September 6, 2026
Mumbai News Kannada
ತುಳುನಾಡು

ಮುಲ್ಕಿ : ಕೊಳಚಿಕಂಬಳ ದೈವಸ್ಥಾನದಲ್ಲಿ ವೈಭವದ ನೇಮೋತ್ಸವ ಸಂಪನ್ನ





ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಸಂಬಂಧಪಟ್ಟ ಕೊಳಚಿಕಂಬಳ ಶ್ರೀ ಜಾರಂದಾಯ ಧೂಮಾವತಿ ದೈವಸ್ಥಾನದಲ್ಲಿ ಕಳೆದ ಭಾನುವಾರ ರಾತ್ರಿ ಜಾರಂದಾಯ, ಧೂಮಾವತಿ ಮತ್ತು ಪರಿವಾರ ದೈವಗಳ ನೇಮೋತ್ಸವವು ಅತ್ಯಂತ ಶ್ರದ್ಧಾಭಕ್ತಿಯಿಂದ ಜರುಗಿತು. ಶನಿವಾರ ಮಧ್ಯಾಹ್ನ ಜಾರಂದಾಯ ಮತ್ತು ಧೂಮಾವತಿ ದೈವದ ದರ್ಶನದೊಂದಿಗೆ ಭಂಡಾರ ಇಳಿಸಿ ಧ್ವಜಾರೋಹಣ ನೆರವೇರಿಸುವುದರ ಮೂಲಕ ಧಾರ್ಮಿಕ ವಿಧಿವಿಧಾನಗಳಿಗೆ ಚಾಲನೆ ನೀಡಲಾಯಿತು.

ಭಾನುವಾರ ಬೆಳಿಗ್ಗೆ ದೈವಸ್ಥಾನದ ನಾಗ ಸನ್ನಿಧಿಯಲ್ಲಿ ನಾಗಮಂಡಲ ಸೇವೆ ನಡೆದರೆ, ಮಧ್ಯಾಹ್ನ ಭಕ್ತಾದಿಗಳಿಗೆ ಮಹಾ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ರಾತ್ರಿ ದೈವಗಳ ನೇಮೋತ್ಸವ ಸಡಗರದಿಂದ ನಡೆಯಿತು. ಈ ಪುಣ್ಯ ಕಾರ್ಯಕ್ರಮದಲ್ಲಿ ಧರ್ಮದರ್ಶಿ ಡಾ| ಹರಿಕೃಷ್ಣ ಪುನರೂರು, ರಾಮಚಂದ್ರ ನಾಯಕ್, ಕೊಲ್ಲಾಡಿ ಗುತ್ತು ಕಿರಣ್ ಶೆಟ್ಟಿ, ಮಾನಂಪಾಡಿ ದಿನೇಶ್ ಹೆಗ್ಡೆ, ಮಯೂರಿ ಫೌಂಡೇಶನ್‌ನ ಜಯ ಶೆಟ್ಟಿ, ಉದ್ಯಮಿ ಶರತ್ ಸಾಲ್ಯಾನ್ ಬೆಂಗಳೂರು, ಒಡೆಯರ ಬೆಟ್ಟು ಗುರಿಕಾರ ಸುರೇಶ್, ಚಿತ್ರಾಪು ಕೇಶವಾನಂದ ಗುರೂಜಿ, ಊರ ಗುರಿಕಾರ ಡಾ| ಹರಿಶ್ಚಂದ್ರ ಪಿ. ಸಾಲ್ಯಾನ್ ಉಪಸ್ಥಿತರಿದ್ದರು.ಜಾರಂದಾಯ ಧೂಮಾವತಿ ಸೇವಾ ಸಮಿತಿಯ ಅಧ್ಯಕ್ಷ ಪ್ರಕಾಶ್ ಸುವರ್ಣ, ಯೂತ್ ಕ್ಲಬ್ ಅಧ್ಯಕ್ಷ ಚರಣ್ ಬಂಗೇರ, ಕಾರ್ತಿಕ್ ಕೋಳಚಿಕಂಬಳ, ರಕ್ಷಿತ್ ಪೂಜಾರಿ ಕೋಳಚಿಕಂಬಳ, ಜೀವನ್ ಕೋಟ್ಯಾನ್, ರಮಾನಾಥ ಸುವರ್ಣ, ಮಹಿಳಾ ಮಂಡಲದ ಅಧ್ಯಕ್ಷೆ ಲತಾ ಶೇಖರ್, ಹಳೆಯಂಗಡಿ ಬಂಕಿ ನಾಯಕರು, ಮಹಾಬಲ ಸುವರ್ಣ, ಪ್ರಕಾಶ್ ಪೂಜಾರಿ, ಸಾನದ ಮನೆ ಕೃಷ್ಣ ಕೋಟ್ಯಾನ್, ದಯಾನಂದ ಪೂಜಾರಿ ಮತ್ತು ನಾಗೇಶ್ ಬಪ್ಪನಾಡು, ಸುನಿಲ್ ಆಳ್ವ, ಕೃಷ್ಣಪ್ಪ ಪೂಜಾರಿ ಮಾನಂಪಾಡಿ, ಪ್ರಾಣೇಶ್ ಪೂಜಾರಿ ಕೊಳಚಿಕಂಬಳ ಸೇರಿದಂತೆ ಅನೇಕ ಗಣ್ಯರು ಹಾಗೂ ಭಕ್ತಾದಿಗಳು ಪಾಲ್ಗೊಂಡಿದ್ದರು. ಸಂಜೆ ಮಾಯಂದಾಲ್ ದೈವದ ನೇಮೋತ್ಸವದೊಂದಿಗೆ ಸಮಸ್ತ ಕಾರ್ಯಕ್ರಮಗಳು ಯಶಸ್ವಿಯಾಗಿ ಮುಕ್ತಾಯಗೊಂಡವು.



