30.4 C
Mumbai
June 20, 2026
Mumbai News Kannada
ಮುಂಬಯಿ

ಕರ್ನಾಟಕ ಸಂಘ ಮುಂಬಯಿ ವತಿಯಿಂದ ಉದ್ಯಮಿ ಉದಯ ಶೆಟ್ಟಿ ಅವರ ಭೇಟಿ.





ಚಿತ್ರ ವರದಿ ದಿನೇಶ್ ಕುಲಾಲ್ 

   ಮಂಬಯಿ :  ನಗರದ ಪ್ರತಿಷ್ಠಿತ ಉದ್ಯಮಿ,ಹೆಸರಾಂತ ಸಮಾಜ ಸೇವಕ, ಸಾಯಿರಾಧಾ ಸಮೂಹ ಸಂಸ್ಥೆಗಳ  ಮಾಲಕರೋರ್ವರಾದ  ಉದಯ ಎಸ್  ಶೆಟ್ಟಿ  ಯವರನ್ನು ಮುಂಬಯಿ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ, ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕರ್ನಾಟಕ ಸಂಘದ ವತಿಯಿಂದ ಅವರ 

 ಅಂಧೇರಿಯ ಪೂರ್ವದ  ಸಾಯಿ ಪ್ಯಾಲೇಸ್ ಹೋಟೆನಲ್ಲಿ  17ರಂದು ಭೇಟಿ ಮಾಡಲಾಯಿತು.

ಶಿಕ್ಷಣ,ಧಾರ್ಮಿಕತೆ,ಸಾಹಿತ್ಯ, ಕಲೆ,ಸಂಸ್ಕೃತಿಯ ಬಗ್ಗೆ  ಅಪಾರ ಪ್ರೀತಿ, ಅಸಕ್ತಿ,ಅಭಿಮಾನವಿರುವ ಉದಯ ಶೆಟ್ಟಿ ಕರ್ನಾಟಕ ಸಂಘದ ಕಾರ್ಯ ಚಟುವಟಿಕೆಗಳು ಮತ್ತು ನೂತನ ಸಾಂಸ್ಕೃತಿಕ ಸಮುಚ್ಚಯದ ಯೋಜನೆ ಬಗ್ಗೆ ತಿಳಿದು ಸಂತೋಷ ವ್ಯಕ್ತ ಪಡಿಸಿದರು.

    ರವಿ ಎಸ್ ಶೆಟ್ಟಿ ಮತ್ತು ಉದಯ ಶೆಟ್ಟಿ ರವರು ಸಮಾಜದ ಯಾವುದೇ ಒಳ್ಳೆಯ ಕೆಲಸವಿದ್ದರೂ,ಅದಕ್ಕೆ ಸ್ಪಂದಿಸುವ ಗುಣಧರ್ಮವನ್ನು ಹೊಂದಿದ್ದು,ಅದಕ್ಕೆ ಅವರ  ನಿಸ್ವಾರ್ಥ ಸಮಾಜ ಸೇವೆಯೇ ಸಾಕ್ಷಿಯಾಗಿದೆ.

ಸಮಾಜಕ್ಕೆ ಒಳ್ಳೆಯ ಮಾರ್ಗದರ್ಶನವನ್ನು ನೀಡುವ ವ್ಯಕ್ತಿತ್ವವನ್ನು ಹೊಂದಿರುವ  ರವಿ ಶೆಟ್ಟಿ ಯವರು ಓರ್ವ ನಿರ್ಮಲ ಮನಸ್ಸಿನವರಾಗಿದ್ದು, ಕರ್ನಾಟಕ ಸಂಘಕ್ಕೂ ಸೂಕ್ತ ಸಲಹೆ, ಮಾರ್ಗದರ್ಶನವನ್ನು ನೀಡಿ ಪ್ರೋತ್ಸಾಹಿಸುತ್ತಿದ್ದಾರೆ ಎಂದು ಕರ್ನಾಟಕ ಸಂಘದ ಗೌ ಕಾರ್ಯದರ್ಶಿ ಓಂದಾಸ್ ಕಣ್ಣಂಗಾರ್ ತಿಳಿಸಿದರು.

