September 6, 2026
Mumbai News Kannada
ಮಹಾರಾಷ್ಟ್ರ

ಶ್ರೀ ರಾಮಚಂದ್ರಾಪುರ ಮಠದ ಭಾರತ ಮಂಡಲ, ಕೊಲಾಡಿನ ಅಮೃತಧಾರಾ ಗೋಶಾಲೆಯ ಪರಿಸರದಲ್ಲಿ ವನಮಹೋತ್ಸವ





ಶ್ರೀ ರಾಮಚಂದ್ರಾಪುರ ಮಠದ ಭಾರತ ಮಂಡಲ – ಮುಂಬಯಿ ವಲಯದ ರಾಯಗಡ ಜಿಲ್ಲೆಯ ಕೊಲಾಡಿನಲ್ಲಿರುವ ಅಮೃತಧಾರಾ ಗೋಶಾಲೆಯ ಪರಿಸರದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ವನಮಹೋತ್ಸವವನ್ನು ದಿನಾಂಕ 20/07/2025, ರವಿವಾರದಂದು ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಡೊ೦ಬಿವಲಿ ವಲಯದ ಸದಸ್ಯರು, ಮುಂಬಯಿ ವಲಯದ ಅಧ್ಯಕ್ಷರು  ಈಶ್ವರಿ ಪ್ರಕಾಶ ಭಟ್ ಹಾಗೂ ಉಪಾಧ್ಯಕ್ಷರು  ರಮಣ ಭಟ್ಟ್ ಮತ್ತು ಮುಂಬಯಿ – ಡೊಂಬಿವಲಿ ವಲಯಗಳ ಸಮಿತಿಯ ಹಲವಾರು ಸದಸ್ಯರು ಮತ್ತು ಕೊಲಾಡ ಅರಣ್ಯ ವಿಭಾಗದ ಅಧಿಕಾರಿಗಳು ಪಾಲ್ಗೊಂಡು ಬಿಲ್ವ, ಶಮೀ, ಮಾವು, ನೆಲ್ಲಿ ಮುಂತಾದ ಅನೇಕ ಜಾತಿಯ ಸಸ್ಯಗಳನ್ನು  ಅಮೃತಧಾರಾ ಗೋಶಾಲೆಯ ಪರಿಸರದಲ್ಲಿ ನೆಡುವ ಮೂಲಕ ವನಮಹೋತ್ಸವವನ್ನು ಬಹಳ ಉತ್ಸಾಹದಿಂದ ಆಚರಿಸಿದರು. 


 ಕೃಷ್ಣ ಭಟ್ ಗುಡ್ಡೇಬಾಳ ಹಾಗೂ ಪರಿವಾರದವರು ಈ ಕಾರ್ಯಕ್ರಮದ ವ್ಯವಸ್ಥೆಯನ್ನು ಚೆನ್ನಾಗಿ ನಿರ್ವಹಿಸಿದರು. ಮುಂಬಯಿಯ ಎಲ್ಲ ಹವ್ಯಕ ಬಾಂಧವರ ಕೂಡುವಿಕೆಯಲ್ಲಿ ಈ ಪರಿಸರ ಬೆಳೆಸಿ ಉಳಿಸುವ ಕಾರ್ಯಕ್ರಮ ಈ ವರ್ಷ ಶ್ರೀಸಂಸ್ಥಾನದವರ ಐವತ್ತನೇ ವರ್ಧಂತಿಯಾಗಿರುವುದರಿಂದ ವಿಶೇಷವಾಗಿ ಬಹಳ ಸಂತೋಷದಿಂದ ನೆರವೇರಿತು.

B. Dinesh Kulal

Mob.: 9821868674

B. Dinesh Kulal

Mob.: 9821868674



Related posts

ಮುಂಬೈನಲ್ಲಿ ಟೋಲ್ ಇಲ್ಲ; ಮಹಾರಾಷ್ಟ್ರ ಸರ್ಕಾರದಿಂದ ಘೋಷಣೆ; ಲಕ್ಷಾಂತರ ವಾಹನ ಸವಾರರಿಗೆ ಅನುಕೂಲ

Mumbai News Desk

ಶ್ರೀ ದುರ್ಗಾ ಕಾಳಿ ಮಂದಿರದಲ್ಲಿ ನವರಾತ್ರಿ ಉತ್ಸವ.

Chandrahas

ಮಹಾರಾಷ್ಟ್ರ : ವಿರಾರ್ ನಲ್ಲಿ ಕಟ್ಟಡ ಕುಸಿದು 5 ಸಾವು, 9 ಜನರಿಗೆ ಗಾಯ; ಬಿಲ್ಡರ್ ಬಂಧನ

Mumbai News Desk

ವಸಾಯಿ ತಾಲೂಕ ಮೊಗವೀರ ಸಂಘದ ನೂತನ ಅಧ್ಯಕ್ಷರಾಗಿ ಯಶೋಧರ ವಿ ಕೋಟ್ಯಾನ್ ಕಾಪು ಆಯ್ಕೆ.

Mumbai News Desk

ಮಹಾರಾಷ್ಟ್ರ ಮಂಡಳಿಯ ಎಚ್ಎಸ್ ಸಿ(HSC), ಎಸ್ ಎಸ್ ಸಿ (SSC),2026ರ ಪರೀಕ್ಷೆಯ ವೇಳಾ ಪಟ್ಟಿ ಬಿಡುಗಡೆ

Mumbai News Desk

ಮಹಾರಾಷ್ಟ್ರ : ಸುನೇತ್ರಾ ಪವಾರ್ ಇಂದು ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ

Mumbai News Desk