September 6, 2026
Mumbai News Kannada
ಮುಂಬಯಿ

ಶ್ರೀ ಶನಿ ಮಹಾತ್ಮ ಪೂಜಾ ಸಮಿತಿ ಇರಾನಿ ಕೊಲನಿ ಮಲಾಡ್ ಪೂರ್ವ 71ನೇ ವಾರ್ಷಿಕ ಪೂಜಾ ಮಹೋತ್ಸವ ಸಂಪನ್ನ





ಸಮಿತಿಯ ಏಕತೆ, ಧಾರ್ಮಿಕ ಪ್ರಜ್ಞೆಯಿಂದ ಕಾರ್ಯಕ್ರಮ ಯಶಸ್ಸು : ನಗರಸೇವಕಿ ಶ್ರೀ ಕಲಾ ಪಿಳ್ಳೈ

ಚಿತ್ರ, ವರದಿ : ರಮೇಶ್ ಉದ್ಯಾವರ


ಮಲಾಡ್, ಮಾ. 30: ವರ್ಷಂ ಪ್ರತಿ ಜರಗುವ ಬೃಹತ್ ಪೂಜಾ ಮಹೋತ್ಸವ ಕಾರ್ಯಕ್ರಮದಲ್ಲಿ ಶ್ರೀ ಶನಿ ದೇವರ ಅನುಗ್ರಹದ ದಿವ್ಯ ಶಕ್ತಿ ಇಲ್ಲಿ ಅಡಗಿದೆ. ದೇವರ ಮೇಲೆ ನಾವು ನಂಬಿಕೆ ಇಟ್ಟಾಗ ಅಗೋಚರ ಶಕ್ತಿ ಸದಾ ನಮ್ಮನ್ನು ಕಾಪಾಡುತ್ತದೆ. ಇಂತಹ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲು ಸಮಿತಿಯಲ್ಲಿನ ಏಕತೆ, ಭಕ್ತಿ, ಧಾರ್ಮಿಕ ಪ್ರಜ್ಞೆಯಿಂದ ಸಾಧ್ಯ ಎಂದು ಬಿಎಂಸಿ ಸೌತ್ ವಾರ್ಡ್ ಸಮಿತಿಯ ಅಧ್ಯಕ್ಷ ಶ್ರೀಕಲಾ ಪಿಳ್ಳೈ ನುಡಿದರು.
ಮಾ. 28ರಂದು ಮಲಾಡ್ ಇರಾನಿ ಕೊಲನಿಯ ಶ್ರೀ ಶನಿಮಹಾತ್ಮ ಪೂಜಾ ಸಮಿತಿಯು ಆಯೋಜಿಸಿದ 71ನೇ ವಾರ್ಷಿಕ ಪೂಜಾ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ಮೊದಲು ಜರುಗಿದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು ಸರಕಾರವು ಮಹಿಳೆಯರಿಗಾಗಿ ಆರೋಗ್ಯ ಇನ್ನಿತರ ಸಾಮಾಜಿಕ ಸವಲತ್ತುಗಳನ್ನು ಒದಗಿಸಿದ್ದು ಅದರ ಸಂಪೂರ್ಣ ಪ್ರಯೋಜನವನ್ನು ಪಡೆಯುವಂತೆ ಕರೆ ನೀಡಿದರು.


ಗೌರವ ಅತಿಥಿಯಾಗಿ ಉಪಸ್ಥಿತರಿದ್ದ ಸ್ತ್ರೀರೋಗ ತಜ್ಞೆ ಡಾI. ಆಶಾ ಹೆಗ್ಡೆ ಮಹಿಳೆಯರನ್ನು ಉದ್ದೇಶಿಸಿ ಮಾತನಾಡಿದ ಅವರು ದೈನಂದಿನ ಒತ್ತಡದ ಬದುಕಿನಲ್ಲಿ ಮಹಿಳೆಯರು ಆರೋಗ್ಯದ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಬೇಕು. ಜನ್ಮ ನೀಡುವ ತಾಯಿಯ ಆರೋಗ್ಯ ಉತ್ತಮವಾಗಿದ್ದರೆ ಆರೋಗ್ಯವಂತ ಮಗು ಹುಟ್ಟಲು ಸಾಧ್ಯ. ದೇಹಕ್ಕೆ ದೈನಂದಿನ ವ್ಯಾಯಾಮದ ಮೂಲಕ ಉತ್ತಮ ಆರೋಗ್ಯ ಪಡೆಯಲು ಸಾಧ್ಯ, ಈ ಹವ್ಯಾಸವನ್ನು ಮಹಿಳೆಯರು ಸದಾ ರೂಢಿಸಿ ಕೊಳ್ಳಬೇಕು. ಆಧುನಿಕ ಬದುಕಿನಲ್ಲಿ ಮದುವೆಯಾಗುವ ವಧು ವರರಿಗೆ ವೈದ್ಯಕೀಯ ಪರೀಕ್ಷೆಗಳು ಅಗತ್ಯವಿದ್ದು, ಆ ಮೂಲಕ ಆರೋಗ್ಯವಂತ ಮಗುವಿಗೆ ಜನ್ಮ ನೀಡಲು ಸಾಧ್ಯ ಎಂದು ಹೇಳಿದರು.

