September 6, 2026
Mumbai News Kannada
ಸುದ್ದಿ

ಖ್ಯಾತ ಯಕ್ಷಗಾನ ಹಾಸ್ಯ ಕಲಾವಿದ ಮುಖ್ಯಪ್ರಾಣ ಕಿನ್ನಿಗೋಳಿ ನಿಧನ





ತೆಂಕು ಹಾಗೂ ಬಡಗು ತಿಟ್ಟಿನ ಯಕ್ಷಗಾನ ಹಾಸ್ಯ ಕಲಾವಿದ ಮುಖ್ಯಪ್ರಾಣ ಕಿನ್ನಿಗೋಳಿ (ಶೆಟ್ಟಿಗಾರ್) ಶನಿವಾರ ರಾತ್ರಿ (ಜೂ. 21) ರಂದು ನಿಧನರಾಗಿದ್ದಾರೆ .84 ವರ್ಷದ ಅವರು ವಯೋಸಹಜ ಅನಾರೋಗ್ಯದಿಂದ ಬಳಳುತ್ತಿದ್ದರು.

ತೆಂಕು ಹಾಗೂ ಬಡಗು ಎರಡೂ ತಿಟ್ಟಿನ ಪ್ರಸಿದ್ಧ ಯಕ್ಷಗಾನ ಮೇಳಗಳಲ್ಲಿ ಪ್ರಧಾನ ಕಲಾವಿದರಾಗಿ ಐವತ್ತೈದು ವರ್ಷಗಳಿಂದ ಸೇವೆ ಸಲ್ಲಿಸಿದ ಕಿನ್ನಿಗೋಳಿ ಮುಖ್ಯಪ್ರಾಣ ಶೆಟ್ಟಿಗಾರ್ ಅವರು ಓದಿದ್ದು ಐದನೆಯ ತರಗತಿಯವರೆಗೆ ಮಾತ್ರ. ತೆಂಕು ತಿಟ್ಟಿನ ಹೆಸರಾಂತ ಹಾಸ್ಯಗಾರ ಮಿಜಾರು ಅಣ್ಣಪ್ಪನವರ ಮಾರ್ಗದರ್ಶನದಲ್ಲಿ ಪಾತ್ರಾಭಿನಯ ಪಡೆದುಕೊಂಡ ಮುಖ್ಯಪ್ರಾಣ ಕಿನ್ನಿಗೋಳಿ ಅವರು ಮೊದಲಿಗೆ ಕಲಾವಿದರಾಗಿ ಕಟೀಲು ದುರ್ಗಾಪರಮೇಶ್ವರಿ ಕೃಪಾಪೋಷಿತ ದಶಾವತಾರ ಯಕ್ಷಗಾನ ಮೇಳದಲ್ಲಿ ಸೇವೆ ಆರಂಭಿಸಿದರು. ನಂತರ ಇರಾ ಸೋಮನಾಥೇಶ್ವರ, ಸಾಲಿಗ್ರಾಮ, ಕದ್ರಿ ಮೇಳಗಳಲ್ಲಿ ಪಾತ್ರ ನಿರ್ವಹಣೆ ಮಾಡಿದ ಕಿನ್ನಿಗೋಳಿ ಅವರು ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯೂ ಸೇರಿದಂತೆ ಹಲವು ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ.
ಕಿನ್ನಿಗೋಳಿಯ ಶಿಮಂತೂರು ಉದಯಗಿರಿಯ ಅವರ ನಿವಾಸದಲ್ಲಿ ಬೆಳಿಗ್ಗೆ 10 ರಿಂದ 12 ಗಂಟೆ ತನಕ ಮೃತರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.



Related posts

ಮಂಗಳೂರು ವಿವಿ ಘಟಿಕೋತ್ಸವ : ರೋಹನ್ ಮೊಂತೇರೋ, ಕನ್ಯಾನ ಸದಾಶಿವ ಶೆಟ್ಟಿ, ಎಂ. ಎನ್ ರಾಜೇಂದ್ರಕುಮಾರ್ ಗೆ ಗೌರವ ಡಾಕ್ಟರೇಟ್

Mumbai News Desk

ಡಾ. ಜಿ. ಪಿ. ಕುಸುಮ ಅವರಿಗೆ ಮಾತ್ರ ವಿಯೋಗ

Mumbai News Desk

ಯೋಗ  ಶಿಸ್ತುಬದ್ಧ ಜೀವನ ನಡೆಸಲು ಸಹಕಾರಿಯಾಗಿದೆ: ಗುತ್ತಿನಾರ್ ರವೀಂದ್ರ ಶೆಟ್ಟಿ

Mumbai News Desk

ಅಯೋಧ್ಯೆ ರಾಮಮಂದಿರ ಟ್ರಸ್ಟ್‌ನಲ್ಲಿ ಭಾರಿ ಬದಲಾವಣೆ: ಚಂಪತ್ ರಾಯ್, ಅನಿಲ್ ಮಿಶ್ರಾ ರಾಜೀನಾಮೆ ಅಂಗೀಕಾರ; 3,264 ಕೋಟಿ ರೂ. ದೇಣಿಗೆಯ ಪಾರದರ್ಶಕ ವಿವರ ಬಿಡುಗಡೆ

Mumbai News Desk

ಉಡುಪಿ: ಕಂಬಳ ಮೈದಾನ ವಿವಾದ; 80 ಬಡಗಬೆಟ್ಟು ಗ್ರಾಮದಲ್ಲಿ ನಿಷೇಧಾಜ್ಞೆ ಜಾರಿ

Mumbai News Desk

‘ಮಿಸ್ ಟೀನ್ ಗ್ಯಾಲಕ್ಟಿಕ್ ಯೂನಿವರ್ಸ್ ಇಂಡಿಯಾ 2026’ ದಕ್ಷಿಣ ಭಾರತದ ವಿಜೇತರ ಪಟ್ಟ ಅಲಂಕರಿಸಿದ ಪೂರ್ವಿ ಏಕನಾಥ ಕುಲಾಲ್

Mumbai News Desk