28 C
Mumbai
September 28, 2026
Mumbai News Kannada
ಮುಂಬಯಿ

ಚಿಣ್ಣರ ಬಿಂಬ ಸಾಕಿನಾಕ ಶಿಬಿರ : ಕನ್ನಡ ತರಗತಿ ಪ್ರಾರಂಭೋತ್ಸವ ಮತ್ತು ವನ ಮಹೋತ್ಸವ ಕಾರ್ಯಕ್ರಮ



ಸಾಕಿನಾಕ ಚಿಣ್ಣರಬಿಂಬದ 2026- 27ನೇ ಸಾಲಿನ ಕನ್ನಡ ತರಗತಿಯನ್ನು ಜೂನ್ 14ರಂದು ಆರಂಭಿಸಲಾಯಿತು. ಕನ್ನಡ ತರಗತಿಯ ಉದ್ಘಾಟನೆಗೆ ಸ್ಥಳೀಯ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಮಹಿಳಾ ಮಂಡಳಿಯ ಅಧ್ಯಕ್ಷೆಯಾಗಿರುವ ಹೇಮಾ ಕೋಟ್ಯಾನ್ ರವರು ಆಗಮಿಸಿದ್ದರು ಜೊತೆಗೆ ಕೇಂದ್ರೀಯ ಸಮಿತಿಯ ಸದಸ್ಯರಾದ ರಮೇಶ್ ರೈ , ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಪೂರ್ಣಿಮಾ ಶೆಟ್ಟಿ, ಚಿಣ್ಣರಬಿಂಬದ ಮಾಜಿ ಶಿಬಿರ ಮುಖ್ಯಸ್ಥ ರಾಜವರ್ಮಾ ಜೈನ್, ಎಸ್ ಎಂ ಶೆಟ್ಟಿ ಚಿಣ್ಣರ ಬಿಂಬ ಶಿಬಿರದ ಕನ್ನಡ ಶಿಕ್ಷಕಿ ಅನಿತಾ ಶೆಟ್ಟಿ, ವಲಯ ಮುಖ್ಯಸ್ಥೆ ಉಷಾ ಶೇರುಗಾರ್, ಶಿಬಿರ ಮುಖ್ಯಸ್ಥೆ ಶೋಭಾ ಅಮೀನ್, ಸಾಂಸ್ಕೃತಿಕ ಮುಖ್ಯಸ್ಥೆ ಲತಾ ಶೆಟ್ಟಿ, ಕನ್ನಡ ಶಿಕ್ಷಕಿ ಹರಿಣಿ ಶೆಟ್ಟಿ, ಭಜನೆ ಶಿಕ್ಷಕಿ ಶಶಿ ಶೆಟ್ಟಿ, ಮಕ್ಕಳ ಪಾಲಕರು ಹಾಗೂ ಮುದ್ದು ಚಿಣ್ಣರ ಸಮ್ಮುಖದಲ್ಲಿ ಹೇಮಾ ಕೋಟ್ಯಾನ್ ರವರು ದೇವರಿಗೆ ದೀಪ ಬೆಳಗಿ ಮಕ್ಕಳು ಒಟ್ಟಾಗಿ ಭಜನೆ ಹಾಡುವುದರ ಮೂಲಕ ಆರಂಭಿಸಲಾಯಿತು.

ಹೇಮಾ ಕೋಟ್ಯಾನ್ ರವರು ಮಾತನಾಡುತ್ತ
ಸಂಸ್ಥೆಯ ಕಾರ್ಯವೈಖರಿಯನ್ನು ನಾವು ನೋಡುತ್ತ ಬಂದಿದ್ದೇವೆ. ಈ ಸಂಸ್ಥೆಯು ಇನ್ನಷ್ಟೂ ಚೆನ್ನಾಗಿ ಬೆಳೆಯಲಿ. ನಮ್ಮ ಸಹಕಾರ ಸದಾ ಇದೆ ಎಂದರು.

ಬಳಿಕ ಡಾ. ಪೂರ್ಣಿಮ ಶೆಟ್ಟಿ ಚಿಣ್ಣರು ಮತ್ತು ಪಾಲಕರನ್ನು ಉದ್ದೇಶಿಸಿ ಕೆಲವು ಹಿತನುಡಿಗಳನ್ನು ಆಡಿದರು. ಚಿಣ್ಣರಬಿಂಬ ಒಂದು ಕುಟುಂಬ ಇಲ್ಲಿ ಎಲ್ಲಾರೂ ಒಂದಾಗಿ ಜೊತೆಯಾಗಿ ಕೆಲಸ ಮಾಡಬೇಕು ಎಂಬ ಹಿತನುಡಿಗಳು ಎಲ್ಲರಿಗೂ ಮನ ಮುಟ್ಟುವಂತೆ ತಿಳಿಸಿದರು.

