32 C
Mumbai
April 24, 2026
Mumbai News Kannada
ಪ್ರಕಟಣೆ

ಪಾಂಗಾಳ: ಮಾ. 2ರಿಂದ 4ರವರೆಗೆ ಸಿರಿ ಕುಮಾರ ಬ್ರಹ್ಮಲಿಂಗೇಶ್ವರ ಆದಿ ಆಲಡೆ ಆಯನ ಸಿರಿಜಾತ್ರೆ





ಉಡುಪಿ: ತಾಲ್ಲೂಕಿನ ಪಾಂಗಾಳದ ಶ್ರೀ ಸಿರಿ ಕುಮಾರ ಬ್ರಹ್ಮಲಿಂಗೇಶ್ವರ ಆದಿ ಆಲಡೆಯಲ್ಲಿ ಮಾರ್ಚ್ 2ರಿಂದ 4ರವರೆಗೆ ಆದಿ ಆಲಡೆ ಬ್ರಹ್ಮಲಿಂಗೇಶ್ವರ ಹಾಗೂ ಪರಿವಾರ ದೈವಗಳ ಆಯನ ಸಿರಿಜಾತ್ರಾ ಮಹೋತ್ಸವವು ವೈವಿಧ್ಯಮಯ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

​ಧಾರ್ಮಿಕ ಕಾರ್ಯಕ್ರಮಗಳ ವಿವರ:

ಮಾರ್ಚ್ 2 (ಸೋಮವಾರ): ಬೆಳಿಗ್ಗೆ 9:30ಕ್ಕೆ ನವಕ ಕಲಶ, ಪ್ರಧಾನ ಹೋಮ, ಕಲಶಾಭಿಷೇಕ ಹಾಗೂ ಕ್ಷೇತ್ರದ ನಾಗಬನದಲ್ಲಿ ತನು ತಂಬಿಲ ಪ್ರಸನ್ನ ಪೂಜೆ ನೆರವೇರಲಿದೆ. ಬೆಳಿಗ್ಗೆ 11:30ರ ವೃಷಭ ಲಗ್ನ ಸುಮುಹೂರ್ತದಲ್ಲಿ ಧ್ವಜಾರೋಹಣ ನೆರವೇರಲಿದ್ದು, ಮಧ್ಯಾಹ್ನ 12:30ಕ್ಕೆ ಮಹಾಪೂಜೆ ಹಾಗೂ 12:45ಕ್ಕೆ ಬ್ರಾಹ್ಮಣ ಸುಹಾಸಿನಿ ಆರಾಧನೆ ನಡೆಯಲಿದೆ. ನಂತರ ಸಾರ್ವಜನಿಕ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.

​ರಾತ್ರಿ 8:30ಕ್ಕೆ ಭಂಡಾರ ಚಾವಡಿಯಿಂದ ಪರಿವಾರ ದೈವಗಳ ಭಂಡಾರ ಹೊರಡಲಿದೆ. ರಾತ್ರಿ 9:30ಕ್ಕೆ ಬೈಗಿನ ಬಲಿ, 11:00ಕ್ಕೆ ಕುಮಾರ ದರ್ಶನ, ರಾತ್ರಿ 1:00ಕ್ಕೆ ಮಹಾ ರಂಗಪೂಜೆ, 2:30ಕ್ಕೆ ಬ್ರಹ್ಮಮಂಡಲ ಹಾಗೂ ಮುಂಜಾನೆ 4:30ರಿಂದ ತುಲಾಭಾರ ಸೇವೆಗಳು ನಡೆಯಲಿವೆ.

ಮಾರ್ಚ್ 3: ಬೆಳಿಗ್ಗೆ 11:00ಕ್ಕೆ ಮಹಾಪೂಜೆ, ಸಂಜೆ 7:00 ಗಂಟೆಗೆ ತಪ್ಪಂಗಾಯಿ ಬಲಿ ನಡೆಯಲಿದೆ. ರಾತ್ರಿ 8:30ರಿಂದ ಧೂಳುಮಂಡಲ, ಭೂತಬಲಿ, ಶಯನೋತ್ಸವ ಹಾಗೂ ಕವಾಟ ಬಂಧನ ನಡೆಯಲಿದೆ.

ಮಾರ್ಚ್ 4: ಬೆಳಿಗ್ಗೆ 7:00 ಗಂಟೆಗೆ ಕವಾಟೋದ್ಘಾಟನೆ ನಂತರ ಮಹಾಪೂಜೆ ನೆರವೇರಲಿದೆ. ಸಾಯಂಕಾಲ 5:00 ಗಂಟೆಗೆ ಬಲಿ ಹೊರಟು ಅವಕೃತ ಸ್ನಾನ, ಕಟ್ಟೆ ಪೂಜೆ ನಡೆದು, ರಾತ್ರಿ ಧ್ವಜಾವರೋಹಣದೊಂದಿಗೆ ಉತ್ಸವ ಸಂಪನ್ನಗೊಳ್ಳಲಿದೆ.

