September 6, 2026
Mumbai News Kannada
ಪ್ರಕಟಣೆ

ಜ.24 ; ಬಂಟ್ಸ್ ಫೋರಮ್ ಸದಸ್ಯರಿಂದ ‘ಪನರೆ ಪೋವೊಡ್ಚಿ’ ಮತ್ತು ‘ಸಂಸಾರದ SOME ಸಾರ’ ತುಳು ನಾಟಕ ಪ್ರದರ್ಶನ.






ಮುಂಬಯಿ, ಜ.20: ಬಂಟ್ಸ್ ಫೋರಮ್ ಮೀರಾಭಾಯಂದರ್ ಇದರ ವತಿಯಿಂದ ಜ.24ರಂದು ಮದ್ಯಾಹ್ನ 12.30ರಿಂದ ರಾತ್ರಿ 9 ಗಂಟೆಯವರೆಗೆ ಮೀರಾ ರೋಡ್ ಪೂರ್ವದ ಎಸ್.ಕೆ.ಸ್ಟೋನ್ ಸಮೀಪದ ಸೆಂಟರ್ ಪಾರ್ಕ್ ಎಸಿ ಲಾನ್ ನ ಡಾಕ್ಟರ್ ಆರ್.ಕೆ.ಶೆಟ್ಟಿ ವೇದಿಕೆಯಲ್ಲಿ ನಡೆಯಲಿರುವ ‘ಬಂಟಕೂಟ-2026’ ಸಮಾರಂಭದಲ್ಲಿ ಎರಡು ತುಳು ನಾಟಕಗಳು ಪ್ರದರ್ಶನ ಗೊಳ್ಳಲಿವೆ.
ಮೊದಲನೆಯ ನಾಟಕ ಪ್ರಶಾಂತ್ ಡಿ.ಪಲಿಮಾರ್ ರಚಿಸಿದ ‘ಪನರೆ ಪೋವೊಡ್ಚಿ’ ತುಳು ನಾಟಕದಲ್ಲಿ ಸಂಸ್ಥೆಯ ಸದಸ್ಯರಾದ ಬಾಬಾ ಪ್ರಸಾದ್ ಅರಸ ಕುತ್ಯಾರು, ಜಗದೀಶ್ ಶೆಟ್ಟಿ ಪಂಜಿನಡ್ಕ, ಶೈಲೇಶ್ ಶೆಟ್ಟಿ ಸೂಡ, ರವೀಂದ್ರ ಶೆಟ್ಟಿ ದೇರಳಕಟ್ಟೆ, ಸುಜಾತಾ ಶೆಟ್ಟಿ, ಆದಿತ್ಯ ಶೆಟ್ಟಿ, ತತ್ವಜ್ಞ ಶೆಟ್ಟಿ ಮುಂಡ್ಕೂರು, ದಿವ್ಯಾ ಶೆಟ್ಟಿ, ಶೈಲಜಾ ಶೆಟ್ಟಿ, ಸುನಿತಾ ಶೆಟ್ಟಿ,ಪ್ರಖ್ಯಾತ್ ಶೆಟ್ಟಿ, ಪ್ರವೀಣ್ ಶೆಟ್ಟಿ ಶಿರ್ವ, ಶರತ್ ಶೆಟ್ಟಿ ಹಾಗೂ ದಿಲೀಪ್ ಶೆಟ್ಟಿ ಅಭಿನಯಿಸಲಿದ್ದಾರೆ.

