30.9 C
Mumbai
June 8, 2026
Mumbai News Kannada
ತುಳುನಾಡು

ಜನಸಾಮಾನ್ಯರ ಆಶೋತ್ತರಗಳಿಗೆ ಸ್ಪಂದಿಸುವ ‘ಭಾರತ್ ಬ್ಯಾಂಕ್’: ಬೆಳ್ತಂಗಡಿಯ ಸುಸಜ್ಜಿತ ಕಟ್ಟಡದಲ್ಲಿ ಶಾಖೆ ಕಾರ್ಯಾರಂಭ.






ಭಾರತ್ ಬ್ಯಾಂಕ್ ಇದರ ಸ್ಥಳಾಂತರಗೊಂಡ ಬೆಳ್ತಂಗಡಿ (ಉಜಿರೆ) ಶಾಖೆ ಮತ್ತು ಎಟಿಎಂ ಕೇಂದ್ರವನ್ನು ಬೆಳ್ತಂಗಡಿಯ ಮುಖ್ಯ ರಸ್ತೆಯಲ್ಲಿರುವ ಗುರುಸಾನಿಧ್ಯ ಕಮರ್ಷಿಯಲ್ ಕಾಂಪ್ಲೆಕ್ಸ್‌ನಲ್ಲಿ ಸೋಮವಾರ (ಮಾ. 3) ಲೋಕಾರ್ಪಣೆಗೊಳಿಸಲಾಯಿತು.


ಶ್ರೀ ರಾಮ ಕ್ಷೇತ್ರ ನಿತ್ಯಾನಂದ ನಗರ ಧರ್ಮಸ್ಥಳ ಇಲ್ಲಿನ ಯತಿಶ್ರೇಷ್ಠರೂ ಮಹಾ ಮಂಡಲಾಧೀಶರೂ ಆಗಿರುವ ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ರಿಬ್ಬನ್ ಕತ್ತರಿಸುವ ಮೂಲಕ ಶಾಖೆಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು. “ಬ್ಯಾಂಕಿನ ಸಿಬ್ಬಂದಿಗಳ ಸೇವಾ ಮನೋಭಾವ ಶ್ಲಾಘನೀಯ. ಈ ಸಂಸ್ಥೆಯು ಬೆಳ್ತಂಗಡಿಯ ಜನರಿಗೆ ಇನ್ನಷ್ಟು ಉತ್ತಮ ಸೇವೆ ನೀಡಲಿ ಹಾಗೂ ಬ್ಯಾಂಕ್ ಉತ್ತರೋತ್ತರ ಅಭಿವೃದ್ಧಿ ಹೊಂದಲಿ” ಎಂದು ಸ್ವಾಮೀಜಿ ಹರಸಿದರು.


ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಬೆಸ್ಟ್ ಫೌಂಡೇಶನ್ ಅಧ್ಯಕ್ಷರಾದ ರಕ್ಷಿತ್ ಶಿವರಾಮ್, ಭಾರತ್ ಬ್ಯಾಂಕ್ ಜನಸಾಮಾನ್ಯರ ಆರ್ಥಿಕ ಶಕ್ತಿಯಾಗಿ ದಶಕಗಳಿಂದಲೂ ವಿಶ್ವಾಸಾರ್ಹ ಸೇವೆ ನೀಡುತ್ತಾ ಬಂದಿದೆ ಎಂದು ಶ್ಲಾಘಿಸಿದರು. ಈ ಸುಸಜ್ಜಿತ ನೂತನ ಶಾಖೆಯ ಮೂಲಕ ಬ್ಯಾಂಕ್ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿ ಅವರು ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗಕ್ಕೆ ಅಭಿನಂದನೆ ಸಲ್ಲಿಸಿದರು.”

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಮಾತನಾಡಿ, ಬೆಳ್ತಂಗಡಿ ತಾಲ್ಲೂಕಿನ ಆರ್ಥಿಕ ಅಭಿವೃದ್ಧಿಯಲ್ಲಿ ಭಾರತ್ ಬ್ಯಾಂಕ್‌ನ ಪಾತ್ರ ಮಹತ್ವದ್ದಾಗಿದೆ. ಬ್ಯಾಂಕ್ ತನ್ನ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡಿರುವುದು ಗ್ರಾಹಕರಿಗೆ ಹೆಚ್ಚಿನ ಅನುಕೂಲ ಮಾಡಿಕೊಡಲಿದೆ ಎಂದು ತಿಳಿಸಿ, ಬ್ಯಾಂಕಿನ ನೂತನ ಶಾಖೆಗೆ ಶುಭ ಹಾರೈಸಿದರು.”

ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಹಾಗೂ ನ್ಯಾಯವಾದಿ ಭಗೀರಥ ಜಿ. ಅವರು ಮಾತನಾಡಿ, ಭಾರತ್ ಬ್ಯಾಂಕ್ ಬೆಳ್ತಂಗಡಿಯ ಹೃದಯಭಾಗದಲ್ಲಿರುವ ನಮ್ಮ ಸುಸಜ್ಜಿತ ಕಟ್ಟಡಕ್ಕೆ (ಗುರು ಸಾನೀಧ್ಯ ಕಮರ್ಷಿಯಲ್ ಕಾಂಪ್ಲೆಕ್ಸ್) ಸ್ಥಳಾಂತರಗೊಂಡಿರುವುದು ಅತ್ಯಂತ ಸಂತಸದ ವಿಷಯ. ನಾವು ಭಾರತ್ ಬ್ಯಾಂಕಿನ ಈ ಸ್ಥಳಾಂತರದ ಕಾರ್ಯದಲ್ಲಿ ನಾವು ಆದಷ್ಟು ನಮ್ಮ ಬೆಂಬಲ ನೀಡಿದೆವೆ ಹಾಗೂ ಮುಂದಿನ ದಿನಗಳಲ್ಲೂ ಬ್ಯಾಂಕಿನ ಪ್ರತಿಯೊಂದು ಹೆಜ್ಜೆಯಲ್ಲೂ ನಮ್ಮ ಇದೇ ರೀತಿಯ ಬೆಂಬಲ ಮತ್ತು ಸಹಕಾರ ಮುಂದುವರಿಯಲಿದೆ ಎಂದು ಅವರು ನುಡಿದರು.

ಬ್ಯಾಂಕಿನ ಗ್ರಾಹಕ ಮತ್ತು ಹಿತೈಷಿ ಪೀತಾಂಬರ ಹೇರಾಜೆ ಮಾತನಾಡುತ್ತಾ ನಾನು ಕಳೆದ ಅನೇಕ ವರ್ಷಗಳಿಂದ ಭಾರತ್ ಬ್ಯಾಂಕ್‌ನೊಂದಿಗೆ ವ್ಯವಹರಿಸುತ್ತಿದ್ದೇನೆ. ಈ ಬ್ಯಾಂಕಿನ ಅತಿದೊಡ್ಡ ಶಕ್ತಿ ಎಂದರೆ ಇಲ್ಲಿನ ಸಿಬ್ಬಂದಿ ವರ್ಗ. ಗ್ರಾಹಕರ ಅಗತ್ಯಗಳನ್ನು ಅರಿತು, ಅವರಿಗೆ ಪೂರಕವಾದ ಆರ್ಥಿಕ ಯೋಜನೆಗಳನ್ನು ಸೂಚಿಸುವಲ್ಲಿ ಇವರು ಸದಾ ಮುಂದು. ಶಾಖೆಯು ಇಂದು ಸುಸಜ್ಜಿತ ಕಟ್ಟಡಕ್ಕೆ ಸ್ಥಳಾಂತರಗೊಂಡಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ. ಬ್ಯಾಂಕಿನ ಪ್ರಗತಿಯಲ್ಲಿ ಸಿಬ್ಬಂದಿಗಳ ಜವಾಬ್ದಾರಿಯುತ ಪಾತ್ರ ಮತ್ತು ಅಧ್ಯಕ್ಷರ ಸಮರ್ಥ ನಾಯಕತ್ವ ಎದ್ದು ಕಾಣುತ್ತಿದೆ. ಬೆಳ್ತಂಗಡಿಯ ಜನತೆಗೆ ಇನ್ನೂ ಹೆಚ್ಚಿನ ಉತ್ತಮ ಸೇವೆ ನೀಡುವಂತಾಗಲಿ ಎಂದು ನಾನು ಈ ಸಂಸ್ಥೆಯನ್ನು ಅಭಿನಂದಿಸುತ್ತೇನೆ.”

