July 23, 2026
Mumbai News Kannada
ಸುದ್ದಿ

ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು ಉಡುಪಿ1981-82 ಸಾಲಿನ ಹಳೆವಿದ್ಯಾರ್ಥಿಗಳಿಂದ ಸ್ನೇಹ ಸಮ್ಮಿಲನ, ಉಪನ್ಯಾಸಕರಿಗೆ ಸನ್ಮಾನ







.

ಕಳೆದ ವರ್ಷದಂತೆ ಈ ವರ್ಷವೂ ಉಡುಪಿಯ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ 1981-82 ರ ಸಾಲಿನ ವಿಧ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮ ಇಂದು ಉಡುಪಿಯ ವುಡ್ ಲ್ಯಾಂಡ್ ಹೋಟೇಲಿನ ಸಭಾಂಗಣದಲ್ಲಿ ಬಹಳ ಅದ್ದೂರಿಯಾಗಿ ನಡೆಯಿತು.

ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಶ್ರೀ ಕಿರಣ್ ದಬಾಡೆಯವರನ್ನು ಸನ್ಮಾನಿಸಲಾಯಿತು. ಪ್ರಾಧ್ಯಾಪಕರಾದ ಶ್ರೀ ಪ್ಯಾಟಿಯವರು, ಶ್ರೀ ಎಮ್.ಅರ್.ಹೆಗ್ಡೆಯವರು ಪತ್ನೀ ಸಮೇತರಾಗಿ ಉಪಸ್ಥಿತರಿದ್ದರು. ಗೌರವವನ್ನು ಸ್ವೀಕರಿಸಿದ ಪ್ರಾಧ್ಯಾಪಕರಾದ ಶ್ರೀಯುತ ಕಿರಣ್ ದಬಾಡೆಯವರು, ವ್ಯಕ್ತಿಗಳ ಸಂಬಂಧದ ಬಗ್ಗೆ ವಿವರಿಸಿ ಶುಭ ಹಾರೈಸಿದರು. ಉಪಸ್ಥಿತರಿದ್ದ ಡಾ|ಎಂ.ಆರ್.ಹೆಗಡೆಯವರು, ವ್ಯಕ್ತಿ ಸಮಾಜದಿಂದ ತುಂಬಾ ಪಡೆಯುತ್ತಾನೆ‌. ಸಮಾಜಕ್ಕೆ ತನ್ನಿಂದಾದ ಸಹಾಯ ಮಾಡುವುದು ಅವನ ಕರ್ತವ್ಯ ಎಂದರು. ಇನ್ನೋರ್ವ ಅತಿಥಿಯಾಗಿ ಆಗಮಿಸಿದ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಶ್ರೀ ವೆಂಕಟೇಶ್ ಪ್ಯಾಟಿಯವರು ಜೀವನದಲ್ಲಿ ಸಂತಸ ಪಡುವುದು ಮುಖ್ಯ. ಇವತ್ತಿನ ಸಭೆ ಅದನ್ನು ನೀಡಿದೆ.ಎಲ್ಲರ ಜೀವನವೂ ಸಂತಸವಾಗಿರಲೆಂದು ಹರಸಿದರು.

ಕಾರ್ಯಕ್ರಮ ಬೆಳಿಗ್ಗೆ 10 ಕ್ಕೆ ಸರಿಯಾಗಿ ಲಘು ಉಪಹಾರದೊಂದಿಗೆ ಆರಂಭವಾಯಿತು.

