30 C
Mumbai
April 24, 2026
Mumbai News Kannada
ಸುದ್ದಿ

ಉಳ್ಳಾಲ ಬ್ರಹ್ಮಶ್ರೀ ಬಿಲ್ಲವ ವೇದಿಕೆಯಿಂದ ಸೂರ್ಯಕಾಂತ್ ಜಯ ಸುವರ್ಣ ರಿಗೆ” ಬ್ರಹ್ಮಶ್ರೀ “ಪ್ರಶಸ್ತಿ ಪ್ರದಾನ.






ಬಿಲ್ಲವ ಸಮಾಜದ ಅಭಿವೃದ್ಧಿಗೆ ಯುವ ಸಮುದಾಯ ಸಂಘಟಿಕರಾಗಬೇಕು : ಸೂರ್ಯಕಾಂತ್ ಜಯ ಸುವರ್ಣ

ಉಳ್ಳಾಲ ಜೂ4. ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿರುವ ಬಿಲ್ಲವ ಸಮಾಜ ಇನ್ನಷ್ಟು ಬಲಿಷ್ಠಗೊಳ್ಳಬೇಕು ಜಾಗತಿಕ ಮಟ್ಟದಲ್ಲಿ ಸಮಾಜದ ಬಂಧುಗಳನ್ನು ಗುರುತಿಸುವಂತಾಗಬೇಕು ಉದ್ಯಮಿಗಳು ಸಮಾಜ ಸೇವಕರು ಸಮಾಜದ ಸೇವೆಯಲ್ಲಿ ಭಾಗಿಗಳಾಗಬೇಕು ಯುವ ಸಮುದಾಯ ಸಂಘಟನೆಯಲ್ಲಿ ಹೆಚ್ಚು ತೊಡಗಿ ಕೊಳ್ಳಬೇಕು ಎಂದು ಭಾರತ್ ಬ್ಯಾಂಕಿನ ಕಾರ್ಯಧ್ಯಕ್ಷ ಸೂರ್ಯಕಾಂತ್ ಜಯಸ ಸುವರ್ಣ ನುಡಿದರು.

ಉಳ್ಳಾಲ ಬ್ರಹ್ಮಶ್ರೀ ಬಿಲ್ಲವ ವೇದಿಕೆಯ ವತಿಯಿಂದ ತೊಕ್ಕೊಟ್ಟು ಅಂಬಿಕಾ ರೋಡಿನ ಗಟ್ಟಿ ಸಮಾಜ ಭವನದಲ್ಲಿ ಭಾನು ವಾರ ನಡೆದ 24ನೇ ವರ್ಷದ ಅರ್ಹ ಫಲಾನುಭವಿ ವಿದ್ಯಾರ್ಥಿಗಳ ಶೈಕ್ಷಣಿಕ ದತ್ತು ಸ್ವೀಕಾರ-2025 ಕಾರ್ಯಕ್ರಮದಲ್ಲಿ, ಬ್ರಹ್ಮಶ್ರೀ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದರು.
ಹಲವು ದಶಕಗಳ ಹಿಂದೆ ಅಸ್ಪೃಶ್ಯತೆಯಲ್ಲಿ ನಲುಗಿದ್ದ ಬಿಲ್ಲವ ಸಮಾಜವು ಪ್ರಸ್ತುತ ಕಾಲ ಘಟ್ಟದಲ್ಲಿ ಬೆಳೆದಿರುವ ಪರಿಯನ್ನು ಗಮನಿಸಿದಾಗ ಬಿಲ್ಲವ ಸಂಘಟನೆಗಳ ಶ್ರಮ ಶ್ಲಾಘನೀಯವಾದುದು . ಬ್ರಹ್ಮಶ್ರೀ ಬಿಲ್ಲವ ವೇದಿಕೆ ಸಮಾಜಕ್ಕೊಂದು ಗರಿಮೆಎಂದುಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕರಾದ ಭಾಸ್ಕರ ಎಸ್. ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಗೋಕರ್ಣನಾಥೇಶ್ವರ ಕ್ಷೇತ್ರದ ಮೊಕೇಸರ ಜಗದೀಪ್ ಡಿ. ಸುವರ್ಣ, ಬುಡಾ ಅಧ್ಯಕ್ಷ ಬೇಬಿ ಕುಂದರ್, ಅಬಕಾರಿ ಇಲಾಖೆಯ ಡಿವೈಎಸ್ಪಿ ಗಾಯತ್ರಿ ಸುವರ್ಣ, ಉದ್ಯಮಿ ಪ್ರವೀಣ್ ಸುವರ್ಣ, ಬಿಲ್ಲವ ಬ್ರಿಗೇಡ್‌ನ ಅಧ್ಯಕ್ಷ ಸದಾನಂದ ಪೂಜಾರಿ, ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ. ಶ್ರೀ ಕ್ಷೇತ್ರ ಕಾಪಿಕಾಡ್ ನ
ಮೊಕೇಸರ ಎ.ಜೆ. ಶೇಖರ್, ಮೊಕೇಸರ ದಿನೇಶ್ ಕೆ. ಅತ್ತಾವರ, ಕಿನ್ಯ ಬೆಳರಿಂಗೆ ಶ್ರೀ ಮಲರಾಯ ಧೂಮಾವತಿ ಬಂಟ ದೈವಗಳ ಚಾರಿಟೆಬಲ್ ಟ್ರಸ್ಟ್, ಭಂಡಾರ ಮನೆಯ ಆಡಳಿತ ಮೊತ್ತೇಸರ ಬಾಬು ಶಾಸ್ತ್ರ ಕಿನ್ಯ, ಉದ್ಯಮಿ ಬಿಲ್ಲವ ಡಿ. ಗೋಪಾಲ, ಶ್ರೀ ಗೆಜ್ಜೆಗಿರಿ ಕ್ಷೇತ್ರದ ಮೊಕೇಸರ ಚಂದ್ರಶೇಖರ ಉಚ್ಚಿಲ್, ಬಿ.ಸಿರೋಡ್ ಅನ್ನಪೂರ್ಣೇಶ್ವರಿ ದೇವಸ್ಥಾನದ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ, ಮಾಡೂರು ಶ್ರೀಸಾಯಿ ಮಂದಿರದ ಆಡಳಿತ ಮೊಕ್ತಸರ ಕೆ. ಪಿ. ಸುರೇಶ್, ತೊಕ್ಕೊಟ್ಟು ಸಹ್ಯಾದ್ರಿ ಕೋ-ಆಪರೇಟಿವ್ ಸೊಸೈಟಿ ನಿರ್ದೇಶಕ ಮಾಧವ ಪೂಜಾರಿ, ಬ್ರಹ್ಮಶ್ರೀ ಬಿಲ್ಲವ ವೇದಿಕೆಯ ಕಾರ್ಯಾಧ್ಯಕ್ಷರಾದ ಸತೀಶ್ ಕರ್ಕೇರ, ಉಪಾಧ್ಯಕ್ಷ ಹರೀಶ್ ಮುಂಡೋಳಿ, ಪ್ರಧಾನ ಕಾರ್ಯದರ್ಶಿ ಆನಂದ ಕೆ. ಅಸೈಗೋಳಿ, ಮಹಿಳಾ ಸಮಿತಿ ಅಧ್ಯಕ್ಷರಾದ ಗಂಗಾ ಆನಂದ್ ಉಪಸ್ಥಿತರಿ ದ್ದರು.

