September 6, 2026
Mumbai News Kannada
ತುಳುನಾಡು

ಮುಲ್ಕಿ ಸುರಭಿ ಎಲೆಕ್ಟ್ರಾನಿಕ್ಸ್ 153 ವಿದ್ಯಾರ್ಥಿಗಳಿಗೆ ಶಾಲಾ ಶುಲ್ಕ, ಸಮವಸ್ತ್ರ ಹೊಲಿಗೆಯ ಮೊತ್ತ ವಿತರಣೆ





ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ : ಡಾ| ಪುನರೂರು


ಮೂಲ್ಕಿ ಸಮಾಜ ಸೇವೆಯ ಜತೆಗೆ ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡುವ ಕೆಲಸ ನಡೆದರೆ ಒಂದು ಕುಟುಂಬದ ಆಂತರಿಕ ಶಕ್ತಿ ಬದಲಾಗುವ ಮೂಲಕ ದೇಶವೇ ಅಭಿವೃದ್ಧಿ ಹೊಂದುವುದು. ಒಂದು ಮನೆಯ ಮೂಲಕ ನಡೆಯುತ್ತದೆ. ಸಮಾಜದಿಂದ ಪಡೆದುದನ್ನು ಮತ್ತೆ ಸಮಾಜಕ್ಕೆ ಕೊಡುವ ಪ್ರಯತ್ನ ಎಲ್ಲ ಸಂಸ್ಥೆಗಳ ಮೂಲಕ ನಡೆಯಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಕರ್ಮಯೋಗಿ ಡಾ | ಹರಿಕೃಷ್ಣ ಪುನರೂರು ಹೇಳಿದರು.
ಅವರು ಮೂಲ್ಕಿಯ ಸುರಭಿ ಇಲೆಕ್ಟ್ರಾನಿಕ್ಸ್‌ ಆ್ಯಂಡ್ ಫರ್ನಿಚರ್ ಸಂಸ್ಥೆಯ ಮೂಲಕ ಮೂಲ್ಕಿ ಹಾಗೂ ಹೆಜಮಾಡಿ ಪರಿಸರದ ವಿವಿಧ ಕನ್ನಡ ಮಾಧ್ಯಮ ಶಾಲೆಗಳ 153 ವಿದ್ಯಾರ್ಥಿಗಳಿಗೆ ಅವರ ಶಾಲಾ ಶುಲ್ಕ ಮತ್ತು ಅವರ ಸಮವಸ್ತ್ರ ಹೊಲಿಗೆಯ ಮೊತ್ತವನ್ನು ವಿತರಿಸುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.


ವಿದ್ಯಾರ್ಥಿಗಳು ಮೊಬೈಲ್ ಮೂಲಕ ಆಗಬಹುದಾದ ಆವಾಂತರಗಳನ್ನು ಮನದಲ್ಲಿಟ್ಟುಕೊಂಡು ಮಿತವಾಗಿ ಬಳಕೆ ಮಾಡುವುದು ಕಲಿಯಬೇಕು ಹಾಗೂ ಶಿಕ್ಷಣದ ಸೇವೆಗೆ ಮುಂದಾಗುವ ಕಾರ್ಯಕ್ರಮಗಳಿಗೆ ದೇವರ ಆಶೀರ್ವಾದ ಸದಾ ಇದೆ ಎಂದು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ಮೂಲ್ಕಿ ಚರ್ಚ್‌ ಧರ್ಮಗುರು ಧಾ | ಅಂತೋನಿ ಶೆರಾ
ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಮಾಲಕ ಜಾನ್ ಕಾಡ್ರಸ್ ಅವರು ಪ್ರಾಸ್ತಾವಿಸಿ ವಿದ್ಯಾರ್ಥಿಗಳು ಆರ್ಥಿಕ ಕಷ್ಟದಿಂದ ಶಿಕ್ಷಣ ಮೊಟಕುಗೊಳಿದಂತೆ ನಮ್ಮ ಕಿಂಚಿತ್ ಸೇವೆ ಎಂದು ಹೇಳಿದರು.
ಮೂಲ್ಕಿ ಪೊಲೀಸ್ ನಿರೀಕ್ಷಕ ಮಂಜುನಾಥ್ ಬಿ.ಎಸ್. ನ್ಯಾಯವಾದಿ, ನಾಯವಾದಿ ಹಂಝತ್ ಹೆಜಮಾಡಿ, ಜ್ಯೋತಿಷಿ ವಾದಿರಾಜ ಉಪಾಧ್ಯಾಯ, ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಜಯಲಕ್ಷ್ಮಿ ನಾಯಕ್‌ ಮಾತನಾಡಿದರು. ರೋಶನ್ ಪುರ್ಟಾಡೋ ಸ್ವಾಗತಿಸಿ ನಿರೂಪಿಸಿದರು. ಸುಧಾಕರ್ ಹೆಜಮಾಡಿ ವಂದಿಸಿದರು.



Related posts

ತುಳು ರಂಗಭೂಮಿಯಲ್ಲಿ ಐತಿಹಾಸಿಕ ಮೈಲಿಗಲ್ಲು:ಶ್ರೀಮತಿ ಲಾವಣ್ಯ ವಿಶ್ವಾಸ್ ದಾಸ್ ನಿರ್ದೇಶನದ “ಜೋಡು ಜೀಟಿಗೆ “ 100ನೇ ಪ್ರದರ್ಶನ – 100 ಕಲಾವಿದರಿರುವ ಏಕೈಕ ತಂಡದ ಅಪೂರ್ವ ಸಾಧನೆ

Mumbai News Desk

ಮಂಗಳೂರಿನಲ್ಲಿ ಬಿ. ಸಂಜೀವ ಕೆ.ಬಿ. ಅವರ “ತೀಯಾ ಕುಲತಿಲಕ , ಕುಲರತ್ನ, ಮಹಾದಾನಿ ರೋಹಿದಾಸ್ ಎಸ್. ಬಂಗೇರ’ ಹಾಗೂ ‘ಶ್ರೀ ಗುರು ಚರಣಾಮೃತ’ ಕೃತಿಗಳ ಬಿಡುಗಡೆ

Mumbai News Desk

  ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾ ಗಣಪತಿ ದೇವಸ್ಥಾನದ ಬ್ರಹ್ಮಕಲಶೋತ್ಸವ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ  ಹೊರೆ ಕಾಣಿಕೆ   ಸಮರ್ಪಣೆ.

Mumbai News Desk

ಮಧೂರು ಶ್ರೀ ಮದನಂತೇಶ್ವರ ದೇಗುಲ; ಬ್ರಹ್ಮಕಲಶೋತ್ಸವ, ಮೂಡಪ್ಪ ಸೇವೆ

Mumbai News Desk

ಕಾಪು ನವದುರ್ಗಾ ಲೇಖನ ಯಜ್ಞ ಸಮಿತಿ ಉದ್ಘಾಟನಾ ಕಾರ್ಯಕ್ರಮದ ತುಣುಕುಗಳು.

Mumbai News Desk

ಮೂಲ್ಕಿ : ಹರಿಶ್ಚಂದ್ರ ಸಾಲ್ಯಾನ್ ಅವರ 23ನೇ ಕೃತಿ ‘ನುಡಿಮುತ್ತು’ ಬಿಡುಗಡೆ ಕಾರ್ಯಕ್ರಮ

Mumbai News Desk