32 C
Mumbai
September 27, 2026
Mumbai News Kannada
ಸುದ್ದಿ

ಭಾರತ್ ಬ್ಯಾಂಕ್‌ ನ ಗೋರೆಗಾಂವ್ ಶಾಖೆಯ ಗಣೇಶ್ ಪೂಜಾರಿ ಸೇವಾ ನಿವೃತ್ತಿ



ಮುಂಬಯಿ : ಭಾರತ್ ಬ್ಯಾಂಕ್‌ ನಲ್ಲಿ ಕಳೆದ 30 ವರ್ಷಗಳಿಂದ ಪ್ರಾಮಾಣಿಕವಾಗಿ ಹಾಗೂ ನಿಷ್ಠೆಯಿಂದ ಸೇವೆ ಸಲ್ಲಿಸಿದ್ದ ಗಣೇಶ್ ಕೆ. ಪೂಜಾರಿ ಅವರು 2026ರ ಏಪ್ರಿಲ್ 30ರಂದು ನಿವೃತ್ತರಾದರು. ನಿವೃತ್ತಿ ಸಂದರ್ಭದಲ್ಲಿ ಭಾರತ್ ಬ್ಯಾಂಕಿನ ಗೋರೆಗಾಂವ್ ಪೂರ್ವ ಶಾಖೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು. ತಮ್ಮ ಸೇವಾ ಅವಧಿಯಲ್ಲಿ ಗಣೇಶ್ ಕೆ. ಪೂಜಾರಿ ಅವರು ಬ್ಯಾಂಕಿನ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಿದ್ದು, ಸಹೋದ್ಯೋಗಿಗಳು ಹಾಗೂ ಗ್ರಾಹಕರ ಮೆಚ್ಚುಗೆಗೆ ಪಾತ್ರರಾಗಿದ್ದರು. ಅವರ ಕರ್ತವ್ಯನಿಷ್ಠೆ, ಸರಳತೆ ಹಾಗೂ ಸ್ನೇಹಪರ ವ್ಯಕ್ತಿತ್ವ ಎಲ್ಲರಿಗೂ ಆದರ್ಶವಾಗಿತ್ತು.

ಈ ಸಂದರ್ಭದಲ್ಲಿ ಶಾಖೆಯ ವ್ಯವಸ್ಥಾಪಕರಾದ ಸಂತೋಷ್ ಎಸ್ ಸಾಲ್ಯಾನ್ ಹಾಗೂ ಸಹಾಯಕ ವ್ಯವಸ್ಥಾಪಕರಾದ ಜಯಲಕ್ಷ್ಮಿ ತೋನ್ಸೆ ಅವರು ಗಣೇಶ್ ಪೂಜಾರಿ ಅವರ ಸೇವೆಯನ್ನು ಶ್ಲಾಘಿಸಿ, ಅವರ ನಿವೃತ್ತಿ ಜೀವನಕ್ಕೆ ಶುಭ ಹಾರೈಸಿದರು.ಕಾರ್ಯಕ್ರಮದಲ್ಲಿ ಅವರ ಪತ್ನಿ ಲೀಲಾ ಗಣೇಶ್ ಪೂಜಾರಿ ಹಾಗೂ ಪುತ್ರಿಯರಾದ ತೀಶಾ ಗಣೇಶ್ ಪೂಜಾರಿ ಮತ್ತು ಲೀಶಾ ಗಣೇಶ್ ಪೂಜಾರಿ ಉಪಸ್ಥಿತರಿದ್ದು, ಕುಟುಂಬದ ಸದಸ್ಯರು ಹಾಗೂ ಸ್ನೇಹಿತರು ಗಣೇಶ್ ಪೂಜಾರಿ ಅವರ ಮುಂದಿನ ಜೀವನ ಸುಖ, ಶಾಂತಿ ಮತ್ತು ಆರೋಗ್ಯದಿಂದ ಕೂಡಿರಲಿ ಎಂದು ಹಾರೈಸಿದರು.ಸಮಾಜ ಸೇವಕರೂ ಆದ ಇವರು ಜಯಸುವರ್ಣ ಅಭಿಮಾನಿ ಬಳಗದಲ್ಲಿ ಕ್ರೀಯಾಶೀಲರಾಗಿದ್ದಾರೆ.

ಭಾರತ್ ಬ್ಯಾಂಕ್‌ ನ ಕಾರ್ಯಾಧ್ಯಕ್ಷ ಹಾಗೂ ಬಿಲ್ಲವ ಮಹಾಮಂಡಲದ ಅಧ್ಯಕ್ಷರೂ ಆದ ಸೂರ್ಯಕಾಂತ್ ಜಯ ಸುವರ್ಣ, ಬ್ಯಾಂಕಿನ ಉಪಕಾರ್ಯಾಧ್ಯಕ್ಷ ಸೋಮನಾಥ ಅಮೀನ್, ನಾರಾಯಣ ಗುರು ಭಜನಾ ಮಂಡಳಿಯ ಅಧ್ಯಕ್ಷ ಅಶೋಕ್ ಸಸಿಹಿತ್ತ್ಲು, ಬ್ಯಾಂಕಿನ ಸಹೋದ್ಯೋಗಿಗಳು ಇವರ ನಿವೃತ್ತಿ ಜೀವನಕ್ಕೆ ಶುಭ ಹಾರೈಸಿದ್ದಾರೆ.B. Dinesh KulalMob.: 9821868674



Related posts

ಕಲ್ಯಾಣ್ : ವಾಮನ ಎಂ ಕಾಂಚನ್ ನಿಧನ

Mumbai News Desk

ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಅರ್ಹ ಸಂಶೋಧನ ವಿದ್ಯಾರ್ಥಿಗಳಿಗೆ ಜಯಲೀಲಾ ಟ್ರಸ್ಟ್ ನ ವತಿಯಿಂದ ಗೌರವ ಧನ

Mumbai News Desk

ನಾಸಿಕ್‌ನಲ್ಲಿ ಮುಂಬಯಿ ಕುಲಾಲ ಸಂಘದ ಕುಲಾಲ ಭವನ ಉದ್ಘಾಟನೆಯ ಆಮಂತ್ರಣ ಪತ್ರಿಕೆ ವಿತರಣೆ

Mumbai News Desk

ಉಡುಪಿ : ಕೋಡಿಬೆಂಗ್ರೆ ಮಗುಚಿ ಬಿದ್ದ ಟೂರಿಸ್ಟ್ ಬೋಟ್, ಇಬ್ಬರು ಸಾವು

Mumbai News Desk

ಮಹಾರಾಷ್ಟ್ರದ ಪಾಲ್ಘರ್ ನಲ್ಲಿ ಪತ್ತೆಯಾದ ಭಾಗ್ಯಶ್ರೀ ಯ ಪರಿವಾರ ಹುಡುಕ ಬಲ್ಲಿರಾ ?

Mumbai News Desk

ಭಾಷೆಗಳು ಸ್ನೇಹ ಸೌಹಾರ್ದತೆಯ ಸಂಕೇತ’ -ಆಶಿಶ್ ಶೇಲಾರ್

Mumbai News Desk