September 6, 2026
Mumbai News Kannada
ಮುಂಬಯಿ

ಬಾಂಬೆ ಬಂಟ್ಸ್ ಅಸೋಸಿಯೇಶನ್ ಮಹಿಳಾ ವಿಭಾಗ ದಿಂದ ಲಲಿತ ಶಾಸ್ತ್ರ ನಾಮಾವಳಿ ಮತ್ತು ಭಜನೆ.





 ಮಹಿಳಾ ವಿಭಾಗದ   ಸೇವಾ ಕಾರ್ಯಗಳು ಸಂಸ್ಥೆಗೆ ಬಲ ನೀಡಿದೆ.ಎಡ್ವಕೇಟ್: ನ್ಯಾಯವಾದಿ – ಡಿ.ಕೆ.ಶೆಟ್ಟಿ‌.

    ನವಿ ಮುಂಬಯಿ ಎ 26.ಬಾಂಬೆ ಬಂಟ್ಸ್ ಅಸೋಸಿಯೇಶನ್ ಇದರ ಮಹಿಳಾ ವಿಭಾಗದ ನೂತನ ಸಮಿತಿಯ ವತಿಯಿಂದ ಎ 23 ರಂದು ಜೂಹೀ ನಗರದ ಬಂಟ್ಸ್ ಸೆಂಟರ್ ನ ಕಿರು ಸಭಾಗ್ರಹದಲ್ಲಿ ಸಾಯಂಕಾಲ ಯಿಂದ ಲಲಿತಾ ಸಹಸ್ರನಾಮ,ಭಜನೆ, ಹಾಗೂ ನೂತನ ಪದಾಧಿಕಾರಿಗಳ ಸ್ನೇಹ ಸಮ್ಮಿಲನ ಕಾರ್ಯ ಕ್ರಮ ಬಹು ವಿಜ್ರಂಭಣೆಯಿಂದ ನಡೆಯಿತು

  ಪೂಜಾ ವಿಧಿಗಳು ನಡೆದ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ನೂತನ ಅಧ್ಯಕ್ಷ ರಾದ ನ್ಯಾಯವಾದಿ ಡಿ.ಕೆ ಶೆಟ್ಟಿಯವರು ಮಹಿಳಾ 

ವಿಭಾಗದ ಕಾರ್ಯಾಧ್ಯಕ್ಷೆ  ಶಾಂತಾ ನಾರಾಯಣ ಶೆಟ್ಟಿಯವರು ಹಾಗೂ ಸಮಿತಿ ಸದಸ್ಯರು ಸೇರಿ ದ್ವೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಿದರು .

ಬಳಿಕ ಮಾತನಾಡಿದ ನ್ಯಾಯವಾಗಿ ಡಿಕೆ ಶೆಟ್ಟಿಅವರು ಯಾವುದೇ ಸಂಸ್ಥೆಯಲ್ಲಿ ಮಹಿಳಾ ವಿಭಾಗವು ಸಾಂಸ್ಕೃತಿಕ ವಾಗಿ ಏಕತೆಯಲ್ಲಿ ದುಡಿ ಯುತ್ತಾ ಮುಖ್ಯ ಸಮಿತಿಯೊಂದಿಗೆ ಕೈ ಜೋಡಿಸಿದಲ್ಲಿ ಆ ಸಂಸ್ಥೆಗೆ ಹೆಚ್ಚಿನ ಬಲ ಬರಲು ಸಾಧ್ಯ. ನಿಮ್ಮ ಇಂದಿನ ಲಲಿತಾ ಸಹಸ್ರನಾಮ. ಭಜನಾ ಕಾರ್ಯ ಕ್ರಮ ತುಂಬಾ ಚೆನ್ನಾಗಿ ಮೂಡಿ ಬಂದಿದೆ.ಇದೇ ರೀತಿ ಮುಂದೆಯೂ

 ಒಗ್ಗಟ್ಟಿನಿಂದ ಒಳ್ಳೆ ಒಳ್ಳೆಯ ಕಾರ್ಯಕ್ರಮಗಳು ನಡೆಯುತ್ತಾ ಇರಲಿ ನಮ್ಮ ಸಂಪೂರ್ಣ ಸಹ ಕಾರ ಇದೆ ಎಂದು ಸಂತಸ ವ್ಯಕ್ತಪಡಿಸಿದರು.

ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಾಂತಾ ಎನ್ ಶೆಟ್ಟಿ ಯವರು ಅಧ್ಯಕ್ಷರಿಗೆ ಪುಷ್ಪ ಗೌರವ ನೀಡಿ ಗೌರವಿಸಿ, ಸಮಿತಿಯ ಎಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸಿ ದರು.ಅವರು ಮುಂದೆ ಮಾತನಾಡುತ್ತಾ ಲಲಿತಾ  ಸಹಸ್ರನಾಮ ಪಠಣ ಮಾಡಿದರೆ ಮನಸಿಗೆ ಶಾಂತಿ, ಸಂತೋಷ ,ಸಮಾಧಾನ, ಆತ್ಮ ಸಂತ್ರಪ್ತಿ ದೊರಕು ತ್ತದೆ.ಮುಖ್ಯವಾಗಿ ಲಲಿತಾ ದೇವಿ ಎಂದರೆ ಪಾರ್ವತಿ ದೇವಿಯ ಒಂದು ಅಂಶ.ಅಂತಹ  ಶ್ರೀ ದೇವಿಯ ಕರುಣೆ ಸದಾ ನಮ್ಮ ಸಂಸ್ಥೆಯ ಮೇಲಿರಲಿ ಎಂದು ಆಶಿಸಿದರು. ಬಳಿಕ ಮಹಿಳಾ ವಿಭಾಗದ ನೂತನ ಸದಸ್ಯೆಯರಾಗಿ ಆಯ್ಕೆಯಾದ ಎಲ್ಲಾ ಸದಸ್ಯೆ ಯರನ್ನೂ ಪುಷ್ಪ ಗೌರವ ನೀಡಿ ಅಭಿನಂದಿಸ ಲಾಯಿತು.

ಬಾಂಬೆ ಬಂಟ್ಸ್‌ ಅಸೋಸಿಯೇಶನ್ ಉಪಾಧ್ಯಕ್ಷ ಐಕಳ ಕಿಶೋರ್ ಶೆಟ್ಟಿ ಗೌರವ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಶೇಖರ್ ಆರ್. ಶೆಟ್ಟಿ ಗೌರವ ಕೋಶಾಧಿಕಾರಿ ಸಿಎ ವಿಶ್ವನಾಥ ಶೆಟ್ಟಿ ಜತೆ ಕಾರ್ಯದರ್ಶಿ ಜಯರಾಜ್ ರೈ ಕೆ., ಜತೆ ಕೋಶಾಧಿಕಾರಿ ಸಿಎ ದಿವಾಕರ ಶೆಟ್ಟಿ ಮಹಿಳಾ ವಿಭಾಗದ ಉಪಕಾರ್ಯಾಧ್ಯಕ್ಷೆ ಸಹಾನಿ ಶೆಟ್ಟಿ ಗೌರವ ಕಾರ್ಯದರ್ಶಿ ಉಷಾ ಶೆಟ್ಟಿ ಕೋಶಾಧಿಕಾರಿ ನಾಗವೇಣಿ ಶೆಟ್ಟಿ ಜತೆ ಕಾರ್ಯದರ್ಶಿ ಮಾಯಾ ಆಳ್ವ ಜತೆ ಕೋಶಾಧಿಕಾರಿ ಉಮಾ ಶೆಟ್ಟಿ ಉಪಸ್ಥಿತರಿದ್ದರು.

ಮಹಿಳಾ ವಿಭಾಗದ ನೂತನ ಕಾರ್ಯಕಾರಿಸಮಿತಿಗೆಸದಸ್ಯೆಯರಾಗಿ ಆಯ್ಕೆಯಾದ ಎಲ್ಲ ಸದಸ್ಯೆಯರನ್ನು ಅಭಿನಂದಿಸಲಾಯಿತು.

