32 C
Mumbai
March 7, 2026
Mumbai News Kannada
ಮುಂಬಯಿ

ಮಾಟುಂಗಾ ಮುಂಬೈ ಕನ್ನಡ ಸಂಘದ ವತಿಯಿಂದ ದತ್ತಿ ಉಪನ್ಯಾಸಗಳ ಕಾರ್ಯಕ್ರಮ





ಮಾಟುಂಗಾ ಪೂರ್ವದ ಮುಂಬಯಿ ಕನ್ನಡ ಸಂಘದ ವತಿಯಿಂದ ಎರಡು ದತ್ತಿ ಉಪನ್ಯಾಸಗಳ ಕಾರ್ಯಕ್ರಮವು 20 ಡಿಶಂಬರ 2025 ರಂದು ಸಾಯಂಕಾಲ 5ಗಂಟೆಗೆ ಮಾಟುಂಗಾ ಪೂರ್ವದ ಬಾವುದಾಜಿ ರಸ್ತೆಯಲ್ಲಿರುವ ಮೈಸೂರು ಅಸೋಸಿಯೇಶನ್ ಇದರ ತಳಹ ಮಹಡಿಯ ಸಭಾಗೃಹದಲ್ಲಿ ಸಂಘದ ಅಧ್ಯಕ್ಷ ಶ್ರೀ ಗುರು ರಾಜ ಎಸ್ ನಾಯಕ್ ಅವರ ಅಧ್ಯಕ್ಷತೆಯಲ್ಲಿ ಜರುಗಿತು.

ಕಾರ್ಯಕ್ರಮದ ಗೌರವ ಅತಿಥಿ ಡಾ ಸುಮಾ ದ್ವಾರಾಕನಾಥರು ಮಾತನಾಡುತ್ತ ಇಂದಿನ ಆಧುನಿಕ ಶಿಕ್ಷಣದಲ್ಲಿ ಜೀವನಕ್ಕೆ ಬೇಕಾಗಿರುವ ಮೌಲ್ಯ ಶಿಕ್ಷಣ ನೀಡುತ್ತಿಲ್ಲ.ಇಂದು ಜಾರಿಗೆ ತಂದಿರುವ ಹೊಸ ಶಿಕ್ಷಣದ ಬಾರಿ ಬದಲಾವಣೆಯನ್ನು ತಂದಿದೆ. ಈ ಹೊಸ ಶಿಕ್ಷಣ ನೀತಿಯಿಂದ ಮೊಬೈಲ್, ಲ್ಯಾಪ್ ಟ್ಯಾಪ್ ಉಪಕರಣದ ಬಳಿಕೆಗೆ ಪ್ರೋತ್ಸಾಹ ಕೊಡುತ್ತದೆ. ಆದ್ದರಿಂದ ಮಕ್ಕಳು ಕಲಿಕೆಯಲ್ಲಿ ಮೊಬೈಲ್ ಬಳಕೆ ಮಾಡುವುದರ ಜೊತೆಗೆ ಓದುವ ಪರಿಪಾಠ ಕಡಿಮೆಯಾಗಿರುವುದನ್ನು ಕಾಣುತ್ತೇವೆ.ದೃಶ್ಯ ಮಾಧ್ಯಮದ ಕಲಿಕೆಗೆ ಕಲಿಕೆಗೆ ದೃಷ್ಟಿ ಗಮನ ಕೊಡುವುದರಿಂದ ಮಾನವೀಯ ಮೌಲ್ಯಗಳ ಬೆಳೆಸುವುದು ಅಸಾಧ್ಯ ವಾಗಿದೆ. ಇಂದಿನ ಮಕ್ಕಳು ಮೊಬೈಲ್ ಇದರ ದಾಸರಾಗಿದ್ದಾರೆ.ಮಕ್ಕಳು ಮೊಬೈಲ್ನಿಂದ ನಿಯಂತ್ರಣ ಮಾಡಲು ಪಾಲಕರಿಗೆ ಆಗುತ್ತಿಲ್ಲ.ಪಾಲಕರು ಮಕ್ಕಳ ಆಸಕ್ತಿಗನುಸಾರ ಪ್ರೋತ್ಸಾಹ ಕೊಡಬೇಕು ಮತ್ತು ಅವರಿಗೆ ಸಂಸ್ಕಾರ-ಸಂಸ್ಕೃತಿಯ ಕಲಿಸಬೇಕು. ಮನೆಯೇ ಮೊದಲ ಪಾಠ ಶಾಲೆ.ತಾಯಿಯೇ ಮೊದಲು ಗುರು. ಮುಂದೆ ಗುರಿ ಇರಬೇಕು. ಹಿಂದೆ ಗುರು ಬೇಕು ಎಂದು ಮಕ್ಕಳು ಮತ್ತು ಶಿಕ್ಷಣದ ಬಗ್ಗೆ ಕುರಿತು ಮಾತನಾಡಿದರು.

