32 C
Mumbai
March 7, 2026
Mumbai News Kannada
ಮುಂಬಯಿ

ಬಂಟರ ಸಂಘ ಮುಂಬಯಿ, ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿ ಶೈಕ್ಷಣಿಕ ನೆರವು ಮತ್ತು ಸಮಾಜ ಕಲ್ಯಾಣ ಕಾರ್ಯಕ್ರಮ ಹಾಗೂ ಶಾಲಾ ಪರಿಕರ ವಿತರಣೆ





 

ಬಂಟರ ಸಂಘದಿಂದ ಸಿಗುವ ಸಹಾಯವು ಸಂಘದ ಗೌರವ – ಪ್ರವೀಣ್ ಭೋಜ ಶೆಟ್ಟಿ 

ಮುಂಬಯಿ  ಜೂ15.ಬಂಟರ ಸಂಘದಿಂದ ಪಡೆಯುವ ಯಾವುದೇ ರೀತಿಯ ಸಹಾಯದ ಬಗ್ಗೆ ಫಲಾನುಭವಿ ಸಮಾಜ ಬಾಂಧವರಿಗೆ ಯಾವುದೇ ಕೀಳರಿಮೆ ಇಲ್ಲದಿರಲಿ. ಯಾಕೆಂದರೆ ನಾವು ಬಂಟರಾಗಿ ಬಂಟ ಸಮಾಜದಲ್ಲಿ ಹುಟ್ಟಿರುವುದೇ  ದೊಡ್ಡ ಗೌರವ. ಬಂಟರ ಸಂಘ ಮುಂಬಯಿಯ ಶಿಕ್ಷಣ ಹಾಗೂ ಸಮಾಜ ಕಲ್ಯಾಣ ಸಮಿತಿಯಿಂದ ಕೊಡಲ್ಪಡುವ ಸಹಾಯವು ಸಂಘದ ಗೌರವದ ಪ್ರತೀಕವಾಗಿದೆ, ಎಂದು ಬಂಟರ ಸಂಘ ಮುಂಬಯಿಯ ಅಧ್ಯಕ್ಷರಾದ ಪ್ರವೀಣ್ ಭೋಜ ಶೆಟ್ಟಿಯವರು  ನುಡಿದರು.  

ಜೂ. 14ರಂದು ಕಾಂದಿವಲಿ ಪೂರ್ವದ ಅವಿನ್ಯೊ ಹೊಟೇಲಿನ ಸಭಾಂಗಣದಲ್ಲಿ ಬಂಟರ ಸಂಘ ಮುಂಬಯಿ, ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯ ವತಿಯಿಂದ ಕಾರ್ಯಾಧ್ಯಕ್ಷ ಪ್ರೇಮನಾಥ ಶೆಟ್ಟಿ ಕೊಂಡಾಡಿ ಮುಂದಾಳತ್ವದಲ್ಲಿ ನಡೆದ ಸಂಘದ ಶಿಕ್ಷಣ ಹಾಗೂ ಸಮಾಜ ಕಲ್ಯಾಣ ಸಮಿತಿಯ ಶೈಕ್ಷಣಿಕ ನೆರವು ಮತ್ತು ಸಮಾಜ ಕಲ್ಯಾಣ ಕಾರ್ಯಕ್ರಮ ಹಾಗೂ ಶಾಲಾ ಪರಿಕರ ವಿತರಣೆ  ಸಮಾರಂಭದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪ್ರವೀಣ್ ಭೋಜ ಶೆಟ್ಟಿ ಅವರು 98ನೇ ವರ್ಷದಲ್ಲಿರುವ ನಮ್ಮ ಬಂಟರ ಸಂಘ ವಿದ್ಯೆಗೆ ಮಹತ್ವ ನೀಡುತ್ತಾ ಬಂದಿದೆ. ಪ್ರತಿವರ್ಷದಂತೆ ಈ ವರ್ಷವೂ ಕೂಡ, ಸಂಘವು 1.80 ಕೋಟಿ ರೂಪಾಯಿಯನ್ನು ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ  ಮೂಲಕ ವಿತರಿಸುತ್ತಿದ್ದು, ಸಮಾಜದಲ್ಲಿ  ಪಡೆಕೊಳ್ಳುವವರು ಇದ್ದಲ್ಲಿ ಮಾತ್ರ ಕೊಡುವವರ ಅಸ್ತಿತ್ವ ಇರುತ್ತದೆ.  ಇಂಥಹ ಕಾರ್ಯಕ್ಕೆ ಧನಸಹಾಯ ನೀಡಿ ಸಹಕರಿಸಿದವರನ್ನು  ಎಂದಿಗೂ ಮರೆಯಬಾರದು. ಬಂಟ ಸಮಾಜದಲ್ಲಿ ಸಾಧನೆಗೈದ  ಹಿರಿಯ ನಾಗರಿಕರನ್ನು ಮುಂಬಯಿ ಹಾಗೂ ಉಪನಗರಗಳಲ್ಲಿ ಹುಡುಕಿ, ಅವರಲ್ಲಿಗೆ ಹೋಗಿ ನಾವು ಅವರನ್ನು ಸತ್ಕರಿಸುವಂತಹ ಕಾರ್ಯಕ್ರಮ ಮಾಡುತ್ತಿದ್ದೇವೆ.  ನಮ್ಮ ಸಂಘವು ಎಲ್ಲಾ ರೀತಿಯ ಕೈಗಾರಿಕೆ ಹಾಗೂ ವ್ಯವಹಾರ ಸಂಸ್ಥೆಗಳ ಸಿ.ಎಸ್.ಆರ್. ಸೌಲಭ್ಯವನ್ನು ಪಡೆಯಲು ಅರ್ಹವಾಗಿದ್ದು ಈಗಾಗಲೇ ಹಲಾವಾರು ಸಂಸ್ಥೆಗಳಿಂದ ಸಿ.ಎಸ್.ಆರ್. ಪಂಡ್ ನಮಗೆ  ದೊರಕಿದ್ದು  ಅದನ್ನು ಹತ್ತು ಕೋಟಿಗೆ ಹೆಚ್ಚಿಸುವ ಯೋಜನೆ ನಮ್ಮದು. ಈ ಮೊತ್ತವು ಮುಂದಿನ ದಿನಗಳಲ್ಲಿ ಸಂಘದ ಸಮಾಜ ಕಲ್ಯಾಣಕ್ಕೆ ಸೀಮಿತವಾಗಲಿದೆ.  ಬಂಟರ ಸಂಘ ಎಲ್ಲಾ ರೀತಿಯ ಸಮಾಜಮುಖಿ ಕೆಲಸಗಳನ್ನು  ಮಾಡುತ್ತಿದೆ. ಸಂಘದ ಎಲ್ಲಾ ಪ್ರಾದೇಶಿಕ ಸಮಿತಿಗಳು ಬಲಿಷ್ಠವಾಗಿದ್ದು ಎಲ್ಲಾ ಕೆಲಸಗಳು ಸಂಘದ ಧ್ಯೇಯ ಧೋರಣೆಗಳಂತೆ ಸುಸಾಂಗವಾಗಿ ನಡೆಯಲು ಪೂರಕವಾಗಿದೆ ಎಂದರು.

