September 6, 2026
Mumbai News Kannada
ಪ್ರಕಟಣೆ

ಮೊಗವೀರ ಕನ್ನಡ ಮಾಸಿಕ, ಮುಂಬಯಿ – ಅಖಿಲ ಭಾರತ ಮಟ್ಟದಲ್ಲಿ ಕನ್ನಡ ಸಣ್ಣ ಕಥಾ ಸ್ಪರ್ಧೆ





ಮುಂಬೈಯ ಹಿರಿಯ ಸಾಮಾಜಿಕ ಸಂಘಟನೆ ಮೊಗವೀರ ವ್ಯವಸ್ಥಾಪಕ ಮಂಡಳಿಯ ಮುಖವಾಣಿ ಮೊಗವೀರ ಮಾಸಿಕವು 86ನೇ ವರ್ಷಕ್ಕೆ ಪಾದರ್ಪಣೆ ಮಾಡಿದ್ದು, ಈ ಸುಸಂದರ್ಭದಲ್ಲಿ ಭಾರತದಾದ್ಯಂತ ಇರುವ ಕನ್ನಡ ಬರಹಗಾರರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕನ್ನಡ ಸಣ್ಣ ಕಥಾ ಸ್ಪರ್ಧೆಯನ್ನು ಆಯೋಜಿಸಿದೆ.

ಬಹುಮಾನಗಳು:

  • ಪ್ರಥಮ ಬಹುಮಾನ: ರೂ. 10,000/-
  • ದ್ವಿತೀಯ ಬಹುಮಾನ: ರೂ. 7,000/-
  • ತೃತೀಯ ಬಹುಮಾನ: ರೂ. 5,000/-
  • ಹತ್ತು ಪ್ರೋತ್ಸಾಹಕ ಬಹುಮಾನಗಳನ್ನು ಸಹ ನೀಡಲಾಗುವುದು ಎಂದು ಪತ್ರಿಕೆಯ ಸಂಪಾದಕರಾದ ಅಶೋಕ್ ಸುವರ್ಣ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಭಾಗವಹಿಸಲು ನಿಯಮಗಳು:
1) ಕಥೆಗಳು ಸ್ವಂತ ರಚನೆ ಆಗಿರಬೇಕು, ಅನುವಾದಿತ ಕಥೆಗಳಿಗೆ ಅವಕಾಶವಿಲ್ಲ, ಒಬ್ಬರು ಒಂದೇ ಅಪ್ರಕಟಿತ ಕಥೆ ಕಳಿಸಬೇಕು.
2) ಉತ್ತಮ ಕಥಾ ವಸ್ತುವಿರಲಿ, ಭಾಷೆ, ಶೈಲಿ, ತಂತ್ರ ಇವುಗಳು ಶ್ರೇಷ್ಠ ಮಟ್ಟದಲ್ಲಿರಲಿ.
3) ಸಾಮಾಜಿಕ, ಆರ್ಥಿಕ, ರಾಜಕೀಯ, ಪತ್ತೆದಾರಿ, ಥ್ರಿಲ್ಲರ್,ಹಾರರ್, ಸೈನ್ಸ್ ಫಿಕ್ಷನ್ ಎಲ್ಲ ರೀತಿಯ ಸಭ್ಯ ಸಾಹಿತ್ಯಕ್ಕೂ ಅವಕಾಶವಿದೆ.
4) ಸ್ಪಷ್ಟವಾದ ಕೈ ಬರಹ, ಬೆರಳಚ್ಚು, ಕಂಪ್ಯೂಟರ್ ಮುದ್ರಿತ ಪ್ರತಿಗಳನ್ನು ಕಳಿಸಬಹುದು. ಇ-ಮೇಲ್ ಮೂಲಕ ನುಡಿ ತಂತ್ರಾಂಶದಲ್ಲಿ ಕಂಪೋಸ್ ಮಾಡಿರುವ ಫೈಲ್ಗಳನ್ನು ಕಳಿಸಬಹುದು.
5) ಹಸ್ತ ಪ್ರತಿ, ಮುದ್ರಿತ ಪ್ರತಿ, ಸಾಫ್ಟ್ ಕಾಪಿ ಜೊತೆಗೆ ಪ್ರತ್ಯೇಕ ಕಾಗದದಲ್ಲಿ ವಿಳಾಸ, ಮೊಬೈಲ್ ನಂಬರ್ ಬರೆದು ಫೋಟೋ ಅಂಟಿಸಿ ಪ್ರತಿಯೋಡನೆ ಲಗತಿಕರಿಸಬೇಕು. ಕಥೆ, ಪುಟಗಳಲ್ಲಿ ಲೇಖಕರ ಹೆಸರು ಇರಬಾರದು.
6) ಪಾಯಿಂಟ್ ಫಾಂಟ್ ಸೈಜಿನ ಮುದ್ರಿತ ಪ್ರತಿಯಲ್ಲಿ ಕನಿಷ್ಠ 8 ಪುಟಗಳಷ್ಟು ಹಾಗೂ ಗರಿಷ್ಠ 10 ಪುಟಗಳಷ್ಟು ಮೀರದಂತಿರಲಿ, ಮಿನಿ ಕಥೆಗಳು ಬೇಡ.
7) ವಿಜೇತರಿಗೆ ಎನ್‌ಇಎಫ್‌ಟಿ(NEFT) ಮೂಲಕ ಬಹುಮಾನ ಕಳಿಸಲಾಗುವುದು.
8) ಬಹುಮಾನಗಳಿಸಿದ ಹಾಗೂ ಮೆಚ್ಚುಗೆ ಪಡೆದ ಕೃತಿಗಳನ್ನು ಮೊಗವೀರದ ಮುಂದಿನ ಸಂಚಿಕೆಗಳಲ್ಲಿ ಪ್ರಕಟಿಸಲಾಗುವುದು.ಪ್ರಕಟಿತ ಕಥೆಗಳಿಗೆ ಮೊಗವೀರ ನಿಗದಿ ಪಡಿಸಿದ ಗೌರವ ಧನವನ್ನು ಕಳುಹಿಸಲಾಗುವುದು. 9) ಕ್ರತಿಗಳ ಪ್ರತಿಗಳನ್ನು ಹಿಂದೆ ಕಳಿಸಲಾಗುವುದಿಲ್ಲ
10) ತೀರ್ಪುಗಾರರ ನಿರ್ಣಯವೇ ಅಂತಿಮ ಯಾವುದೇ ಪತ್ರ ವ್ಯವಹಾರಕ್ಕೆ ಅವಕಾಶವಿಲ್ಲ.
ಬರಹಗಳನ್ನು ಸ್ವೀಕರಿಸಲು ಕೊನೆಯ ದಿನಾಂಕ 30-10-25.
ಕೃತಿಗಳನ್ನು ಕಳುಹಿಸಬೇಕಾದ ವಿಳಾಸ