ದಿವಂಗತ ಜಿ ವಿ. ರಂಗಸ್ವಾಮಿ ಇವರ ಸ್ಮರಣಾರ್ಥ ಮುಂಬಯಿ ಮಹಾ ನಗರ ಪಾಲಿಕಾ ಕೊಡ ಮಾಡುವ ಮಹಾ ಪೌರ ಆದರ್ಶ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶ್ರೀ ಮಹದೇವ ಎಸ್.ಜಾವೀರ ನವ ಭಾರತ ನಿರ್ಮಾಣದಲ್ಲಿ ಶಿಕ್ಷಣದ ಪಾತ್ರ ಎಂಬ ವಿಷಯ ಕುರಿತು ಮಾತನಾಡಿದರು ಅವರು ತಮ್ಮ ಉಪನ್ಯಾಸ ಮಾಲಿಕೆಯಲ್ಲಿ ನವಭಾರತದ ನಿರ್ಮಾಣಕ್ಕೆ ಶಿಕ್ಷಣವೇ ಮೂಲಶಕ್ತಿ.ಶಿಕ್ಷಣ ಕೇವಲ ಅಕ್ಷರಜ್ಞಾನ ಅಥವಾ ಉದ್ಯೋಗಕ್ಕೆ ಸೀಮಿತವಲ್ಲ; ಅದು ಮಾನವನ ಸರ್ವಾಂಗೀಣ ವಿಕಾಸಕ್ಕೆ ದಾರಿ ಮಾಡಿಕೊಡುತ್ತದೆ. ನೈತಿಕತೆ, ಮಾನವೀಯತೆ, ವಿವೇಕ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವ ಶಿಕ್ಷಣವೇ ನವಭಾರತದ ಅಡಿಪಾಯ. ಆದರೆ ಇಂದಿನ ಸಮಾಜದಲ್ಲಿ ಕಂಡುಬರುವ ಅಸಹಿಷ್ಣುತೆ, ಭ್ರಷ್ಟಾಚಾರ, ಮೌಲ್ಯಾಧಾರಿತ ಶಿಕ್ಷಣದ ಕೊರತೆಯನ್ನು ಸೂಚಿಸುತ್ತವೆ. ಶಿಕ್ಷಣವು ವೈಜ್ಞಾನಿಕ ಮನೋಭಾವ, ಸಮಾನತೆ ಮತ್ತು ಸಹಿಷ್ಣುತೆಯನ್ನು ಬೆಳೆಸಿದಾಗ ಮಾತ್ರ ಸಮಾಜ ಸುಧಾರಣೆ
ಯಾಗುತ್ತದೆ. ಕೌಶಲ್ಯಾಧಾರಿತ ಮತ್ತು ತಂತ್ರಜ್ಞಾನ ಶಿಕ್ಷಣವು ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಗೆ ನೆರವಾಗುತ್ತದೆ. ಮತ್ತು ವೇದಶಿಕ್ಷಣ ಮತ್ತು ಪಂಚಕೋಶ ಸಿದ್ಧಾಂತದಂತೆ, ಶಿಕ್ಷಣ ದೇಹದಿಂದ ಆತ್ಮದವರೆಗೆ ವಿಕಾಸ ನೀಡಬೇಕು. ಶಿಕ್ಷಣವೇ ಸಶಕ್ತ ಭಾರತ ಹಾಗೂ ನವಭಾರತದ ಆತ್ಮವಾಗಿದೆ.ಎಂದು ಹೇಳುತ್ತಾ ನವ ಭಾರತ ನಿರ್ಮಾಣದಲ್ಲಿ ಶಿಕ್ಷಣವು ಪ್ರಮುಖ ಪಾತ್ರ ವಹಿಸುತ್ತದೆ. ಎಂದು ತಮ್ಮ ಉಪನ್ಯಾಸದ ಮೂಲಕ ಪ್ರಬಂಧ ಮಂಡಿಸಿದರು.

