September 6, 2026
Mumbai News Kannada
ಪ್ರಕಟಣೆ

ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ವತಿಯಿಂದ ಗುರು ಸಂದೇಶ ಸಾಮರಸ್ಯ ಜಾಥಾ 2025..





​ಉಡುಪಿ: ‘ಒಂದೇ ಜಾತಿ, ಒಂದೇ ಮತ, ಒಬ್ಬರೇ ದೇವರು’ ಎಂಬ ವಿಶ್ವಗುರುಗಳ ಸಾರ್ವಕಾಲಿಕ ಸತ್ಯ ಸಂದೇಶವನ್ನು ಸಾರಿದ ಸಾಮಾಜಿಕ, ಧಾರ್ಮಿಕ ಮತ್ತು ಶೈಕ್ಷಣಿಕ ಕ್ರಾಂತಿಯ ಹರಿಕಾರ, ಸಮಾಜ ಸುಧಾರಣೆಯ ಸಂತ ಬ್ರಹ್ಮಶ್ರೀ ನಾರಾಯಣ ಗುರುಗಳ 171ನೇ ಜನ್ಮ ದಿನಾಚರಣೆಯ ಅಂಗವಾಗಿ ‘ಗುರು ಸಂದೇಶ ಸಾಮರಸ್ಯ ಜಾಥಾ 2025’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯ ಅಧ್ಯಕ್ಷ ಪ್ರವೀಣ್ ಪೂಜಾರಿ ತಿಳಿಸಿದರು.

​ಉಡುಪಿ ಜಿಲ್ಲಾ ಯುವ ವೇದಿಕೆಯ ನೇತೃತ್ವದಲ್ಲಿ ಮತ್ತು ಜಿಲ್ಲೆಯ ಎಲ್ಲ ಬಿಲ್ಲವ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಆದಿತ್ಯವಾರ ಮಧ್ಯಾಹ್ನ 2:00 ಗಂಟೆಗೆ ಈ ಜಾಥಾ ನಡೆಯಲಿದೆ. ಬನ್ನಂಜೆ ಜಯಲಕ್ಷ್ಮಿ ಎದುರುಗಡೆಯಿಂದ ಜಾಥಾ ಪ್ರಾರಂಭವಾಗಲಿದ್ದು, ದಕ್ಷ ಮಹಿಳಾ ಪೊಲೀಸ್ ಅಧಿಕಾರಿ ಶ್ರೀಮತಿ ರೀನಾ ಸುವರ್ಣ ಮತ್ತು ಕರಾವಳಿಯ ನಿಷ್ಠಾವಂತ ದೈವಾರಾಧಕರಾದ ದೈವ ನರ್ತಕ ಶ್ರೀ ರವಿ ಪಡ್ಡಂ ಅವರು ಗುರು ಸಂದೇಶ ಸಾಮರಸ್ಯ ರಥಕ್ಕೆ ಚಾಲನೆ ನೀಡಲಿದ್ದಾರೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

​ಈ ಕಾರ್ಯಕ್ರಮದಲ್ಲಿ ಸಂಸದರು, ಶಾಸಕರು, ರಾಜಕೀಯ ನಾಯಕರು, ಜನಪ್ರತಿನಿಧಿಗಳು, ಸಮಾಜದ ಮುಖಂಡರು ಮತ್ತು ಉಡುಪಿ ಪರಿಸರದ ಎಲ್ಲ ಬಿಲ್ಲವ ಸಂಘ-ಸಂಸ್ಥೆಗಳ ಅಧ್ಯಕ್ಷರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

​ಜಾಥಾವು ಬನ್ನಂಜೆ ಜಯಲಕ್ಷ್ಮಿ ಎದುರುಗಡೆಯಿಂದ ಹೊರಟು ಸಿಟಿ ಬಸ್ ನಿಲ್ದಾಣ, ಕೋರ್ಟ್ ರಸ್ತೆ, ಮಿಷನ್ ಕಾಂಪೌಂಡ್, ಮಹಿಷಮರ್ದಿನಿ ದೇವಸ್ಥಾನ, ಕೊರಂಗ್ರಪಾಡಿ, ಮಾರ್ಪಳ್ಳಿ, ಕುಕ್ಕಿಕಟ್ಟೆ, ಅಲೆವೂರು, ರಾಂಪುರ, ದೆಂದೂರ್‌ ಕಟ್ಟೆ, ಮಣಿಪುರ ಮಾರ್ಗವಾಗಿ ಕಟಪಾಡಿಯ ಶ್ರೀ ವಿಶ್ವನಾಥ ಕ್ಷೇತ್ರದಲ್ಲಿ ಗುರುಪೂಜೆಯೊಂದಿಗೆ ಸಂಪನ್ನಗೊಳ್ಳಲಿದೆ.

