July 23, 2026
Mumbai News Kannada
ಪ್ರಕಟಣೆ

ಬಿಲ್ಲವರ ಅಸೋಸಿಯೇಷನ್ ಮುಲುಂಡ್ ಸ್ಥಳೀಯ ಕಚೇರಿ: ಸೆ.13 ರಂದು ಬ್ರಹ್ಮಶ್ರೀ ನಾರಾಯಣ ಗುರುಗಳ 171 ನೇ ಜಯಂತಿ ಆಚರಣೆ; ಶನೀಶ್ವರ ಮಹಾಪೂಜೆ.







ಮುಂಬಯಿ, ಸೆ.10. ಬಿಲ್ಲವರ ಅಸೋಸಿಯೇಷನ್ ಮುಲುಂಡ್ ಸ್ಥಳೀಯ ಕಚೇರಿಯ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 171 ನೇ ಜಯಂತಿ ಆಚರಣೆ ಹಾಗೂ ಶನೀಶ್ವರ ಗ್ರಂಥ ಪಾರಾಯಣ ಹಾಗೂ ಮಹಾಪೂಜೆಯು ಸೆ.13 ರಂದು ಶನಿವಾರ ಡಫೊಡಿಲ್ಸ್ ಕ್ಯಾಂಪಸ್, ಶಾರದಾ ನಿಲಯಂ, ಸಾಯಿನಾಥ್ ಟವರ್ ಎದುರುಗಡೆ, ನೀಲಂ ನಗರ್ ಫೇಸ್ ಟು, ಮುಲುಂಡ್ ಪೂರ್ವ ಇಲ್ಲಿ ಜರಗಲಿದೆ. ಅಂದು ಮಧ್ಯಾಹ್ನ 12 ಗಂಟೆಗೆ ದೀಪ ಪ್ರಜ್ವಲನೆ ತದನಂತರ 1 ತನಕ ಬ್ರಹ್ಮಶ್ರೀ ನಾರಾಯಣ ಗುರು ಪೂಜೆ, ಮಧ್ಯಾಹ್ನ 2 ರಿಂದ ಸಾಯಂಕಾಲ 6.30 ರ ತನಕ ಶ್ರೀ ಶನೀಶ್ವರ ಗ್ರಂಥ ಪಾರಾಯಣ ಹಾಗೂ ಮಹಾಪೂಜೆಯನ್ನು ಶ್ರೀ ವೆಸ್ಟರ್ನ್ ಇಂಡಿಯಾ ಶನಿಮಹಾತ್ಮ ಸೇವಾ ಸಮಿತಿ ಪೋರ್ಟ್ ಇವರು ಯಕ್ಷಗಾನ ತಾಳಮದ್ದಳೆ ರೂಪದಲ್ಲಿ ನೆರವೇರಿಸಲಿರುವರು . ಸಾಯಂಕಾಲ‌ 6 ರಿಂದ 6.30 ವರೆಗೆ ಭಜನೆ ತದನಂತರ ಧಾರ್ಮಿಕ ಸಭೆ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭದಲ್ಲಿ ಕೆ.ಸುರೇಶ್ ಕುಮಾರ್, ಪುಷ್ಪ ಬಂಗೇರ, ಕುಮುದಾ ಆರ್ ಪೂಜಾರಿ, ಜಯಕರ್ ಉಪ್ಪನ್ ಇವರನ್ನು ಸನ್ಮಾನಿಸಲಾಗುವುದು. ಹಾಗೂ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ವಿತರಿಸಲಾಗುವುದು. ಸಾಯಂಕಾಲ 7:30ರಿಂದ ಮಹಾಮಂಗಳಾರತಿ ತೀರ್ಥ ಪ್ರಸಾದ ವಿತರಣೆ, ಹಾಗೂ ಅನ್ನ ಸಂತರ್ಪಣೆಯು ನಡೆಯಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಗುರುದೇವರ ಹಾಗೂ ಶ್ರೀ ಶನೀಶ್ವರ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಬಿಲ್ಲವರ ಅಸೋಸಿಯೇಷನ್ ಮುಂಬಯಿ ಗೌರವಾಧ್ಯಕ್ಷ ಎಲ್ ವಿ ಅಮೀನ್ ಅಧ್ಯಕ್ಷ ಹರೀಶ್ ಜಿ. ಅಮೀನ್, ಗೌ. ಪ್ರ. ಕಾರ್ಯದರ್ಶಿ ಹರೀಶ್ ಜಿ .ಸಾಲಿಯಾನ್, ಕೋಶಾಧಿಕಾರಿ ರವಿ ಎಸ್ ಸನಿಲ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಕುಂತಲಾ ಕೆ. ಕೋಟ್ಯಾನ್, ಸಾಮಾಜಿಕ ಮತ್ತು ಧಾರ್ಮಿಕ ಉಪ ಸಮಿತಿಯ ಕಾರ್ಯಾಧ್ಯಕ್ಷ ಧರ್ಮ ಪಾಲ್ ಜಿ ಅಂಚನ್, ಗೌರವ ಕಾರ್ಯದರ್ಶಿ ಸದಾಶಿವ ವೈ ಕೋಟ್ಯಾನ್, ಕೇಂದ್ರ ಕಚೇರಿ ಪ್ರಭಾರಿ ಉಪಾಧ್ಯಕ್ಷರು ಕೆ ಸುರೇಶ್ ಕುಮಾರ್,ಮುಲುಂಡ್ ಸ್ಥಳೀಯ ಕಚೇರಿಯ ಪರವಾಗಿ ಗೌರವ ಕಾರ್ಯಾಧ್ಯಕ್ಷರು ಕೆ.ಪಿ. ಸಂಜೀವ, ಕಾರ್ಯಾಧ್ಯಕ್ಷರು ಶಂಕರ್.ಎಸ್.ಅಮೀನ್ ಉಪಕಾರ್ಯಾಧ್ಯಕ್ಷರುಗಳಾದ ರವಿ.ಜೆ.ಕೋಟ್ಯಾನ್, ವಿನಯ್ ವಿ.ಪೂಜಾರಿ, ಗೌರವ ಕಾರ್ಯದರ್ಶಿ ಹರೀಶ್ ಡಿ ಕರ್ಕೇರ, ಗೌ. ಕೋಶಾಧಿಕಾರಿ ಶಂಕರ್ ಜೆ. ಪೂಜಾರಿ, ಮಹಿಳಾ ವಿಭಾಗದ ಮುಖ್ಯಸ್ಥೆ ಗೀತಾ ಬಿ ಪೂಜಾರಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು, ವಿಶೇಷ ಆಮಂತ್ರಿತರು,ಮಹಿಳಾ ವಿಭಾಗ,ಯುವ ವಿಭಾಗದ ಸದಸ್ಯರು ವಿನಂತಿಸಿಕೊಂಡಿದ್ದಾರೆ.



