನೇತೃತ್ವದಲ್ಲಿ   ಹುಟ್ಟೂರು, ಉಪ್ಪಿನಕುದ್ರು ಶಾಲೆಯಲ್ಲಿ ವಿದ್ಯಾರ್ಥಿ ವೇತನ, ಪುಸ್ತಕ , ಆರ್ಥಿಕ ನೆರವು ವಿತರಣೆ.

Mumbai News Desk

ಮುಂಬಯಿ ಕನ್ನಡ ಸಂಘ: ಅರ್ಚನಾ ಪೂಜಾರಿಯವರಿಗೆ ಸನ್ಮಾನ

Mumbai News Desk