ಖಾಲ್ಸಾ ಕಾಲೇಜು ಕನ್ನಡ ಪ್ರೇಮಿ ಮಂಡಳಿ ದತ್ತಿ ನಿಧಿಯ ಪರವಾಗಿ ಉದಯೋನ್ಮುಖ ಕವಯತ್ರಿ ದೀಪಾ ಹರೀಶ ಶೆಟ್ಟಿ ಅವರು ಇಂದಿನ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳು ಎಂಬ ವಿಷಯದ ಮೇಲೆ ಪ್ರಬಂಧ ಮಂಡಿಸಿದರು. ಅವರು ನಮ್ಮ ಸಂವಿಧಾನ ಮಹಿಳೆಯರ ಹಿತಕ್ಕಾಗಿ ಅನೇಕ ನಿಯಮ ಜಾರಿಗೆ ತಂದಿದೆ. ಮಹಿಳೆ ಹಕ್ಕುಗಳನ್ನು ಉತ್ತೇಜಸಲು ಸ್ವಾತಂತ್ರ್ಯದ ಹಕ್ಕು ಕೊಟ್ಟಿದೆ. ಆದರೂ ಇಂದಿಗೂ ಸಾಮಾಜದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳು ಸಾಕಷ್ಟು ಇವೆ. ಪ್ರತಿಯೊಂದು ಹೆಜ್ಜೆಯಲ್ಲೂ ಮಹಿಳೆಯರಿಂದು ಸಮಾನತೆ ಹತ್ತಿರವಾಗಿದ್ದರೂ ಮಹಿಳಾ ಉದ್ಯಮಿಗಳು ಮತ್ತು ದುಡಿಯುವ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಸವಾಲುಗಳ ವರ್ತುಲದಲ್ಲಿ ಸಿಲುಕಿ ಕೊಂಡಿದ್ದಾರೆ. ಹೆಣ್ಣು-ಗಂಡು ಎಂಬ ಬೇದವಿಲ್ಲದೆ ಸಮಾನತೆಯ ಪರಿಹಾರ ಕಂಡು ಕೊಳ್ಳಬೇಕಾಗಿದೆ. ಆಗ ಮಾತ್ರ ಸಾಂಸ್ಕೃತಿಕ ಬದುಕಿಗೆ ದಾರಿ ಮಾಡಿ ಕೊಡಲು ಅಣಿಯಾಗಯುತ್ತದೆ.ಇಂದಿನ ಮಹಿಳೆಯರ ಮೇಲೆ ಸಾಕಷ್ಟು ದೌರ್ಜನ್ಯ ನಡೆಯುತ್ತದೆ. ಅದನ್ನು ತಡೆಯುವಲ್ಲಿ ನ್ಯಾಯಾಲಯ ಕಠಿಣ ಕಾನೂನುಗಳನ್ನು ಜಾರಿಗೆ ತರಬೇಕಾಗಿದೆ. ಹೆರಿಗೆ ಸೌಲಭ್ಯ ಕಾಯ್ದೆಯಂತಹ ಕಾನೂನುಗಳನ್ನು ಕಟ್ಟು ನಿಟ್ಟಾಗಿ ಜಾರಿಗೆ ತರಬೇಕು. ಅಂತರ್ಜಾಲ ನೆಲೆಯಲ್ಲಿ ಮಹಿಳೆಯರಿಗೆ ತಂತ್ರ ಜ್ಞಾನದ ಶಿಕ್ಷಣ ನೀಡುವ ಮುಖೇನ ಅವರ ಕೌಶಲ್ಯ ವೃದ್ಧಿಸುವ ಸಾಧ್ಯತೆಯಿದೆ.ಆರೋಗ್ಯ ದೃಷ್ಟಿಯಿಂದ ದೈಹಿಕ ಮಾನಸಿಕ ಸದೃಢಗೊಳಿಸಲು ಸಹಾಯಧನ ಸಿಗಬೇಕು.ಕಿರುಕುಳ ವಿರೋಧಿ ತರಬೇತಿಯನ್ನು ಲಲಿತೆಯರಿಗೂ ನೀಡಿ ಸಬಲಗೊಳಿಸಬೇಕು.ಎಂಬ ಮಹಿಳೆಯರ ಎದುರಿಸುತ್ತಿರುವ ಸಮಸ್ಯಗಳಿಗೆ ಪರಿಹಾರ ಕಂಡು ಕೊಳ್ಳುವ ನಿಟ್ಟಿನಲ್ಲಿ ಸದಾಶಯದ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಪ್ರಸ್ತಾವನೆಯನ್ನು ಮಾಟುಂಗಾ ಪೂರ್ವದಲ್ಲಿರುವ ಮುಂಬಯಿ ಕನ್ನಡ ಸಂಘದ ಅಧ್ಯಕ್ಷ ಶ್ರೀ ಗುರುರಾಜ ಎಸ್. ನಾಯಕ್ ಅವರು ಮಾಡುತ್ತ ನಮ್ಮ ಸಂಘವು ಕಳೆದ ಒಂಬತ್ತು ದಶಕಗಳಿಂದ ಕನ್ನಡ ನಾಡು ನುಡಿಗಾಗಿ ಸೇವೆ ಸಲ್ಲಿಸುತ್ತಾ ಬಂದಿರುತ್ತದೆ. ನಮ್ಮಸಂಘಕ್ಕೆ ಅನೇಕ ಪ್ರಸಿದ್ಧ ಸಾಹಿತಿಗಳಿಂದ ಹಿರಿಮೆ ಪಡೆದ ಸಂಘ ನಮ್ಮದಾಗಿದೆ.ಇದೀಗ ಶತಮಾನದತ್ತ ಸಾಗುತ್ತಿರುವ ನಮ್ಮ ಸಂಘವು ಹೊಸ ಕಟ್ಟಡ ನಿರ್ಮಿತದ ಕೆಲಸ ನಡೆಯುತ್ತಿದ್ದು ನಮ್ಮ ಸಂಘಕ್ಕಾಗಿ ಜಾಗದ ಮಹಡಿ ಸಿಗಲೆಂದು ತಿಳಿಸಿದರು.ಇಂದು ಸಂಘದ ವತಿಯಿಂದ ಆಯೋಜಿಸಿದ ಎರಡು ದತ್ತಿ ಉಪನ್ಯಾಸಗಳ ಕಾರ್ಯಕ್ರಮವು ಸಾಹಿತಿಗಳ ಸಮ್ಮುಖದಲ್ಲಿ ನಡೆಯುತ್ತಿರುವುದು ನಮಗೆ ಖುಷಿ ತರುತ್ತದೆ.ಎಂದು ಸಂಘವನ್ನುದ್ದೇಶಿಸಿ ಮಾತನಾಡಿದರು.

