September 6, 2026
Mumbai News Kannada
ಕ್ರೀಡೆ

ಮುಂಬೈ : ಜಿಲ್ಲಾ ಕ್ರೀಡಾ ಕಛೇರಿ ಆಯೋಜಿಸಿದ ಕ್ರಿಕೆಟ್‌ ಪಂದ್ಯಾಟದಲ್ಲಿ ಚೆಂಬೂರು ಕರ್ನಾಟಕ ಪ್ರೌಢಶಾಲೆಗೆ ಮುಂಬೈ ವಲಯದ ಕಿರೀಟ





​ಮುಂಬೈ ಉಪನಗರದ ಜಿಲ್ಲಾ ಕ್ರೀಡಾ ಕಚೇರಿ (District Sports Office – DSO) ಆಯೋಜಿಸಿದ್ದ ಅಂತರ ಶಾಲಾ ಕ್ರಿಕೆಟ್ ಪಂದ್ಯಾವಳಿ, ಅಂಡರ್-14 ಬಾಲಕರ ವಿಭಾಗದ ಮುಂಬೈ ವಲಯದ ಪ್ರಶಸ್ತಿಯನ್ನು ಚೆಂಬೂರು ಸಂಘದ, ಚೆಂಬೂರು ಕರ್ನಾಟಕ ಪ್ರೌಢಶಾಲೆ (Chembur Karnataka High School) ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ.
​ಅಕ್ಟೋಬರ್ 15, 2025ರ ಬುಧವಾರದಂದು ಓವಲ್ ಮೈದಾನದಲ್ಲಿ (Oval Maidan) ನಡೆದ ಈ ಪ್ರತಿಷ್ಠಿತ ಪಂದ್ಯಾವಳಿಯಲ್ಲಿ, ಶಾಲೆಯ ಕಿರಿಯ ಕ್ರಿಕೆಟಿಗರು ಅದ್ಭುತ ಪ್ರದರ್ಶನ ನೀಡಿದರು.
​320 ತಂಡಗಳ ಪೈಕಿ ವಿಭಾಗೀಯ ಮಟ್ಟಕ್ಕೆ ಆಯ್ಕೆ :
​ಈ ಪಂದ್ಯಾವಳಿಯಲ್ಲಾದ ಪ್ರಮುಖ ಸಾಧನೆ ಎಂದರೆ, ಮುಂಬೈ ವಲಯದ ವಿಜೇತರಾಗಿ, ಒಟ್ಟು 320 ತಂಡಗಳ ಪೈಕಿ ಚೆಂಬೂರು ಕರ್ನಾಟಕ ಪ್ರೌಢಶಾಲೆ ತಂಡವು ವಿಭಾಗೀಯ ಮಟ್ಟಕ್ಕೆ (Division Level) ಆಯ್ಕೆಯಾಗಿದೆ. ಇದು ಶಾಲೆಯ ಕ್ರೀಡಾ ಇತಿಹಾಸದಲ್ಲಿ ಒಂದು ಹೆಮ್ಮೆಯ ಮೈಲಿಗಲ್ಲು.
ಅದೇ ರೀತಿ ಅಂಡರ್-16ರ ಪಂದ್ಯಾಟದಲ್ಲಿ ಚೆಂಬೂರು ಕರ್ನಾಟಕ ಪ್ರೌಢಶಾಲೆ ತಂಡವು ಫೈನಲ್ ಮಟ್ಟಕ್ಕೆ ತಲಪಿದ್ದು ಒಂದು ಸಾಧನೆಯಾಗಿದೆ.
​ಶಾಲೆಯ ಈ ವಿಜಯಕ್ಕೆ ಶ್ರಮಿಸಿದ ವಿದ್ಯಾರ್ಥಿಗಳಿಗೆ, ಹಾಗೆಯೇ ಅವರಿಗೆ ಮಾರ್ಗದರ್ಶನ ನೀಡಿದ ತರಬೇತುದಾರರಾದ ದಿನೇಶ್ ಸಾಳುಂಖೆ ಸರ್, ಅಂಕುಶ್ ಸರ್ ಮತ್ತು ರಾಜಿಂದರ್ ಸಿಂಗ್ ಸರ್ ಅವರಿಗೆ ಆಡಳಿತ ಮಂಡಳಿ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
​ಮುಂದಿನ ವಿಭಾಗೀಯ ಮಟ್ಟದ ಪಂದ್ಯಾವಳಿಗಾಗಿ ತಂಡಕ್ಕೆ ಶುಭ ಹಾರೈಕೆಗಳು!



Related posts

ಉಡುಪಿ ಜಿಲ್ಲಾ ಮಟ್ಟದ ಗ್ರಾಮೀಣ ಐಟಿ ರಸಪ್ರಶ್ನೆ ಸ್ಪರ್ಧೆ: ಪಡುಬಿದ್ರಿ ಸಾಗರ ವಿದ್ಯಾ ಮಂದಿರದ ಧೃತಿ ರವಿ ಕುಮಾರ್ ವಿಭಾಗೀಯ ಮಟ್ಟಕ್ಕೆ ಆಯ್ಕೆ

Mumbai News Desk

ಬಿ ಎಸ್ ಕೆ ಬಿ ಎಸ್ಸೋಸಿಯೇಷನ್ ಮುಂಬಯಿ; ಗೋಕುಲ ಶತಮಾನೋತ್ಸವ ಆಚರಣೆಯ ನಿಮಿತ್ತ ತುಳು ಕನ್ನಡಿಗ ಗೇಮ್ಸ್ 2025,

Mumbai News Desk

ಕರ್ನಾಟಕ ಸಂಘ ಪನ್ವೆಲ್ ನ 32ನೇ ವರುಷದ ವಾರ್ಷಿಕ ಕ್ರೀಡಾ ಕೂಟ.

Mumbai News Desk

ವಸಯಿ ಕಲಾ ಕ್ರಿಡೋತ್ಸವ ದಲ್ಲಿ  ಥ್ರೋ ಬಾಲ್ ಆಟದಲ್ಲಿ ಉಷಾ ಶ್ರೀಧರ ಶೆಟ್ಟಿ  ಕರ್ನಿರೆ ಇವರ ನಾಯಕತ್ವ ತಂಡಕ್ಕೆ  ಪ್ರಥಮ ಸ್ಥಾನ . 

Mumbai News Desk

ನೇಪಾಳದಲ್ಲಿ ಜರಗಿದ ಏಷಿಯನ್ ಥಾಯ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಬೆಳ್ಳಿ ಪದಕ ಪಡೆದ ಜಾನ್ವಿ ಮನೋಜ್ ಕೋಟ್ಯಾನ್

Mumbai News Desk

ಬ್ಯಾಡ್ಮಿಂಟನ್ ಸಾಧಕಿ  ದಿಯಾ ಮನೋಜ್ ಶೆಟ್ಟಿ ಮಾಜಿ ಸಂಸದ ಗೋಪಾಲ್ ಶೆಟ್ಟಿ ಅವರಿಂದ ಗೌರವ

Mumbai News Desk