July 22, 2026
Mumbai News Kannada
ಮುಂಬಯಿ

ಮೀರಾ-ಭಾಯಂದರ್ ಪರಿಸರದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ದಕ್ಷಿಣ ಭಾರತ ಭವನವನ್ನು ವೀಕ್ಷಿಸಿದ ಶಾಸಕ ಪ್ರತಾಪ್ ಸರ್ನಾಯಕ್







ಮೀರಾ-ಭಾಯಂದರ್ ಶಾಸಕ, ಸಾರಿಗೆ ಮಂತ್ರಿ  ಪ್ರತಾಪ್
ಸರ್ನಾಯಕ್ ಅವರ ಸಹಯೋಗದಿಂದ ಮೀರಾ- ಭಾಯಂದರ್ ಮುನ್ಸಿಪಲ್ ಕಾರ್ಪೊರೇಷನ್ ನ  ಸಹಕಾರದಿಂದ ಮೀರಾ-ಭಾಯಂದರ್ ಪರಿಸರದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ದಕ್ಷಿಣ ಭಾರತ ಭವನವನ್ನು ಪ್ರತಾಪ್ ಸರ್ನಾಯಕ್  ವೀಕ್ಷಿಸಿದರು.

  ಈ ಭವನ ಇದೇ ಡಿಸೆಂಬರ್ ತಿಂಗಳ ಕೊನೆಯಲ್ಲಿ ಪೂರ್ಣ ಗೊಳ್ಳಲಿದೆ. ಒಂದು ಮಹಡಿಯ ಅಂದಾಜು  ಸುಮಾರು    1000 ಚದರ ವಿಸ್ತೀರ್ಣವುಳ್ಳ
 ಭವನದ  ಮೇಲ್ವಿಚಾರಣೆಯನ್ನು ಬಂಟರ ಸಂಘದ ಮೀರಾ- ಭಾಯಂದರ್ ಪ್ರಾದೇಶಿಕ ಸಮಿತಿಗೆ  ಕೊಡುವಂತೆ ಮನವಿಯನ್ನು ಬಂಟರ ಸಂಘದ  ಅಧ್ಯಕ್ಷರಾದ  ಪ್ರವೀಣ್ ಭೋಜ ಶೆಟ್ಟಿ ಯವರ ನಿರ್ದೇಶನದ  ಮೇರೆಗೆ  ಮೀರಾ ಭಾಯಂದರ್ ನ  ಪ್ರಾದೇಶಿಕ ಸಮಿತಿ ಯ ಸಂಚಾಲಕರದ  ಶಿವ ಪ್ರಸಾದ್ ಶೆಟ್ಟಿ ಮಾಣಿ ಗುತ್ತು, ಹಾಗೂ ಈ ಭವನದ ಹಿಂದೆ ಬೆನ್ನೆಲುಬಾಗಿ ಸಹಕರಿಸಿದ  ಕಿಶೋರ್ ಕುಮಾರ್ ಕುತ್ಯಾರ್,ಮನವಿಯನ್ನು ಸಾರಿಗೆ ಮಂತ್ರಿ  ಪ್ರತಾಪ್ ಸರ್ನಾಯಕ್ ಗೆ  ಮೀರಾ ಭಯಂದರ್ ಮುನ್ಸಿಪಾಲ್ ಕಾರ್ಪೋರೇಶನ್ ನ ಅಧಿಕಾರಿಗಳ ಮುಕಾಂತರ ಸಲ್ಲಿಸಿದರು. 
ಈ ಸಂದರ್ಭದಲ್ಲಿ ಬಿಲ್ಲವರ ಅಸೋಸಿಯೇಷನ್  ಜೊತೆ ಕಾರ್ಯದರ್ಶಿ   ಗೋಪಾಲ್ ಜೆ. ಕೆಂಚನಕೆರೆ, ಬಂಟರ ಸಂಘದ ಮೀರಾ-ಭಾಯಂದರ್ ಪ್ರಾದೇಶಿಕ ಸಮಿತಿಯ ಶಿಕ್ಷಣ ಮತ್ತು ಸಮಾಜ ಕಲ್ಯಾಣದ ಕಾರ್ಯಧ್ಯಕ್ಷ ಪಂಜದಗುತ್ತು  ಸಂಪತ್ ಶೆಟ್ಟಿ,ಸದಸ್ಯತನ ನೊಂದಾವಣಿ ಕಾರ್ಯಧ್ಯಕ್ಷ  ದೇರ್ಲಕಟ್ಟೆ  ರವೀಂದ್ರ ಶೆಟ್ಟಿ, ಮಾಜಿ ಖಜಾಂಜಿ   ದಾಮೋದರ್ ಶೆಟ್ಟಿ,  ಸಕ್ರಿಯ ಸದಸ್ಯ ಕಾಪು ಕಲ್ಯ  ದಿನೇಶ್ ಶೆಟ್ಟಿ,ಕ್ರಿಶ್ಚಿಯನ್ ಸಮುದಾಯದ  ಸುನಿಲ್ ಡಿಸೋಜಾ,  ಜಗದೀಶ್ ಶೆಟ್ಟಿ ಕೆಂಚೇನಕೆರೆ ಹಾಗೂ  ಪ್ರಾದೇಶಿಕ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ಸಚಿವ ಪ್ರತಾಪ್ ಸರ್ನಾಯಕ್ ರವರು  ಈ ಭವನ ವನ್ನು ಡಿಸೇಂಬರ್ ತಿಂಗಳ ಒಳಗೆ ಕಾಮಗಾರಿ ಪೂರ್ತಿಮಾಡಿ ಜನರ ಉಪಯೋಗಕ್ಕೆ ನೀಡುವುದಾಗಿ ಭರವಸೆಯನ್ನು ವ್ಯಕ್ತ ಪಡಿಸಿದರು.