ಬಂಟರ ಸಂಘ ಮುಂಬಯಿಯ ಗೌರವ ಪ್ರಧಾನ ಕಾರ್ಯದರ್ಶಿ ಡಾ. ಆರ್. ಕೆ. ಶೆಟ್ಟಿ ಅವರು ಈ ಸಂದರ್ಭದಲ್ಲಿ ಅವರ ಆರ್ಥಿಕ ವ್ಯವಹಾರ ಸಂಸ್ಥೆ ಎಸ್ಸಾರ್ ಫೈನಾನ್ಶಿಯಲ್ ಸರ್ವೀಸಸ್ ಹುಟ್ಟುಹಾಕಿದ “ಸಂಜೀವಿನಿ” ಎಂಬ ಸಮಾಜೋದ್ಧಾರಕ ಯೋಜನೆಯ ಬಗ್ಗೆ ಮಾತನಾಡಿ,ಸಮಾಜದಲ್ಲಿನ ಆರ್ಥಿಕವಾಗಿ ಹಿಂದುಳಿದವರು ಬಂಟರ ಸಂಘದಿಂದ ಸಹಾಯವನ್ನು ಪಡೆದರೂ, ಕೆಲವು ಸಂಧರ್ಭಗಳಲ್ಲಿ ಅದು ಸಾಕಾಗುವುದಿಲ್ಲ. ಇನ್ನೂ ಹೆಚ್ಚಿನ ಸಹಾಯದ ಅವಶ್ಯಕತೆಯಿರುತ್ತದೆ. ಅಂತಹ ಸಂಧರ್ಭಗಳಲ್ಲಿ ನಮ್ಮ ಸಂಸ್ಥೆಯ “ಸಂಜೀವಿನಿ” ಕಾರ್ಯಕ್ರಮದ ಯೋಜನೆಯಡಿಯಲ್ಲಿ ಅದಕ್ಕೆ ಸ್ಸ್ಪಂದಿಸುತ್ತಿದ್ದೇವೆ. ನಮ್ಮ ದೇಶದಲ್ಲಿ ಯುವ ಜನಾಂಗ ಶಿಕ್ಷಣ ಮುಗಿಸಿದ ನಂತರ  ಉದ್ಯೋಗ ದೊರೆಯಲು ಅನುಭವ ಇಲ್ಲದ ಕಾರಣ ಅವರಿಗೆ  ಕೂಡಲೇ ಉದ್ಯೋಗ ದೊರೆಯುವುದು ಅಸಾಧ್ಯವಾಗಿದ್ದು ಇದನ್ನರಿತ ನಮ್ಮ ದೇಶದ ಪ್ರದಾನಿಯವರು ಮಿನಿಸ್ಟ್ರಿ ಆಫ್ ಸ್ಕಿಲ್ ಡೆವಲಪ್ಮೆಂಟ್ ನ್ನು  ಪ್ರಾರಂಭಿಸಿ, ಇದರ ಮೂಲಕ ಶಿಕ್ಷಣ ಪೂರೈಸಿದ ಯುವಜನತೆಗೆ ತರಬೇತಿಯನ್ನು ನೀಡಿ  ಅವರಿಗೆ ಕೆಲಸ ದೊರೆಯಲು ಸುಲಭವಾಗುವಂತೆ ಮಾಡಿದರು.ಮುಂಬಯಿಯ ವಿದ್ಯಾರ್ಥಿಗಳು ಅದರ ಸದುಪಯೋಗವನ್ನು ಪಡೆಯಲು ಕೇಂದ್ರ ಸರಕಾರವು ಟಾಟಾ ಕಂಪೆನಿಗಳ ಸಮೂಹದೊಂದಿಗೆ ಟಾಟಾ ಇನ್ಸ್ಟಿಟ್ಯೂಟ್ ಆಫ್ ಸ್ಕಿಲ್ ಡೆವಲಪ್ಮೆಂಟ್ ಎಂಬ ಸಂಸ್ಥೆಯನ್ನು ಪ್ರಾರಂಭಿಸಿದ್ದು ಈ ವರ್ಷದಿಂದ ನಮ್ಮ ಸಂಜೀವಿನಿ ಯೋಜನೆಯು ಇದರೊಂದಿಗೆ ಒಡಂಬಡಿಕೆಯನ್ನು ಮಾಡಿಕೊಂಡಿದ್ದು ಇದರ ಪ್ರಯೋಜನವನ್ನು ನಮ್ಮ ಸಮಾಜದ ಮಕ್ಕಳು ಪಡೆಯಬೇಕು ಎನ್ನುತ್ತಾ ಸಂಘದ ಸಂಜೀವಿನಿ ಯೋಜನೆ ಹಾಗೂ ಮಕ್ಕಳಿಗಾಗಿ ಸ್ಕಿಲ್ ಡೆವಲಪ್ಮೆಂಟ್ ಬಗ್ಗೆ ಮಾಹಿತಿಯಿತ್ತರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಉದ್ಯಮಿ ಹಾಗೂ ಬಂಟರ ಸಂಘ ಮುಂಬಯಿ ಉಪಾಧ್ಯಕ್ಷ ಮಹೇಶ್ ಎಸ್. ಶೆಟ್ಟಿಯವರು ಮಾತನಾಡುತ್ತಾ ನಮ್ಮ ಸಂಘವು ಶಿಕ್ಷಣಕ್ಕೆ ಮಹತ್ವ ನೀಡುತ್ತಿದ್ದು ಅಗತ್ಯವಿದ್ದವರಿಗೆ ಉಚಿತ ಶಿಕ್ಷಣ ನೀಡುತ್ತಿದ್ದೇವೆ.  ಮಕ್ಕಳು ವಿದ್ಯಾವಂತರಾದರೆ ಹೇಗಾದರೂ ಜೀವನ ನಡೆಸಿಯಾರು, ಸರಸ್ವತಿ ಇದ್ದಲ್ಲಿ ಲಕ್ಷಿ ಇರುತ್ತಾಳೆ. ನಮ್ಮ ಸಮಾಜದಲ್ಲಿ ಇನ್ನೂ ಹಲವಾರು ಕಡುಬಡರಿದ್ದಾರೆ. ಅಶಕ್ತರ ಸಮಸ್ಯೆಗಳಿಗೆ ಸ್ಪಂದಿಸಬೇಕಾಗಿರುವುದು ಸಮಾಜದಲ್ಲಿರುವ  ಶಕ್ತರೆಲ್ಲರ ಆದ್ಯ ಕರ್ತವ್ಯ. ನಮ್ಮ ಬಂಟರ ಸಂಘವು 100 ನೇ ವರ್ಷ ಆಚರಿಸುವಾಗ ನಮ್ಮ ಸಮಾಜದಲ್ಲಿ ಬಡತನ ಸಂಪೂರ್ಣವಾಗಿ ನಿರ್ಮೂಲನಗೊಳ್ಳಲಿ,  ನಮ್ಮ ಸಂಘದ್ದೇ ಆದ ಆಸ್ಪತ್ರೆಯ ಅಗತ್ಯ ಕೂಡ ಇದ್ದು , ಮುಂದಿನ ದಿನಗಳಲ್ಲಿ ಅದೂ ಕೂಡ ಪ್ರಾರಂಭವಾಗಲಿ ಎಂದರು.