Related posts

ಮಾಡೂರು ಭಗವತೀ ಕ್ಷೇತ್ರದ ಗೌರವ ಅಧ್ಯಕ್ಷರಾಗಿ ಮುಂಬಯಿಯ ಉದ್ಯಮಿ ಕುಮಾರ್ ಎನ್. ಬಂಗೇರ ಆಯ್ಕೆ

Mumbai News Desk

ತೊಕ್ಕೊಟ್ಟಿನಲ್ಲಿ ಶ್ರೀ ಸಾಯಿ ಪರಿವಾರ್ ಟ್ರಸ್ಟ್‌ನಿಂದ ವಿಜೃಂಭಣೆಯ ಗುರುಪೂರ್ಣಿಮೆ ಕಾರ್ಯಕ್ರಮ: ಯಕ್ಷಗಾನ ಕಲಾವಿದ ಅಶ್ವಥ್ ಮಂಜನಾಡಿ ಅವರಿಗೆ ಸನ್ಮಾನ ಹಾಗೂ ನೂತನ ವೆಬ್‌ಸೈಟ್ ಲೋಕಾರ್ಪಣೆ

Mumbai News Desk

ಪುನರೂರು ಪ್ರತಿಷ್ಠಾನದ ವತಿಯಿಂದ ಪುನರೂರು ಸಂಭ್ರಮ.

Mumbai News Desk

ಮುಲ್ಕಿ ಬಪ್ಪನಾಡು ದೇವಸ್ಥಾನದಲ್ಲಿ ಭವ್ಯ ಸ್ವಾಗತ ಗೋಪುರ ನಿರ್ಮಾಣಕ್ಕೆ ಬಿಲ್ಲವ ಸಮಾಜದ ಸಿದ್ಧತೆ

Mumbai News Desk

ಬಪ್ಪನಾಡು: ಹೊಸ ಅಂಗಣ ದಶಮಾನೋತ್ಸವ ಸಂಭ್ರಮ-ಆಮಂತ್ರಣ ಪತ್ರಿಕೆ ಬಿಡುಗಡೆ

Mumbai News Desk

ದೊಡ್ಡಣಗುಡ್ಡೆ: ಕೋಟಿ ಲಲಿತಾ ಸಹಸ್ರನಾಮ ಪಾರಾಯಣ ಮಹಾಯಜ್ಞದ ಸಂಕಲ್ಪ ಕಾರ್ಯಕ್ರಮದ ಉದ್ಘಾಟನೆ

Mumbai News Desk