30 C
Mumbai
September 28, 2026
Mumbai News Kannada
ಮುಂಬಯಿ

ವಿದ್ಯಾದಾಯಿನಿ ಸಭಾ ಫೋರ್ಟ್ ವತಿಯಿಂದ ‘ಆಟಿಡೊಂಜಿ ದಿನ’ ಆಚರಣೆ.



ಮುಂಬಯಿ, ಅ.6: ವಿದ್ಯಾದಾಯಿನಿ ಸಭಾ ಮುಂಬಯಿ ಇದರ ಮಹಿಳಾ ವಿಭಾಗದ ವತಿಯಿಂದ ‘ಆಟಿಡೊಂಜಿ ದಿನ’ ಕಾರ್ಯಕ್ರಮವನ್ನು ಜುಲೈ 31ರಂದು ಆಯೋಜಿಸಲಾಗಿತ್ತು.
ಬ್ರಹ್ಮಶ್ರೀ ನಾರಾಯಣ ಗುರುಗಳ ಅಲಂಕೃತ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ದೀಪ ಪ್ರಜ್ವಲನೆಯೊಂದಿಗೆ ಭಜನಾ ಕಾರ್ಯಕ್ರಮಕ್ಕೆ ಸಂಸ್ಥೆಯ ಪದಾಧಿಕಾರಿಗಳು ಚಾಲನೆ ನೀಡಿದರು.
ಆಟಿ ತಿಂಗಳಲ್ಲಿ ಸಿಗುವ ವಿವಿಧ ಬಗೆಯ ಖಾದ್ಯ ತಿಂಡಿತಿನಿಸುಗಳ ಊಟೋಪಚಾರ ಏರ್ಪಡಿಸಲಾಗಿತ್ತು.
ಸದಸ್ಯೆ ಗಿರಿಜಾ ಚಂದ್ರಶೇಖರ್ ಮಾತನಾಡಿ ಪ್ರಸ್ತುತ ಸಮಯದಲ್ಲಿ ಇಂತಹ ಕಾರ್ಯಕ್ರಮಗಳು ದೊಡ್ಡ ಸಭಾಗೃಹದಲ್ಲಿ ದುಂದು ವೆಚ್ಚದೊಂದಿಗೆ ಆಚರಿಸಲ್ಪಡುತ್ತವೆ. ಆದರೆ ಸಭಾವು ತನ್ನ ಕಚೇರಿಯಲ್ಲೇ ಯಾವುದೇ ಚ್ಯುತಿ ಬಾರದಂತೆ ವಿಜ್ರಂಭಣೆಯಿಂದ ಆಚರಿಸಿದೆ ಎಂದರು.
ಸದಸ್ಯೆ ಪೂಜಾ ಪುರುಷೋತ್ತಮ ಕೋಟ್ಯಾನ್ ಆಟಿ ತಿಂಗಳ ಮಹತ್ವದ ಬಗ್ಗೆ ತಿಳಿಸಿದರು.