 ಬಂಟರ ಸಂಘದ ಮೀರಾ -ಭಾಯಂದರ್ ಪ್ರಾದೇಶಿಕ ಸಮಿತಿಯ ಕಾರ್ಯದಕ್ಷ  ರವೀಂದ್ರ ಶೆಟ್ಟಿ ಕೊಟ್ರಪಾಡಿಗುತ್ತು ಹಾಗೂ ಮಾಜಿ ಕಾರ್ಯದಕ್ಷ , ಬಂಟರ ಸಂಘದ  ಜೊತೆ ಕಾರ್ಯದರ್ಶಿ ಗಿರೀಶ್ ಶೆಟ್ಟಿ ತೆಳ್ಳಾರ್ , ಹಾಗೂ ಹಿರಿಯ ಸದಸ್ಯ  ಭಾಸ್ಕರ್ ಶೆಟ್ಟಿ ಕಾಶಿಮಿರಾ ಅವರ ಸಂಪೂರ್ಣ ಸಹಕಾರದೊಂದಿಗೆ  ದಕ್ಷಿಣ ಭಾರತೀಯ ಭವನದ ಮೇಲ್ವಿಚಾರಣೆಯನ್ನು ಮೀರಾ- ಭಾಯಂದರ್ ಪ್ರಾದೇಶಿಕ ಸಮಿತಿ ಮಾಡುವ ಆಶಯವನ್ನು ಹೊಂದಿದೆ.

.

.



Related posts

ಮುಂಬೈ : ಮೊಗವೀರ ಕೋ-ಆಪರೇಟಿವ್ ಬ್ಯಾಂಕ್ ಎಂಪ್ಲಾಯೀಸ್ ಸ್ಪೋರ್ಟ್ಸ್ ಕ್ಲಬ್ ಮತ್ತು ಪೂಜಾ ಸಮಿತಿ: 44ನೇ ವಾರ್ಷಿಕ ಶ್ರೀ ಸತ್ಯನಾರಾಯಣ ಪೂಜಾ ಮಹೋತ್ಸವ ಸಂಪನ್ನ

Mumbai News Desk

ಕಾಲಾಘೋಡಾ ಶ್ರೀ ಸಾಯಿಬಾಬಾ ಪೂಜಾ ಸಮಿತಿ; ಮಲಾಡ್ ಸ್ನೇಹಸಾಗರ್ ಅನಾಥಾಶ್ರಮ ಮತ್ತು ವೃದ್ಧಾಶ್ರಮಕ್ಕೆ ಅಗತ್ಯ ವಸ್ತುಗಳ ನೆರವು.

Mumbai News Desk

ಮೂರನೇ ದಿನವೇ ಗರೀಬ್ ನಗರದ ಶೇ. 90 ರಷ್ಟು ಅತಿಕ್ರಮಣಗಳನ್ನು ತೆರವುಗೊಳಿಸಿದ ಪಶ್ಚಿಮ ರೈಲ್ವೆ

Mumbai News Desk

ಅಭಿನಯ ಮಂಟಪ ( ರಿ.) ಮುಂಬಯಿ ಎರಡು ನಾಟಕಗಳ ಮುಹೂರ್ತ

Mumbai News Desk

ಕಲಾತಂತ್ರ ಪ್ರೊಡಕ್ಷನ್ ಲೋಕಾರ್ಪಣೆ : ಜು. 28ರಂದು ‘ತುಡರ್’ ತುಳು ಚಿತ್ರ ಬಿಡುಗಡೆ.

Mumbai News Desk

ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಮಲಾಡ್, ಇದರ 16ನೇ ವರ್ಷದ ವಾರ್ಷಿಕ  ಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆ

Mumbai News Desk