July 23, 2026
Mumbai News Kannada
ಪ್ರಕಟಣೆ

ಬಿಲ್ಲವರ ಅಸೋಸಿಯೇಶನ್ ಮುಂಬಯಿ : ಅಂಧೇರಿ ಸ್ಥಳೀಯ ಸಮಿತಿಯ ಆಶ್ರಯದಲ್ಲಿ ಜ. 31ಕ್ಕೆ ಶ್ರೀ ಶನೀಶ್ವರ ಗ್ರಂಥ ಪಾರಾಯಣ







ಮುಂಬೈ ತುಳು ಕನ್ನಡಿಗರ ಪ್ರತಿಷ್ಠಿತ ಸಂಘಟನೆಗಳಲ್ಲಿ ಒಂದಾದ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ, ಅಂಧೇರಿ ಸ್ಥಳೀಯ ಕಚೇರಿಯ ವತಿಯಿಂದ ಶ್ರೀ ಶನೈಶ್ಚರ ಗ್ರಂಥ ಪಾರಾಯಣ ಕಾರ್ಯಕ್ರಮವು 31.01.2026ನೇ ಶನಿವಾರದಂದು ಅಂಧೇರಿ ಪೂರ್ವದ ಮರೋಲ್‌ನಲ್ಲಿರುವ ನೆಸ್ಟರ್ ಹೋಟೆಲ್‌ನ ಸಭಾಂಗಣದಲ್ಲಿ ನಡೆಯಲಿದೆ.
ಕಾರ್ಯಕ್ರಮ :
ಅಂದು ಮಧ್ಯಾಹ್ನ 1.00 ಗಂಟೆಯಿಂದ ಸಂಜೆ 7.00 ಗಂಟೆಯವರೆಗೆ ಶನಿಗ್ರಂಥ ಪಾರಾಯಣ ನಡೆಯಲಿದ್ದು, ನಂತರ ಮಂಗಳಾರತಿ, ಮಹಾಪ್ರಸಾದ ಮತ್ತು ಅನ್ನಸಂತರ್ಪಣೆ.
ಕಾರ್ಯಕ್ರಮದ ಕಳಶ ಪ್ರತಿಷ್ಠೆಯನ್ನು ಹರೀಶ್ ಶಾಂತಿ ಹೆಜಮಾಡಿ ನೆರವೇರಿಸಲಿದ್ದು, ಬಿಲ್ಲವರ ಅಸೋಸಿಯೇಶನ್ ಅಧ್ಯಕ್ಷರಾದ ಶ್ರೀ ಹರೀಶ್ ಜಿ. ಅಮೀನ್ ಅವರು ದೀಪ ಪ್ರಜ್ವಲನೆ ಮಾಡಲಿದ್ದಾರೆ. ಅಂದಿನ ಅನ್ನದಾನದ ಸೇವೆಯು ಶ್ರೀ ಹರೀಶ್ ಜಿ. ಅಮೀನ್ ಅವರ ವತಿಯಿಂದ ನಡೆಯಲಿದೆ.
ಭಕ್ತಾದಿಗಳು ಸಕುಟುಂಬ ಸಮೇತರಾಗಿ ಬಂದು ಪ್ರಸಾದ ಸ್ವೀಕರಿಸಬೇಕೆಂದು ಬಿಲ್ಲವರ ಎಸೋಸಿಯೇಷನ್ ಪರವಾಗಿ ಗೌರವ ಅಧ್ಯಕ್ಷ ಎಲ್ ವಿ ಅಮೀನ್, ಗೌರವ ಪ್ರಧಾನ ಕಾರ್ಯದರ್ಶಿ ಹರೀಶ್ ಜಿ ಸಾಲಿಯಾನ್, ಗೌರವ ಪ್ರಧಾನ ಕೋಶಾಧಿಕಾರಿ ರವಿ ಸನಿಲ್, ಮಹಿಳಾ ವಿಭಾಗದ ಕಾರ್ಯಧ್ಯಕ್ಷೇ ಶಕುಂತಲಾ ಕೋಟ್ಯಾನ್, ಧಾರ್ಮಿಕ ಮತ್ತು ಸಾಮಾಜಿಕ ಉಪ ಸಮಿತಿಯ ಕಾರ್ಯಾಧ್ಯಕ್ಷ ಧರ್ಮಪಾಲ ಜಿ ಅಂಚನ್, ಗೌರವ ಕಾರ್ಯದರ್ಶಿ ಸದಾಶಿವ ಕೋಟ್ಯಾನ್, ಅಂದೇರಿ ಸ್ಥಳೀಯ ಕಚೇರಿಯ ಗೌರವ ಕಾರ್ಯಧ್ಯಕ್ಷ ಸುಧಾಕರ್ ಎಂ ಜತ್ತನ್, ಕಾರ್ಯಧ್ಯಕ್ಷ ಹರೀಶ್ ಶಾಂತಿ ಹೆಜಮಾಡಿ, ಉಪಕಾರ್ಯಧ್ಯಕ್ಷರುಗಳಾದ ದಿನೇಶ್ ಪೂಜಾರಿ,ರಾಮ ಸಿ ಪೂಜಾರಿ, ಗೌರವ ಕಾರ್ಯದರ್ಶಿ ಚಂದ್ರಶೇಖರ್ ಸುವರ್ಣ, ಗೌರವ ಕೋಶಾಧಿಕಾರಿ ನಿಲೇಶ್ ಪೂಜಾರಿ, ಕೇಂದ್ರ ಕಚೇರಿಯ ಪ್ರಭಾರಿ ಜಯಂತಿ ವಿ ಉಳ್ಳಾಲ್, ಕೇಂದ್ರ ಕಚೇರಿ ಪ್ರತಿನಿಧಿ ಹರೀಶ್ ಜಿ ಸಾಲಿಯನ್ ಮತ್ತು ಸರ್ವ ಸದಸ್ಯರು ಹಾಗೂ ಯುವ ವಿಭಾಗ ಮತ್ತು ಮಹಿಳಾ ಸದಸ್ಯರು ವಿನಂತಿಸಿದ್ದಾರೆ.