ಅಸೋಸಿಯೇಶನ್‌ ಹಿರಿಯ ಸದಸ್ಯೆ ಮತ್ತು ಮಹಿಳಾ ವಿಭಾಗದಮಾಜಿ ಕಾರ್ಯಾಧ್ಯಕ್ಷೆ ಹೀರಾ ಶೆಟ್ಟಿ ಈ ಸಂದರ್ಭದಲ್ಲಿ ಮಾತನಾಡಿ, ಮಹಿಳಾ ವಿಭಾಗದ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸಂತೋಷವಾಗು ತ್ತಿದೆ. ಸಮಿತಿಯ ಕಾರ್ಯಕ್ರಮಗಳಲ್ಲಿ ಮಕ್ಕಳನ್ನು ಪಾಲ್ಗೊಳ್ಳುವಂತೆ ಮಾಡಬೇಕು ಎಂದರು.

ಯುವ ವಿಭಾಗದ ಕಾರ್ಯಾಧ್ಯಕ್ಷ ಪ್ರತೀಕ್ ಎನ್. ಶೆಟ್ಟಿ. ಮಹಿಳಾ ವಿಭಾಗ ಮತ್ತು ಯುವ ವಿಭಾಗದ ಪದಾ ಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಮಹಿಳಾ ವಿಭಾಗ ಸದಸ್ಯೆ ಯರು, ಯುವ ವಿಭಾಗದ ವರು, ಮಾಜಿ ಕಾರ್ಯಧ್ಯಕ್ಷರು, ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಯರು ಪಾಲ್ಗೊಂಡಿದ್ದರು. ಬಂಟರ ಸಂಘ ನವಿಮುಂಬಯಿ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರಾಧ್ಯಕ್ಷೆ ಗೀತಾ ಎಸ್. ಶೆಟ್ಟಿ ಉಪಸ್ಥಿತರಿದ್ದು 

ಕಾರ್ಯಕ್ರಮವನ್ನು ಮಹಿಳಾ ವಿಭಾಗದ ನೂತನ ಕಾರ್ಯದರ್ಶಿ ಉಷಾ ಆ‌ರ್. ಶೆಟ್ಟಿಯವರು ನಿರ್ವಹಿ ಸಿದರು. ಜತೆ ಕಾರ್ಯದರ್ಶಿ ಮಾಯಾ ಆಳ್ವವಂದಿಸಿದರು. ಕೊನೆಯಲ್ಲಿಮಹಾ ಮಂಗಳಾರತಿ, ಪ್ರಸಾದ ವಿತರಣೆ ಯನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ನೂತನ ಕಾರ್ಯಿದರ್ಶಿ ಉಷಾ ಆರ್ ಶೆಟ್ಟಿಯವರು ನಿರೂಪಿಸಿ,ಧನ್ಯವಾದ ಸಮರ್ಪಿಸಿದರು.

ಮಾಜಿ ಕಾರ್ಯಧ್ಯಕ್ಷೆ ಹೀರಾ ಶೆಟ್ಟಿಯವರ ಪ್ರಾರ್ಥನೆ ಮಾಡಿದರು .

———–

ಲಲಿತಾ ಸಹಸ್ರನಾಮ ಪಠಣ ಮಾಡಿದರೆ ಮನಸಿಗೆ ಶಾಂತಿ, ಸಂತೋಷ, ಸಮಾಧಾನ, ಆತ್ಮ ಸಂತೃಪ್ತಿ ಲಭಿಸುತ್ತದೆ. ಮುಖ್ಯವಾಗಿ ಲಲಿತಾ ದೇವಿ ಎಂದರೆ ಪಾರ್ವತಿ ದೇವಿಯ ಒಂದು ಅಂಶ. ಅಂತಹ ದೇವಿಯ ಕರುಣೆ ಸದಾ ನಮ್ಮ ಸಂಸ್ಥೆಯ ಮೇಲಿರಲಿ. ಮಹಿಳಾ ವಿಭಾಗವು ಭವಿಷ್ಯದಲ್ಲೂ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿ ಸಲಿದ್ದು, ಅದರ ಯಶಸ್ಸಿಗೆ ಎಲ್ಲರ ಸಹಾಯ, ಸಹಕಾರ ಇರಲಿ. – ಶಾಂತಾ ಎನ್. ಶೆಟ್ಟಿ ಕಾರ್ಯಾಧ್ಯಕ್ಷೆ :ಮಹಿಳಾ ವಿಭಾಗದ ಬಾಂಬೆ ಬಂಟ್ಸ್ ಅಸೋಸಿಯೇಶನ್.

