32 C
Mumbai
March 7, 2026
Mumbai News Kannada
ಮುಂಬಯಿ

ಕನ್ನಡ ಸಂಘ ಸಯನ್ ದ್ವಿತೀಯ ವಾರ್ಷಿಕೋತ್ಸವ ಸಂಭ್ರಮ : ಒಗ್ಗಟ್ಟಿನಿಂದ ಸಂಘದ ಬಲವರ್ಧನೆಗೆ ಪ್ರವೀಣ್ ಭಟ್ ಕರೆ.





​ಸಯನ್ ಕನ್ನಡ ಸಂಘಕ್ಕೆ ಕೇವಲ ಎರಡು ವರ್ಷಗಳ ಇತಿಹಾಸವಿದ್ದರೂ, ವಿವಿಧ ಜನಪರ ಕಾರ್ಯಕ್ರಮಗಳ ಮೂಲಕ ಇಂದು ಸಮಾಜದಲ್ಲಿ ಉತ್ತಮ ಹೆಸರು ಗಳಿಸಿದೆ. ಸಂಘದ ಇಂದಿನ ಸಮಾರಂಭದಲ್ಲಿ ಪಾಲ್ಗೊಂಡಿರುವ ಗಣ್ಯರೆಲ್ಲರೂ ಉದಾರಿಗಳಾಗಿದ್ದು, ನಮ್ಮ ಸಂಘಕ್ಕೆ ಸ್ವಂತ ಕಛೇರಿಯನ್ನು ನಿರ್ಮಿಸುವ ಕನಸಿಗೆ ಇವರೆಲ್ಲರೂ ಕೈಜೋಡಿಸುವ ಅಚಲ ವಿಶ್ವಾಸ ನನಗಿದೆ. ಇಂದು ಸನ್ಮಾನಕ್ಕೊಳಗಾದ ಸಾಧಕರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಮಾಡಿದ ಅನುಪಮ ಸೇವೆ ನಮಗೆಲ್ಲ ಮಾದರಿಯಾಗಿದೆ.
​ಕನ್ನಡದ ಅಸ್ಮಿತೆಯನ್ನು ಉಳಿಸುವ ನಿಟ್ಟಿನಲ್ಲಿ, ನಾವು ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡುವ ಕೆಲಸ ಮಾಡುತ್ತಿದ್ದೇವೆ ಮತ್ತು ಮುಂದಿನ ದಿನಗಳಲ್ಲೂ ಕನ್ನಡಿಗರ ಮಕ್ಕಳ ಶಿಕ್ಷಣಕ್ಕೆ ಸಂಘದಿಂದ ಎಲ್ಲಾ ರೀತಿಯ ಸಹಕಾರ ನೀಡಲಿದ್ದೇವೆ. ಸಂಘದ ಸ್ಥಾಪಕರಾದ ಹ್ಯಾರಿ ಸೀಕ್ವೆರ ಹಾಗೂ ಎಲ್ಲಾ ಪದಾಧಿಕಾರಿಗಳ ಶ್ರಮದಿಂದ ಇಂದಿನ ಕಾರ್ಯಕ್ರಮ ಅರ್ಥಪೂರ್ಣವಾಗಿ ಮೂಡಿಬಂದಿದೆ. ಸಂಘದ ಏಳಿಗೆಯಲ್ಲಿ ಪದಾಧಿಕಾರಿಗಳು ಮತ್ತು ಸಲಹೆಗಾರರ ಪಾತ್ರ ಹಿರಿದಾಗಿದ್ದು, ಸದಸ್ಯರೆಲ್ಲರೂ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಸಂಘವನ್ನು ಮತ್ತಷ್ಟು ಬಲಿಷ್ಠಗೊಳಿಸಲು ಒಗ್ಗಟ್ಟಿನಿಂದ ಸಹಕರಿಸಬೇಕು ಎಂದು ಕನ್ನಡ ಸಂಘ ಸಯನ್ ನ ಅಧ್ಯಕ್ಷರಾದ ಪ್ರವೀಣ್ ಭಟ್ ನುಡಿದರು.


