September 6, 2026
Mumbai News Kannada
ತುಳುನಾಡು

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ





ಕಾಪು: ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಇದೇ ಬರುವ ಸೆಪ್ಟೆಂಬರ್ 22ರಿಂದ ಅಕ್ಟೋಬರ್ 2ರವರೆಗೆ 11 ದಿನಗಳ ಭವ್ಯ ಶರನ್ನವರಾತ್ರಿ ಮಹೋತ್ಸವ ನಡೆಯಲಿದ್ದು, ಈ ಉತ್ಸವದ ಪೂರ್ಣ ವಿವರಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಮಾಹಿತಿಯಿರುವ ಆಮಂತ್ರಣ ಪತ್ರಿಕೆಯನ್ನು ಸೆಪ್ಟೆಂಬರ್ 2ರಂದು ಮಂಗಳವಾರ, ಕಾಲಾವಧಿ ಹೂವಿನ ಪೂಜೆಯ ಸಂದರ್ಭದಲ್ಲಿ, ಉಚ್ಚಂಗಿ ಸಹಿತ ಶ್ರೀ ಮಾರಿಯಮ್ಮನ ಆರಾಧನೆಯ ಬಳಿಕ ಭಕ್ತರ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಯಿತು.

ಈ ಬಾರಿಯ ನವರಾತ್ರಿ ಅತ್ಯಂತ ವಿಶೇಷವಾಗಿದ್ದು, ನೂತನವಾಗಿ ನಿರ್ಮಿತವಾದ ಹೊಸ ಗುಡಿಯಲ್ಲಿ ಅಮ್ಮನಿಗೆ ನಡೆಯುವ ಪ್ರಥಮ ನವರಾತ್ರಿ ಎಂಬ ಮಹತ್ವವನ್ನು ಹೊಂದಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅಮ್ಮನ ಅನುಗ್ರಹವನ್ನು ಪಡೆಯಬೇಕೆಂಬುದು ವ್ಯವಸ್ಥಾಪನಾ ಸಮಿತಿ ಮತ್ತು ಅಭಿವೃದ್ಧಿ ಸಮಿತಿಯ ಹಾರೈಕೆಯಾಗಿದೆ.

ನವರಾತ್ರಿಯ ಯಶಸ್ವಿ ನಿರ್ವಹಣೆಗೆ ಈಗಾಗಲೇ ವಿಶೇಷ ಸಭೆಯನ್ನು ನಡೆಸಲಾಗಿದ್ದು, ಭಕ್ತಾದಿಗಳಿಗೆ ಯಾವುದೇ ರೀತಿಯ ಅಸೌಕರ್ಯವಾಗದಂತೆ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸುವುದು ಸಮಿತಿಯ ಪ್ರಧಾನ ಜವಾಬ್ದಾರಿಯಾಗಿದೆ. ಪ್ರತಿದಿನ ಘಂಟಾನಾದ ಸೇವೆ ಮಾಡುವ ವ್ಯವಸ್ಥೆಯನ್ನು ಭಕ್ತರಿಗೆ ಕಲ್ಪಿಸಲಾಗಿದ್ದು, ದುರ್ಗಾ ನಮಸ್ಕಾರ, ಕಲ್ಪೋಕ್ತ ಪೂಜೆ ಹಾಗೂ ಇತರ ಸೇವೆಗಳಿಗೂ ಅವಕಾಶ ಕಲ್ಪಿಸಲಾಗಿದೆ.

ವಿಶೇಷವಾಗಿ ಸೆಪ್ಟೆಂಬರ್ 30ರ ಮಂಗಳವಾರ ಮಹಾ ಚಂಡಿಕಾಯಾಗ, ಕೆಂಡಸೇವೆ ಹಾಗೂ ಮಹಾ ಅನ್ನಪ್ರಸಾದ ನಡೆಯಲಿದೆ. ಚಂಡಿಕಾಯಾಗದ ಸಂಕಲ್ಪಕ್ಕೆ ₹5000 ಪಾವತಿಸಿದ ಭಕ್ತರಿಗೆ ವಿಶೇಷ ಪ್ರಸಾದ ನೀಡಲಾಗುವುದು. ಸಂಕಲ್ಪದಲ್ಲಿ ಭಾಗಿಯಾಗುವವರು ತಕ್ಷಣ ದೇವಳದ ಕಚೇರಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕೆಂದು ಸಮಿತಿ ಮನವಿ ಮಾಡಿದೆ.