ಸಂಘದ ಪಶ್ಚಿಮ ವಲಯ ಪ್ರಾದೇಶಿಕ ಸಮಿತಿಗಳ ಸಮನ್ವಯಕ ಖಾಂದೇಶ್ ಭಾಸ್ಕರ ಶೆಟ್ಟಿ ಯವರು ಮಾತನಾಡುತ್ತಾ ಶೈಕ್ಷಣಿಕ ನೆರವು ಮತ್ತು ಸಮಾಜ ಕಲ್ಯಾಣ ಕಾರ್ಯಕ್ರಮವು ಸಂಘದ ಅರ್ಥಪೂರ್ಣ ಹಾಗೂ ದೊಡ್ಡ ಕಾರ್ಯಕ್ರಮವಾಗಿದೆ. ಬೋರಿವಲಿ ಶಿಕ್ಷಣ ಸಂಸ್ಥೆಯು ಮುಂಬಯಿಯಲ್ಲೇ ಉನ್ನತ ಮಟ್ಟದ ಶಿಕ್ಷಣ ಸಂಸ್ಥೆಯು ಅದನ್ನು ಆದಷ್ಟು ಬೇಗನೇ ಪೂರ್ಣ ಪ್ರಮಾಣದಲ್ಲಿ ಲೋಕಾರ್ಪಣೆ ಮಾಡಲಿದ್ದೇವೆ. ಇದೇ ರೀತಿ ನಾವು ಮನಸ್ಸಿಗೆ ನೆಮ್ಮದಿ ಕೊಡುವ ಇಂತಹ ಕಾರ್ಯಕ್ರಮಗಳನ್ನು ನಡೆಸೋಣ ಎಂದರು. 

