September 6, 2026
Mumbai News Kannada
ಮುಂಬಯಿ

ಪೌರಾಣಿಕ ವಾಚಕ ಸಮಿತಿ ಮುಂಬಯಿ: ಸುವರ್ಣ ಮಹೋತ್ಸವ ಸಮಾರಂಭಕ್ಕೆ ಚಾಲನೆ.





ಚಿತ್ರ ವರದಿ : ದಿನೇಶ್ ಕುಲಾಲ್

ಪೌರಾಣಿಕ ವಾಚಕ ಸಮಿತಿ ಮುಂಬಯಿ ಇದರ ಸುವರ್ಣ ಮಹೋತ್ಸವ ಸಮಾರಂಭವು ಫೆ.28 ಶನಿವಾರ ದಿಂದ ಮಾರ್ಚ್ 1ರ ವರೆಗೆ ಅಂಧೇರಿಯ ವೀರದೇಸಾಯಿ ರಸ್ತೆ ಸಮೀಪದ ಶ್ರೀಮದ್ಭಾರತ ಮಂಡಳಿಯ ಶ್ರೀ ಲಕ್ಷ್ಮಿ ನಾರಾಯಣ ಮಂದಿರದಲ್ಲಿ ನಡೆಯಿತು.

ತಾ.28ರಂದು ಬೆಳಿಗ್ಗೆ 10ಕ್ಕೆ ಕಲಶ ಮಹೂರ್ತದೊಂದಿಗೆ 50ನೇ ವಾರ್ಷಿಕ ಶ್ರೀ ಶನಿ ಮಹಾ ಪೂಜೆ ಪ್ರಾರಂಭವಾಗಿ ಅಪರಾನ್ಹ ಗ್ರಂಥ ಪಾರಾಯಣ,.ಬಳಿಕ ಭಜನೆ ನಂತರ ಮಂಗಳರಾತಿ ಹಾಗೂ ಪ್ರಸಾದ ವಿತರಣೆ ನಡೆಯಿತು.

ಮಾರ್ಚ್ 1ರಂದು ಬೆಳಿಗ್ಗೆ ವಿವಿಧ ಆಮಂತ್ರಿತ ಭಜನಾ ಮಂಡಳಿ ಯವರಿಂದ ಭಜನಾ ಕಾರ್ಯಕ್ರಮಕ್ಕೆ ಶ್ರೀ ಲಕ್ಷ್ಮಿ ನಾರಾಯಣ ಮಂದಿರದ ಪ್ರಧಾನ ಅರ್ಚಕರಾದ ಗುರು ಪ್ರಸಾದ್ ಭಟ್ ದೀಪ ಬೆಳಗಿಸಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮೊಗವೀರ ವ್ಯವಸ್ಥಾಪಕ ಮಂಡಳಿಯ ಉಪಾಧ್ಯಕ್ಷೆ ದಯಾವತಿ ಸುವರ್ಣ, ಶ್ರೀ ಮದ್ಭಾರತ ಮಂಡಳಿಯ ಅಧ್ಯಕ್ಷ ಜಗನ್ನಾಥ ಪುತ್ರನ್, ಶ್ರೀ ಮಹಾಲಕ್ಷ್ಮಿ ಭಜನಾ ಮಂಡಳಿ ಅಂಧೇರಿ ಇದರ ಟ್ರಸ್ಟಿ ಚಂದ್ರಶೇಖರ್ ಆರ್. ಸಾಲ್ಯಾನ್, ವಾಚಕ ಸಮಿತಿಯ ಅಧ್ಯಕ್ಷ ರತ್ನಾಕರ್ ಬಿ. ಬಂಗೇರ ಉಪಸ್ಥಿತಿರಿದ್ದರು.