ಅವರು ಜ. 24ರಂದು, ಸಯನ್ ಪೂರ್ವ ನಿತ್ಯಾನಂದ ಸಭಾಗ್ರಹದಲ್ಲಿ ನಡೆದ ಕನ್ನಡ ಸಂಘ ಸಯನ್ ನ 2ನೇ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತಿದ್ದರು.
ಸಂಘದ ಗೌರವ ಅಧ್ಯಕ್ಷರಾದ ಜಯರಾಮ್ ಶೆಟ್ಟಿ ತನ್ನ ಅನಿಸಿಕೆ ತಿಳಿಸುತ್ತಾ “ಸಯನ್ ಕನ್ನಡ ಸಂಘದ ದ್ವಿತೀಯ ವರ್ಷಾಚರಣೆಯು ಸಂಭ್ರಮ ಸಡಗರದೊಂದಿಗೆ ಅತ್ಯಂತ ಅರ್ಥಪೂರ್ಣವಾಗಿ ಜರುಗಿದೆ. ಭಜನೆಯ ಮಧುರ ಧ್ವನಿಯೊಂದಿಗೆ ಆರಂಭಗೊಂಡ ಈ ಸಮಾರಂಭವು, ಬಳಿಕ ನಡೆದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಸಂಘದ ಉದಯ ಕಾಲದಲ್ಲಿ ಶಿಕ್ಷಣ, ಆರೋಗ್ಯ ಹಾಗೂ ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುವ ಯಾವ ಸಂಕಲ್ಪವನ್ನು ಮಾಡಲಾಗಿತ್ತೋ, ಅದನ್ನು ಅಲ್ಪಾವಧಿಯಲ್ಲೇ ಈಡೇರಿಸಿರುವ ತೃಪ್ತಿ ಮತ್ತು ಹೆಮ್ಮೆ ನಮ್ಮದು.ಉಪಾಧ್ಯಕ್ಷರಾದ ಸತೀಶ್ ಶೆಟ್ಟಿ ಅವರ ನಿಸ್ವಾರ್ಥ ಸೇವೆ ಅಪಾರವಾಗಿದೆ. ಪ್ರತಿ ತಿಂಗಳ ಸಭೆ ಹಾಗೂ ಕಾರ್ಯಕ್ರಮಗಳಿಗೆ ತಮ್ಮ ಸಭಾಗ್ರಹವನ್ನು ನೀಡುವ ಮೂಲಕ ಅವರು ಸಂಘಕ್ಕೆ ದೊಡ್ಡ ಶಕ್ತಿಯಾಗಿದ್ದಾರೆ ಎಂದರು.


ಸಂಘದ ಉಪಾಧ್ಯಕ್ಷರಾದ ದಿನೇಶ್ ಶೆಟ್ಟಿಯವರು ಮಾತನಾಡಿ “ಸಂಘದ ಭವಿಷ್ಯದ ದೃಷ್ಟಿಯಿಂದ ಸ್ವಂತ ಕಛೇರಿಯ ಅಗತ್ಯತೆ ಮತ್ತು ದಾನಿಗಳ ಸಹಕಾರದ ಬಗ್ಗೆ ಬೆಳಕು ಚೆಲ್ಲಿದರು. ಕಾರ್ಯಕ್ರಮದ ಕೊನೆಯಲ್ಲಿ ಆಯೋಜಿಸಲಾಗಿದ್ದ ‘ಹಳದಿ-ಕುಂಕುಮ’ ಕಾರ್ಯಕ್ರಮವು ಕೇವಲ ಸಂಪ್ರದಾಯವಲ್ಲದೆ, ಹಳದಿಯ ರೋಗನಿರೋಧಕ ಶಕ್ತಿಯಂತೆಯೇ ಸಂಘಕ್ಕೆ ಎದುರಾಗುವ ವಿಘ್ನಗಳು ನಿವಾರಣೆಯಾಗಲಿ ಎಂದು ಹಾರೈಸಿದರು.