ಬಂಟರ ಸಂಘ ಮುಂಬಯಿಯ ಶಿಕ್ಷಣ ಹಾಗೂ ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಇಂದ್ರಾಳಿ ದಿವಾಕರ ಶೆಟ್ಟಿ ಮಾತನಾಡುತ್ತಾ ಮಕ್ಕಳು ಸಮಾಜದಿಂದ ಪಡೆದು ಸಮಾಜಕ್ಕೆ ದೊಡ್ಡ ಮಟ್ಟದಲ್ಲಿ ಹಿಂತಿರುಗಿಸುವಂತಾಗಲಿ.  ಮನೆಯ ಒಂದು ಮಗು ಕಲಿತು ಉದ್ಧಾರವಾದಲ್ಲಿ ಆ ಮನೆ ಕೂಡ ಉದ್ಧಾರವಾಗುವುದು. ವರ್ಷ ಹೋದಂತೆ ಸಮಾಜದಲ್ಲಿ ಅಭಿವೃದ್ಧಿ ಕಂಡುಬರುತ್ತಿದ್ದು ಸಂಘದಿಂದ ಸಹಾಯವನ್ನು ಪಡೆಯುವವರ ಸಂಖ್ಯೆ ಕೂಡ ಕಡಿಮೆಯಾಗುತ್ತದೆ. ಆದರೆ ಈ ಸಲ ವಿಧವಾ ವೇತನಕ್ಕೆ 720 ಅರ್ಜಿ ಬಂದಿದ್ದು ಇದು ಒಳ್ಳೆಯ ಬೆಳವಣಿಗೆಯಲ್ಲಾ. ಮಕ್ಕಳು ಕಲಿತು ತಾವು ಸ್ವತಃ ಅಭಿವೃದ್ಧಿಯಾಗುವುದರೊಂದಿಗೆ ತನ್ನ ಮಾತಾಪಿತರನ್ನೂ ಚೆನ್ನಾಗಿ ನೋಡಿಕೊಳ್ಳಬೇಕು. ಬಂಟರ ಸಂಘದ ಶಿಕ್ಷಣ ಹಾಗೂ ಸಮಾಜ ಕಲ್ಯಾಣ ಸಮಿತಿಯ ಆರ್ಥಿಕ ಧನಸಹಾಯವನ್ನು ಪಡೆದವರೆಲ್ಲರೂ ಜೀವನದಲ್ಲಿ ಯಶಸ್ಸನ್ನು ಸಾಧಿಸಿ, ಮುಂದಿನ ದಿನಗಳಲ್ಲಿ ಇಂತಹ ಸಹಾಯವನ್ನು ಯಾಚಿಸುವವರ ಸಂಖ್ಯೆಯು ನಮ್ಮ ಸಮಾಜದಲ್ಲಿ ವರ್ಷದಿಂದ ವರ್ಷಕ್ಕೆ ಕಡಿಮೆಯಾಗಲಿ ಎಂದು ಶುಭ ಹಾರೈಸಿದರು.

