30 C
Mumbai
August 31, 2026
Mumbai News Kannada
ಮುಂಬಯಿ

ಭಾರತ್ ಕೋ-ಆಪರೇಟಿವ್ ಬ್ಯಾಂಕ್ ಮುಂಬಯಿ ಲಿಮಿಟೆಡ್‌ : ಅಂಕಲೇಶ್ವರ ಶಾಖೆಯಲ್ಲಿ 48ನೇ ಸಂಸ್ಥಾಪನಾ ದಿನಾಚರಣೆ





ಭಾರತ್ ಕೋ-ಆಪರೇಟಿವ್ ಬ್ಯಾಂಕ್ ಮುಂಬಯಿ ಲಿಮಿಟೆಡ್‌ನ 48ನೇ ಸಂಸ್ಥಾಪನಾ ದಿನಾಚರಣೆಯನ್ನು ಅಂಕಲೇಶ್ವರ ಶಾಖೆಯಲ್ಲಿ ಆಗಸ್ಟ್ 21, 2026ರಂದು ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಯಿತು. ಬ್ಯಾಂಕಿನ 48 ವರ್ಷಗಳ ಸುದೀರ್ಘ ಹಾಗೂ ಯಶಸ್ವಿ ಸೇವಾ ಪಯಣವನ್ನು ಸ್ಮರಿಸುವುದರೊಂದಿಗೆ, ಗ್ರಾಹಕರೊಂದಿಗೆ ಹೊಂದಿರುವ ಆತ್ಮೀಯ ಬಾಂಧವ್ಯ ಮತ್ತು ವಿಶ್ವಾಸವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಗಣ್ಯರು, ಪ್ರಮುಖ ಗ್ರಾಹಕರು ಹಾಗೂ ಬ್ಯಾಂಕಿನ ಸಿಬ್ಬಂದಿ ಭಾಗವಹಿಸಿದ್ದರು.


ಕಾರ್ಯಕ್ರಮದಲ್ಲಿ ಬ್ಯಾಂಕಿನ ಪ್ರತಿಷ್ಠಿತ ಗ್ರಾಹಕರಾದ ಕಮಲಾಕರ್ ರಾವ್, ಗುಜರಾತ್ ಶಿವಸೇನಾ ಅಧ್ಯಕ್ಷರಾದ ಎಸ್ ಆರ್ ಪಾಟೀಲ್ , ಕೆ ಸಿ ಲೇಬರೂಟರೀಸ್ ಅಂಕಲೇಶ್ವರನ ಪಾಲುದಾರರಾದ ಮನೀಶ್ ಪಟೇಲ್, ಫಾರ್ಮೆಕ್ಸ್ ಹೆಲ್ತ್ ಕೇರ್ ಅಂಕಲೇಶ್ವರನ ಆಶಿಶ್ ಪಟೇಲ್, ಜಲ್ರಾಮ್ ಇಂಜಿನಿಯರಿಂಗ್ ನ ಮಾಲೀಕರಾದ ದೀಪಕ್ ಶೆಟ್ಟಿ, ಯಶಸ್ವಿ ಇಂಜಿನಿಯರಿಂಗ ನ ಮಾಲೀಕರಾದ ಶ್ರೀಮತಿ ಚೇತನಾ ಶೆಟ್ಟಿ, ಪ್ರಟಿನ್ ಹೋಟೆಲ್ ವ್ಯವಸ್ಥಾಪಕರಾದ ರಂಜಿತ್ ಶೆಟ್ಟಿ , ಶ್ರೀ ಸಾಯಿ ಸಮರ್ಥ್ ಎಂಟರ್ಪ್ರೈಸಸ್ ನ ಮಾಲೀಕರಾದ ಶ್ರೀಮತಿ ಮನಸ್ಮಿತಾ ಶೆಟ್ಟಿ, ಹಾಗೂ ಭಾರತ್ ಬ್ಯಾಂಕ್‌ನ ಶಾಖಾ ಮುಖ್ಯಸ್ಥರಾದ ಆಶಿಶ್ ಕೋಟ್ಯಾನ್ ಅವರ ತಾಯಿ ಶ್ರೀಮತಿ ವಸಂತಿ ಕೋಟ್ಯಾನ್ , ಗುಜರಾತ್‌ನ ಬಿಲ್ಲವರ ಅಸೋಸಿಯೇಷನ್‌ನ ಅಧ್ಯಕ್ಷರು ಹಾಗೂ ಅಂಕಲೇಶ್ವರದ ತುಳು ಸಂಘದ ಉಪಾಧ್ಯಕ್ಷರಾದ ಹರೀಶ್ ಪೂಜಾರಿ, ಮತ್ತು ಶ್ರೀ ಕಾಳಿ ಹಾಸ್ಪಿಟಲ್ಲಿಟಿಯ ಪಾಲುದಾರರಾದ ಹರೀಶ್ ಶೆಟ್ಟಿ , ಮಯೂರ್ ರಾವ್ ,ದಿಲೀಪ್ ಮಿಶ್ರಾ, ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.