ಸಂಘದ ಸಲಹೆಗಾರ ಚಂದ್ರಹಾಸ್ ಶೆಟ್ಟಿ ತನ್ನ ಅಭಿಪ್ರಾಯ ತಿಳಿಸುತ್ತಾ ಸಂಘದ ಎರಡು ವರ್ಷಗಳ ಕಾರ್ಯ ಚಟುವಟಿಕೆಗಳನ್ನು ಕಂಡು ಬಹಳ ಸಂತೋಷವಾಯಿತು.ಇದೇ ರೀತಿ ನಾವೆಲ್ಲರೂ ಒಟ್ಟಾಗಿ ಸಂಘದಲ್ಲಿ ಏಳಿಗೆಗಾಗಿ ದುಡಿಯೋಣ ಎಂದು ನುಡಿದರು.
ಇನ್ನೋರ್ವ ಸಲಹೆಗಾರ ಗಿರೀಶ್ ಸಾಲ್ಯಾನ್ ಮಾತನಾಡಿ ಕನ್ನಡ ಸಂಘ ಸಯನ್ ಅಲ್ಪಾವಧಿಯಲ್ಲಿಯೇ ಇಷ್ಟೊಂದು ಜನಪ್ರಿಯವಾಗಿದೆ ಎಂಬುದು ಇಂದು ಸಭಾಗ್ರಹ ತುಂಬಿರುವುದೇ ಸಾಕ್ಷಿ.ನಾನು ಇತರ ಕಾರಣಾಂತರಗಳಿಂದ ಸಂಘದ ಬೇರೆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. ಸಂಘದ ಮುಖೇನ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡುತ್ತಿರುವುದು ಅಭಿನಂದನೀಯ. ಇಂದು ಸನ್ಮಾನಗೊಂಡವರೆಲ್ಲರೂ ಅದಕ್ಕೆ ಅರ್ಹರೇ. ಅಧ್ಯಕ್ಷರಾದ ಪ್ರವೀಣ್ ಭಟ್, ಗೌರವ ಅಧ್ಯಕ್ಷರಾದ ಜಯರಾಮ್ ಶೆಟ್ಟಿ ಅವರ ಮುಂದಾಳತ್ವದಲ್ಲಿ ಸಂಘದ ಚಟುವಟಿಕೆಗಳು ನಿರಂತರನಡೆಯುತ್ತಿರಲಿ, ನನ್ನ ಸಹಕಾರ ಸದಾ ಇದೆ ಎಂದರು.