ಕಾರ್ಯಕ್ರಮದ ಗೌರವ ಅತಿಥಿ ಹಿರಿಯ ಸಾಹಿತಿ ಡಾ ಸುಮಾ ದ್ವಾರಕನಾಥ ಅವರನ್ನು ಸಂಘದ ಮಹಿಳಾ ವಿಭಾಗದ ಕಾರ್ಯದರ್ಶಿ ಪ್ರಭಾ ಎನ್. ಸುವರ್ಣರು, ಉಪನ್ಯಾಸಕ ಶಿಕ್ಷಕ ಮಹಾದೇವ ಎಸ್ ಜಾವೀರ ಇವರಿಗೆ ಸಂಘದ ಕಾರ್ಯಕಾರಣಿ ಸದಸ್ಯ ಸುಧಾಕರ ಪೂಜಾರಿ ಮತ್ತು ಉಪನ್ಯಾಸಕಿ ಕವಯತ್ರಿ ದೀಪಾ ಎಚ್. ಶೆಟ್ಟಿ ಅವರಿಗೆ ಸಂಘದ ಮಹಿಳಾ ವಿಭಾಗ ಕಾರ್ಯಾಧ್ಯಕ್ಷೆ ಡಾ ರಜನಿ ವಿ. ಪೈ ಶಾಲು ಹೊದಿಸಿ ಪುಷ್ಪ ಗುಚ್ಚ ನೀಡಿ ಮತ್ತು ನೆನಪಿನ ಕಾಣಿಕೆ ನೀಡಿ ಗೌರವಿಸಿದರು ಮತ್ತು ಮುಂಬೈ ವಿಶ್ವ ವಿದ್ಯಾಲಯ ಕನ್ನಡ ವಿಭಾಗದಿಂದ 2024-2025ರ ಶೈಕ್ಷಣಿಕ ವರ್ಷದ ಎಂ. ಎ ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ ವಿಕ್ರಮ ಜೋಶಿ ಅವರಿಗೆ ನಮ್ಮ ಸಂಘದ ಗೌರವ ಪೋಷಕ ಸದಸ್ಯರಾದ ನಾರಾಯಣ ಸುವರ್ಣ ಅವರು ನಗದು ಬಹುಮಾನ ಮತ್ತು ಪುಷ್ಪ ಗುಚ್ಚ ನೀಡಿ ಗೌರವಿಸಿದರು.ಮತ್ತುಗೌರವ ಅತಿಥಿಗಳ ಪರಿಚಯವನ್ನು ಸಾಹಿತಿ ಸದಸ್ಯೆ ಸುರೇಖಾ ದೇವಾಡಿಗರು ಮಾಡಿದರೆ,ಉಪನ್ಯಾಸಕರಾದ ಮಹಾದೇವ ಜಾವೀರ ಅವರ ಪರಿಚಯವನ್ನು ಶಿಕ್ಷಕ ಮಲ್ಲಿಕಾರ್ಜುನ ಉಪನ್ಯಾಸಕಿ ದೀಪಾ ಎಚ್ ಶೆಟ್ಟಿ ಅವರ ಪರಿಚಯ ವನ್ನು ಕವಯತ್ರಿ ಶಾರದಾ ಅಂಬೇಸಂಗೆ ಅವರು ಮಾಡಿದರು.