ಸಭಾದ ಗೌರವಾಧ್ಯಕ್ಷ ಜೆ.ಎಮ್. ಕೋಟ್ಯಾನ್, ಹಿರಿಯ ಸದಸ್ಯರಾದ ಜಿ.ಸಿ.ಸಾಲ್ಯಾನ್, ಚಿತ್ರಾಪು ಕೆ.ಎಮ್.ಕೋಟ್ಯಾನ್, ಡಾ.ಪ್ರಕಾಶ್ ಮೂಡಬಿದ್ರಿ ಸಂದರ್ಭೋಚಿತವಾಗಿ ಮಾತನಾಡಿದರು.
ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಸಂತಿ ಆರ್.ಕೋಟ್ಯಾನ್ ಆಗಮಿಸಿದ್ದ ಹಾಗೂ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲಾ ಸದಸ್ಯ ಸದಸ್ಯೆಯರಿಗೆ ಕೃತಜ್ಞತೆ ಸಲ್ಲಿಸಿದರು. ಮುಂದಿಗೂ ಎಲ್ಲರ ಸಹಕಾರ ಸದಾ ಇರಲೆಂದು ವಿನಂತಿಸಿದರು.
ವಿದ್ಯಾದಾಯಿನಿ ಸಭಾದ ಅಧ್ಯಕ್ಷ ಪುರುಷೋತ್ತಮ ಎಸ್.ಕೋಟ್ಯಾನ್ ಮಾತನಾಡಿ ಆಟಿ ತಿಂಗಳ ಕಾರ್ಯಕ್ರಮದ ಯಶಸ್ಸಿಗೆ ಯಶಸ್ಸಿಗೆ ಮಹಿಳಾ ವಿಭಾಗದ ಸದಸ್ಯರು ತುಂಬಾ ಶ್ರಮಿಸಿ ಕಡಿಮೆ ಸಮಯದಲ್ಲಿ ಬಹಳ ಚೊಕ್ಕವಾಗಿ ಆಯೋಜಿಸಿದ್ದಾರೆ. ಸಭಾದ ಪ್ರತಿಯೊಂದು ಕಾರ್ಯಕ್ರಮದಲ್ಲೂ ಮಹಿಳಾ ಸದಸ್ಯರು ಸಹಕರಿಸುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಇತ್ತೀಚೆಗೆ ವೈವಾಹಿಕ ಜೀವನದ ಸುವರ್ಣ ಮಹೋತ್ಸವವನ್ನು ಆಚರಿಸಿದ್ದ ಆರ್.ಕೆ.ಕೋಟ್ಯಾನ್ ಮತ್ತು ವಸಂತಿ ಆರ್.ಕೋಟ್ಯಾನ್ ದಂಪತಿಗಳನ್ನು ಸನ್ಮಾನಿಸಲಾಯಿತು.ಜೊತೆ ಕಾರ್ಯದರ್ಶಿ ಶರತ್ ಪೂಜಾರಿ ಸ್ವಾಗತಿಸಿದರು. ಕೋಶಾಧಿಕಾರಿ ಗೋಪಾಲ್ ಪೂಜಾರಿ ವಂದಿಸಿದರು.
ಕಾರ್ಯಕ್ರಮದಲ್ಲಿ ಸರೋಜ್ ಡಿ. ಕೋಟ್ಯಾನ್,ರಜನಿ ಜಿ.ಸಾಲ್ಯಾನ್, ತಾರಾ ಜೆ.ಕೋಟ್ಯಾನ್, ವೇದ ಸುವರ್ಣ , ಸಾವಿತ್ರಿ ಕರ್ಕೇರ, ಯಶೋಧರಾ ಮೂಡಬಿದ್ರಿ, ಜಯಂತಿ ಸನಿಲ್, ಮಲ್ಲಿಕಾ ಕುಕ್ಯಾನ್, ಪ್ರಭಾ ಸುವರ್ಣ, ಮೊದಲಾದವರು ಉಪಸ್ಥಿತರಿದ್ದರು.



Related posts

ಮುಂಬೈ :ದಹಿಸರ್ ಪೊಲೀಸ್ ಠಾಣೆಯಲ್ಲಿ ರಾಷ್ಟ್ರೀಯ ಯುವ ದಿನಾಚರಣೆ: ವಿವೇಕಾನಂದರ ಆದರ್ಶಗಳ ಸ್ಮರಣೆ

Mumbai News Desk

ಶ್ರೀ ಶಬರಿ ಅಯ್ಯಪ್ಪ ಭಜನಾ ಮಂಡಳಿ ಡೊಂಬಿವಲಿ ಇದರ 10ನೇ ವಾರ್ಷಿಕ ಅಯ್ಯಪ್ಪ ಮಹಾಪೂಜೆ

Mumbai News Desk

ಎಸ್ ಎಸ್ ಸಿ ಪರೀಕ್ಷೆಯಲ್ಲಿ ಮೋಕ್ಷ ರವಿ ಶೆಟ್ಟಿಗೆ ಶೇ 91.80 ಅಂಕ

Mumbai News Desk

ಸಮಾಜ ಸೇವಕ ಡಾ. ಪಿ.ವಿ. ಶೆಟ್ಟಿಗೆ ಕರ್ನಾಟಕ ಸಂಘ ಮುಂಬಯಿ ಗೌರವಾರ್ಪಣೆ

Mumbai News Desk

ಮುಂಬೈ ಕುಲಾಲ ಸಂಘ ಮುಂಬೈ ಇದರ ಮೀರಾ ರೋಡ್ – ವಿರಾರ್ ಸ್ಥಳೀಯ ಸಮಿತಿಯ ಆಶ್ರಯದಲ್ಲಿ ಮಾತಾ ವೈಷ್ಣೋದೇವಿ ದರ್ಶನ: ಭಕ್ತಿ-ಒಗ್ಗಟ್ಟಿನ ಸಮಾಗಮ

Mumbai News Desk

ಬಂಟರ ಸಂಘ ಮುಂಬಯಿ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿ “ಆಟಿದ ನೆನೆಪು – ಸ್ಕಿಲ್ಲ್ ಫಾರ್ ಎಂಪ್ಲಾಯ್” ಕಾರ್ಯಕ್ರಮ.

Mumbai News Desk