ಇತರ ಗ್ರಾಹಕರಾದ ಮಯೂರ್ ರಾವ್, ದಿಲೀಪ್ ಮಿಶ್ರಾ , ಶ್ರೀಮತಿ ಹೆಮ್ಂಗಿನಿ, ಹಾಗೂ ಶ್ರೀಮತಿ ಪರುಲ್ ಎಂ ಪಟೇಲ್ ಅವರು ಸಹ ಸಂಸ್ಥಾಪನಾ ದಿನಾಚರಣೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಸಂಭ್ರಮವನ್ನು ಹೆಚ್ಚಿಸಿದರು.
ಅಂಕಲೇಶ್ವರ ಶಾಖೆಯ ಶಾಖಾ ಮುಖ್ಯಸ್ಥರಾದ ಆಶಿಶ್ ಆರ್ ಕೋಟ್ಯಾನ್ ಅವರ ನೇತೃತ್ವದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಉಪ ಶಾಖಾ ಮುಖ್ಯಸ್ಥರಾದ ಚೇತನ್ ಕೆಲ್ಜಿ, ಅಧಿಕಾರಿ ಪ್ರಹ್ಲಾದ್ ಪೂಜಾರಿ, ಹಾಗೂ ಕಿರಿಯ ಅಧಿಕಾರಿ ಉಮೇಶ್ ಕೋಟ್ಯಾನ್ ಅವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
48 ವರ್ಷಗಳ ಸೇವಾ ಪಯಣದಲ್ಲಿ ಭಾರತ್ ಕೋ-ಆಪರೇಟಿವ್ ಬ್ಯಾಂಕ್ ಮುಂಬಯಿ ಲಿಮಿಟೆಡ್ ಗ್ರಾಹಕರ ವಿಶ್ವಾಸವನ್ನು ತನ್ನ ಪ್ರಮುಖ ಶಕ್ತಿಯನ್ನಾಗಿ ಮಾಡಿಕೊಂಡು, ಉತ್ತಮ ಬ್ಯಾಂಕಿಂಗ್ ಸೇವೆ ಹಾಗೂ ಗ್ರಾಹಕ ಸ್ನೇಹಿ ಕಾರ್ಯವೈಖರಿಯ ಮೂಲಕ ತನ್ನದೇ ಆದ ಗೌರವಯುತ ಸ್ಥಾನವನ್ನು ನಿರ್ಮಿಸಿಕೊಂಡಿದೆ. ಸಂಸ್ಥಾಪನಾ ದಿನಾಚರಣೆಯ ಈ ವಿಶೇಷ ಸಂದರ್ಭದಲ್ಲಿ ಬ್ಯಾಂಕಿನ ಸಾಧನೆಗಳು ಹಾಗೂ ಸುದೀರ್ಘ ಸೇವಾ ಪರಂಪರೆಯನ್ನು ಸ್ಮರಿಸಲಾಯಿತು.
ಗ್ರಾಹಕರು, ಗಣ್ಯರು ಹಾಗೂ ಸಿಬ್ಬಂದಿಯ ಆತ್ಮೀಯ ಸಹಭಾಗಿತ್ವದಲ್ಲಿ ನಡೆದ 48ನೇ ಸಂಸ್ಥಾಪನಾ ದಿನಾಚರಣೆಯು ಬ್ಯಾಂಕ್ ಮತ್ತು ಗ್ರಾಹಕರ ನಡುವಿನ ವಿಶ್ವಾಸ, ಬಾಂಧವ್ಯ ಹಾಗೂ ಸಹಕಾರದ ಪ್ರತೀಕವಾಗಿ ಅರ್ಥಪೂರ್ಣವಾಗಿ ಮತ್ತು ಸ್ಮರಣೀಯವಾಗಿ ಸಂಪನ್ನಗೊಂಡಿತು.



Related posts

ಭಜನೆಯಿಂದ ಭಾವನಾತ್ಮಕ ಸಮಸ್ಯೆಗೆ ಪರಿಹಾರ: ಶ್ರೀ ನಾರಾಯಣಗುರು ಭಜನ ಮಂಡಳಿ ಮಲಾಡ್ ವಲಯಕ್ಕೆ ಸೂರ್ಯಕಾಂತ್ ಜೆ. ಸುವರ್ಣ ಚಾಲನೆ

Mumbai News Desk

ತೀಯಾ ಸಮಾಜ ಮುಂಬಯಿ 79ನೇಯ ವಾರ್ಷಿಕ ಮಹಾಸಭೆ; ಪ್ರತಿಭಾ ಪುರಸ್ಕಾರ ವಿತರಣೆ ಅಧ್ಯಕ್ಷರಾಗಿ ಕೃಷ್ಣ ಎನ್. ಉಚ್ಚಿಲ್ ಪುನಾರಾಯ್ಕೆ

Mumbai News Desk

ಶ್ರೀ ಶಬರಿ ಅಯ್ಯಪ್ಪ ಭಜನಾ ಮಂಡಳಿ ಡೊಂಬಿವಲಿ ಇದರ 10ನೇ ವಾರ್ಷಿಕ ಅಯ್ಯಪ್ಪ ಮಹಾಪೂಜೆ

Mumbai News Desk

ಸಮಾಜ ಸೇವಕ ಡಾ. ಪಿ.ವಿ. ಶೆಟ್ಟಿಗೆ ಕರ್ನಾಟಕ ಸಂಘ ಮುಂಬಯಿ ಗೌರವಾರ್ಪಣೆ

Mumbai News Desk

ಬಂಟರ ಸಂಘ ಮುಂಬಯಿ, ಡೊಂಬಿವಲಿ ಪ್ರಾದೇಶಿಕ ಸಮಿತಿ, ಮಹಿಳಾ ವಿಭಾಗದ ವತಿಯಿಂದ ಆಟಿದ ಸೊಗಸ್ ಮತ್ತು ” ಸಂಜೀವಿನಿ ” ಯೋಜನೆಯ ಉದ್ಘಾಟನೆ

Mumbai News Desk

ಶ್ರೀ ನಿತ್ಯಾನಂದ ಸೇವಾ ಸಂಸ್ಥೆ ಮೀರಾಭಾಯಂದರ್ ವತಿಯಿಂದ ಗುರುಪೂರ್ಣಿಮೆ ಆಚರಣೆ.

Mumbai News Desk