ಕಾರ್ಯಕ್ರಮದ ವೇದಿಕೆಯಲ್ಲಿನಮ್ಮ ಸಂಘದ ಅಧ್ಯಕ್ಷ ಜಿ ಎಸ್. ನಾಯಕ್, ಗೌ ಪ್ರದಾನ ಕಾರ್ಯದರ್ಶಿ ಸೋಮನಾಥ ಎಸ್ ಕರ್ಕೇರ,ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಡಾ ರಜನಿ ಪೈ,ಮುಖ್ಯ ಅತಿಥಿ ಸುಮಾ ದ್ವಾರಕನಾಥ,ಉಪನ್ಯಾಸಕರುಗಳಾದ ಶಿಕ್ಷಕ ಮಹಾದೇವ ಜಾವೀರ, ಕವಯತ್ರಿ ದೀಪಾ ಶೆಟ್ಟಿ,ಉಪಸ್ಥಿತಿದ್ದರು. ಕಾರ್ಯಕ್ರಮ ದ ಯಶಸ್ವಿಗೆ ಕಾರಣಿಭೂತರಾದ ಸಂಘದ ಸಂಘದ ಸದಸ್ಯರು, ಸಾಹಿತಿಗಳು,ಶಿಕ್ಷಕರು ಅಧಿಕ ಕನ್ನಡಾಭಿಮಾನಿಗಳು ಸೇರಿದ್ದು ಕಾರ್ಯಕ್ರಮವು ಚೆಂದ ಕಾಣಿಸಿತು.