​ಈ ಮಹೋತ್ಸವದಲ್ಲಿ ಭಕ್ತಾದಿಗಳು ಕುಟುಂಬ ಸಮೇತರಾಗಿ ಭಾಗವಹಿಸಿ ಶ್ರೀ ಬ್ರಹ್ಮಲಿಂಗೇಶ್ವರ, ನಾಗದೇವರು ಹಾಗೂ ಶ್ರೀ ಧರ್ಮ ದೈವಗಳ ಕೃಪೆಗೆ ಪಾತ್ರರಾಗಿ ಸಿರಿಮುಡಿ ಗಂಧ ಪ್ರಸಾದ ಸ್ವೀಕರಿಸಬೇಕೆಂದು ಮುಕ್ಕಾಲಿ ರಮಾನಂದ ಎನ್. ಶೆಟ್ಟಿ, ಅಧ್ಯಕ್ಷ ರಮೇಶ ಡಿ. ಶೆಟ್ಟಿ (ಕಲ್ಯಾಣ್), ಕಾರ್ಯದರ್ಶಿ ರವಿವರ್ಮ ಶೆಟ್ಟಿ ಹಾಗೂ ಜೊತೆ ಕೋಶಾಧಿಕಾರಿ ದೀಪಕ್ ಎಸ್. ಶೆಟ್ಟಿ ವಿನಂತಿಸಿದ್ದಾರೆ.

​ಮುಂಬೈ ಸಮಿತಿಯ ಪರವಾಗಿ ಅಧ್ಯಕ್ಷ ಇನ್ನಂಜೆ ಚಂದ್ರಹಾಸ ಗುರುಸ್ವಾಮಿ (ಅಂಧೇರಿ), ಉಪಾಧ್ಯಕ್ಷ ಉಮೇಶ್ ಆರ್. ಶೆಟ್ಟಿ (ಹೋಟೆಲ್ ಶಾರದ ಭವನ, ಸಾಂಗ್ಲಿ), ಕಾರ್ಯದರ್ಶಿ ಶೈಲೇಶ್ ಆರ್. ಶೆಟ್ಟಿ (ಹೋಟೆಲ್ ಮಹಾಲಕ್ಷ್ಮಿ, ಕಲ್ಯಾಣ್), ಜಂಟಿ ಕಾರ್ಯದರ್ಶಿ ಅಶೋಕ್ ಶೆಟ್ಟಿ (ಹೋಟೆಲ್ ಗಣೇಶ್ ಟೀ ಕ್ಲಬ್, ಸಾಂಗ್ಲಿ), ಖಜಾಂಚಿ ಶ್ರೀಧರ ಎಸ್. ಶೆಟ್ಟಿ (ಗೋರೆಗಾಂವ್, ಬಂಗೂರ್ ನಗರ) ಹಾಗೂ ಸೇವಾ ಸಮಿತಿಯ ಸರ್ವ ಸದಸ್ಯರು, ಮಹಿಳಾ ಸದಸ್ಯರು, ಕುಟುಂಬಸ್ಥರು ಮತ್ತು ಗ್ರಾಮಸ್ಥರು ಭಕ್ತರನ್ನು ಸ್ವಾಗತಿಸಿದ್ದಾರೆ.



Related posts

ಶ್ರೀ ಸೀತಾರಾಮ ಭಜನಾ ಮಂದಿರ,ಹೆಜಮಾಡಿ, ಅ.17ಕ್ಕೆ 66ನೇ ಮಂಗಲೋತ್ಸವ.

Mumbai News Desk

ಡಿ.17 ರಿಂದ 21 ರ ವರಗೆ ತುಳುನಾಡಿನ ವಿವಿಧ ಪುಣ್ಯ ಕ್ಷೇತ್ರ ಗಳಲ್ಲಿ ಮುಂಬಯಿಯ ಶ್ರೀ ಉಮಾ ಮಹೇಶ್ವರಿ ಭಜನಾ ಮಂಡಳಿ ಯಿಂದ ಭಜನಾ ಕಾರ್ಯಕ್ರಮ.

Mumbai News Desk

ವಸಾಯಿ ಕರ್ನಾಟಕ ಸಂಘ : ಸ್ವಾತಂತ್ರೋತ್ಸವ ಸಂಭ್ರಮ, ದತ್ತು ಸ್ಪೀಕರ, ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

Mumbai News Desk

ಡಿ.9 ರಂದು ಶ್ರೀ ಸದ್ಗುರು ಶನೇಶ್ವರ ಸೇವಾ ಸಮಿತಿ ಕಾಂದಿವಲ ಇದರ ವತಿಯಿಂದ 49ನೇ ವಾರ್ಷಿಕ ಶ್ರೀ ಶನೀಶ್ವರ ಗ್ರಂಥಪಾರಾಯಣ ಮಹೋತ್ಸವ 

Mumbai News Desk

ಮಾ. 23,  ತುಳು ಸಂಘ, ಬೋರಿವಲಿ, 13ನೇ ವಾರ್ಷಿಕೋತ್ಸವ,  ಸಾಂಸ್ಕೃತಿಕ ವೈಭವ, ನಾಟಕ ಪ್ರದರ್ಶನ

Mumbai News Desk

ಮೀರಾ ದಹಾಣು ಬಂಟ್ಸ್ (ರಿ) ಅ10.ಆಟಿದ ಕೂಟ . ಸಾಂಸ್ಕೃತಿಕ ಕಾರ್ಯಕ್ರಮ

Mumbai News Desk