July 23, 2026
Mumbai News Kannada
ತುಳುನಾಡು

ಮುಲ್ಕಿ: ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ಜರಗಿದ ಲಕ್ಷದೀಪೋತ್ಸವ







​ಮೂಲ್ಕಿ ಸೀಮೆಯ 9 ಮಾಗಣೆಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ 9 ಮಾಗಣೆಯ ಭಕ್ತ ವೃಂದದ ಸಹಕಾರದಿಂದ ನ.19ರ, ಬುಧವಾರ ಲಕ್ಷ ದೀಪೋತ್ಸವ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು.
ಅಂದು ಸೂಕ್ತ ಹೋಮ, ಲಕ್ಷ ಕುಂಕುಮರ್ಚನೆ, ಮಧ್ಯಾಹ್ನ ಮಹಾಪೂಜೆ, ಅನ್ನ ಸಂತರ್ಪಣೆ ನಡೆಯಿತು.
ಸಂಜೆ 5 ಗಂಟೆಗೆ ಸಾಮೂಹಿಕ ದುರ್ಗ ನಮಸ್ಕಾರ, ಲಲಿತ ಸಹಸ್ರನಾಮ ಪಾರಾಯಣ, ರಾತ್ರಿ 7:30ಕ್ಕೆ ಮಹಾಪೂಜೆ ಲಕ್ಷ ದೀಪ ಉತ್ಸವ, ಅಷ್ಟಾವಧಾನ ಸೇವೆ ಜರಗಿತು.


ಕ್ಷೇತ್ರದ ತಂತ್ರಿಗಳಾದ ಶೀಬರೂರು ಗುಣಪಾಲಕೃಷ್ಣ ತಂತ್ರಿ ಹಾಗೂ ಅರ್ಚಕರಾದ ಶ್ರೀಪತಿ ಉಪಾಧ್ಯಾಯ ಹಾಗೂ ನರಸಿಂಹ ಭಟ್ ನೇತೃತ್ವದಲ್ಲಿ ಎಲ್ಲ ಧಾರ್ಮಿಕ ಕಾರ್ಯಗಳು ವಿಧಿವತ್ತಾಗಿ ನಡೆಯಿತು.
​ ಈ ಸಂದರ್ಭ ಶಾಸಕ ಉಮಾನಾಥ್ ಕೋಟ್ಯಾನ್, ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪ್ರಸಾದ್, ದೇವಸ್ಥಾನದ ಅನುವಂಶಿಕ ಮೊಕ್ತೇಸರ ದುಗ್ಗಣ್ಣ ಸಾವಂತ ಅರಸರು, ಮಾಜಿ ಮೊಕ್ತೇಸರ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು, ಕಟೀಲು ಕ್ಷೇತ್ರದ ಅರ್ಚಕ ಹರಿನಾರಾಯಣ ದಾಸ ಅಸ್ರಣ್ಣ, ಬಪ್ಪನಾಡು ಕ್ಷೇತ್ರದ ಕಾರ್ಯನಿರ್ವಹಣಾಧಿಕಾರಿ ಶ್ವೇತಾ ಪಳ್ಳಿ ಮತ್ತು ಭಕ್ತದಿಗಳು ಉಪಸ್ತಿತರಿದ್ದರು.



Related posts

ಪಡುಬಿದ್ರಿ : ಪತ್ರಕರ್ತ ದಿ. ಜಯಂತ್ ಪಡುಬಿದ್ರಿ ಸಂಸ್ಮರಣೆ, ದತ್ತಿ ನಿಧಿ ವಿತರಣೆ, ಉಪನ್ಯಾಸ

Mumbai News Desk

ಮೂಲ್ಕಿ : ವಿಜಯಾ ಕಾಲೇಜು 1994-97ರ ಬಿಕಾಂ ಬ್ಯಾಚ್ ವತಿಯಿಂದ SSLC, PUC ಸಾಧಕ ವಿದ್ಯಾರ್ಥಿಗಳಿಗೆ ಸಮ್ಮಾನ

Mumbai News Desk

ಹೆಜಮಾಡಿ ಬಿರುವೆರ್ ಬ್ರದರ್ಸ್ ನ ನೂತನ ಅಧ್ಯಕ್ಷರಾಗಿ ಗುರುಪ್ರಸಾದ್ ಪೂಜಾರಿ ಆಯ್ಕೆ.

Mumbai News Desk

ವಿಷಮುಕ್ತ ಆಹಾರಕ್ಕಾಗಿ ಸಾವಯವ ಕೃಷಿಯಲ್ಲಿ ತೊಡಗಿಕೊಳ್ಳೋಣ – ಕೊಂಡೆವೂರು ಶ್ರೀಗಳು.

Mumbai News Desk

ತುಳುವೆರೆ ‘ತುಡರ ಪರ್ಬ’: ಬಲಿ ಚಕ್ರವರ್ತಿ ಬೊಕ್ಕ ಬೆನ್ನಿ ಸಂಸ್ಕೃತಿದ ಸಂಗಮ

Mumbai News Desk

ಮೂಲ್ಕಿ ಪುನರೂರು ಶ್ರೀದೇವರ ನೂತನ ಶಿಲಾಮಯ ಗರ್ಭಗುಡಿಯ ಶಿಲಾನ್ಯಾಸ

Mumbai News Desk