30.5 C
Mumbai
June 8, 2026
Mumbai News Kannada
ಸುದ್ದಿ

ಕುಲಾಲ ಭವನ ಉದ್ಘಾಟನೆ: ದಾನಿಗಳು ಮತ್ತು ಗಣ್ಯರಿಗೆ ಕುಲಾಲ ಸಂಘ ಮುಂಬೈ ವತಿಯಿಂದ ಗೌರವ ಸನ್ಮಾನ





ಮಂಗಳೂರು, ನ. 27: ಕುಲಾಲ ಸಂಘ ಮುಂಬೈ (Kulala Sangha Mumbai) ವತಿಯಿಂದ ಮಂಗಳಾದೇವಿ ಸಮೀಪದಲ್ಲಿ ₹15 ಕೋಟಿಗೂ ಅಧಿಕ ವೆಚ್ಚದಲ್ಲಿ ಸಮಾಜ ಬಾಂಧವರು ಹಾಗೂ ದಾನಿಗಳ ಸಹಕಾರದಿಂದ ನಿರ್ಮಿಸಲಾದ ಕುಲಾಲ ಭವನದ ಉದ್ಘಾಟನಾ ಸಮಾರಂಭವು ನವೆಂಬರ್ 23ರಂದು ವೈಭವದಿಂದ ನೆರವೇರಿತು.

​ಸಂಘದ ಅಧ್ಯಕ್ಷರಾದ ರಘು ಎ. ಮೂಲ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ, ಗೌರವ ಅಧ್ಯಕ್ಷರಾದ ಪಿ. ದೇವದಾಸ್ ಎಲ್. ಕುಲಾಲ್ ಉಪಸ್ಥಿತರಿದ್ದರು.

​ಸಭಾಂಗಣ ಮತ್ತು ಕಚೇರಿ ಲೋಕಾರ್ಪಣೆ

​ಈ ಸಂದರ್ಭದಲ್ಲಿ ದಾನಿಗಳ ನೆನಪಿನಲ್ಲಿ ನಿರ್ಮಿಸಲಾದ ಈ ಕೆಳಗಿನ ವಿಭಾಗಗಳನ್ನು ಉದ್ಘಾಟಿಸಲಾಯಿತು:

ಶ್ರೀಮತಿ ಸುಮಿತ್ರಾ ರಾಜು ಸಾಲಿಯನ್ ಸಭಾಂಗಣ, ಶ್ರೀಮತಿ ಯಶೋಧಾ ಬಾಬು ಸಾಲಿಯನ್ ಬಂಟ್ವಾಳ ವೇದಿಕೆ, ಶ್ರೀಮತಿ ಸರಸ್ವತಿ ವಿಶ್ವನಾಥ್ ಬಂಗೇರಾ ಕುಲಾಯಿ (ಬಾಲ್ಕನಿ), ಶ್ರೀಮತಿ ನಮ್ರತಾ ಜಗದೀಶ್ ಬಂಜನ್ ಬ್ಯಾಂಕ್ವೆಟ್ ಹಾಲ್, ಶ್ರೀಮತಿ ಸಾವಿತ್ರೀ ಪಿ. ಕೆ. ಸಾಲಿಯನ್ ವೇದಿಕೆ, ಶ್ರೀಮತಿ ವಸಂತಿ ಸದಾಶಿವ ಬಂಜನ್ ಆಡಳಿತ ಕಚೇರಿ

    ​ಭವನ ನಿರ್ಮಾಣಕ್ಕೆ ಉದಾರವಾಗಿ ದೇಣಿಗೆ ನೀಡಿದ ದಾನಿಗಳಾದ ಸುನಿಲ್ ರಾಜು ಸಾಲಿಯಾನ್, ಗಿರೀಶ್ ಬಿ. ಸಾಲಿಯಾನ್, ಜಗದೀಶ್ ಆರ್. ಬಂಜನ್, ಎಸ್.ಆರ್. ಬಂಜನ್, ವಿಶ್ವನಾಥ ಬಂಗೇರ, ಜಯರಾಜ್ ಪಿ. ಕೆ. ಸಾಲಿಯಾನ್ ಮತ್ತು ಡಾ. ಸುರೇಖಾ ರತನ್ ಕುಲಾಲ್ ಅವರ ಮಾತೃಶ್ರೀ ಅವರನ್ನು ಗೌರವಿಸಲಾಯಿತು.

