30.9 C
Mumbai
June 8, 2026
Mumbai News Kannada
ಪ್ರಕಟಣೆ

ಆಗಸ್ಟ್ 2 ಥಾಣೆಯಲ್ಲಿ : ಶ್ರೀ ಅಯ್ಯಪ್ಪ ಯಕ್ಷಕಲಾ ಪ್ರತಿಷ್ಠಾನ ಮುಂಬೈ ಮತ್ತು ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ನಡೂರು, ಮಂದಾರ್ತಿ ಇದರ ಜಂಟಿ ಆಯೋಜನೆಯಲ್ಲಿ “ರಾಮ ದರ್ಶನ- ಗದಾಯುದ್ಧ” ಯಕ್ಷಗಾನ ಪ್ರದರ್ಶನ.





ಶ್ರೀ ಅಯ್ಯಪ್ಪ ಯಕ್ಷಕಲಾ ಪ್ರತಿಷ್ಠಾನ ಮುಂಬೈ ಮತ್ತು ಶ್ರೀ ಮಹಾ ಗಣಪತಿ ಯಕ್ಷಗಾನ ಮಂಡಳಿ ನಡೂರು ಮಂದಾರ್ತಿ ಇದರ ಜಂಟಿ ಆಯೋಜನೆಯಲ್ಲಿ ಕಲಾಸಂಘಟಕ, ಉದ್ಯಮಿ ರಾಜು ಮೆಂಡನ್ ವಂಡ್ಸೆ ಅವರ ಮುಂದಾಳತ್ವದಲ್ಲಿ ಅಗಸ್ಟ್ 2, ಶನಿವಾರ ಮಧ್ಯಾಹ್ನ 3 ರಿಂದ ಮುಲುಂಡ್ ಪಶ್ಚಿಮ, ಚೆಕ್ ನಾಕ ಹತ್ತಿರದ ನವೋದಯ ಕನ್ನಡ ಸೇವಾ ಸಂಘದ ನವೋದಯ ಜೂನಿಯರ್ ಕಾಲೇಜ್ ಸಭಾಂಗಣದಲ್ಲಿ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ನಡೂರು, ಮಂದಾರ್ತಿ ಮೇಳದ ಮತ್ತು ಪ್ರತಿಷ್ಠಾನದ ಕಲಾವಿದರ ಕೂಡುವಿಕೆಯಲ್ಲಿ “ರಾಮ ದರ್ಶನ- ಗದಾಯುದ್ಧ” ಯಕ್ಷಗಾನ ಪ್ರದರ್ಶನಗೊಳ್ಳಲಿದೆ.
ರಾಜು ಮೆಂಡನ್ ವಂಡ್ಸೆ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಹರೇ ಕೃಷ್ಣ ಫೌಂಡೇಶನ್ ಟ್ರಸ್ಟ್ ನ ಕರುಣಾಕರ ಪುತ್ರನ್ ಉದ್ಘಾಟಿಸಲಿರುವರು. ಅಂತಾರಾಷ್ಟ್ರೀಯ ಖ್ಯಾತಿಯ ಪುರೋಹಿತ ಪ್ರವೀಣ್ ಜೆ ಭಟ್ ಆಶೀರ್ವಚನ ನೀಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮನಿಷಾ ಕ್ಯಾಟಾರಿಂಗ್ ಸರ್ವಿಸಸ್ ನ ನಾರಾಯಣ ಚಂದನ್, ಖ್ಯಾತ ಉದ್ಯಮಿ ನಿತಶ್ ಶೆಟ್ಟಿ, ಶ್ರೀ ಅಯ್ಯಪ್ಪ ಯಕ್ಷಕಲಾ ಪ್ರತಿಷ್ಠಾನ ಮುಂಬೈಯ ಅಧ್ಯಕ್ಷರು ರಾಜೇಂದ್ರ ಚಂದನ್, ಮನಸ್ವಿ ಕ್ಯಾಟಾರಿಂಗ್ ಸರ್ವಿಸಸ್ನ ಸುನಿಲ್ ಕುಂದರ್, ಶ್ರೀ ಶ್ರೀ ಪುಡ್ಸ್ ಬಾಂಧ್ರಾದ ಅಶೋಕ್ ಮರತೂರು, ಹೋಟೆಲ್ ಉಡುಪಿ ವಿಲೇಪಾರ್ಲೆ ಯ ಅರುಣ್ ಶೆಟ್ಟಿ, ರೇಲೀಸ್ ಹಾಸ್ಪಿಟಲಿಟಿ ಸರ್ವಿಸಸ್ನ ಮಹೇಂದ್ರ ಶೆಟ್ಟಿ, ಆಂಜನೇಯ ದೇವಸ್ಥಾನ ನಾಗೂರಿನ ಗೌರವ ಅಧ್ಯಕ್ಷ ಎನ್ ಡಿ ಚಂದನ್, ಗಾರ್ಮೆಂಟ್ ಡಿಸೈನರ್ ರಘುರಾಮ್ ಮೆಂಡನ್, ಪ್ರಧಾನ ಕ್ಯಾಟರಿಂಗ್ ಸರ್ವಿಸಸ್ ನ ಅಶೋಕ್ ಮೆಂಡನ್ ಉಪಸ್ಥಿತರಿರುವರು.
ಈ ಸಂದರ್ಭದಲ್ಲಿ ಯುವ ಭಾಗವತ ಗಣೇಶ್ ಆಚಾರ್ಯ ಬಿಲ್ಲಾಡಿ ಅವರನ್ನು ಅತಿಥಿ ಗಣ್ಯರು ಸನ್ಮಾನಿಸಲಿರುವರು.
ಯಕ್ಷಗಾನದ ಹಿಮ್ಮೆಳದಲ್ಲಿ ಭಾಗವತವರಾಗಿ ಗಣೇಶ್ ಆಚಾರ್ಯ ಬಿಲ್ಲಾಡಿ, ಮದ್ದಳೆಯಲ್ಲಿ ಭಾಸ್ಕರ್ ದೇವಾಡಿಗ, ಚೆಂಡೆಯಲ್ಲಿ ಕುಮಾರ್ ಅಮೀನ್, ಮುಮ್ಮೆಳದಲ್ಲಿ ನರಸಿಂಹ ಚಿಣ್ಣಾಣಿ ಹೊನ್ನಬೈಲು ದೇವಲ್ಕುಂದ ರಾಕೇಶ, ಪ್ರಮೋದ್ ಕುಮಾರ್,ರಂಜಿತ್ ಕುಮಾರ್, ಸುರೇಶ್ ಶೆಟ್ಟಿ ನಂದ್ರೊಳ್ಳಿ, ಮಹೇಂದ್ರ ಶೆಟ್ಟಿ ನಂದ್ರೊಳ್ಳಿ,ರಾಘವೇಂದ್ರ ಬಗ್ವಾಡಿ, ತನ್ವಿ ರಾಮ್, ಸೌಜನ್ಯ ಬಿಲ್ಲವ , ಸುಕುಮಾರ್ ಹೆಗ್ಡೆ ಮೊದಲದವರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ಮಧ್ಯದಲ್ಲಿ ಲಘು ಉಪಹಾರ ಮತ್ತು ಕೊನೆಯಲ್ಲಿ ಪ್ರೀತಿ ಭೋಜನದ ವ್ಯವಸ್ಥೆಯನ್ನು ಮಾಡಲಾಗಿದೆ.
ಯಕ್ಷಗಾನ ಪ್ರದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕಲಾ ರಸಿಕರು, ಯಕ್ಷಗಾನ ಪ್ರಿಯರು ಬಂದು ಸಹಕರಿಸುವಂತೆ ಶ್ರೀ ಅಯ್ಯಪ್ಪ ಯಕ್ಷಕಲಾ ಪ್ರತಿಷ್ಠಾನ ಮುಂಬೈ ಮತ್ತು ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ನಡೂರು ಮಂದಾರ್ತಿ , ಇದರ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಕಲಾವಿದರು ವಿನಂತಿಸಿದ್ದಾರೆ.