ಗಣ್ಯರಾದ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದ ವಿಶೇಷ ಅಧಿಕಾರಿ – ಮೋನಪ್ಪ ಬಂಗೇರ ಮತ್ತು ಕೆ ಎಸ್ ಯೋಗೀಶ್ ಕುಮಾರ್ ಸಭೆಯನ್ನು ಉದ್ದೇಶಿಸಿ ಮಾತನಾಡಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಬ್ಯಾಂಕಿನ ಗ್ರಾಹಕರಾದ ತಾರಾವತಿ ಜಗನ್ನಾಥ್ ಮತ್ತು ಡಾಕ್ಟರ್ ಜಗನ್ನಾಥ್, ಬಿಲ್ಲವ ಸೇವಾ ಸಂಘ ಬೆಳ್ತಂಗಡಿ ಅಧ್ಯಕ್ಷರು ಜಯವಿಕರಂ ಕಲ್ಲಾಪು, ಕನ್ಯಾಡಿ ಶ್ರೀ ರಾಮ ಕ್ಷೇತ್ರ ಟ್ರಸ್ಟಿ ರವೀಂದ್ರ ಪೂಜಾರಿ, ಹಿರಿಯ ಪತ್ರಕರ್ತ ಅಶ್ರಫ್ ಅಲಿಕುಂಞಿ ಮುಂಡಾಜೆ, ಗುರುದೇವ ಸೊಸೈಟಿ ಉಪಾಧ್ಯಕ್ಷ ಜಗದೀಶ್ ಚಂದ್ರ ಡಿ ಕೆ ಪತ್ರಕರ್ತ ಮತ್ತು ಗ್ರಾಹಕರಾದ – ಸಂತೋಷ್ ಕೋಟ್ಯಾನ್, ಕಾಶಿಪಟ್ಣ ಸಹಕಾರಿ ಸಂಘದ ಅಧ್ಯಕ್ಷ ಸತೀಶ್ ಕೆ ಕಾಶಿಪಟ್ನ, ಬ್ಯಾಂಕಿನ ಗ್ರಾಹಕರಾದ ಜಯಂತ್ ಸಾಲ್ಯಾನ್, ಜಕಾರಿಯ, ತುಕಾರಾಂ ಬಂಗೇರ, ಜೈಶಂಕರ್, ಯು.ಕೆ ಮುಹಮ್ಮದ್ ಹನೀಫ್ ಉಜಿರೆ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಲ್ಲ ಗಣ್ಯರನ್ನು ಉದ್ದೇಶಿಸಿ ಮಾತನಾಡ ಭಾರತ್ ಬ್ಯಾಂಕಿನ ಕಾರ್ಯಾಧ್ಯಕ್ಷ ಸೂರ್ಯಕಾಂತ್ ಜಯ ಸುವರ್ಣ “ ಇಂದು ಬೆಳ್ತಂಗಡಿಯ ನಮ್ಮ ಶಾಖೆಯು ನೂತನ ಹಾಗೂ ಸುಸಜ್ಜಿತ ಕಟ್ಟಡಕ್ಕೆ ಸ್ಥಳಾಂತರಗೊಳ್ಳುತ್ತಿರುವ ಈ ಶುಭ ಸಂದರ್ಭದಲ್ಲಿ ನಿಮ್ಮೆಲ್ಲರನ್ನು ಉದ್ದೇಶಿಸಿ ಮಾತನಾಡಲು ನನಗೆ ತುಂಬ ಸಂತೋಷವಾಗುತ್ತಿದೆ. ಇದು ಕೇವಲ ಒಂದು ಕಟ್ಟಡದ ಬದಲಾವಣೆಯಲ್ಲ, ಬದಲಾಗಿ ನಮ್ಮ ಗ್ರಾಹಕರಿಗೆ ಇನ್ನೂ ಉತ್ತಮ ಸೇವೆ ನೀಡುವ ನಮ್ಮ ಬದ್ಧತೆಯ ಹೊಸ ಹೆಜ್ಜೆ.

ಈ ಸಂದರ್ಭದಲ್ಲಿ ನಾನು ವಿಶೇಷವಾಗಿ ಇಂದಿನ ಯುವ ಪೀಳಿಗೆಯನ್ನು ಉದ್ದೇಶಿಸಿ ಮಾತನಾಡಲು ಬಯಸುತ್ತೇನೆ. ನೀವೆಲ್ಲರೂ ಕನಿಷ್ಠ ಒಂದು ಉಳಿತಾಯ ಖಾತೆಯನ್ನು ತೆರೆಯುವ ಮೂಲಕ ‘ಭಾರತ್ ಬ್ಯಾಂಕ್’ ನ ಸೇವೆಯನ್ನು ಒಮ್ಮೆ ಅನುಭವಿಸಿ ನೋಡಿ ಎಂದು ನಾನು ನಿಮ್ಮಲ್ಲಿ ವಿನಂತಿಸುತ್ತೇನೆ.

