July 23, 2026
Mumbai News Kannada
ತುಳುನಾಡು

ಮೂಲ್ಕಿ : ಶ್ರೀ ಜಾರಂದಾಯ ಧೂಮಾವತಿ ಯೂತ್ ಕ್ಲಬ್‌ನ 17ನೇ ವಾರ್ಷಿಕೋತ್ಸವ








ಮಕ್ಕಳಿಗೆ ಸಂಸ್ಕಾರ ಸಂಸ್ಕೃತಿ ತಿಳಿಸುವ ಕಾರ್ಯವಾಗಬೇಕು -ಶಿವಾನಂದ ಶಾಂತಿ

ಮಕ್ಕಳಿಗೆ ಸಂಸ್ಕಾರವನ್ನು ಚಿಕ್ಕಂದಿನಿಂದಲೇ ಮೈಗೂಡಿಸಿ ಬರುವಂತೆ ಮಾಡಬೇಕು ಮತ್ತು ಧಾರ್ಮಿಕ ಪ್ರಜ್ಞೆ ಮೂಡಿಸುವ ಕಾರ್ಯ ಹಿರಿಯರಿಂದ ಆಗಬೇಕು; ಮೊಬೈಲ್, ಧಾರಾವಾಹಿಗಳಿಂದ ದೂರವಿಟ್ಟು ಭಜನೆ, ಮತ್ತಿತರ ಧಾರ್ಮಿಕ ಕಾರ್ಯಗಳ ಮಕ್ಕಳಿಗೆ ಉತ್ತಮ ಸಂಸ್ಕಾರ, ಸಂಸ್ಕೃತಿಯನ್ನು ತಿಳಿಸುವ ಕಾರ್ಯವಾಗಬೇಕು ಎಂದು ಶ್ರೀ ಕ್ಷೇತ್ರ ಗೆಜ್ಜೆಗಿರಿಯ ತಂತ್ರಿಗಳಾದ ಶಿವಾನಂದ ಶಾಂತಿ ಮಣಿಬೆಟ್ಟು ಹೇಳಿದರು. ಮುಲ್ಕಿ ಕೊಳಚಿಕಂಬಳ ಶ್ರೀ ಜಾರಂದಾಯ ಧೂಮಾವತಿ ದೈವಸ್ಥಾನದ ಸಮಿತಿಯ ಸಹ ಸಂಸ್ಥೆ ಶ್ರೀ ಜಾರಂದಾಯ ಧೂಮಾವತಿ ಯೂತ್ ಕ್ಲಬ್‌ನ 17ನೇ ವಾರ್ಷಿಕೋತ್ಸವ ಹಾಗೂ ಮಹಾ ಶಿವರಾತ್ರಿಯ ಪ್ರಯುಕ್ತ ಕೊಳಚಿಕಂಬಳ ಶ್ರೀ ಜಾರಂದಾಯ ಧೂಮಾವತಿ ದೈವಸ್ಥಾನದ ವಠಾರದಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮ, ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಪ್ರತಿಭಾ ಪುರಸ್ಕಾರ, ಊರಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ವಿತರಣೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದ ಅವರು ಇಂದಿನ ದಿನಗಳಲ್ಲಿ ಯುವ ಸಮುದಾಯದಲ್ಲಿ ಧಾರ್ಮಿಕ ಪ್ರಜ್ಞೆ ಕಡಿಮೆಯಾಗುತ್ತಿದ್ದು ಧರ್ಮದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವಾಗಬೇಕು ಎಂದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉದ್ಯಮಿ ಪ್ರಭಾಕರ್ ಪೂಜಾರಿ ವಹಿಸಿದ್ದರು. ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಗೀತಾಂಜಲಿ ಸುವರ್ಣ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಸಿಂಧು ಗುಜರನ್ , ನಡಿಕುದ್ರು ಶ್ರೀ ಜಾರಂದಾಯ ದೈವಸ್ಥಾನದ ಅರ್ಚಕ ನಿರಂಜನ್ ಪೂಜಾರಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದೈವ ನರ್ತಕ ಭಾಸ್ಕರ್ ಬಂಗೇರ ಪಡುಬಿದ್ರೆ, ಜಯ ಕೃಷ್ಣ ಕೊಟ್ಯಾನ್ ಮತ್ತು ದೈವದ ಪರಿಚಾಕ ಮಾಧವ ಮಡಿವಾಳ ಚಿತ್ರಾಪುರವರನ್ನು ಸನ್ಮಾನಿಸಲಾಯಿತು. ಕೊಳಚಿಕಂಬಳ ಸಾನದಮನೆ ದಿ . ರಾಮಣ್ಣ ಪೂಜಾರಿ ಮತ್ತು ದಿ . ಹರಿಯಪ್ಪ ಕೊಟ್ಯಾನ್ ಸ್ಮರಣಾರ್ಥ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ಮೂಲಕ ವಿದ್ಯಾರ್ಥಿ ವೇತನ ನೀಡಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಸಾಧಕರನ್ನು ದಾನಿಗಳನ್ನು ಗೌರವಿಸಲಾಯಿತು.

