
ಬಿಲ್ಲವರ ಅಸೋಸಿಯೇಷನ್ ಮುಂಬೈ ಸಂಚಾಲಿತ, ಶ್ರೀ ಗುರು ನಾರಾಯಣ ಯಕ್ಷಗಾನ ಮಂಡಳಿಯ ಭಾಗವತರಾದ ಗಂಗಾಧರ್ ಸುವರ್ಣ ಮಾಂಟ್ರಾಡಿ ಕಳೆದ 25 ವರ್ಷಗಳಿಂದ ನಿರಂತರವಾಗಿ ಕಲಾ ಸೇವೆಯಲ್ಲಿ ತೊಡಗಿದ್ದಾರೆ. ಇವರ 25 ವರ್ಷಗಳ ಸಾರ್ಥಕ ಸೇವೆಗಾಗಿ 25ನೇ ವರ್ಷದ ಯಕ್ಷ ಸಂಭ್ರಮ ಆಗಸ್ಟ್ 2ರ, ಶನಿವಾರ ಮಧ್ಯಾಹ್ನ 2.30.ಕ್ಕೆ ಸಾಂತಾಕ್ರೂಜ್ ಪೂರ್ವ ಬಿಲ್ಲವ ಭವನದಲ್ಲಿ ಜರಗಲಿದೆ.




ಮುಂಬೈಯ ಸಂಘ-ಸಂಸ್ಥೆಯ ಪದಾಧಿಕಾರಿಗಳು, ಧಾರ್ಮಿಕ ಕ್ಷೇತ್ರದ ಮುಖಂಡರು, ಉದ್ಯಮಿಗಳು, ಕಲಾ ಪೋಷಕರು ಸಭಾ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.
ಈ ಸಂದರ್ಭದಲ್ಲಿ ಸಾತಿಂಜ ಜನಾರ್ಧನ ಭಟ್ ಅವರ ಶುಭ ಆಶೀರ್ವಾದದಿಂದ, ಶ್ರೀಮತಿ ವಿನೋದಾ ಪೂಜಾರ್ತಿ ಮತ್ತು ಮಕ್ಕಳ ಪ್ರಯೋಜಕತ್ವದಲ್ಲಿ ‘ಶ್ರೀದೇವಿ ಮಹಾತ್ಮೆ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಯಕ್ಷಗಾನ ಸವ್ಯ ಚಾಚಿ ಗುರುಗಳಾದ ದಿ. ಬೊಟ್ಟಿಕೆರೆ ಪುರುಷೋತ್ತಮ ಪೂಂಜ ವೇದಿಕೆಯಲ್ಲಿ ನಡೆಯಲಿರುವ ಯಕ್ಷಗಾನದಲ್ಲಿ ಗುರುನಾರಾಯಣ ಯಕ್ಷಗಾನ ಮಂಡಳಿಯ ಮತ್ತು ಅತಿಥಿ ಕಲಾವಿದರು ಪಾಲ್ಗೊಳ್ಳರಿರುವರು.

ಕಲಾಭಿಮಾನಿಗಳು, ಕಲಾ ಪೋಷಕರು ತುಂಬು ಹೃದಯದಿಂದ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಸಹಕರಿಸುವಂತೆ, ಸಂಯೋಜಕರಾದ ಗಂಗಾಧರ್ ಶಿವಣ್ಣ ಮಂಟ್ರಾಡಿ ವಿನಂತಿಸಿದ್ದಾರೆ.