ಎರಡನೆಯ ನಾಟಕ ಜಗದೀಶ್ ಶೆಟ್ಟಿ ಕೆಂಚನಕೆರೆ ರಚನೆಯ ‘ಸಂಸಾರದ SOMEಸಾರ’ ತುಳು ಕಿರುನಾಟಕದಲ್ಲಿ ಮಹಿಳಾ ವಿಭಾಗದ ಸದಸ್ಯೆಯರಾದ ದಿವ್ಯಾ ಹೆಗ್ಡೆ ಪ್ರತಿಭಾ ಶೆಟ್ಟಿ, ಶುಭಲತಾ ಶೆಟ್ಟಿ, ಶೈಲಾ ಹೆಗ್ಡೆ, ಕುಶಿ ಸಿ.ರೈ, ಕಾಶ್ವಿ ಶೆಟ್ಟಿ ಹಾಗೂ ತ್ರಿಶಾ ಶೆಟ್ಟಿ ಅಭಿನಯಿಸಲಿದ್ದಾರೆ.
ಈ ನಾಟಕಗಳನ್ನು ರಂಗನಿರ್ದೇಶಕ ,ನಟ ಜಗದೀಶ್ ಶೆಟ್ಟಿ ಕೆಂಚನಕೆರೆ ನಿರ್ದೇಶನ ಮಾಡಲಿದ್ದು ಸಂಗೀತದಲ್ಲಿ ಶುಭಕರ್ ಬೆಳಪು ಹಾಗೂ ಮೇಕಪ್ ನಲ್ಲಿ ಮಂಜುನಾಥ್ ಶೆಟ್ಟಿಗಾರ್ ಸಹಕರಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಸಮಾಜ ಬಾಂಧವರು, ತುಳು ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಬಂಟ್ಸ್ ಫೋರಮ್ ಮೀರಾಭಾಯಂದರ್ ಇದರ ಅಧ್ಯಕ್ಷ ಉದಯ ಎಮ್. ಶೆಟ್ಟಿ ಮಲಾರ್ ಬೀಡು ,ಕಾರ್ಯಕಾರಿ ಸಮಿತಿಯ ಸದಸ್ಯರು ಹಾಗೂ ಸಾಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷೆ ಪ್ರತಿಭಾ ಆರ್.ಶೆಟ್ಟಿ ಮತ್ತು ಉಪಕಾರ್ಯಾಧ್ಯಕ್ಷೆ ಶೈಲಾ ಆರ್.ಹೆಗ್ಡೆ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.



Related posts

ಅ 26 ,27: ಸಾಂತಾಕ್ರೂಜ್ ಪೂರ್ವದ ಶ್ರೀ ಪೇಜಾವರ ಮಠದಲ್ಲಿ ಕೃಷ್ಣ ಜಯಂತಿ ಉತ್ಸವ.

Mumbai News Desk

ಫೆ.17ರಂದು ಸೃಜನಾ ಮುಂಬಯಿ ವತಿಯಿಂದ ಸಾಹಿತ್ಯ ವಿಮರ್ಶೆ, ಕೃತಿ ಬಿಡುಗಡೆ, ಜನಪದ ಹಾಡುಗಳ ಪ್ರಸ್ತುತಿ.

Mumbai News Desk

ಜೂನ್ 14ರಂದು ಅಂಧೇರಿಯಲ್ಲಿ ಮೊಗವೀರ ವ್ಯವಸ್ಥಾಪಕ ಮಂಡಳಿಯ ಆಯೋಜನೆಯಲ್ಲಿ ವಿವಿಧ ಕಾರ್ಯಕ್ರಮಗಳ ವೈಭವ: ಲೋಗೋ ಅನಾವರಣ ಹಾಗೂ ಆಪ್ ಬಿಡುಗಡೆ

Mumbai News Desk

ಕೀರ್ತಿ ಶೇಷ ಗೋಪಾಲಕೃಷ್ಣ ಆಸ್ರಣ್ಣ ಸಂಸ್ಮರಣೆ ಮತ್ತು ಯಕ್ಷಗಾನ ಸಮಾರಾಧನೆಯ ತ್ರಿಶಂತ್ ಉತ್ಸವವ ಆಮಂತ್ರಣ ಪತ್ರಿಕೆ ಬಿಡುಗಡೆ.

Mumbai News Desk

ಶ್ರೀ ನಾಗಬ್ರಹ್ಮ ಕ್ಷೇತ್ರ ಪುತ್ರನ್ ಆದಿ ಮೂಲಸ್ಥಾನ ಗೋಂಟು, ಮುಲ್ಕಿ : ಎ. 22ರಿಂದ ಎ. 26ರ ತನಕ ಬ್ರಹ್ಮ ಕಲಶೋತ್ಸವ ಮತ್ತು ವರ್ಧಂತ್ಯೋತ್ಸವ

Mumbai News Desk

ಥಾಣೆಯಲ್ಲಿ ಶ್ರೀ ಕ್ಷೇತ್ರ ಒಡಿಯೂರಿನ  ಶ್ರೀ ಗುರುದೇವಾನಂದ ಸ್ವಾಮೀಜಿಯವರಿಗೆ ಗುರುವಂದನೆ, ಸತ್ಸಂಗ.

Mumbai News Desk