ಬಳಿಕ ಪೌರಾಣಿಕ ವಾಚಕ ಸಮಿತಿ,ಮಹಾವಿಷ್ಣು ಮುಂಬ್ರಾ ಮಿತ್ರ ಭಜನಾ ಮಂಡಳಿ ಡೊಂಬಿವಲಿ,ಶ್ರೀ ಮದ್ಭಾರತ ಮಂಡಳಿ,ಮುಕಾಂಬಿಕ ಬಾಲ ಭಜನಾ ಮಂಡಳಿ ಘನ್ಸೋಲಿ,ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ಫೋರ್ಟ್,ಮಹಿಷಾ ಮರ್ದಿನಿ ಭಜನಾ ಮಂಡಳಿ ಬೋರಿವಲಿ,
ಮಹಾಲಕ್ಷ್ಮಿ ಭಜನಾ ಮಂಡಳಿ ಅಂಧೇರಿ ಇವರಿಂದ ಭಜನೆ ನಡೆಯಿತು.

ಆನಂತರ ಮಹಿಷಾ ಮರ್ದಿನಿ ಭಜನಾ ಮಂಡಳಿ ಬೊರಿವಲಿ, ಮಹಾಲಕ್ಷ್ಮೀ
ಭಜನಾ ಮಂಡಳಿ ಅಂಧೇರಿ, ಶನಿಶ್ವರ ಸೇವಾ ಚಾರಿಟೇಬಲ್ ಟ್ರಸ್ಟ್ ಮೀರಾ ರೋಡ್ ನ ಮಕ್ಕಳ ಭಜನಾ ಮಂಡಳಿ ಅವರಿಂದ ಕುಣಿತ ನಡೆಯಿತು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಲೋಕನಾಥ ಪಿ. ಕಾಂಚನ್,ಕೋಶಾಧಿಕಾರಿ ಸದಾಶಿವ ಎನ್. ಸುವರ್ಣ, ಸಮಿತಿ ಸದಸ್ಯರಾದ ಕಮಲಾಕರ್ ಕೋಟ್ಯಾನ್, ಆನಂದ ಅಮೀನ್, ಸಂಜೀವ ಸಿ. ಬಂಗೇರ, ಹರಿಶ್ಚಂದ್ರ ಸಿ. ಕಾಂಚನ್,
ಕೇಶವ ಎಸ್.ಬಂಗೇರ,ಸುರೇಂದ್ರ ನಾಥ್ ಹಳೆಯಂಗಡಿ, ಚಂದ್ರ ಶೇಕರ ಬಿ. ಬಂಗೇರ ಸಹಕರಿಸಿದರು.



Related posts

ಶ್ರೀ ಅಯ್ಯಪ್ಪ ಭಕ್ತ ಮಂಡಳಿ, ಶ್ರೀ ಲಕ್ಷ್ಮೀ ನಾರಾಯಣ ಭಜನಾ ಸಮಿತಿ ಮೀರಾ ರೋಡ್ ಶ್ರೀ ಅಯ್ಯಪ್ಪ ಸ್ವಾಮಿ 29ನೇ ಮಹಾಪೂಜೆ

Mumbai News Desk

ಮುಂಬೈ ಕುಲಾಲ ಸಂಘ ಮುಂಬೈ ಇದರ ಮೀರಾ ರೋಡ್ – ವಿರಾರ್ ಸ್ಥಳೀಯ ಸಮಿತಿಯ ಆಶ್ರಯದಲ್ಲಿ ಮಾತಾ ವೈಷ್ಣೋದೇವಿ ದರ್ಶನ: ಭಕ್ತಿ-ಒಗ್ಗಟ್ಟಿನ ಸಮಾಗಮ

Mumbai News Desk

ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿಯ ವೈಭವಮಯ ನವರಾತ್ರಿ

Mumbai News Desk

12ನೇ ತರಗತಿಯ ಪರೀಕ್ಷೆಯಲ್ಲಿ. ಅನನ್ಯ ಬಿ ಕುಲಾಲ್. ಶೇ  86.50% 

Mumbai News Desk

ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿ ಡೊಂಬಿವಲಿ 32 ನೇ ವಾರ್ಷಿಕ ಸಾರ್ವಜನಿಕ ಶನಿಶ್ವರ ಪೂಜೆ ಸಂಪನ್ನ

Mumbai News Desk

ಮುಂಬಯಿ ಕನ್ನಡ ಸಂಘ : ಅರ್ಚನಾ ಪೂಜಾರಿಯವರಿಗೆ ಸನ್ಮಾನ

Mumbai News Desk