September 6, 2026
Mumbai News Kannada
ಕ್ರೀಡೆ

ಸೈಂಟ್ ಆಗ್ನೆಸ್ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕ ಕ್ರೀಡಾಕೂಟ:





“ವಿದ್ಯಾಭ್ಯಾಸದೊಂದಿಗೆ ಕ್ರೀಡೆಯಲ್ಲೂ ಆಸಕ್ತರಾಗಿ”: ಭಾಸ್ಕರ್ ಶೆಟ್ಟಿ ಅವರಿಂದ ವಿದ್ಯಾರ್ಥಿಗಳಿಗೆ ಕರೆ

ಮೀರಾ ರೋಡ್ (ಡಿ6):

​ರೈ ಸುಮತಿ ಎಜುಕೇಷನಲ್ ಟ್ರಸ್ಟ್‌ನ ಆಶ್ರಯದಲ್ಲಿ ನಡೆಯುತ್ತಿರುವ ಸೈಂಟ್ ಆಗ್ನೆಸ್ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕ ಕ್ರೀಡಾಕೂಟವು ಮೀರಾ ರೋಡ್‌ನ ಸಚಿನ್ ತೆಂಡೂಲ್ಕರ್ ಮೈದಾನದಲ್ಲಿ ವೈಭವದಿಂದ ಜರುಗಿತು.

​ಈ ಕಾರ್ಯಕ್ರಮಕ್ಕೆ ಮೀರಾ-ಭಯಂದರ್‌ನ ಹೆಸರಾಂತ ಉದ್ಯಮಿ ಭಾಸ್ಕರ್ ಶೆಟ್ಟಿ, ಕಾಶಿಮೀರಾ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಶುಭ ಹಾರೈಸುತ್ತಾ, “ವಿದ್ಯಾಭ್ಯಾಸದಷ್ಟೇ ಕ್ರೀಡೆಯಲ್ಲೂ ಹೆಚ್ಚು ಆಸಕ್ತಿ ವಹಿಸಿ” ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

​ಸಂಸ್ಥೆಯ ಸಂಸ್ಥಾಪಕರಾದ ಡಾ. ಅರುಣೋದಯ ಎಸ್. ರೈ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. “ಶಿಕ್ಷಣವು ಬದುಕನ್ನು ರೂಪಿಸಿದರೆ, ಕ್ರೀಡೆಯು ಆರೋಗ್ಯವನ್ನು ಕಾಪಾಡುತ್ತದೆ. ಸ್ಪರ್ಧೆಯಲ್ಲಿ ಗೆಲ್ಲುವುದಕ್ಕಿಂತ ಪಾಲ್ಗೊಳ್ಳುವುದು ಮುಖ್ಯ” ಎಂದು ನುಡಿದರು.

​ಉಪ ಸಂಸ್ಥಾಪಕರಾದ ಮಥಾಯಸ್ ಫರ್ನಾಂಡಿಸ್ ಅವರು ಕ್ರೀಡೆಯ ಮಹತ್ವವನ್ನು ಮನವರಿಕೆ ಮಾಡಿಕೊಟ್ಟರು. ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಕ್ರೀಡಾ ಚಟುವಟಿಕೆಗಳು ಅನಿವಾರ್ಯವಾಗಿದ್ದು, ವಿದ್ಯಾರ್ಥಿಗಳು ಕ್ರೀಡೆ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಪ್ರೋತ್ಸಾಹಿಸಿದರು.

​ಕ್ರೀಡಾಕೂಟದಲ್ಲಿ ಶಾಲೆಯ ಪ್ರಾಂಶುಪಾಲರು, ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿ ವರ್ಗದವರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ವಿದ್ಯಾರ್ಥಿಗಳು ರಿಲೇ ರೇಸ್, ಶಾಟ್‌ಪುಟ್, ಕಬಡ್ಡಿ ಸೇರಿದಂತೆ ಅನೇಕ ಕ್ರೀಡಾ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು ಮತ್ತು ವಿವಿಧ ಪದಕಗಳನ್ನು ಪಡೆದರು. ಈ ಸಂದರ್ಭದಲ್ಲಿ ಪಾಲಕರ ವರ್ಗವೂ ಸಕ್ರಿಯವಾಗಿ ಭಾಗವಹಿಸಿ ಕಾರ್ಯಕ್ರಮಕ್ಕೆ ಇನ್ನಷ್ಟು ಹುರುಪು ತುಂಬಿದರು.