ಪ್ರಾರಂಭದಲ್ಲಿ ಎಲ್ಲರನ್ನೂ ಸ್ವಾಗತಿಸಿದ ಜತೆ ಕಾರ್ಯದರ್ಶಿ ದಯಾನಂದ ಬಿ ಮೂಲ್ಯ “ಧಾರವಿ, ಚುನಾಬಟ್ಟಿ, ಕೋಲಿವಾಡ, ಕುರ್ಲಾ, ಮಹಿಮ್, ಬಾಂಧ್ರಾ, ದಾದರ್- ವಡಲಾ ಭಾಗದ ಕನ್ನಡಿಗರನ್ನು ಒಗ್ಗೂಡಿಸಿ, ಅವರ ಅಶೋತ್ತರಗಳಿಗೆ ಸ್ಪಂದಿಸುವ ಉದ್ದೇಶದಿಂದ ಅಕ್ಟೋಬರ್ 22,2024ರಂದು ಕನ್ನಡ ಸಂಘ ಸಯನ್ ಸ್ಥಾಪನೆಯಾಯಿತು. ಸಂಘ ಸ್ಥಾಪನೆಯಾಗಿ ಎರಡು ವರ್ಷಗಳ ಅವಧಿಯಲ್ಲಿ ವಿಭಿನ್ನ ಕಾರ್ಯ ಚಟುವಟಿಕೆಗಳ ಮೂಲಕ ಮುಂಬೈ ಕನ್ನಡಿಗರ ಗಮನ ಸೆಳೆದಿದೆ ಎನ್ನಲು ಬಹಳ ಸಂತೋಷ ಆಗುತ್ತದೆ. ಫೆಬ್ರವರಿ 10, 2025ರಲ್ಲಿ ಸಂಘದ ಸಲಹೆಗಾರರಾದ, ಡಾಕ್ಟರ್ ಸದಾನಂದ ಶೆಟ್ಟಿ ಅವರ ಮುಂದಾಳತ್ವದಲ್ಲಿ ಉಚಿತ ಅರೋಗ್ಯ ತಪಾಸಣಾ ಶಿಬಿರವನ್ನು ದಿನವಿಡೀ ಆಯೋಜಿಸಿದ್ದು ಸುಮಾರು 500ಕ್ಕೂ ಅಧಿಕ ತುಳು-ಕನ್ನಡಿಗರು ಇದರ ಪ್ರಯೋಜನ ಪಡೆದಿರುವರು. ಮಾರ್ಚ್ 29 2025ರಲ್ಲಿ ಮುಂಬೈಯ ತುಳು-ಕನ್ನಡಿಗರಿಗಾಗಿ ಬ್ರಹತ್ ಉದ್ಯೋಗ ಮೇಳ ಹಮ್ಮಿಕೊಂಡು, ಪದವೀಧರ ಯುವಕ-ಯುವತಿಯರಿಗೆ ಉದ್ಯೋಗ ನೀಡಿದಲ್ಲದೆ, ಅವರಿಗೆ ಮಾರ್ಗದರ್ಶನವನ್ನು ಮಾಡಿತ್ತು.ಸಂಘದ ಪ್ರಥಮ ವಾರ್ಷಿಕೋತ್ಸವ 27-10-2024ರಲ್ಲಿ ಕುರ್ಲಾ ಪೂರ್ವ ಬಂಟರ ಭವನದಲ್ಲಿ ಅಧ್ಯಕ್ಷರಾದ ಪ್ರವೀಣ್ ಭಟ್ ಅವರ ಮಾರ್ಗದರ್ಶನದಲ್ಲಿ ಅದ್ದೂರಿಯಾಗಿ ನಡೆದಿತ್ತು. ಅಂದು ದುಬೈಯ ನಾಟಕ ತಂಡ ತುಳು ನಾಟಕ ಪ್ರದರ್ಶಿಸಿರುವುದು ಒಂದು ಧಾಖಲೆಯಾಗಿದೆ.ಸಂಘವು ಪ್ರತಿ ವರ್ಷ ಅಟಿಡ್ ಒಂಜಿ ದಿನ, ಹಳದಿ ಕುಂಕುಮ, ಕರ್ನಾಟಕ ರಾಜ್ಯೋತ್ಸವ ಆಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡು ಬರುತಿದೆ.ಪ್ರಸ್ತುತ ಸಂಘದಲ್ಲಿ 508 ಸದಸ್ಯರು ನೋಂದಣಿಸಿಕೊಂಡಿದ್ದಾರೆ. ಪದಾಧಿಕಾರಿಗಳ, ಸದಸ್ಯರ ಸಹಕಾರದಿಂದ ಸಂಘ ಉತ್ತಮ ರೀತಿಯಲ್ಲಿ ನಡೆಯುತ್ತಿದೆ.
ಇಂದು 2ನೇ ವಾರ್ಷಿಕೋತ್ಸವದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ನಮ್ಮವರನ್ನು ಸನ್ಮಾನ ಮಾಡುತ್ತಿರುವುದು ಸಂತಸದ ವಿಷಯ ಎಂದರು.

ಇದೇ ಸಂದರ್ಭದಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರುಗಳಾದ ಭಾಸ್ಕರ್ ಆರ್. ಶೆಟ್ಟಿ (ಬಿ.ಎಂ.ಸಿ ಚುನಾವಣಾ ವಿಜೇತರು), ಪ್ರಭಾ ಎನ್. ಸುವರ್ಣ (ಸೋಷಿಯಲ್ ಮೀಡಿಯಾ ಕ್ವೀನ್), ತ್ರಿಶಿಕಾ ಎನ್. ಶೆಟ್ಟಿ (ಚಾರ್ಟರ್ಡ್ ಅಕೌಂಟೆಂಟ್), ಡಾ. ಪೂಜಾ ರವೀಂದ್ರ ಶೆಟ್ಟಿ (ಮಕ್ಕಳ ತಜ್ಞೆ) ಇವರನ್ನು ಸನ್ಮಾನಿಸಲಾಯಿತು.