     ರವಿ ಶೆಟ್ಟಿ ಅವರ ಮುತುವರ್ಜಿಯ ಮೇರೆಗೆ ಸ್ಪಂದಿಸಿದ  ಉದಯ ಶೆಟ್ಟಿ ರವರು ಕರ್ನಾಟಕ ಸಂಘಕ್ಕೆ  ದೇಣಿಗೆಯನ್ನು ನೀಡಿ ಸಹಕರಿಸಿ,ಶುಭವನ್ನು ಹಾರೈಸಿದರು.

ಈ ಸಂದರ್ಭದಲ್ಲಿ ಅವರ ತಂದೆಯವರು ಅಡಿಪಾಯ ಹಾಕಿಕೊಟ್ಟ ಹೋಟೆಲ್ ಉದ್ಯಮವನ್ನು ,ಸಾಯಿ ರಾಧಾ ಸಮೂಹ ಸಂಸ್ಥೆಗಳಾಗಿ ಕಟ್ಟಿ, ಬ್ರಹತ್ ಮಟ್ಟದಲ್ಲಿ ಬೆಳೆಸಿ,ಅದನ್ನೊಂದು’ ಸಾಯಿ ಪ್ಯಾಲೇಸ್’  ಬ್ರಾಂಡ್  ಆಗಿ ಲೋಕ ಪ್ರಸಿದ್ಧಿಯನ್ನು ಗೊಳಿಸಿದ ಮಹಾ ಸಾಧನೆಗಾಗಿ,ಕರ್ನಾಟಕ ಸಂಘದ ವತಿಯಿಂದ ಸಂಘದ ಗೌ ಕಾರ್ಯದರ್ಶಿ ಓಂದಾಸ್ ಕಣ್ಣಂಗಾರ್ ಶಾಲು ಹೊದಿಸಿ,ನೂತನ ಸಮುಚ್ಚಯದ ಕಿರು ಹೊತ್ತಿಗೆಯನ್ನು ನೀಡಿ ಗೌರವಿಸಿ ಅಭಿನಂದಿಸಿದರು.

 ಅವರೊಂದಿಗೆ ಕರ್ನಾಟಕ ಸಂಘದ ಸದಸ್ಯರಾದ,ಸಂಘಟಕ ಅಶೋಕ್ ಸಸಿಹಿತ್ಲು, ವಿಶ್ವನಾಥ ಶೆಟ್ಟಿ,ಎಕ್ಕಾರು ಉಪಸ್ಥಿತರಿದ್ದರು.



Related posts

ಬಂಟ್ಸ್ ಫೋರಮ್ ಮೀರಾ-ಭಾಯಂದರ್ : ‘ಬಂಟ ಕೂಟ-2026’ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆ.

Mumbai News Desk

ಶ್ರೀ ಕಟೀಲು ದುರ್ಗಾಪರಮೇಶ್ವರಿ ಕಲ್ಲುರ್ಟಿ ಮಂತ್ರದೇವತಾ ಸಾನಿಧ್ಯ ಕೋಪರಖೈರಣೆ, ಧರ್ಮದೈವ ತಾಯಿ ಕಲ್ಲುರ್ಟಿಯ ಮಾಸಿಕ ಸಂಕ್ರಾಂತಿ ಸೇವೆ

Mumbai News Desk

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ    ಯುಗ್ ಸಂತೋಷ್ ಶೆಟ್ಟಿ  ಗೆ ಶೇ 82. 60 ಅಂಕ.

Mumbai News Desk

ಶ್ರೀ ಮಹಿಷಮರ್ದಿನಿ ದೇವಸ್ಥಾನ ಬೊರಿವಲಿ ವಾರ್ಷಿಕ ಪೂಜಾ ಮಹೋತ್ಸವ ಸಂಪನ್ನ ,

Mumbai News Desk

ಬಂಟರ ಸಂಘ, ಮುಂಬಯಿ, ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿ ಮಹಿಳಾ‌ ವಿಭಾಗ- ಆಟಿದ ಪೊರ್ಲ್ ತಿರ್ಲ್ ಕಾರ್ಯಕ್ರಮ

Mumbai News Desk

ಜೈ ಶ್ರೀ ವಿಶ್ವಕರ್ಮ ಭಜನಾ ಮಂಡಳಿಯ 15ನೇ ವರ್ಷದ ಸಂಭ್ರಮ

Mumbai News Desk