ಡಾ. ಅರುಣೋದಯ ರೈ ಅವರು ಸ್ಥಾಪಿಸಿದ ರೈ ಸುಮತಿ ಎಜುಕೇಷನಲ್ ಟ್ರಸ್ಟ್ ಶಿಕ್ಷಣ ಕ್ಷೇತ್ರದಲ್ಲಿ ತನ್ನ ಅದ್ಭುತ ಸಾಧನೆಗಳಿಂದ ಪ್ರಸಿದ್ಧಿ ಪಡೆದಿದೆ. ಕಳೆದ 22 ವರ್ಷಗಳಿಂದ, ಟ್ರಸ್ಟ್‌‌ನ ಶಾಲೆಗಳು ಎಸ್.ಎಸ್.ಸಿ. (SSC) ಬೋರ್ಡ್ ಪರೀಕ್ಷೆಗಳಲ್ಲಿ ಸತತವಾಗಿ ಶೇಕಡಾ 100 ರಷ್ಟು ಫಲಿತಾಂಶಗಳನ್ನು ಸಾಧಿಸುತ್ತಾ ಬಂದಿವೆ.



Related posts

ಫೇಮಸ್ ಯೂತ್ ಕ್ಲಬ್ ವತಿಯಿಂದ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ

Mumbai News Desk

ಸಮರ್ಥ್ ರೈ, ಮಹಾರಾಷ್ಟ್ರ ರಾಜ್ಯ ಲೀಗ್ ಫುಟ್ಬಾಲ್ ಟೂರ್ನಮೆಂಟ್‌ನಲ್ಲಿ ಅಂಡರ್-15 ವಿಭಾಗದಲ್ಲಿ ಅತೀ ಹೆಚ್ಚು ಗೋಲ್ ಹೊಡೆತದಿಂದ,ತಂಡ ಟಾಪ್ 3ರ ಸ್ಥಾನಕ್ಕೆ

Mumbai News Desk

ಏಷ್ಯನ್ ಮಾಸ್ಟರ್ಸ್ ವೇಟ್‌ಲಿಫ್ಟಿಂಗ್ ಕಮಿಟಿ (AMW);    ಅಂತರಾಷ್ಟ್ರೀಯ ವೇಟ್ ಲಿಫ್ಟರ್ ಉದಯ  ಶೆಟ್ಟಿ  ಆಯ್ಕೆ

Mumbai News Desk

ಆಸ್ಟ್ರೇಲಿಯಾದಲ್ಲಿ ಟೀಮ್ ಇಂಡಿಯಾಗೆ ಮಹಾಮೋಸ – ಅನ್ಯಾಯದ ತೀರ್ಪಿಗೆ ಯಶಸ್ವಿ ಜೈಸ್ವಾಲ್ ಬಲಿ.

Mumbai News Desk

ರಾಜ್ಯ ಮಟ್ಟದ ಕರಾಟೆ ಚಾಂಪಿಯನ್‌ಶಿಪ್: ಥಾಣೆಯ ಆರೋಹಿ ಎಸ್ ಪೂಜಾರಿಗೆ ಚಿನ್ನ ಮತ್ತು ಕಂಚಿನ ಪದಕಗಳ ಸಾಧನೆ

Mumbai News Desk

N.E.S ಸೋಸೈಟಿಯ ಅಭಿನವ ಪಬ್ಲಿಕ್ ಸ್ಕೂಲ್ (CBSE Board) ನ ವಾರ್ಷಿಕ ಕ್ರೀಡಾಕೂಟ

Mumbai News Desk