ಬಂಟರ ಸಂಘದ ನಿಧಿಸಂಗ್ರಹ ಸಮಿತಿಯ ಕಾರ್ಯಾಧ್ಯಕ್ಷ ಹಾಗೂ ಪ್ರಾದೇಶಿಕ ಸಮಿತಿಯ ಮುಖ್ಯ ಸಲಹೆಗಾರಾದ ಮುಂಡಪ್ಪ ಎಸ್. ಪಯ್ಯಡೆಯವರು ಮಾತನಾಡುತ್ತಾ ಬೊರಿವಲಿ ಶಿಕ್ಷಣ ಸಂಸ್ಥೆಯು ಬಂಟರ ಸಂಘಕ್ಕೆ ಒಂದು ಶಕ್ತಿಯಂತಿದೆ. ಈ ಶಿಕ್ಷಣ ಸಂಸ್ಥೆಯ ಬಾಕಿ ಉಳಿದ ಕೆಲಸವನ್ನು ಸಂಪೂರ್ಣಗೊಳಿಸಲು ಎಲ್ಲರೂ ಸಹಕರಿಸಬೇಕೆಂದು ವಿನಂತಿಸಿದರು.  ಈ ಸಂಸ್ಥೆಗೆ ನೀಡಿದ ಹಣ ಅದು ಒಳ್ಳೆಯ ಕೆಲಸಕ್ಕೆ ಹೋಗುತ್ತದೆ. ಶಿಕ್ಷಣದಿಂದ ಬಡತನವು ದೂರವಾಗುತ್ತದೆ ಎನ್ನುತ್ತಾ ಮಕ್ಕಳಿಗೆ ಹಿತ ನುಡಿಯನ್ನು ಹೇಳಿದರು. 

ಗೌರವ ಅತಿಥಿಯಾಗಿ ಅವಿನ್ಯೂ ಹೊಟೇಲ್ ಮಾಲಕ ರಘುರಾಮ ಶೆಟ್ಟಿಯವರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಇತ್ತೀಚೆಗೆ ನಿಧನರಾದ ವಿಲೆ ಪಾರ್ಲೆ ರಾಮಕೃಷ್ಣ ಹೋಟೇಲಿನ ಮಾಲಕ, ಸುಬ್ಬಯ್ಯ ಶೆಟ್ಟಿಯವರಿಗೆ ಹಾಗೂ ಅಹಮದಾಬಾದ್ ವಿಮಾನ ದುರಂತದಲ್ಲಿ ನಿಧನರಾದವರಿಗೆ ಮೌನ ಪ್ರಾರ್ಥನೊಂದಿಗೆ  ಶ್ರದ್ಧಾಂಜಲಿ ಅರ್ಪಿಸಲಾಯಿತು

ಶಿಕ್ಷಣ ಹಾಗೂ ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಇಂದ್ರಾಳಿ ದಿವಾಕರ ಶೆಟ್ಟಿಯವರು ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಪ್ರೇಮನಾಥ ಶೆಟ್ಟಿ ಕೊಂಡಾಡಿ, ಪ್ರಾದೇಶಿಕ ಸಮಿತಿಯ ಶಿಕ್ಷಣ ಹಾಗೂ ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಹರೀಶ್ ಜಿ ಶೆಟ್ಟಿ ಮತ್ತು ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುನಿತಾ ಎನ್ ಹೆಗ್ಡೆಯವರಿಗೆ ಶೈಕ್ಷಣೀಕ ನಿಧಿಯನ್ನು ಸಮರ್ಪಿಸಿದರು. 257 ಮಂದಿಗೆ ಸುಮಾರು 17 ಲಕ್ಷ ರೂಪಾಯಿ ಸಹಾಯಧನ ಮತ್ತು ಶಾಲಾ ಪರಿಕರವನ್ನು ವಿತರಿಸಲಾಯಿತು.  ಮೂರು ಕುಟುಂಬವನ್ನು ದತ್ತು ಸ್ವೀಕರಿಸಲಾಯಿತು. ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಪ್ರೇಮನಾಥ ಶೆಟ್ಟಿ ಕೊಂಡಾಡಿ ಯವರ ನೇತೃತ್ವದಲ್ಲಿ ಬೊರಿವಲಿಯ ಪೂರ್ವ ನ್ಯಾನ್ಸಿ ಕಾಲೋನಿಯ ಸಮಾಜದ ಮಹಿಳೆಯೊಬ್ಬರಿಗೆ ಅವರ ಮನೆ ಪುನರ್ ನಿರ್ಮಾಣಕ್ಕಾಗಿ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ  ಸಮಿತಿಯ ವತಿಯಿಂದ ರೂ. 50,000 ಮೊತ್ತವನ್ನು ನೀಡಲಾಯಿತು .