ಇಂದಿನ ಡಿಜಿಟಲ್ ಯುಗಕ್ಕೆ ಬೇಕಾದ ಎಲ್ಲಾ ತಾಂತ್ರಿಕ ಸೌಲಭ್ಯಗಳು ಅಂದರೆ ಮೊಬೈಲ್ ಬ್ಯಾಂಕಿಂಗ್, ಇಂಟರ್ನೆಟ್ ಬ್ಯಾಂಕಿಂಗ್ ಸೇರಿದಂತೆ ಎಲ್ಲಾ ರೀತಿಯ ಡಿಜಿಟಲ್ ಸೌಲಭ್ಯಗಳು ನಮ್ಮಲ್ಲಿ ಲಭ್ಯವಿದೆ. ತಂತ್ರಜ್ಞಾನದ ಜೊತೆಗೆ ವೈಯಕ್ತಿಕಗೊಳಿಸಿದ ಸೇವೆಯನ್ನು ಪಡೆಯಲು ನೀವು ಮುಂದೆ ಬರಬೇಕು.

ಭಾರತ್ ಬ್ಯಾಂಕ್ ಇಂದು ಇಷ್ಟೊಂದು ಎತ್ತರಕ್ಕೆ ಬೆಳೆಯಲು ಕಾರಣ ನಮ್ಮ ಬ್ಯಾಂಕಿನ ಸಿಬ್ಬಂದಿಗಳ ನಿಸ್ವಾರ್ಥ ಸೇವೆ ಮತ್ತು ಅಚಲವಾದ ಬೆಂಬಲ. ನಮ್ಮ ಸಿಬ್ಬಂದಿಗಳ ಮೇಲೆ ನನಗೆ ಅಪಾರವಾದ ವಿಶ್ವಾಸವಿದೆ. ಬ್ಯಾಂಕಿನ ಪ್ರತಿಯೊಂದು ಏಳಿಗೆಯಲ್ಲೂ ಅವರ ಜವಾಬ್ದಾರಿಯುತ ಕೆಲಸದ ಶ್ರಮವಿದೆ. ಅವರೇ ನಮ್ಮ ಬ್ಯಾಂಕಿನ ನಿಜವಾದ ಆಸ್ತಿ ಎಂದು ನುಡಿದರು”.

ಕಾರ್ಯಕ್ರಮದಲ್ಲಿ ಬ್ಯಾಂಕಿನ ಉಪಾಧ್ಯಕ್ಷರಾದ ನ್ಯಾಯವಾದಿ ಸೋಮನಾಥ್ ಬಿ ಅಮೀನ್ ಹಾಗೂ ನಿರ್ದೇಶಕರುಗಳಾದ ಭಾಸ್ಕರ್ ಎಂ. ಸಾಲ್ಯಾನ್ , ಗಂಗಾಧರ್ ಜೆ. ಪೂಜಾರಿ , ಚಂದ್ರಶೇಖರ್ ಎಸ್. ಪೂಜಾರಿ, ನಾರಾಯಣ್ ಎಲ್. ಸುವರ್ಣ , ಸುರೇಶ್ ಬಿ. ಸುವರ್ಣ ಮತ್ತು ಬೋರ್ಡ್ ಆಫ್ ಮ್ಯಾನೇಜ್ಮೆಂಟ್ ನ ಅಧ್ಯಕ್ಷ ಪ್ರಜ್ವಲ್ ಜೆ. ಪೂಜಾರಿ ಹಾಗೂ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ವಿದ್ಯಾನಂದ್ ಎಸ್. ಕರ್ಕೇರ ಹಾಗೂ ಜಂಟಿ ವ್ಯವಸ್ಥಾಪಕ ನಿರ್ದೇಶಕ ದಿನೇಶ್ ಬಿ. ಸಾಲ್ಯಾನ್ ಮತ್ತು ಚೀಫ್ ಮೆನೇಜರ್ ಗಳಾದ ರವೀಂದ್ರ ಕುಂದರ್, ಅರುಣ್ ಕುಮಾರ್ ಕೋಟಿಯನ್ ಉಪಸ್ಥಿತರಿದ್ದರು.