ವಿ. ಸೂ : ಭಕ್ತಾದಿಗಳು ವಿಶೇಷ ಮಹಾಪೂಜೆಗೆ 1,000 ರೂಪಾಯಿ ಹಾಗೂ ಸಾಮಾನ್ಯ ಪೂಜೆಗೆ 300 ರೂಪಾಯಿ ನೀಡಿ ಪಾಲ್ಗೊಳ್ಳಬಹುದು.
ದೇಣಿಗೆ ನೀಡಲು ಇಚ್ಛಿಸುವವರು ದಿ ಭಾರತ್ ಕೋ-ಆಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್‌ನ ಖಾತೆ ಸಂಖ್ಯೆ 001210100103694 (IFSC: BCBM0000013) ಗೆ ಮೊತ್ತವನ್ನು ಪಾವತಿಸಬಹುದು. ಹೆಚ್ಚಿನ ಮಾಹಿತಿಗಾಗಿ : 9619093804, 9322725742 ಅಥವಾ 9819943380 ಸಂಖ್ಯೆಗಳನ್ನು ಸಂಪರ್ಕಿಸಿ.



Related posts

ನ. 21, 22 ರಂದು ಶ್ರೀ ರಾಧಾಕೃಷ್ಣ ಮತ್ತು ಶ್ರೀ ಶನೀಶ್ವರ ಮಂದಿರ, ಡೊಂಬಿವಲಿಯ 67ನೇ ವಾರ್ಷಿಕ ಮಂಗಳೋತ್ಸವ

Mumbai News Desk

ಶ್ರೀ ಅಯ್ಯಪ್ಪ ಸೇವಾ ಸಮಿತಿ ಕಿಸನ್ ನಗರ ಥಾಣೆ ಪಶ್ಚಿಮ – ಫೆ.10ರಂದು ಶ್ರೀ ಶನೀಶ್ವರ ದೇವರ ಮಹಾಪೂಜೆ.

Mumbai News Desk

ಫೆ.12 ರಿಂದ 16 ವರಗೆ ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದಲ್ಲಿ ಕುಂಭ ಮಹೋತ್ಸವ,

Mumbai News Desk

ಮಹತೋಭಾರ ಶನೀಶ್ವರ ದೇವಸ್ಥಾನ – ಸುವರ್ಣ ಸಂಭ್ರಮದ ಸರಣಿ ಕಾರ್ಯಕ್ರಮ 

Mumbai News Desk

ಕರ್ನಾಟಕ ಸಮಾಜ ಸೂರತ್ : ನ. 24ರಂದು ಕರ್ನಾಟಕ ರಾಜ್ಯೋತ್ಸವ

Mumbai News Desk

ಜು21. ಕುಲಾಲ ಸಂಘದ ಗುರುವಂದನಾ ಭಜನ ಮಂಡಳಿಯಿಂದ ಗುರುಪೂರ್ಣಿಮೆ ಆಚರಣೆ,

Mumbai News Desk