ಹಾಗೂ ಧಾರಾವಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಕನ್ನಡ ಮಾಧ್ಯಮ ಶಾಲೆಯ 19 ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲಾಯಿತು.
ಸಂಘದ 2ನೇ ವಾರ್ಷಿಕೋತ್ಸವ ನಡೆಯುವಲ್ಲಿ ವಿಶೇಷ ಮುತುವರ್ಜಿ ವಹಿಸಿ, ಶ್ರಮಿಸಿದ ಸ್ಥಾಪಕ ಹ್ಯಾರಿ ಸೀಕ್ವೆರ ದಂಪತಿಯನ್ನು ಅಭಿನಂದಿಸಲಾಯಿತು.
ವೇದಿಕೆಯಲ್ಲಿ ಸಂಘದ ಸಲಹೆಗಾರ ರವಿ ಶೆಟ್ಟಿ, ಉಪಾಧ್ಯಕ್ಷ ಸತೀಶ್ ಆರ್ ಶೆಟ್ಟಿ, ಗೌರವ ಕೋಶಾಧಿಕಾರಿ ಸುರೇಶ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಧ್ಯಕ್ಷೇ ತೇಜಾಕ್ಷಿ ಎಸ್ ಶೆಟ್ಟಿ ಉಪಸ್ಥಿತರಿದ್ದರು.


ಮಾಲಾ ಮೇಸ್ತಾ ಸಾಂಸಕೃತಿಕ ಕಾರ್ಯಕ್ರಮ, ಸಭಾ ಕಾರ್ಯಕ್ರಮ ನಿರೂಪಿಸಿದರು. ಸುಶೀಲ ದೇವಾಡಿಗ ಸಹಕರಿಸಿದರು.ಸಂಸ್ಥಾಪಕ ಹ್ಯಾರಿ ಸೀಕ್ವೆರ ಧನ್ಯವಾದ ಸಮರ್ಪಸಿದರು.
ಚಂದ್ರಿಕಾ ಶೆಟ್ಟಿ, ಮೊಲಿ ಸೀಕ್ವೆರ, ತೇಜಾಕ್ಷಿ ಶೆಟ್ಟಿ, ಸುರೇಖಾ ದೇವಾಡಿಗ ಸನ್ಮಾನಿತರನ್ನು ಪರಿಚಯಿಸಿದರು.
ವಿವಿಧ ಸಂಘ-ಸಂಸ್ಥೆಯ ಪದಾಧಿಕಾರಿಗಳು, ಪರಿಸರದ ಉದ್ಯಮಿಗಳು, ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಶಾಲೆಯ ಮುಖ್ಯೋಪಾಧ್ಯಾಯನಿ ಸುರೇಖಾ ಶೆಟ್ಟಿ, ಆಧ್ಯಾಪಕರಾದ ಧನರಾಜ್ ಪೂಜಾರಿ, ಸುಜಾತಾ ಕೋಟ್ಯಾನ್, ತುಳು-ಕನ್ನಡಿಗರು ಅಪಾರ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಶ್ರೀ ಏಕನಾತೇಶ್ವರಿ ಭಜನಾ ಮಂಡಳಿ, ದೇವಾಡಿಗ ಸಂಘ, ಇದರ ಸದಸ್ಯರು ಭಜನಾ ಕಾರ್ಯಕ್ರಮ ನೀಡಿದರು. ಮಾಲಾ ಮೇಸ್ತಾ ತಂಡದವರಿಂದ ವೈವಿದ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತಗೊಂಡಿತು, ಡಾ. ಅಮ್ರತಾ ಮೇಸ್ತಾ ಅವರ ಯಕ್ಷ ನ್ರತ್ಯ ಎಲ್ಲರನ್ನು ಆಕರ್ಷಿಸಿತು.


