September 6, 2026
Mumbai News Kannada
ತುಳುನಾಡು

ಮೂಲ್ಕಿ ಕಾರ್ನಾಡು ಶ್ರೀ ಹರಿಹರ ಕ್ಷೇತ್ರದ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ವಿಜೃಂಭಣೆಯ ದೃಢ ಕಲಶಾಭಿಷೇಕ





ಮೂಲ್ಕಿ ಕಾರ್ನಡು ಶ್ರೀ ಹರಿಹರಿ ಕ್ಷೇತ್ರದ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ದೃಢ ಕಳಲಶಾಭಿಷೇಕ ಬುಧವಾರ ಬೆಳಗ್ಗೆ 8:30ರ ಮಿಥುನ ಲಗ್ನ ಸುಮುಹೂರ್ತದಲ್ಲಿ, ಶ್ರೀ ದೇವರಿಗೆ ದೃಢ ಕಲಶಾಭಿಷೇಕ, ಕ್ಷೇತ್ರದ ತಂತ್ರಿಗಳಾದ ಶಿಬರೂರು ಗೋಪಾಲಕೃಷ್ಣ ತಂತ್ರಿ ಹಾಗೂ ಅರ್ಚಕ ಹಯಗ್ರೀವ ಪಡ್ಡಿಲ್ಲಾಯ ನೇತೃತ್ವದಲ್ಲಿ ನಡೆಯಿತು.


ಈ ಸಂದರ್ಭ ಕ್ಷೇತ್ರದ ಆಡಳಿತ ಮೋಕ್ತೇಸರ ಎಂ ಎಚ್ ಅರವಿಂದ ಪೂಂಜಾ, ಸುನಿಲ್ ಆಳ್ವ, ವೈ ಏನ್ ಸಾಲ್ಯಾನ್, ಹರ್ಷರಾಜ ಶೆಟ್ಟಿ, ಮಧು ಆಚಾರ್ಯ, ಹರಿಶ್ಚಂದ್ರ ಪಿ ಸಾಲ್ಯಾನ್, ಪ್ರವೀಣ್ ಕೋಟ್ಯಾನ್, ಕೃಷ್ಣ ದೇವಾಡಿಗ, ದಿವಾಕರ್ ಕೋಟ್ಯಾನ್, ಉದಯ ಶೆಟ್ಟಿ ಕಾರ್ನಾಡ್, ಹರಿಹರ, ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಶಶಿಂದ್ರ ಸಾಲ್ಯಾನ್, ರವಿ ಕುಮಾರ್, ರಾಘವೇಂದ್ರ ರಾವ್, ನೂತನ್ ಶೆಟ್ಟಿ, ಮುಲ್ಕಿ ಬಂಟರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್, ವಿದ್ವಾನ್ ನಾಗೇಶ್ ಬಪ್ಪನಾಡು, ಪುರಂದರ ಸಾಲ್ಯಾನ್,, ರಂಗನಾಥ ಶೆಟ್ಟಿ, ಶಿವರಾಂ ಜಿ ಅಮೀನ್, ಶರತ್ ಕುಬೆವೂರು, ಸುಧೀರ್ ಕೋಟ್ಯಾನ್, ಭವಾನಿ ಶಂಕರ್, ಉದಯಕುಮಾರ್, ಗೋಪಿನಾಥ್ ಪೂಜಾರಿ, ನಿವೃತ್ತ ಪ್ರಾಂಶುಪಾಲರು ವಿಷ್ಣುಮೂರ್ತಿ, ಶಶಿಂದ್ರ ಅಮೀನ್ ಮತ್ತಿತರರು ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ಬ್ರಹ್ಮಕಲಶದ ವಿಧಿ ವಿಧಾನಗಳನ್ನು ನೆರವೇರಿಸಿದ ಶಿಬರೂರು ಗೋಪಾಲಕೃಷ್ಣ ತಂತ್ರಿ ಅವರನ್ನು ಅರವಿಂದ ಪೂಂಜಾ ಅವರು ಗೌರವಿಸಿ ಬ್ರಹ್ಮಕಲಶದ ಎಲ್ಲ ವಿಧಿ ವಿಧಾನಗಳನ್ನು ಒಳ್ಳೆಯ ರೀತಿಯಿಂದ ನೆರವೇರಿಸಿ ಕೊಟ್ಟಂತ ತಂತ್ರಿಯರಿಗೆ ಕೃತಜ್ಞತೆಯನ್ನು ಹೇಳಿದರು. ಅದರಂತೆ ಬ್ರಹ್ಮಕಲಶಕ್ಕೆ ಸಹಕರಿಸಿದ ಎಲ್ಲ ಭಕ್ತರನ್ನು, ಸಂಘ ಸಂಸ್ಥೆ ಪದಾಧಿಕಾರಿಗಳಿಗೂ ಕೃತಜ್ಞತೆ ಸಲ್ಲಿಸಿದರು. ಬ್ರಹ್ಮಕಲಶದ ಸವಿಸ್ತಾರ ವರದಿಗಳನ್ನು ಪತ್ರಿಕೆಗಳಲ್ಲಿ ಪ್ರಕಟಿಸಿದ ಪತ್ರಕರ್ತರಿಗೆ ವಂದಿಸಿ, ಮುಂದೆ ದೇವಸ್ಥಾನದ ಅಭಿವೃದ್ಧಿಗೆ ಎಲ್ಲರೂ ಶ್ರಮಿಸಬೇಕಾಗಿ ಹೇಳಿದರು.



Related posts

ಬೆಳ್ತಂಗಡಿ : ಬಿಲ್ಲವ ಸಮಾಜಕ್ಕೆ ಅವಹೇಳನ ಆರೋಪ – ಅನಿತಾ ಕಾಸರಗೋಡು ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು

Mumbai News Desk

ಕಾಪು: ಸಹಕಾರ ತರಬೇತಿ ಕಾರ್ಯಕ್ರಮ ಯಶಸ್ವಿ ಚಾಲನೆ

Mumbai News Desk

ಯುವವಾಹಿನಿ ಮೂಲ್ಕಿ ಆಟಿಡೊಂಜಿ ದಿನ :ಹಿಂದಿನ ಆಟಿಯ ದಿನಗಳನ್ನು ನೆನಪು ಮಾಡುವ ಕಾರ್ಯಕ್ರಮ

Mumbai News Desk

ಯುವವಾಹಿನಿಯ ಪದಗ್ರಹಣ ಹಾಗೂ ಪ್ರತಿಭಾ ಪುರಸ್ಕಾರ

Mumbai News Desk

ಮುಲ್ಕಿ : ಶ್ರೀ ವ್ಯಾಸ ಮಹರ್ಷಿ ವಿದ್ಯಾಪೀಠದಲ್ಲಿ ‘ವನ ಮಹೋತ್ಸವ’ ದಿನಾಚರಣೆ, ಹಸಿರು ಕ್ರಾಂತಿಗೆ ಕರೆ

Mumbai News Desk

ಕೊಂಡೆವೂರು ಮಠದಲ್ಲಿ ಪ್ರತಿಷ್ಠಾವರ್ಧಂತಿ, ನವಚಂಡಿಕಾ ಯಾಗ . ಧಾರ್ಮಿಕ ಸಭೆ.

Mumbai News Desk