
ಮುಂಬಯಿ: ಮುಂಬಯಿಯ ಪ್ರಸಿದ್ಧ ಸಾಂಸ್ಕೃತಿಕ ಸಂಸ್ಥೆಯಾದ ಕಲಾ ಪ್ರಕಾಶ್ ಪ್ರತಿಷ್ಠಾನ (ರಿ), ಇದರ ಸಂಸ್ಥಾಪಕರಾದ ಶ್ರೀ ಪ್ರಕಾಶ್ ಎಂ. ಶೆಟ್ಟಿ ಸುರತ್ಕಲ್ ಅವರ ನೇತೃತ್ವದಲ್ಲಿ, ಕಲಾ ಪ್ರೇಮಿಗಳಿಗಾಗಿ ಅದ್ಭುತ ಯಕ್ಷಗಾನ ಕಾರ್ಯಕ್ರಮವೊಂದನ್ನು ಆಯೋಜಿಸಿದೆ. ತವರೂರಿನ ನಾಮಂಕಿತ ಕಲಾವಿದರ ಸಂಯೋಜನೆಯಲ್ಲಿ ಇಂದು, (ಸೆಪ್ಟೆಂಬರ್ 08, ಸೋಮವಾರ. ಸಂಜೆ 3.30ಕ್ಕೆ ಸರಿಯಾಗಿ) ಸುಧರ್ಮ ಸಭಾಗೃಹ, ಶ್ರೀ ಅಯ್ಯಪ್ಪ ಮಂದಿರ, ಅಜ್ಜೆಪಾಡ, ಡೊಂಬಿವಲಿ ಪೂರ್ವ ಇಲ್ಲಿ ‘ವಾಲಿ ಮೋಕ್ಷ’ ಎಂಬ ಸುಪ್ರಸಿದ್ಧ ಪ್ರಸಂಗವು ಜರುಗಲಿದೆ. ಈ ಪ್ರದರ್ಶನವು ಕಲಾಭಿಮಾನಿಗಳಿಗೆ ಒಂದು ಹೊಸ ಅನುಭವ ನೀಡಲಿದೆ.
ಕಲಾವಿದರು:
ಭಾಗವತರು: ಮಹೇಶ್ ಕನ್ಯಾಡಿ,
ಮದ್ದಳೆಕಾರರು: ಮಧುಸೂದನ್ ಪಾಲನ್
ಚೆಂಡೆ: ಆಶಿಶ್ ಆರ್ ದೇವಾಡಿಗ
ಮುಮ್ಮೇಳ: ಜಬ್ಬಾರ್ ಸಮೋ ಸಂಪಾಜೆ, ಪವನ್ ಕಿರಣ್ ಕೆರೆ,ಗಣೇಶ್ ಶೆಟ್ಟಿ ಕನ್ನಡಿಕಟ್ಟೆ, ಸುರೇಶ್ ಶೆಟ್ಟಿ ನಂದ್ರೊಳ್ಳಿ, ಡಾ ಮಹೇಶ್ ಸಾಣೂರು,
ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಯಕ್ಷಗಾನ ಕಲೆಯ ಸೊಬಗನ್ನು ಸವಿಯಬೇಕೆಂದು ಕಲಾ ಪ್ರಕಾಶ್ ಪ್ರತಿಷ್ಠಾನದ ಸಂಸ್ಥಾಪಕರಾದ ಶ್ರೀ ಪ್ರಕಾಶ್ ಎಂ. ಶೆಟ್ಟಿ ಸುರತ್ಕಲ್ ಅವರು ಕೋರಿದ್ದಾರೆ.