ಸಭಾ ಕಾರ್ಯಕ್ರಮದ ಬಳಿಕ ನಡೆದ ಹಳದಿ ಕುಂಕುಮದಲ್ಲಿ ಮಹಿಳೆಯರು ಭಾಗವಹಿಸಿದರು.
ಪ್ರೀತಿ ಭೋಜನದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
ಸಂಘದ ಉಪಾಧ್ಯಕ್ಷರುಗಳಾದ ಸತೀಶ್ ಶೆಟ್ಟಿ, ಸದಾನಂದ ಶೆಟ್ಟಿ, ಪದಾಧಿಕಾರಿಗಳಾದ ತೇಜಾಕ್ಷಿ ಶೆಟ್ಟಿ, ಚಂದ್ರಿಕಾ ಶೆಟ್ಟಿ,ದಯಾನಂದ ಬಿ ಮೂಲ್ಯ, ಮಹೇಶ್ ಪೂಜಾರಿ ಕಿದಿಯೂರು, ನವೀನ್ ಪೂಜಾರಿ, ಜಯಶೀಲ ಬಿ ಮೂಲ್ಯ, ಉಮೇಶ್ ಶೆಟ್ಟಿ, ಹರೀಶ್ ಶೆಟ್ಟಿ, ಸಂಪತ್ ಶೆಟ್ಟಿ ಸಹಕರಿಸಿದರು.

      ಸನ್ಮಾನಿತರ ಅನಿಸಿಕೆ : 

ನಾನು ಸಮಾರಂಭದಲ್ಲಿ ಪಾಲ್ಗೊಳ್ಳಲು ಸ್ವಲ್ಪ ವಿಳಂಬವಾಯಿತು. ಆದರೂ ಎಲ್ಲಾ ಕಾರ್ಯಕ್ರಮಗಳು ಉತ್ತಮ ರೀತಿಯಲ್ಲಿ ನಡೆದಿದೆ ಎಂದು ಕೇಳಿ ತಿಳಿದುಕೊಂಡೆ. ನಿಮ್ಮೆಲ್ಲರ ಆಶೀರ್ವಾದದಿಂದ ನಾನು ನಗರ ಸೇವಕನಾಗಿ ಆಯ್ಕೆಯಾಗಿದ್ದೇನೆ. ನಮ್ಮ ಸಂಘಕ್ಕೆ ಸ್ವಂತ ಕಛೇರಿ ಮಾಡುವಲ್ಲಿ ಖಂಡಿತ ಪ್ರಯತ್ನ ಮಾಡುತ್ತೇನೆ.
– ಭಾಸ್ಕರ ಶೆಟ್ಟಿ(ನಗರ ಸೇವಕ)


ನನಗೆ ಇಷ್ಟರ ತನಕ ಬಹಳಷ್ಟು ಸನ್ಮಾನವಾಗಿದೆ, ಆದರೆ ನಮ್ಮ ಸಂಘ ಕೇವಲ ಎರಡು ವರ್ಷದ ಸಂಸ್ಥೆ ಇಂದು ಮಾಡಿದ ಸನ್ಮಾನ ಎಂದಿಗೂ ಮರೆಯುವಂತ್ತಿಲ್ಲ. ಎಲ್ಲಾ ಮಹಿಳೆಯರಲ್ಲೂ ಕಲೆ ಇದೆ, ಅವರು ಸ್ವಪ್ರಯತ್ನದಿಂದ ಸಿಕ್ಕಿದ ಅವಕಾಶವನ್ನು ಬಳಸಿಕೊಂಡು ಜೀವನದಲ್ಲಿ ಯಶಸ್ಸು ಗಳಿಸಬೇಕು.ಈ ಜಗತ್ತಿನಲ್ಲಿ ಅನ್ನ, ನೀರು, ನಾಲಗೆ ಮೂರು ರತ್ನಗಳು. ನಮ್ಮ ನಾಲಗೆ ಅಂದರೆ ನಾವಡುವ ಮುತ್ತಿನಂತ ಮಾತುಗಳ ಮೂಲಕ ನಾವು ಎಲ್ಲರನ್ನೂ ಗೆಲ್ಲಬಹುದು.
– ಪ್ರಭಾ ಸುವರ್ಣ