ಹರೀಶ್ ಶಾಂತಿ ತನ್ನ ಪೌರೋಹಿತ್ಯದಲ್ಲಿ ವಾಸ್ತುಪೂಜೆ, ಶ್ರೀ ಸತ್ಯನಾರಾಯಣ ಮಹಾಪೂಜೆ ನೆರವೇರಿಸಿ ಮಂಗಳಾರತಿಗೈದು ತೀರ್ಥಪ್ರಸಾದ ವಿತರಿಸಿದರು. ಶಾಖಾ ಮುಖ್ಯಸ್ಥ ದೀಪಕ್ ಡಿ ಪೂಜಾರಿ ಮತ್ತು ಯಶಸ್ವಿನಿ ದೀಪಕ್ ಪೂಜಾರಿ ದಂಪತಿ ಪೂಜಾಧಿಗಳ ಯಜಮಾನತ್ವ ವಹಿಸಿದ್ದರು.

ಬೆಳ್ತಂಗಡಿ ಶಾಖೆಯ ವ್ಯವಸ್ಥಾಪಕ ದೀಪಕ್ ಡಿ ಪೂಜಾರಿ ಸ್ವಾಗತಿಸಿದರು. ಚರಿಷ್ಮಾ ಕೋಟಿಯಾನ್ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಶಾಖೆಯ ಉಪ ವ್ಯವಸ್ಥಾಪಕಿ ಶ್ವೇತಾ ರವಿ ಪೂಜಾರಿ ವಂದಿಸಿದರು.



Related posts

ಹೆಜಮಾಡಿ ಬಿಲ್ಲವರ ಸಂಘದ ಬ್ರಹ್ಮ ಶ್ರೀ ಗುರು ನಾರಾಯಣ ಜಯಂತಿ ಕಾರ್ಯಕ್ರಮದಲ್ಲಿ ಹರಿಶ್ಚಂದ್ರ ಪಿ ಸಾಲಿಯಾನ್‌ರವರಿಗೆ ಸನ್ಮಾನ

Mumbai News Desk

ಜಾಗತಿಕ ಬಂಟರ ಸಂಘಗಳ ಒಕ್ಕೂಟ, ಗಡಿಪ್ರದಾನ ಸ್ವೀಕರಿಸಿದ ಪಾತ್ರಾಡಿಗುತ್ತು  ಪುಷ್ಪರಾಜ್ ಶೆಟ್ಟಿ ಸಾಮಾನಿ ಗುತ್ತಿನಾರ್ ಗೌರವ,

Mumbai News Desk

ಕುಕ್ಕೆ ಸುಬ್ರಹ್ಮಣ್ಯ ದರ್ಶನ ಸಮಯ ವಿಸ್ತರಣೆ: ಭಕ್ತರಿಗೆ ಸಿಗಲಿದೆ ಹೆಚ್ಚುವರಿ ಒಂದು ಗಂಟೆಯ ಕಾಲಾವಕಾಶ

Mumbai News Desk

‘ಹೊಸ ಅಂಗಣ’ ಮಾಸ ಪತ್ರಿಕೆಯ ತಿಂಗಳ ಬೆಳಕು ಕಾರ್ಯಕ್ರಮ : ದೈವದ ಪಾತ್ರಿ ಮೋಹನ್ ಪೂಜಾರಿಯವರಿಗೆ ಸನ್ಮಾನ

Mumbai News Desk

ಇನ್ನಂಜೆ ಕನ್ನಡ ಮಾಧ್ಯಮ ಶಾಲೆಯ ಉಚಿತ ವಿದ್ಯಾಭ್ಯಾಸದ ಸಹಾಯಾರ್ಥವಾಗಿ  ಕ್ರಿಕೆಟ್ ಪಂದ್ಯಾಕೂಟ : ಶಾಲೆಗೆ ರೂಪಾಯಿ 1,67,875/ ಹಸ್ತಾಂತರ.

Mumbai News Desk

ಕಲ್ಯಾಣಪುರ : ಸಂತೆಕಟ್ಟೆ ಬಿಲ್ಲವರ ಸೇವಾಸಂಘ (ರಿ ), ನಯಂಪಳ್ಳಿ – ಸಂತೆಕಟ್ಟೆ ಬ್ರಹ್ಮಶ್ರೀ ನಾರಾಯಣ ಗುರುಗಳ 171 ನೇ ಜನ್ಮದಿನಾಚರಣೆ

Mumbai News Desk