ಈ ಸಂದರ್ಭದಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮಹತ್ತರ ಕ್ರಾಂತಿ ಮಾಡಿದ ಮುಂಬಯಿಯ ಭಾರತ್ ಕೋ-ಆಪರೇಟಿವ್ ಬ್ಯಾಂಕ್‌ನ ಕಾರ್ಯಧ್ಯಕ್ಷ ಸೂರ್ಯಕಾಂತ್ ಜಯ ಸುವರ್ಣ ಅವರಿಗೆ ಬ್ರಹ್ಮಶ್ರೀ ಪ್ರಶಸ್ತಿ ಪ್ರದಾನಮಾಡಲಾಯಿತು

ಬ್ರಹ್ಮಶ್ರೀ ಬಿಲ್ಲವ ವೇದಿಕೆಯ ದತ್ತು ಸಂಚಾಲಕ ಜೀವನ್ ಕುಮಾರ್ ತೊಕ್ಕೊಟ್ಟು ಸ್ವಾಗತಿಸಿದರು. ಅಧ್ಯಕ್ಷ ಕೆ.ಟಿ. ಸುವರ್ಣ ಪ್ರಾಸ್ತಾವಿಕ ಮಾತನಾಡಿದರು. ಕೋಶಾಧಿ ಕಾರಿ ಲಕ್ಷ್ಮಣ್ ಪೂಜಾರಿ ವಂದಿಸಿದರು. ದಿನೇಶ್ ರಾಯಿ ನಿರೂಪಿಸಿದರು.

B. Dinesh Kulal
Mob.: 9821868674



Related posts

ಸ್ವಾಮಿ ನಿತ್ಯಾನಂದ ಮಂದಿರ ಬೊಯಿಸರ್ * ಭಕ್ತವೃಂದದವರಿಂದ ಐದನೆಯ ವರ್ಷದ ಶ್ರೀ ದೇವೀ ಜಪಪಾರಾಯಣ ಅನುಷ್ಟಾನ ಸಂಪನ್ನ.

Mumbai News Desk

“ಮಿಸ್ಟರ್ ಮದಿಮಯೆ” ಕರಾವಳಿಯಾದ್ಯಂತ  ತೆರೆಗೆ

Mumbai News Desk

ಉಡುಪಿ : ಉದ್ಯಮಿ, ರೌಡಿ ಶೀಟರ್ ಸೈಪುದ್ದೀನ್ ಭೀಕರ ಹತ್ಯೆ

Mumbai News Desk

ಶ್ರೀ ಸುಬ್ರಮಣ್ಯ ಮಹಾಗಣಪತಿ ಸ್ಪೋರ್ಟ್ ಕ್ಲಬ್ ತೋಕೂರು ಗೆ, ಅರಸು ಪ್ರಶಸ್ತಿ 2024

Mumbai News Desk

ಮಂಗಳೂರು-ಮಸ್ಕತ್ ನೇರ ವಿಮಾನಯಾನ ಭಾನುವಾರದಿಂದ (ಮಾ. 1)ಪುನರಾರಂಭ: ಕ್ಯಾಪ್ಟನ್ ಬ್ರಿಜೇಶ್ ಚೌಟ

Mumbai News Desk

ತೊಕ್ಕೊಟ್ಟು ಸಾಯಿ ಪರಿವಾರ್ ನ ಆಹಾರ ಸಾಮಗ್ರಿ‌ ಕಿಟ್ ಸ್ವೀಕರಿಸಿದ ನಿಜವಾದ ಅಶಕ್ತ ಬಂದುಗಳು, ಧನ್ಯತಾ ಭಾವ, ಸಾಯಿ ಸೇವೆಗೆ ಕೃತಜ್ಞತೆ. ತೆನೆಗೆ ಹಾಲೆರೆದು ಉದ್ಘಾಟಿಸಿದ ಜೀವ ರಕ್ಷಕ ಈಶ್ವರ್ ಮಲ್ಪೆ

Mumbai News Desk