Related posts

ದಿ ಯಂಗ್ ಮೆನ್ಸ್ ಬೋವಿ ಅಸೋಷಿಯೇಶನ್, ಜ. 12 ರಂದು 88 ನೇ ವಾರ್ಷಿಕೋತ್ಸವ,

Mumbai News Desk

ತುಳು ಸಂಘ ಬೊರಿವಲಿ, ಡಿ. 8 ರಂದು ಸ್ನೇಹ ಮಿಲನ

Mumbai News Desk

ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಸಾವರ್ಕರ್ ನಗರ ಥಾಣೆ : ಆಗಸ್ಟ್ 10ರಂದು “ತುಳುನಾಡ ಬಲಿಯೇಂದ್ರ” ಯಕ್ಷಗಾನ ತಾಳಮದ್ದಳೆ

Mumbai News Desk

ಫೆ. 23; ಕರ್ನಾಟಕ ಸಂಘ ಪನ್ವೆಲ್ ಇದರ ವಾರ್ಷಿಕೋತ್ಸವ

Mumbai News Desk

ಎ. 13ರಂದು ಮಾಡೂರು ಶ್ರೀ ಪಾಡಾಂಗರ ಭಗವತಿ ಕ್ಷೇತ್ರದಲ್ಲಿ ಕುಮಾರ್ ಬಂಗೇರ ಮತ್ತು ಮನೆಯವರಿಂದ ಹರಕೆಯ ಕೋಲ

Mumbai News Desk

ಸೆ. 22 ರಿಂದ ಅ 2 ರ ವರೆಗೆ ಡೊಂಬಿವಲಿ ಶ್ರೀ ಜಗದಂಬಾ ಮಂದಿರದಲ್ಲಿ 11ನೇ ವರ್ಷದ ಶರನ್ನವರಾತ್ರಿ ಮಹೋತ್ಸವ

Mumbai News Desk