ಈ ಸಂದರ್ಭದಲ್ಲಿ ದಿ. ಸುಬ್ಬಯ್ಯ ಶೆಟ್ಟಿಯವರ ಸುಪುತ್ರ ಅರುಣ್ ಶೆಟ್ಟಿ ಮತ್ತು ಹಿರಿಯ ನಾಗರಿಕ ಶಂಕರ ಶೆಟ್ಟಿ ,ಸೀತಾ ಪಾಷ್ಟ ಪೂಡ್ ಬೊರಿವಲಿ ಇವವರನ್ನು ಗೌರವಿಸಲಾಯಿತು. ಹಿರಿಯ ನಾಗರಿಕ ಸಮಿತಿಯ ಕಾರ್ಯಾಧ್ಯಕ್ಷ  ಕೃಷ್ಣ ಶೆಟ್ಟಿ ಮತ್ತು ಪ್ರಭಾಕರ್ ಶೆಟ್ಟಿ ಬೋಳ ಉಪಸ್ಥಿತರಿದ್ದರು. ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಪ್ರೇಮನಾಥ ಶೆಟ್ಟಿ ಕೊಂಡಾಡಿ ಯವರನ್ನು ಈ ಸಂದರ್ಭದಲ್ಲಿ ವಿಶೇಷವಾಗಿ ಗೌರವಿಸಲಾಯಿತು. ಅಲ್ಲದೆ ಸಮಿತಿಯ ಎಲ್ಲಾ ಕಾರ್ಯಗಳಿಗೆ ತನ್ನ ಕಚೇರಿಯಲ್ಲಿ ಅವಕಾಶ ನೀಡುತ್ತಿರುವ ಅಶೋಕ ಶೆಟ್ಟಿ ಎಲ್. ಐ. ಸಿ.ಇವರನ್ನು ಗೌರವಿಸಲಾಯಿತು. 

ವೇದಿಕೆಯಲ್ಲಿ ಬಂಟರ ಸಂಘ ಮುಂಬಯಿಯ ಕೋಶಾಧಿಕಾರಿ ಸಿಎ ರಮೇಶ್ ಶೆಟ್ಟಿ, ಶಿಕ್ಷಣ ಹಾಗೂ ಸಮಾಜ ಕಲ್ಯಾಣ ಸಮಿತಿಯ ಉಪ ಕಾರ್ಯಾಧ್ಯಕ್ಷ ಸುಬ್ಬಯ್ಯ ಶೆಟ್ಟಿ, ಕಾರ್ಯದರ್ಶಿ ಸಿ ಎಸ್ ಉತ್ತಮ್ ಶೆಟ್ಟಿ, ಕೋಶಾಧಿಕಾರಿ ಜಯಪ್ರಕಾಶ್ ಶೆಟ್ಟಿ,  ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯ ಉಪಕಾರ್ಯಾಧ್ಯಕ್ಷ ಗಂಗಾಧರ ಎ. ಶೆಟ್ಟಿ (ಆಹಾರ್ Zone -10 ರ ಉಪಾದ್ಯಕ್ಷ), ಕಾರ್ಯದರ್ಶಿ ರಮೇಶ್ ಎಂ. ಶೆಟ್ಟಿ, ಕೋಶಾಧಿಕಾರಿ ಅವಿನಾಶ್ ಎಂ. ಶೆಟ್ಟಿ, ಜೊತೆ ಕಾರ್ಯದರ್ಶಿ ಜಯ ಶೆಟ್ಟಿ, ಜೊತೆ ಕೋಶಾಧಿಕಾರಿ ರಮೇಶ್ ಎಚ್. ಶೆಟ್ಟಿ,  ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುನಿತಾ ಎನ್. ಹೆಗ್ಡೆ,  ಯುವ ವಿಭಾಗದ ಕಾರ್ಯಾಧ್ಯಕ್ಷ ಅಕ್ಷಜ್ ಅರ್.  ಶೆಟ್ಟಿ, ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ  ಸಂಚಾಲಕಿ ಶೈಲಜಾ ಎ. ಶೆಟ್ಟಿ, ಉಪಸ್ಥಿತರಿದ್ದರು.

ಡಾ. ಪಿ. ವಿ ಶೆಟ್ಟಿ, ಎಸ್ ಎಂ ಶೆಟ್ಟಿ ಶಿಕ್ಷಣ ಸಂಸ್ಥೆಯ ಕಾರ್ಯಧ್ಯಕ್ಷ ಮುಂಡ್ಕೂರು ರತ್ನಾಕರ ಶೆಟ್ಟಿ, ರೋಹಿತ್ ಶೆತ್ತಿ, ಡಾ. ಸತೀಶ್ ಶೆಟ್ಟಿ, ಡಾ. ಹರೀಶ್ ಶೆಟ್ಟಿ, ಸಿ. ಎ. ಜಗದೀಶ್ ಶೆಟ್ಟಿ,, ಭಾಸ್ಕರ ಶೆಟ್ಟಿ, ಸಿಟಿ ರೀಜನ್ ಚೆಯೆರ್ಮನ್ ಅಶೋಕ ಪಕ್ಕಳ, ಮೊದಲಾದವರು ಉಪಸ್ಥಿತರಿದ್ದರು.  