ಈ ಕುರಿತು ಮಾಹಿತಿಯನ್ನು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ರವಿಕಿರಣ್, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ ಹಾಗೂ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ರಾಜರ್ಷಿ ಕೆ. ವಾಸುದೇವ ಶೆಟ್ಟಿ ಸಂಯುಕ್ತ ಪ್ರಕಟಣೆಯಲ್ಲಿ ನೀಡಿದರು.

ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭದಲ್ಲಿ ಪ್ರಧಾನ ಅರ್ಚಕರಾದ ಕಲ್ಯ ವೇದಮೂರ್ತಿ ಶ್ರೀನಿವಾಸ ತಂತ್ರಿ, ಅಭಿವೃದ್ಧಿ ಸಮಿತಿ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ, ಘಂಟಾನಾದ ಸೇವಾ ಸಮಿತಿ ಅಧ್ಯಕ್ಷ ಹಾಗೂ ಪ್ರಚಾರ ಸಮಿತಿ ಪ್ರಧಾನ ಸಂಚಾಲಕ ಯೋಗೀಶ್ ವಿ. ಶೆಟ್ಟಿ ಬಾಲಾಜಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಮಾಧವ ಪಾಲನ್, ಶೇಖರ ಸಾಲ್ಯಾನ್, ರವೀಂದ್ರ ಮಲ್ಲಾರ್, ಕಟ್ಟಡ ಸಮಿತಿಯ ಸಂಚಾಲಕ ಸುಧಾಕರ ಶೆಟ್ಟಿ ಮಕರ, ಶಿಲ್ಪಾ ಜಿ. ಸುವರ್ಣ ಹಾಗೂ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಹೊಸ ಗುಡಿಯಲ್ಲಿ ನಡೆಯಲಿರುವ ಈ ಶರನ್ನವರಾತ್ರಿ ಮಹೋತ್ಸವವು ಭಕ್ತರ ಜೀವನದಲ್ಲಿ ಆಧ್ಯಾತ್ಮಿಕ ಬೆಳಕು ತುಂಬುವುದರ ಜೊತೆಗೆ, ದೇವಳದ ಇತಿಹಾಸದಲ್ಲಿ ಅಚ್ಚಳಿಯದ ಪುಟವಾಗಲಿದೆ ಎಂದು ಭಕ್ತಾದಿಗಳ ಆಶಯ ವ್ಯಕ್ತವಾಗಿದೆ.



Related posts

ಕೊಂಡೆವೂರು ಮಠದಲ್ಲಿ ಪ್ರತಿಷ್ಠಾವರ್ಧಂತಿ, ನವಚಂಡಿಕಾ ಯಾಗ . ಧಾರ್ಮಿಕ ಸಭೆ.

Mumbai News Desk

ಯುವಕ ಸಂಘ ತೋಕೂರು,ಮಹಿಳಾ ಮಂಡಲ ತೋಕೂರು, ಹಾಗೂ ಪತಂಜಲಿ ಯೋಗ ಸಮಿತಿ ದಕ್ಷಿಣ ಕನ್ನಡ ಇದರ ಜಂಟಿ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

Mumbai News Desk

ಉಡುಪಿ: ಜಿಲ್ಲಾಡಳಿತದ ನಿಷೇಧಾಜ್ಞೆ ನಡುವೆಯೇ ಕಂಬಳ ಕ್ರೀಡಾಂಗಣಕ್ಕೆ ಗುದ್ದಲಿ ಪೂಜೆ

Mumbai News Desk

ಇತಿಹಾಸ ಪ್ರಸಿದ್ಧ ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನಕ್ಕೆ ನೂತನ ಆಡಳಿತ ಮುಕ್ತೇಸರರಾಗಿ ಚಂದ್ರಶೇಖರ ಬೆಳ್ಚಡ ಆಯ್ಕೆ

Mumbai News Desk

ಕಾಪು ಲೈಟ್ ಹೌಸ್ ರೆಸಾರ್ಟ್ ನಲ್ಲಿ ಯುವವಾಹಿನಿ (ರಿ.) ಕಾಪು ಘಟಕದಿಂದ 80ನೇ ಸ್ವಾತಂತ್ರ್ಯ ದಿನಾಚರಣೆ

Mumbai News Desk

ಸಂಸ್ಕೃತಿಯ ಬೇರು, ಕೃಷಿಯ ಚಿಗುರು: ಉಡುಪಿಯಲ್ಲಿ ಕೃಷಿಯತ್ತ ಯುವಜನರನ್ನು ಆಕರ್ಷಿಸಲು ನಡೆದ ‘ಕೆಸರುದ ಗಮ್ಮತ್ತು’ , ಕೃಷಿ ಕ್ರೀಡಾಕೂಟ ಯಶಸ್ವಿ ಸಂಪನ್ನ

Mumbai News Desk