  • The Editor, Mogavera Kannada Monthly Magazine, Mogaveera Bhavana, MVM Educational Campus Marg, Off: Veera Desai Road, Andheri West, Mumbai – 400 058(Email :mvmmogaveeramagazine1939@gmail.com


Related posts

ನ.18 ರಂದು ವಿಕ್ರೋಲಿ ಯಲ್ಲಿ “ಪುದರ್ ದಿದಾಂಡ್!!!!”

Mumbai News Desk

ಜೂಲೈ 21 ರಂದು ಬೊಯಿಸರ್ ನ  ಶ್ರೀ ಸ್ವಾಮಿ ನಿತ್ಯಾನಂದ ಮಂದಿರದಲ್ಲಿ  ಗುರುಪೂರ್ಣಿಮೆ ಆಚರಣೆ 

Mumbai News Desk

ಶ್ರೀ ಗಜಾನನ ಬಿಲ್ಲವರ ಸೇವಾ ಸಂಘ ಪಡುತೋನ್ಸೆ, ಹೂಡೆ : ಎ. 18,19ರಂದು ವಾರ್ಷಿಕ ಭಜನಾ ಮಂಗಲೋತ್ಸವ ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ

Mumbai News Desk

ಬಂಟರ ಸಂಘ ಮುಂಬಯಿ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿ; ಜೂ. 8 ರಂದು ಶಿಕ್ಷಣ ಹಾಗೂ ಸಮಾಜ ಕಲ್ಯಾಣ ಸಮಿತಿಯಿಂದ ವಿದ್ಯಾರ್ಥಿವೇತನ,  ವಿಧವೆಯರಿಗೆ ಮತ್ತು ವಿಕಲ ಚೇತನರಿಗೆ ಧನ ಸಹಾಯ 

Mumbai News Desk

ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು : ಜುಲೈ.20ಕ್ಕೆ ಆಟಿಡೊಂಜಿ ದಿನ

Mumbai News Desk

ಡಿ.18 ರಂದು ಬಂಟರ ಸಂಘ ಕುರ್ಲಾ ದಲ್ಲಿ ಸಮಾಜರತ್ನ ಲೀಲಾಧರ ಶೆಟ್ಟಿ, ಕಾಪು ಅವರ ಶ್ರದ್ಧಾಂಜಲಿ ಸಭೆ

Mumbai News Desk