ಸಭಾ ಕಾರ್ಯಕ್ರಮದ ನಂತರ
ಜನಗಣಮನದೊಂದಿಗೆ ಸಭಾ ಕಾರ್ಯಕ್ರಮ ಮುಕ್ತಾಯಗೊಂಡಿತು.
ಕಾರ್ಯಕ್ರಮವನ್ನು ಉಡುಪಿಯ ಉದ್ಯಮಿ ಅಲೆವೂರು ಶ್ರೀ ನಾಗರಾಜ್ ಆಚಾರ್ಯ ರವರು ಸಂಯೋಜಿಸಿದರು. ಶ್ರೀ ಸುಧಾಕರ ಶೆಟ್ಟಿ ನಿವೃತ್ತ ಮುಖ್ಯ ಶಿಕ್ಷಕರು ಸ್ವಾಗತಿಸಿದರು. ಶ್ರೀ ಸಕು ಪಾಂಗಾಳರವರು ಕಾರ್ಯಕ್ರಮ ನಿರ್ವಹಿಸಿದರು.ಕೊನೆಯಲ್ಲಿ ಶ್ರೀ ಸೂರಪ್ಪ ಕುಂದರ್,ಮುಂಬಯಿ ಇವರು ಧನ್ಯವಾದವಿತ್ತರು.
ನಂತರ ಸ್ವಾದಿಷ್ಟಭರಿತ ವುಡ್ ಲ್ಯಾಂಡ್ ಹೋಟೇಲಿನ ಊಟದ ವ್ಯವಸ್ಥೆಯನ್ನು ಆಸ್ವಾದಿಸಿದರು.

ಕೊನೆಯಲ್ಲಿ ವಿಧ್ಯಾರ್ಥಿಗಳು ಉಡುಪಿಯ ಕುಕ್ಕಿಕಟ್ಟೆಯಲ್ಲಿರುವ
ಶ್ರೀ ಕೃಷ್ಣ ಬಾಲನಿಕೇತನ ಕ್ಕೆ ಭೇಟಿ ದೇಣಿಗೆಯನ್ನು ನೀಡಿದರು.



Related posts

ಹುಬ್ಬಳ್ಳಿ : ಭಾವ ಸಂಗಮ ಮತ್ತು ಉಮಾಶಂಕರ ಪ್ರತಿಷ್ಠಾನದ ಸಹಯೋಗದಲ್ಲಿ ಆಯೋಜಿಸಿದ ಸ್ವರ್ಣಸಿರಿ ಕಾವ್ಯಝರಿ ಸ್ಪರ್ಧಾ ಫಲಿತಾಂಶ

Mumbai News Desk

ತೀಯಾ ಬೆಳಕು ಮಾಜಿ ಸಂಪಾದಕ ಶ್ರೀಧರ್ ಸುವರ್ಣ ಅವರಿಗೆ ಮಾತೃ ವಿಯೋಗ

Mumbai News Desk

ಪಂಚರಾಜ್ಯ ವಿಧಾನಸಭಾ ಚುನಾವಣೆ 2026: ಐತಿಹಾಸಿಕ ಫಲಿತಾಂಶ ಮತ್ತು ರಾಜಕೀಯ ವಿಶ್ಲೇಷಣೆ

Mumbai News Desk

ಅನಿತಾ ಪಿ. ತಾಕೊಡೆ ಅವರ ‘ಮೇಣಕ್ಕಂಟಿದ ಬತ್ತಿ’ ಕವನ ಸಂಕಲನಕ್ಕೆ ಕರ್ನಾಟಕ ಲೇಖಕಿಯರ ಸಂಘ (ರಿ) ಬೆಂಗಳೂರು ಕೊಡಮಾಡುವ 2025ನೆಯ ಸಾಲಿನ ಸಂಕಮ್ಮ ಸಂಕಣ್ಣನವರ್ ದತ್ತಿ ಪ್ರಶಸ್ತಿ

Mumbai News Desk

ದುಬೈ ಯಲ್ಲಿ ಅದ್ದೂರಿಯಾಗಿ ಜರಗಿದ “ಅಂತಾರಾಷ್ಟ್ರೀಯ ಜನಪದ ಉತ್ಸವ – 2025”

Mumbai News Desk

ಅಕ್ಷಯಧಾರ ಕ್ರೆಡಿಟ್ ಸೊಸೈಟಿ ಕಾಪು – ಅಧ್ಯಕ್ಷರಾಗಿ ಲವ ಎನ್. ಕರ್ಕೇರ ಮರು ಆಯ್ಕೆ.

Mumbai News Desk