    ​ಅಲ್ಲದೆ, ಸಂಘದ ಗೌರವ ಅಧ್ಯಕ್ಷ ಪಿ. ದೇವದಾಸ್ ಎಲ್. ಕುಲಾಲ್ ಮತ್ತು ಅಧ್ಯಕ್ಷ ರಘು ಎ. ಮೂಲ್ಯ ಪಾದೆಬೆಟ್ಟು ಅವರನ್ನು ಸಹ ಸನ್ಮಾನಿಸಲಾಯಿತು.

    ​ಓಡಿಯೂರು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಮತ್ತು ಕರ್ಮಯೋಗಿ ಶ್ರೀ ಶ್ರೀ ಮೋಹನ್ ದಾಸ ಪರಮಹಂಸ ಸ್ವಾಮೀಜಿ ಅವರು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

    ​ಸಮಾರಂಭದಲ್ಲಿ ಕೇಂದ್ರ ಸಚಿವ ಶ್ರೀಪಾದ ನಾಯಕ್, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾ. ಬ್ರಿಜೇಶ್ ಚೌಟ, ಮಂಗಳೂರಿನ ಶಾಸಕ ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮಾಜಿ ಸಚಿವ ಬಿ. ರಮಾನಾಥ ರೈ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ಎಂ. ರೈ ಉಪಸ್ಥಿತರಿದ್ದರು.

    ​ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ, ನಡುಬೆಟ್ಟು ಶ್ರೀ ಉದ್ಧವ ರೌದ್ರನಾಥೇಶ್ವರ ದೇವಸ್ಥಾನದ ಧರ್ಮದರ್ಶಿ ಡಾ. ರವಿ ಎನ್., ಮಂಗಳಾದೇವಿ ದೇವಸ್ಥಾನದ ಟ್ರಸ್ಟಿ ಅರುಣ್ ಕುಮಾರ್ ಐತಾಳ್, ಮಾರ್ಗನ್ಸ್ ಗೇಟ್ ಸೇಂಟ್ ರಿಚರ್ಡ್ ಧರ್ಮ ಕ್ರೋಸ್ತಾ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಮುಂಬೈ ಭಾರತ್ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಸೂರ್ಯ ಕಾಂತ ಜಯ ಸುವರ್ಣ, ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಸ್ಥಾಪಕ ಜಯಕೃಷ್ಣ ಎ. ಶೆಟ್ಟಿ, ಬಂಟರ ಸಂಘ ಮುಂಬೈಯ ಎಸ್ ಎಂ ಶೆಟ್ಟಿ ಶಿಕ್ಷಣ ಸಮೂಹ ಸಂಸ್ಥೆಗಳ ಕಾರ್ಯಾಧ್ಯಕ್ಷ ಮುಂಡ್ಕೂರು ರತ್ನಾಕರ ಶೆಟ್ಟಿ, ಮುಂಬೈ ಉದ್ಯಮಿ ಮತ್ತು ಸಮಾಜ ಸೇವಕ ರವೀಂದ್ರನಾಥ್ ಭಂಡಾರಿ ಭಾಗವಹಿಸಿದ್ದರು.

    ​ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್, ನಾಸಿಕ್ ಉದ್ಯಮಿಗಳಾದ ಸಂಜೀವ ಕೆ. ಬಂಗೇರ, ರಮಾನಂದ ಬಂಗೇರ, ಕೆಪಿಸಿಸಿ ಸದಸ್ಯ ಪೃಥ್ವಿರಾಜ್ ಎಡಪದವು, ಬಿಲ್ಲವ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ ನ ಕಾರ್ಯಾಧ್ಯಕ್ಷ ಎನ್. ಟಿ. ಪೂಜಾರಿ, ದ.ಕ. ಜಿಲ್ಲಾ ಮಾಜಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಬೆಂಗಳೂರು ಕುಲಾಲ ಸಂಘದ ಅಧ್ಯಕ್ಷ ದಿವಾಕರ ಮೂಲ್ಯ, ಕಾಸರಗೋಡು ಜಿಲ್ಲಾ ಕುಲಾಲ ಸಂಘದ ಅಧ್ಯಕ್ಷ ರವೀಂದ್ರ ಮನ್ನಿಪ್ಪಾಡಿ, ಬರ್ಕೆ ಫ್ರೆಂಡ್ಸ್‌ ಅಧ್ಯಕ್ಷ ಯಜೇಶ್ ಬರ್ಕೆ ಹಾಗೂ ಸ್ಥಳೀಯ ಸಂಘಟನೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