ವಿಶಾಲ್ ಕನೋಜಿಯ ಅವರು ಬಂಟರ ಸಂಘ ರಮಾನಾಥ ಪಯ್ಯಡೆ ಕಾಲೇಜ್ ಆಫ್ ಹಾಸ್ಪಿಟಲ್ ಮ್ಯಾನೇಜ್ಮೆಂಟ್ ಸ್ಟಡೀಸ್ ಇದರ ಬಗ್ಗೆ ಮಾತನಾಡಿದರು.

ಮಾಹಿ ಶೆಟ್ಟಿಯವರ ಪ್ರಾರ್ಥನೆಯೊಂದಿಗೆ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ವಿದ್ಯಾರ್ಥಿನಿ ತೃಷಾ ಶೆಟ್ಟಿ ತುಳು ಬಾಷೆಯಲ್ಲಿ ಭಾಷಣ ಮಾಡಿ ಎಲ್ಲರ ಮನ ಗೆದ್ದರು. 400 ಮಕ್ಕಳಿಗೆ ಕಿಟ್ ಗಳನ್ನು ವಿತರಿಸಲಾಯಿತು. 

ಕಾರ್ಯಕ್ರಮದ ಯಶಸ್ವಿಗೆ ಸಮಿತಿಯ ಮುಖ್ಯ ಸಲಹೆಗಾರರಾದ ಮನೋಹರ ಎನ್. ಶೆಟ್ಟಿ, ನಿತ್ಯಾನಂದ ಹೆಗ್ಡೆ, ವಿಜಯ ಆರ್. ಭಂಡಾರಿ  ರವೀಂದ್ರ ಎಸ್. ಶೆಟ್ಟಿ, ಎರ್ಮಾಳು ಹರೀಶ್ ಶೆಟ್ಟಿ,  ಮಹಿಳಾ ಉಪ ಕಾರ್ಯಾಧ್ಯಕ್ಷೆ ರೇಖಾ ವೈ ಶೆಟ್ಟಿ, ಕಾರ್ಯದರ್ಶಿ ಸರಿತಾ ಎಂ ಶೆಟ್ಟಿ, ಕೋಶಾಧಿಕಾರಿ ಶುಭಾಂಗಿ ಎಸ್. ಶೆಟ್ಟಿ, ಜೊತೆ ಕಾರ್ಯದರ್ಶಿ ಯೋಗಿನಿ ಎಸ್ ಶೆಟ್ಟಿ, ಜೊತೆ ಕೋಶಾಧಿಕಾರಿ ಪ್ರಭಾವತಿ ಎಚ್ ಶೆಟ್ಟಿ ಯುವ ವಿಭಾಗದ ಉಪಕಾರ್ಯಾಧ್ಯಕ್ಷ ಪ್ರಜ್ವಲ್ ಶೆಟ್ಟಿ, ಕಾರ್ಯದರ್ಶಿ ಸಮೀಕ್ಷಾ ಶೆಟ್ಟಿ,  ಕೋಶಾಧಿಕಾರಿ ವಿಭಾ ಎಸ್ ಶೆಟ್ಟಿ, ಜೊತೆ ಕಾರ್ಯದರ್ಶಿ ಕಾರ್ತಿಕ್ ಶೆಟ್ಟಿ, ಜೊತೆ ಕೋಶಾಧಿಕಾರಿ ವಿಶ್ವಾಸ್ ಶೆಟ್ಟಿ ಮತ್ತು ಸದಸ್ಯರು, ಸಲಹಾ ಸಮಿತಿಯ ಎಲ್ಲಾ ಸದಸ್ಯರು, ಕಾರ್ಯಾಕಾರಿ ಸಮಿತಿ, ಉಪಸಮಿತಿ, ಮಹಿಳಾ ವಿಭಾಗ ಮತ್ತು ಯುವ ವಿಭಾಗದ ಸದಸ್ಯರು ಸಹರಿಸಿದರು. 

ಕಾಂದಿವಿಲಿ ರಘುನಾಥ್ ಎನ್. ಶೆಟ್ಟಿಯವರು ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮವನ್ನು ನಿರ್ವಹಿಸಿದರು. ಪ್ರಾದೇಶಿಕ ಸಮಿತಿಯ ಶಿಕ್ಷಣ ಹಾಗೂ ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಹರೀಶ್ ಜಿ ಶೆಟ್ಟಿಯವರು ವಂದನಾರ್ಪಣೆಗೈದರು.