Related posts

ಶ್ರೀ ಸಿದ್ಧಿ ವಿನಾಯಕ ಯಕ್ಷಗಾನ ಮಂಡಳಿ ಮುಂಬಯಿ: ಇಂದು ಘನ್ಸೋಲಿಯಲ್ಲಿ 21ನೇ ವರ್ಷದ ಸಂಭ್ರಮಾಚರಣೆ; ‘ಪಂಜುರ್ಲಿ ಪ್ರತಾಪ’ ಯಕ್ಷಗಾನ ಪ್ರದರ್ಶನ

Mumbai News Desk

ಶ್ರೀ ಜಗದಂಬಾ ಮಂದಿರ ಡೊಂಬಿವಲಿ : ಜು. 29ಕ್ಕೆ ನಾಗರ ಪಂಚಮಿ ಉತ್ಸವ

Mumbai News Desk

ಜ. 28  ಭಂಡಾರಿ ಸೇವಾ ಸಮಿತಿ ಮಹಿಳಾ ವಿಭಾಗದ ವತಿಯಿಂದ ಹಳದಿ ಕುಂಕುಮ 

Mumbai News Desk

ಶ್ರೀ ದತ್ತಾತ್ರೇಯ ದುರ್ಗಾಂಬಿಕ ದೇವಸ್ಥಾನ ಅಸಲ್ಫಾನ.25 ರಂದು ಸಾಮೂಹಿಕ ಶ್ರೀ ಶನಿ ಮಹಾಪೂಜೆ.

Mumbai News Desk

ಮುಂಬಯಿ ಕನ್ನಡ ಸಂಘ: ಡಿ. 20ರಂದು ಎರಡು ದತ್ತಿ ಉಪನ್ಯಾಸಗಳ ಕಾರ್ಯಕ್ರಮ

Mumbai News Desk

ಪೌರಾಣಿಕ ವಾಚಕ ಸಮಿತಿ ಮುಂಬಯಿ : ಫೆ. 28ಕ್ಕೆ 50ನೇ ವಾರ್ಷಿಕ ಶನಿ ಮಹಾಪೂಜೆ, ಮಾ.1ರಂದು ಸುವರ್ಣ ಮಹೋತ್ಸವ ಆಚರಣೆ

Mumbai News Desk