    ​ಕುಲಾಲ ಸಂಘ ಮುಂಬೈಯ ಗೌರವಾಧ್ಯಕ್ಷ ಪಿ. ದೇವದಾಸ್ ಎಲ್. ಕುಲಾಲ್ ಅವರು ದಿಕ್ಸೂಚಿ ಭಾಷಣ ಮಾಡಿದರು. ಗೌರವ ಪ್ರಧಾನ ಕಾರ್ಯದರ್ಶಿ ಕರುಣಾಕರ ಬಿ. ಸಾಲಿಯಾನ್ ಸ್ವಾಗತಿಸಿದರು. ಉಪಾಧ್ಯಕ್ಷ ಡಿ. ಐ. ಮೂಲ್ಯ ವಂದನಾರ್ಪಣೆ ಮಾಡಿದರು.

    ​ಕಾರ್ಯಕ್ರಮದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ ಪದಾಧಿಕಾರಿಗಳು: ಗೌ. ಕೋಶಾಧಿಕಾರಿ ಜಯ ಎಸ್. ಅಂಚನ್, ಗೌ. ಜೊತೆ ಕಾರ್ಯದರ್ಶಿಗಳಾದ ಲಕ್ಷ್ಮಣ್ ಸಿ. ಮೂಲ್ಯ ಮತ್ತು ಸುನಿಲ್ ಕೆ. ಕುಲಾಲ್, ಜೊತೆ ಕೋಶಾಧಿಕಾರಿ ರೇಣುಕಾ ಎಸ್. ಸಾಲ್ಯಾನ್, ಕಟ್ಟಡ ಸಮಿತಿ ಕಾರ್ಯಾಧ್ಯಕ್ಷ ಗಿರೀಶ್ ಬಿ. ಸಾಲ್ಯಾನ್, ಉಪಕಾರ್ಯಾಧ್ಯಕ್ಷರುಗಳಾದ ಸುನಿಲ್ ಆರ್. ಸಾಲ್ಯಾನ್, ಜೈರಾಜ್ ಪಿ. ಸಾಲ್ಯಾನ್, ಮಮತಾ ಎಸ್. ಗುಜರಾನ್, ಕಾರ್ಯದರ್ಶಿ ಉಮೇಶ್ ಎಂ. ಬಂಗೇರ, ಕುಲಾಲ ಭವನ ಉದ್ಘಾಟನಾ ಸಮಿತಿ ಕಾರ್ಯಾಧ್ಯಕ್ಷ ಬಿ. ದಿನೇಶ್ ಕುಲಾಲ್.

    ​ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಚಿತಾ ಡಿ. ಬಂಜನ್, ಉಪಕಾರ್ಯಾಧ್ಯಕ್ಷೆ ಕವಿತಾ ಸಿ. ಹಂಡಾ, ಕಾರ್ಯದರ್ಶಿ ನಯನಾ ಎನ್. ಬಂಗೇರ, ಕೋಶಾಧಿಕಾರಿ ಲತಾ ಎಸ್. ಮೂಲ್ಯ, ಅಮೂಲ್ಯ ಸಂಪಾದಕ ಆನಂದ್ ಬಿ. ಮೂಲ್ಯ, ಉಪ ಸಂಪಾದಕ ಎಲ್. ಆರ್. ಮೂಲ್ಯ ಹಾಗೂ ಜ್ಯೋತಿ ಸಹಕಾರಿ ಕ್ರೆಡಿಟ್ ಸೊಸೈಟಿ ಲಿಮಿಟೆಡ್, ಮುಂಬೈ ಕಾರ್ಯ ಧ್ಯಕ್ಷ ಎನ್. ಜಿ. ಮೂಲ್ಯ, ಕುಲಾಲ ಸಂಘ ಕೊಲ್ಯದ ಭಾಸ್ಕರ್ ಕುತ್ತಾರ್ ಹಾಜರಿದ್ದರು.