ಉದ್ಯಮಿಗಳಾದ ಪ್ರವೀಣ್ ಕುಮಾರ್ ಬೊಳ್ಳರು , ಮುಲ್ಕಿ ಪ್ರಮೋದ್ ಕುಡ್ವ, ಮಂತ್ರ ಸರ್ಫ್ ಕ್ಲಬ್, ಕೊಳಚಿಕಂಬಳ ನಟರಾಜ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದು ಕೊಳಚಿಕಂಬಳ ಶ್ರೀ ಜಾರಂದಾಯ ದೈವಸ್ಥಾನದ ಗುರಿಕಾರರಾದ ಹರಿಶ್ಚಂದ್ರ ಪಿ. ಸಾಲ್ಯಾನ್, ಶೇಷ ಪೂಜಾರಿ, ಪ್ರಾಣೇಶ್ ಪೂಜಾರಿ ಸಾನದ ಮನೆ,, ಕೃಷ್ಣ ಕೊಟ್ಯಾನ್ ಸಾನದ ಮನೆ , ದೈವಸ್ಥಾನದ ಸಮಿತಿಯ ಉಪಾಧ್ಯಕ್ಷ ಹೇಮನಾಥ ಕೊಟ್ಯಾನ್, ಮಹಿಳಾ ಮಂಡಳಿಯ ಅಧ್ಯಕ್ಷೆ ಲತಾ ಶೇಖರ್, ಶ್ರೀ ಜಾರಂದಾಯ ಧೂಮಾವತಿ ಯೂತ್ ಕ್ಲಬ್‌ನ ಅಧ್ಯಕ್ಷ ಚರಣ್ ಬಂಗೇರ, ಪ್ರಧಾನ ಕಾರ್ಯದರ್ಶಿ ಕಾರ್ತಿಕ್ ಕೊಟ್ಯಾನ್, ಕೋಶಾಧಿಕಾರಿ ಸುನೀಲ್ ಕೊಟ್ಯಾನ್ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು. ಮಹಿಳೆಯರಿಂದ ಮತ್ತು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಲಕುಮಿ ತಂಡದಿಂದ ಅಂಟೀ ಬೊಕ್ಕ ಅಂಕಲ್ ಮಳು ಹಾಸ್ಯಮಯ ನಾಟಕ ಪ್ರದರ್ಶನ ಜರುಗಿತು. ಯೂತ್ ಕ್ಲಬ್ ಅಧ್ಯಕ್ಷ ಚರಣ್ ಬಂಗೇರ ಸ್ವಾಗತಿಸಿದರು. ಹರಿಶ್ಚಂದ್ರ ಪಿ. ಸಾಲ್ಯಾನ್ ಪ್ರಸ್ತಾವನೆ ಗೈದರು, ಲತಾ ಶೇಖರ್ ವಂದಿಸಿದರು. ಕಾರ್ತಿಕ್ ಕಾರ್ಯಕ್ರಮ ನಿರೂಪಿಸಿದರು.



Related posts

ಪಡುಬಿದ್ರಿ ನಡಿಪಟ್ಣದಲ್ಲಿ ಮೀನುಗಾರರಿಂದ ಸಮುದ್ರ ಪೂಜೆ

Mumbai News Desk

ಹಿರೇಬೆಟ್ಟು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ದೇವರ ಷಡಾಧಾರ ಪ್ರತಿಷ್ಠೆ ಭಕ್ತಿಭಾವದಿಂದ ಸಂಪನ್ನ.

Mumbai News Desk

ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಅಷ್ಟಮಂಗಳ ಪ್ರಶ್ನೆಗೆ ಚಾಲನೆ

Mumbai News Desk

ಕಾಪು ಮೂರನೇ ಮಾರಿಯಮ್ಮ ದೇವಸ್ಥಾನ ರಜತ ಗದ್ದುಗೆ ವಿಜ್ಞಾಪನ ಪತ್ರ ಬಿಡುಗಡೆ.

Mumbai News Desk

ಕರ್ನಿರೆ: ಶ್ರೀ ಧರ್ಮ ಜಾರಂದಾಯ ದೈವಸ್ಥಾನದ ಕಾಲಾವಧಿ ನೇಮೋತ್ಸವ ಸಂಪನ್ನ

Mumbai News Desk

ಹೆಜಮಾಡಿ ಕೋಡಿ: ವಿದ್ಯಾ ಪ್ರಸಾರ ವಿದ್ಯಾಮಂದಿರದಲ್ಲಿ ಪರಿಸರ ಸ್ನೇಹಿ ಆನ್‌ಲೈನ್ ಚುನಾವಣೆ, ವಿದ್ಯಾರ್ಥಿ ಸಂಸತ್ ಪದಗ್ರಹಣ

Mumbai News Desk