ಕಾರ್ಯಕ್ರಮವು ಶ್ರೀ ಸುಶೀಲಾ ದೇವಾಡಿಗ ಅವರ ಪ್ರಾರ್ಥನೆಯಿಂದ ಪ್ರಾರಂಭವಾಯಿತು.ಸಂಘದ ಗೌರವ ಪ್ರದಾನ ಕಾರ್ಯದರ್ಶಿ ಶ್ರೀ ಸೋಮನಾಥ ಎಸ್ ಕರ್ಕೇರ ಅವರು ನಿರೂಪಣೆಗೈದರೆ ಸಂಘದ ಜೊತೆ ಕಾರ್ಯದರ್ಶಿ ಶ್ರೀ ರಾಮಚಂದ್ರ ಭಟ್ ಅವರು ಸ್ವಾಗತ ಮಾಡಿದರು. ಮತ್ತು ಕಾರ್ಯಕಾರಣಿ ಸದಸ್ಯ ಶ್ರೀ ಸುಧಾಕರ ಪೂಜಾರಿ ಅವರು ಧನ್ಯವಾದಗೈದರು.
ಸಂಘದ ಸಮಿತಿಯ ಸದಸ್ಯರುಗಳಾದ ನಾರಾಯಣ ರಾವ್ ಮತ್ತು ಶ್ರೀಮತಿ ಸಂದ್ಯಾ ಪೈ, ಶ್ರೀಮತಿ ಶಾರದಾ ಅಂಬೇಸಂಗೆ ಕಾರ್ಯಕ್ರಮಕ್ಕೆ ಸಹಕರಿಸಿದರು.ಕೊನೆಗೆ ಉಪಹಾರದೊಂದಿಗೆ ಕಾರ್ಯಕ್ರಮವು ಅಂತಿಮಗೊಂಡಿತು.



Related posts

ಭಂಡಾರಿ ಸೇವಾ ಸಮಿತಿ ಮುಂಬಯಿ – 70ನೇ ವಾರ್ಷಿಕ ಕೌಟುಂಬಿಕ ಸ್ನೇಹ ಸಮ್ಮಿಲನ

Mumbai News Desk

ಮಲಾಡ್ ಪೂರ್ವದ ಶ್ರೀ ದೇವಿ  ಮಹಮ್ಮಾಯಿ ದೇವಸ್ಥಾನ ದೇವಸ್ಥಾನದ  ವಾರ್ಷಿಕ ಮಹೋತ್ಸವ ಮತ್ತು ಪಾಲ್ಕಿ ಉತ್ಸವ ಭಕ್ತಿ ಸಂಭ್ರಮದೊಂದಿಗೆ ಸಂಪನ್ನ

Mumbai News Desk

ಶ್ರೀ ಮಹಿಷಮರ್ಧಿನಿ ದೇವಸ್ಥಾನ 34ನೇ ವಾರ್ಷಿಕ ಶರವನ್ನವರಾತ್ರಿ ಸಂನನ್ನ:

Mumbai News Desk

ದಿವಾಕರ್ ಕರ್ಕೇರರ ಅಭಿನಂದನಾ ಸಮಾರಂಭ.

Mumbai News Desk

ಹರಟೆ ಸಾಹಿತಿ ದಿ. ಚಂದ್ರಶೇಖರ ರಾವ್ ಜನ್ಮದಿನಾಚರಣೆ: ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ

Mumbai News Desk

ಕನ್ನಡ ಸಂಘ ಸಯನ್ ದ್ವಿತೀಯ ವಾರ್ಷಿಕೋತ್ಸವ ಸಂಭ್ರಮ : ಒಗ್ಗಟ್ಟಿನಿಂದ ಸಂಘದ ಬಲವರ್ಧನೆಗೆ ಪ್ರವೀಣ್ ಭಟ್ ಕರೆ.

Mumbai News Desk