ಸನ್ಮಾನಕ್ಕಾಗಿ ಕ್ರತಜ್ಞತೆಗಳು. ನಿಮ್ಮೆಲ್ಲರ ಪ್ರೀತಿ ಕಂಡು ಬಹಳ ಸಂತೋಷವಾಯಿತು. ಆರೋಗ್ಯದ ಬಗ್ಗೆ ಏನಾದರೂ ಸಮಸ್ಯೆ ಇದ್ದಾಗ ಅಥವಾ ಸಲಹೆಗಾಗಿ ಯಾವಗಲೂ ನಾನು ಸಹಾಯ ಮಾಡುತ್ತೇನೆ.
– ಡಾ.ಪೂಜಾ ಶೆಟ್ಟಿ


ಇಂದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂತಸವಾಯಿತು. ಸಂಘದ ಪದಾಧಿಕಾರಿಗಳ ಕಾರ್ಯ ಕ್ಷಮತೆ, ಸದಸ್ಯರ ಒಗ್ಗಟ್ಟು ಅಭಿನಂದನೀಯ. ನಾನು ಕೂಡ ಈ ಸಂಘದೊಂದಿಗೆ ಇದ್ದೇನೆ ಎನ್ನುವುದು ಹೆಮ್ಮೆಯ ವಿಷಯ. ಸಿ ಎ ಮಾಡುವುದು ಅಷ್ಟು ಸುಲಭವಲ್ಲ, ನನ್ನ ತಂದೆ – ತಾಯಿಯ ಪ್ರೋತ್ಸಾಹದಿಂದ ನನಗೆ ಯಶಸ್ಸು ಲಭಿಸಿತು.ಮುಂದಿನ ದಿನಗಳಲ್ಲಿ ಸಂಘದ ಚಟುವಟಿಕೆಗಳ್ಳಲ್ಲಿ ನಾನು ಭಾಗಿಯಾಗುತ್ತೇನೆ.
– ಸಿಎ ತ್ರಿಶಿಕಾ ಶೆಟ್ಟಿ



Related posts

ಜಿ.ಎಸ್.ಬಿ.ಎಸ್. ಮೆಡಿಕಲ್ ಟ್ರಸ್ಟ್ ಸುವರ್ಣ ಮಹೋತ್ಸವ ಯೋಜನೆ, ಮಾಹಿಮ್ ಘಟಕದ ವಿಸ್ತರಣೆಯ ಉದ್ಘಾಟನೆ

Mumbai News Desk

ಮಯೂರವರ್ಮ ಸಾಂಸ್ಕೃತಿಕ ಪ್ರತಿಷ್ಠಾನ ಮುಂಬಯಿ: 9 ಕೃತಿಗಳ ಸಮೀಕ್ಷೆ

Mumbai News Desk

ಮುಂಬಯಿ : ರಸಿಕರಿಗೆ ರಸದೌತಣ ನೀಡಿದ ದಿ.ಲಕ್ಷ್ಮೀ ಸುಧೀಂದ್ರ ಸ್ಮಾರಕ ಸಂಗೀತ ಕಛೇರಿ

Mumbai News Desk

ಬಿಲ್ಲವರ ಅಸೋಸಿಯೇಶನ್ ಭಾಯಂದರ್ ಸ್ಥಳೀಯ ಕಚೇರಿಯಲ್ಲಿ ವಿಜ್ರಂಭಣೆಯ ಶ್ರೀ ಸತ್ಯನಾರಾಯಣ ಮಹಾಪೂಜೆ.

Mumbai News Desk

ಶ್ರೀ ಭುವನೇಶ್ವರಿ ಸೇವಾ ಸಮಿತಿ ಕೋಟೆ, ಮುಂಬಯಿ : 42ನೇ ವರ್ಷದ ನವರಾತ್ರಿ ಮಹೋತ್ಸವ.

Mumbai News Desk

ಶ್ರೀ ಮಹಾವಿಷ್ಣು ಮಂದಿರ ಡೊಂಬಿವಲಿ, ಇದರ ವತಿಯಿಂದ ರಕ್ತ ದಾನ ಹಾಗೂ ಉಚಿತ ಕೀಳು – ಮೂಳೆ ತಪಾಸಣೆ ಶಿಬಿರ

Mumbai News Desk