ಇಂದು ಹೊಸದಾಗಿ ಸಮಿತಿಯನ್ನು ರಚಿಸಲಾಯಿತು.
ಎಲ್ಲಾ ಪಾಲಕರನ್ನು ಸಮಿತಿಯಲ್ಲಿ ಸೇರಿಸಿ ಎಲ್ಲರಿಗೂ ಸಂಸ್ಥೆಯ ಬಗೆಗೆ ಅಭಿಮಾನದಿಂದ ತೊಡಗಿಸಿಕೊಳ್ಳುವಂತೆ ತಿಳಿಸಲಾಯಿತು. ಯಾವುದೇ ಮನಸ್ತಾಪಗಳು ಇದ್ದರೂ ಕೂಡ ಅದನ್ನೆಲ್ಲ ಮರೆತು ಒಂದಾಗಿ ಸೇರಿ ಎಲ್ಲರೂ ಒಂದೇ ಕುಟುಂಬವೆಂದು ಸೇರಿ ಕೆಲಸ ಮಾಡಬೇಕು ಎಂಬ ಮಾತನ್ನು ಒತ್ತಿ ಹೇಳಿದರು.

ತರಗತಿಯ ಉದ್ಘಾಟನಾ ಸಮಾರಂಭದ ಜೊತೆ ಜೊತೆಗೆ ಇಂದು ಸಾಕಿನಾಕ ಚಿಣ್ಣರಬಿಂಬ ಶಿಬಿರದಲ್ಲಿ ವನ ಮಹೋತ್ಸವ ಕಾರ್ಯಕ್ರಮವನ್ನು ನಡೆಸಲಾಯಿತು.

ಗಿಡಗಳನ್ನು ಎಲ್ಲರೂ ಸೇರಿ ನೆಡುವ ಮೂಲಕ ಮಕ್ಕಳಿಗೆ ವನಮಹೊತ್ಸವದ ಬಗ್ಗೆ ಸರಿಯಾದ ಮಾಹಿತಿಯನ್ನು ತಿಳಿಸಲಾಯಿತು.
ಡಾ. ಪೂರ್ಣಿಮಾ ಶೆಟ್ಟಿ ಚಿಣ್ಣರ ಬಿಂಬ ಯಾವುದೇ ಭೇದ ಭಾವವಿಲ್ಲದ ನಿಸ್ವಾರ್ಥ ಸಂಸ್ಥೆಯಾಗಿದ್ದು, ಇದರ ಪ್ರಯೋಜನವನ್ನು ಎಲ್ಲರೂ ಪಡೆಕೊಳ್ಳಬೇಕು. ಆ ಮೂಲಕ ಇಂತಹ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಪರಿಸರದ ರಕ್ಷಣೆ ಸಾಧ್ಯ ಎಂಬುದಾಗಿ ಎಲ್ಲರಿಗೂ ಮನಮುಟ್ಟುವಂತೆ ತಿಳಿಸಿದರು.

ವಲಯ ಮುಖ್ಯಸ್ಥೆ ಉಷಾ ಷೇರುಗಾರ್ ರವರು ವಂದನಾರ್ಪಣೆ ಮಾಡಿದರು.

ಮಕ್ಕಳಿಗೆ ಸಿಹಿ ತಿಂಡಿ ನೀಡಿ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.



Related posts

ಬಿಲ್ಲವರ  ಎಸೋಸಿಯೇಶನ್, ಮುಂಬಯಿ ಇದರ 2024-27ನೇ ಸಾಲಿನ ಆಡಳಿತ ಮಂಡಳಿ ಚುನಾವಣೆ, ಹರೀಶ್ ಜಿ. ಅಮೀನ್, ನೇತೃತ್ವದ ಸ್ವಾಭಿಮಾನಿ ಬಿಲ್ಲವವರು ಬಣಕ್ಕೆ ಜಯ

Mumbai News Desk

ಮಲಾಡ್ ಶ್ರೀ ಮಹಮ್ಮಾಯಿ  ದೇವಸ್ಥಾನದಲ್ಲಿ ಭಕ್ತಿ ಸಂಭ್ರಮದೊಂದಿಗೆ ದಸರಾ ಮಹೋತ್ಸವ ಸಂಪನ್ನ

Mumbai News Desk

ಶ್ರೀ  ಮಹಾವಿಷ್ಣು ಮಂದಿರ ಡೊಂಬಿವಲಿ, ಇದರ  ವತಿಯಿಂದ ರಕ್ತ ದಾನ ಹಾಗೂ ಉಚಿತ ವೈದ್ಯಕೀಯ ಆರೋಗ್ಯ ತಪಾಸಣಾ ಶಿಬಿರ.

Mumbai News Desk

ಕಲ್ವಾದಲ್ಲಿ ವಿಜೃಂಭಣೆಯಿಂದ ಜರುಗಿದ ‘ಆಟಿಡೊಂಜಿ ದಿನ’ ಸಂಭ್ರಮ

Mumbai News Desk

ವಸಾಯಿ ಕರ್ನಾಟಕ ಸಂಘದ ಮಹಿಳಾ ವಿಭಾಗದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ದೇಗುಲ ದರ್ಶನ.

Mumbai News Desk

ಡೊಂಬಿವಲಿಯಲ್ಲಿ ‘ಚತುರ್ಜನ್ಮಮೋಕ್ಷ’ ಯಕ್ಷಗಾನ. ಅದ್ದೂರಿ ಸನ್ಮಾನ ಕಾರ್ಯಕ್ರಮ.

Mumbai News Desk