September 6, 2026
Mumbai News Kannada
ಮುಂಬಯಿ

ದುರಂತದಲ್ಲಿ ಮಡಿದ ಸಂಸ್ಕೃತಿ ಅಮೀನ್ ಅವರ ಮನೆಗೆ ಮಹೇಶ್ ಶೆಟ್ಟಿ ತೆಳ್ಳಾರ್, ಎರ್ಮಳ್ ಹರೀಶ್ ಶೆಟ್ಟಿ ಭೇಟಿ: ಕುಟುಂಬಕ್ಕೆ ಎಲ್ಲಾ ರೀತಿಯ ಸಹಕಾರ ನೀಡುವ ಭರವಸೆ





​ಮುಂಬಯಿ, ಅಕ್ಟೋಬರ್ 14: ಇತ್ತೀಚೆಗೆ ಜೋಗೇಶ್ವರಿ ಪೂರ್ವದಲ್ಲಿ ನಡೆದ ದುರಂತದಲ್ಲಿ ಮಡಿದ ಸಂಸ್ಕೃತಿ ಅಮೀನ್ ಅವರ ಮನೆಗೆ ಹಿಂದೂ ಪರವಾದಿ ಮಹೇಶ್ ಶೆಟ್ಟಿ ತೆಳ್ಳಾರ್, ಉತ್ತರ ಮುಂಬಯಿ ಬಿಜೆಪಿ ಉಪಾಧ್ಯಕ್ಷ ಎರ್ಮಳ್ ಹರೀಶ್ ಶೆಟ್ಟಿ ಹಾಗೂ ಬಂಟರ ಸಂಘದ ಮುಂಬಯಿಯ ಎಸ್.ಎಂ. ಶೆಟ್ಟಿ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷ ರತ್ನಾಕರ್ ಶೆಟ್ಟಿ ಮುಂಡ್ಕೂರು, ಬಿಜೆಪಿಯ ಯುವ ನಾಯಕ ಸಚ್ಚಿದಾನಂದ ಶೆಟ್ಟಿ, ಮುನ್ನಲಾಗುತು ಮತ್ತು ಇತರರು ಭೇಟಿ ನೀಡಿದರು.

​ಅವರು ಸಂಸ್ಕೃತಿ ಅಮೀನ್ ಅವರ ತಂದೆ-ತಾಯಿಗೆ ಸಾಂತ್ವನ ಹೇಳಿ, ಎಲ್ಲಾ ರೀತಿಯ ಸಹಕಾರ ನೀಡುವ ಭರವಸೆಯನ್ನು ನೀಡಿದ್ದಾರೆ.

​ಶ್ರದ್ಧಾ ಬಿಲ್ಡರ್‌ನ ಮಾಲೀಕರ ಮೇಲೆ ಪೊಲೀಸರು ಯಾವುದೇ ಪ್ರಕರಣ ದಾಖಲಿಸದೆ ಮೀನಮೇಷ ಎಣಿಸುತ್ತಿರುವ ಬಗ್ಗೆ ಸಂಸ್ಕೃತಿ ಅಮೀನ್ ಅವರ ತಂದೆ ಎಲ್ಲಾ ವಿಚಾರಗಳನ್ನು ತಿಳಿಸಿದ್ದಾರೆ.

​ಸಂಸ್ಕೃತಿ ಅಮೀನ್ ಅವರ ತಂದೆ-ತಾಯಿಗೆ ಸಾಂತ್ವನದ ಮಾತುಗಳನ್ನು ಹೇಳಿದ ರಾಜಕೀಯ ಮುಖಂಡರು, “ಸರ್ಕಾರಿ ಅಧಿಕಾರಿಗಳ ಮೂಲಕ ನಾವು ಇದರ ಬಗ್ಗೆ ನ್ಯಾಯಾಂಗ ತನಿಖೆ ಮಾಡಿಸಿ, ಸಂಬಂಧಪಟ್ಟ ಬಿಲ್ಡರ್ ಮಾಲೀಕರನ್ನು ಬಂಧಿಸಲು ನಮ್ಮಿಂದಾದಷ್ಟು ಪ್ರಯತ್ನ ಮಾಡುತ್ತೇವೆ. ಮುಂದೆ ಯಾವುದೇ ಸಂಕಷ್ಟದ ಸಂದರ್ಭದಲ್ಲಿ ನಮ್ಮ ಸಹಕಾರವಿರುತ್ತದೆ” ಎಂಬ ಆಶ್ವಾಸನೆಯನ್ನು ಕೊಟ್ಟಿದ್ದಾರೆ.

​ಈ ಸಂದರ್ಭದಲ್ಲಿ ಮಹೇಶ್ ಶೆಟ್ಟಿ ಅವರೊಂದಿಗೆ ಮೀರಾ-ಭಾಯಂದರ್ ಪರಿಸರದ ಅರುಣ್ ಶೆಟ್ಟಿ ಪಣಿಯೂರು ಹಾಗೂ ಇತರ ತುಳು-ಕನ್ನಡಿಗರು ಪಾಲ್ಗೊಂಡಿದ್ದರು.



Related posts

ಕಾಪು ಮೊಗವೀರ ಮಹಿಳಾ ಮಂಡಳ : ಆಟಿದ ಕೂಟ ಕಾರ್ಯಕ್ರಮ

Mumbai News Desk

ಬಾಂಬೆ ಬಂಟ್ಸ್ ಅಸೋಸಿಯೇಶನ್ ನ ಮಹಿಳಾ ವಿಭಾಗದ ವತಿಯಿಂದ ಅಷ್ಟ ವಿನಾಯಕ ದರ್ಶನ ಪ್ರವಾಸ.

Mumbai News Desk

ಮುಂಬೈನಲ್ಲಿ 426 ಫ್ಲಾಟ್‌ಗಳು ಲಭ್ಯ : ಬೆಲೆಗಳು ಕೈಗೆಟುಕದ ಕಾರಣ, ಸ್ವಂತ ಮನೆ ಹೊಂದುವವರಿಗೆ ಗ್ರಹ ಖರೀದಿ ಒಂದು ಮರೀಚಿಕೆಯೇ?

Mumbai News Desk

ಸಾಫಲ್ಯ ಸೇವಾ ಸಂಘ ಮಹಿಳಾ ವಿಭಾಗದ ವತಿಯಿಂದ ಆಟಿಡ್ ಒಂಜಿ ದಿನ ಕಾರ್ಯಕ್ರಮ

Mumbai News Desk

ಮುಂಬಯಿ : ರಸಿಕರಿಗೆ ರಸದೌತಣ ನೀಡಿದ ದಿ.ಲಕ್ಷ್ಮೀ ಸುಧೀಂದ್ರ ಸ್ಮಾರಕ ಸಂಗೀತ ಕಛೇರಿ

Mumbai News Desk

ಮೊಗವೀರ ವ್ಯವಸ್ಥಾಪಕ ಮಂಡಳಿಯ ಮಹಿಳಾ ವಿಭಾಗದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ: ವಿವಿಧ ಕ್ಷೇತ್ರದ ಸಾಧಕಿಯರಿಗೆ ಸನ್ಮಾನ

Mumbai News Desk