———

ಮಹಿಳಾ ವಿಭಾಗದ ನೂತನ ಕಾರ್ಯಾಧ್ಯಕ್ಷೆ ಶಾಂತಾ ಎನ್. ಶೆಟ್ಟಿಯ ವರ ನೇತೃತ್ವದಲ್ಲಿ ಮಹಿಳಾ ವಿಭಾಗವು ಉತ್ತಮ ಸಂಖ್ಯೆಯ ಸದಸ್ಯ ರನ್ನು ಒಳಗೊಂಡಿದೆ. ಪ್ರತಿಭಾವಂತ ಸದಸ್ಯೆಯರು ಮಹಿಳಾ ವಿಭಾಗದಲ್ಲಿ ರುವುದು ಸಂತೋಷದ ಸಂಗತಿ. ಮಹಿಳಾ ವಿಭಾಗದವು ಇನ್ನೂ ಅನೇಕ ಉತ್ತಮ ಕಾಠ್ಯಕ್ರಮಗಳನ್ನು ಆಯೋಜಿಸುವಂತಾಗಲಿ. ಮಹಿಳಾ ವಿಭಾಗದ ಎಲ್ಲ ಸಮಾಜಪರ ಕಾರ್ಯಗಳಿಗೆ ಸಮಿತಿಯ ಸಹಕಾರ ಸದಾಯಿದೆ.ಇನ್ನಷ್ಟು ಮಹಿಳೆಯರು ಒಂದಾಗಿ ಸಂಘಟನೆಯನ್ನು ಬಲಪಡಿಸಬೇಕು. – ಏಕಳ ಕಿಶೋ‌ರ್ ಶೆಟ್ಟಿ, ಉಪಾಧ್ಯಕ್ಷ: ಬಾಂಬೆ ಬಂಟ್ಸ್ ಅಸೋಸಿಯೇಶನ್



Related posts

ಬಂಟ್ಸ್ ಫೋರಮ್ ಮೀರಾ ಭಾಯಂದರಿನ ಬಂಟರಕೂಟ-2026 ಕಾರ್ಯಕ್ರಮದ ಪೂರ್ವಭಾವಿ ಸಭೆ.

Mumbai News Desk

ಅಖಿಲ ಗಾಂವ್ದೇವಿ ಕನ್ನಡ ಮಿತ್ರ ಮಂಡಳಿ ಮುಂಬಯಿ – ವಿಜೃಂಭಣೆಯಿಂದ ಜರಗಿದ 94 ನೇ ವರ್ಷದ ಗಣೇಶೋತ್ಸವ

Mumbai News Desk

ಶ್ರೀ ಮಹಿಷಮರ್ದಿನಿ ದೇವಸ್ಥಾನ ಟ್ರಸ್ಟ್ ಬೊರಿವಿಲಿ 35ನೇ ವಾರ್ಷಿಕ ಶರವನ್ನರಾತ್ರಿ ಮಹೋತ್ಸವ ಚಂಡಿಕಾ ಹೋಮ,ಙ ಧಾರ್ಮಿಕ ಕಾರ್ಯಕ್ರಮಗಳು.

Mumbai News Desk

ಭಾರತ್ ಬ್ಯಾಂಕಿನ ಕೇಂದ್ರ ಕಚೇರಿಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ

Mumbai News Desk

ಜೋಗೇಶ್ವರಿ ಶ್ರೀ ಜಗದಂಬಾ ಕಾಲಭೈರವ ದೇವಸ್ಥಾನ ; 53ನೇ ವಾರ್ಷಿಕ ಏಕಹಾ ಭಜನಾ ಮಂಗಳೋತ್ಸವ ಸಂಪನ್ನ

Mumbai News Desk

ಎಸ್ ಎಸ್ ಸಿ ಪರೀಕ್ಷೆಯಲ್ಲಿ ಕೃಷಾ ಪ್ರಕಾಶ್ ಶೆಟ್ಟಿ ಗೆ ಶೇ.92. 60 ಅಂಕ

Mumbai News Desk