—–

ಶಿಕ್ಷಣ ಪಡೆದ ಮಕ್ಕಳಿಂದ   ಸಮಾಜ ಉನ್ನತ ಮಟ್ಟಕ್ಕೇರಲು ಸಾಧ್ಯ: ಪ್ರೇಮನಾಥ ಶೆಟ್ಟಿ ಕೊಂಡಾಡಿ.

ಸಂಘದ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಪ್ರೇಮನಾಥ ಶೆಟ್ಟಿ ಕೊಂಡಾಡಿ ಯವರು ಸ್ವಾಗತಿಸಿ ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತಾ ನಾವು ದಾನಿಗಳನ್ನು ಸ್ವತ: ಸಂಪರ್ಕಿಸಿದ್ದು ಎಲ್ಲರೂ ಗೌರವಯುತವಾಗಿ ಬೆನ್ನು ತಟ್ಟಿ  ನಮಗೆ ಸಹಕರಿಸಿದ್ದಾರೆ. ದಾನಿಗಳ ಸಹಾಯ ಹಾಗೂ ಪ್ರೋತ್ಸಾಹ ಇಲ್ಲದಿದ್ದರೆ ಇಂಥ ಕಾರ್ಯಕ್ರಮ ನಡೆಸುವುದು ಕಷ್ಟಕರ. ಮಕ್ಕಳು ಉತ್ತಮ ಶಿಕ್ಷಣ ಪಡೆದಲ್ಲಿ ಸಂಸಾರದ ಅಭಿವೃದ್ಧಿಯಾಗುವುದು. ಶಿಕ್ಷಣವು ಎಲ್ಲರ ಮೂಲಭೂತ ಹಕ್ಕು ಆಗಿದ್ದು ಶಿಕ್ಷಣ ಪಡೆದ ಮಕ್ಕಳಿಂದ ಮುಂದೆ  ಸಮಾಜ ಉನ್ನತ ಮಟ್ಟಕ್ಕೇರಲು ಸಾಧ್ಯ ಶಿಕ್ಷಣ ಮತ್ತು ಸಮಾಜ ಕಲ್ಯಾಣ ವ್ಯಕ್ತಿತ್ವ ವಿಕಸನದ ಒಂದು  ಪ್ರಮುಖ ಅಂಗ ಎಂದರು. 

——

B. Dinesh Kulal

Mob.: 9821868674



Related posts

ಮಲಾಡ್ ಶ್ರೀ ಮಹಮ್ಮಾಯಿ  ದೇವಸ್ಥಾನದಲ್ಲಿ ಭಕ್ತಿ ಸಂಭ್ರಮದೊಂದಿಗೆ ದಸರಾ ಮಹೋತ್ಸವ ಸಂಪನ್ನ

Mumbai News Desk

ಮೊಗವೀರ ವ್ಯವಸ್ಥಾಪಕ ಮಂಡಳಿ, ಮೀರಾ – ಭಾಯಂದರ್ ಶಾಖೆಯ ಮಹಿಳಾ ವಿಭಾಗ, ಯುವ ವಿಭಾಗದ ಆಶ್ರಯದಲ್ಲಿ ಆಟಿಡೊಂಜಿ ಕೂಟ.

Mumbai News Desk

ಬಾಂಬೆ ಬಂಟ್ಸ್ ಅಸೋಸಿಯೇಶನ್‌ನ ಮಹಿಳಾ ವಿಭಾಗದಿಂದ ಭಜನೆ – ಕುಣಿತ ಭಜನ ಸ್ಪರ್ಧೆ

Mumbai News Desk

ಮಲಾಡ್ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿಯಿಂದ 15 ನೇ ವಾರ್ಷಿಕ ಸಾಮೂಹಿಕ ವರಮಹಾಲಕ್ಷ್ಮೀ ಪೂಜೆ, ಸಾಂಸ್ಕೃತಿಕ ವೈಭವ, ಯಕ್ಷಗಾನ, ಸನ್ಮಾನ, ಸಮಾರೋಪ ಸಮಾರಂಭ .

Mumbai News Desk

ಗೊರೆಗಾಂವ್ ಕರ್ನಾಟಕ ಸಂಘದ 66ನೇ ನಾಡಹಬ್ಬ ಹಾಗೂ ವಿಚಾರಗೋಷ್ಠಿ, ಸಮಾರೋಪ ಸಮಾರಂಭ

Mumbai News Desk

ಶ್ರೀ ಸಾಯಿನಾಥ ಮಿತ್ರ ಮಂಡಳಿ ಡೊಂಬಿವಲಿ 19 ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ.

Mumbai News Desk