​ಈ ಸೌಹಾರ್ದಯುತ ಕಾರ್ಯಕ್ರಮದಲ್ಲಿ ಬಿಲ್ಲವ ಸಮಾಜದ ಬಂಧುಗಳು, ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಮತ್ತು ನಾರಾಯಣ ಗುರುಗಳ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗುರು ಸಂದೇಶ ಸಾಮರಸ್ಯ ಜಾಥಾವನ್ನು ಯಶಸ್ವಿಗೊಳಿಸಲು ಸಹಕರಿಸಬೇಕೆಂದು ಪ್ರವೀಣ್ ಪೂಜಾರಿ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಸುಧಾಕರ್ ಡಿ. ಅಮೀನ್, ದಿವಾಕರ್ ಸನಿಲ್, ವಿಜಯ್ ಉದ್ಯಾವರ, ಮಹೇಶ್ ಬಂಗೇರ ಹಾಗೂ ಇತರರು ಉಪಸ್ಥಿತರಿದ್ದರು.



Related posts

ಡೊಂಬಿವಲಿ: “ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿ ಆಶ್ರಯದಲ್ಲಿ ಜ. 3ರಂದು ಶ್ರೀ ಶನೀಶ್ವರ ಮಹಾಪೂಜೆ ಹಾಗೂ ಸತ್ಯನಾರಾಯಣ ಪೂಜೆ

Mumbai News Desk

ದಹಿಸರ್: ಜುಲೈ 19ರಂದು ಶ್ರೀ ಶನಿಮಹಾತ್ಮಾ ಸೇವಾ ಸಮಿತಿಯ 40ನೇ ವಾರ್ಷಿಕ ಮಹಾಸಭೆ

Mumbai News Desk

ಯಕ್ಷಗಾನದ ಸ್ತ್ರೀ ಪಾತ್ರಧಾರಿಯ ಜೀವನ ಆಧಾರಿತ”ದ್ವಮ್ದ್ವ” ಕನ್ನಡ ಚಲನಚಿತ್ರ, ಮುಂಬೈಯಲ್ಲಿ ಮೇ 16ಕ್ಕೆ ಪ್ರದರ್ಶನ.

Mumbai News Desk

ಮಾ.16: ತುಳುನಾಡ ಸೇವಾ ಸಮಾಜ ಮೀರಾಭಾಯಂದರ್ ವತಿಯಿಂದ ವಿಶ್ವಮಹಿಳಾ ದಿನಾಚರಣೆ, ಸಂಸ್ಥಾಪಕ ದಿನಾಚರಣೆ ಹಾಗೂ ಹಳದಿಕುಂಕುಮ ಕಾರ್ಯಕ್ರಮ.

Mumbai News Desk

 ನ 29,30 ಮತ್ತು ಡಿ 1 ಸತತ ಮೂರು ದಿವಸ  ಮಕ್ಕಳ ಕಲರವದಲ್ಲಿ ನಾಟಕೋತ್ಸವ, ಯಕ್ಷಗಾನೋತ್ಸವ, ವಾರ್ಷಿಕೋತ್ಸವಗಳ ವಿಜೃಂಭಣೆಯ ಮಹಾಮೇಳ.

Mumbai News Desk

ಮಂಗಳೂರಿನಲ್ಲಿ ಸೆಪ್ಟೆಂಬರ್ 6 ರಂದು ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಬೆಳ್ಳಿ ಹಬ್ಬ ಸಮಾರಂಭ: ಡಿ. ಕೆ. ಶಿವಕುಮಾರ್ ಚಾಲನೆ

Mumbai News Desk