    ​ವೇದಿಕೆಯಲ್ಲಿ ಯಜ್ನೇಶ್ ಬರ್ಕ್, ಸ್ಥಾಪಕ ಅಧ್ಯಕ್ಷರು, ಬರ್ಕೆ ಫ್ರೆಂಡ್ಸ್, ಮಂಗಳೂರು, ಕೆ. ಗೋವಿಂದ ಬಂಗೇರ, ಪಿ. ಶೇಖರ್ ಮೂಲ್ಯ, ನ್ಯಾ. ಉಮನಾಥ್ ಕೆ. ಮೂಲ್ಯ, ಆನಂದ ಕೆ. ಕುಲಾಲ್, ಸಂಜೀವ ಎನ್. ಬಂಗೇರ, ಸುಂದರ್ ಎನ್. ಮೂಲ್ಯ, ವೇಣುಗೋಪಾಲ ಡಿ. ಕರ್ಕೆರ, ಸುಚಿತ್ರಾ ಡಿ. ಬಂಜನ್, ರಘು ಆರ್. ಮೂಲ್ಯ, ಸುಕುಮಾರ ಎಸ್. ಸಾಲ್ಯಾನ್, ಹರಿಯಪ್ಪ ಕೆ. ಮೂಲ್ಯ ಸೇರಿದಂತೆ ಕಾರ್ಯಕಾರಿ ಸಮಿತಿಯ ಸದಸ್ಯರುಗಳು ಮತ್ತು ವಿವಿಧ ಸಮಿತಿಗಳ ಸದಸ್ಯರು ಉಪಸ್ಥಿತರಿದ್ದರು.

    ಅರುಣಾ ಕುಲಾಲ್, ಪ್ರವೀಣ್ ಬಸ್ತಿ ಮತ್ತು ನವೀನ್ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.



    Related posts

    ಅಜಿತ್ ಪವಾರ್ ನಿಧನ : ಮಹಾರಾಷ್ಟ್ರ ಸರ್ಕಾರದ ಅಧಿಕೃತ ಪ್ರಕಟಣೆ

    Mumbai News Desk

    ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಜು16 ರಿಂದು 27 ವರೆಗೆ ಮುಂಬಯಿ ನಗರದಲ್ಲಿ.

    Mumbai News Desk

    ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ (ರಿ.) ಪದ್ಮವಿಭೂಷಣ ಜಾರ್ಜ್ ಫರ್ನಾಂಡಿಸ್ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ-2025 ಪ್ರದಾನ ಸಮಾರಂಭ, ಪೂರ್ವಭಾವಿ ಸಭೆ

    Mumbai News Desk

    ಭಾಷೆಗಳು ಸ್ನೇಹ ಸೌಹಾರ್ದತೆಯ ಸಂಕೇತ’ -ಆಶಿಶ್ ಶೇಲಾರ್

    Mumbai News Desk

    ಜಾಗತಿಕ, ರಾಷ್ಟ್ರೀಯ, ರಾಜ್ಯ ಮತ್ತು ಮುಂಬೈ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಇಂದಿನ (03/06/26)ಪ್ರಮುಖ ವಿದ್ಯಮಾನಗಳ ಸಂಕ್ಷಿಪ್ತ ಸುದ್ದಿ ಸಂಕಲನ

    Mumbai News Desk

    ಸಚಿವೆ ಲಕ್ಶ್ಮೀ ಹೆಬ್ಬಾಳ್ಕರ್ ವಿರುದ್ಧ ಅಶ್ಲೀಲ ಪದ ಬಳಕೆ : ವಿಧಾನ ಪರಿಷತ್ ಸದಸ್ಯ ಸಿ ಟಿ ರವಿ ಬಂಧನ

    Mumbai News Desk