ಸ್ಥಳೀಯ ನಗರ ಸೇವಕಿ ವರ್ಷಾ ಎಸ್ ತೆಂಬ್ವಾಲ್ಕರ್ ಮಂದಿರದ ಒಗ್ಗಟ್ಟಿನ ಸೇವೆ ಸಾಮಾಜಿಕ ಕಾರ್ಯಕ್ರಮಗಳನ್ನು ಪ್ರಶಂಸಿದ್ದರು.
ಈ ಸಂದರ್ಭದಲ್ಲಿ ಕಾಂದಿವಿಲಿ ಪೂರ್ವ ವಿಧಾನಸಭಾ ಸದಸ್ಯ ಅತುಲ್ ಭಾತಲ್ಕರ್ ಆಗಮಿಸಿ ಶ್ರೀ ಶನಿ ದೇವರ ಪ್ರಸಾದ ಸ್ವೀಕರಿಸಿ ಮಂದಿರದ ರಸ್ತೆಗೆ ಶ್ರೀ ಶನಿ ಮಂದಿರ ಮಾರ್ಗ ಹೆಸರಿಡುವ ಬಗ್ಗೆ ಪ್ರಸ್ತಾಪಿಸಿ, ಈ ಪ್ರಕ್ರಿಯೆ ಶೀಘ್ರ ಮುಗಿಸುವಂತೆ ಸ್ಥಳೀಯ ನಗರ ಸೇವಕರಿಗೆ ಸೂಚನೆ ನೀಡಿದರು.
ಅತಿಥಿ ಗಣ್ಯರನ್ನು ಸ್ವಾಗತಿಸಿದ ಸಮಿತಿಯ ಅಧ್ಯಕ್ಷ ಮೋಹನ್ ಜಿ ಬಂಗೇರ ಮಹಾನಗರದ ಅತಿ ಹಿರಿಯ ಧಾರ್ಮಿಕ ಸಂಸ್ಥೆ ನಮ್ಮ ಹಿರಿಯರ ಒಗ್ಗಟ್ಟಿನ ಪ್ರತೀಕವಾಗಿದೆ. ಶ್ರೀ ಶನಿದೇವರ ಅನುಗ್ರಹದಿಂದ ಪ್ರತಿ ವರ್ಷವೂ ನಡೆಯುವ ಮಹಾಪೂಜೆಯು ಶ್ರೀದೇವರ ಅನುಗ್ರಹದಂತೆ ಜರುಗುತ್ತಿದ್ದು ಇಲ್ಲಿ ಭೇದಭಾವವಿಲ್ಲದೆ ಸಮಿತಿ ಸದಸ್ಯರು ಒಗ್ಗಟ್ಟಾಗಿ ಕಾರ್ಯಕ್ರಮ ನಿರ್ವಹಣೆ ಒಂದು ವಿಶೇಷತೆ ಪಡೆದಿದೆ ಎಂದು ಹೇಳಿದರು. ಡೆಕೋರೇಟರ್ ಉದ್ಯಮಿ ಸಂಜಯ್ ಮಿಶ್ರಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಕೀರ್ತಿ ಸಾಲ್ಯಾನ್ ಅತಿಥಿ ಗಣ್ಯರನ್ನು ಪರಿಚಯಿಸಿದರು ಈ ಸಂದರ್ಭದಲ್ಲಿ ಸ್ಥಳೀಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು ಸ್ವಾತಿ ಜಾಧವ್ ಧನ್ಯವಾದವಿತ್ತರು. ಸಮಿತಿಯ ಸದಸ್ಯೆ ಜಯಾ ಎಂ.ಬಂಗೇರ ಕಾರ್ಯಕ್ರಮ ನಿರೂಪಿಸಿದರು.


ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ಗುರುನಾರಾಯಣ ಯಕ್ಷಗಾನ ಮಂಡಳಿ ಸಾಂತಾಕ್ರೂಜ್ ಇವರಿಂದ ಪಟ್ಟದ ಗುಳಿಗೆ ತುಳು ಯಕ್ಷಗಾನ ಪ್ರದರ್ಶನಗೊಂಡಿತು.
. ಬೆಳಿಗ್ಗೆ ವೇದಮೂರ್ತಿ ಕೆ ಗೋವಿಂದ ಭಟ್ ರವರ ನೇತೃತ್ವದಲ್ಲಿ ಗಣಪತಿ ಹೋಮ ಅಶ್ವತ್ಥ ಪೂಜೆ ಧಾರ್ಮಿಕ ಕೈಂಕರ್ಯ ಜರುಗಿತು. ಆಬಳಿಕ ಪ್ರಸಾದ ವಿತರಣೆ ಪಲ್ಲಪೂಜೆ ನೆರವೇರಿತು. ಬಳಿಕ ಮಧ್ಯಾಹ್ನ 12 ಗಂಟೆಗೆ ಶನಿದೇವರಿಗೆ ಪೂಜಾ ಕೈಂ ಕರ್ಯ ಮಹಾರತಿ ನೆರವೇರಿತು. ಬಳಿಕ ಅನ್ನ ಸಂತರ್ಪಣೆ ಜರುಗಿತು. ಮಧ್ಯಾಹ್ನ ಸಮಿತಿಯ ಮಹಿಳಾ ಸದಸ್ಯರಿಂದ ಭಜನೆ ಕಾರ್ಯಕ್ರಮ ಜರುಗಿದ ಬಳಿಕ ಬಲಿಮೂರ್ತಿ ಶೋಭಾ ಯಾತ್ರೆ, ಕಲಶ ಪ್ರತಿಷ್ಠೆ ಜರುಗಿತು ಬಳಿಕ ಶನಿ ಗ್ರಂಥ ಪಾರಾಯಣ ನಡೆಯಿತು. ದಿನೇಶ್ ಕೋಟ್ಯಾನ್ ತಂಡ ವಾಲಗ, ವಾದ್ಯದಲ್ಲಿ ಸಹಕರಿಸಿದರು. ಸ್ಥಳೀಯ ಗಣ್ಯರು ಧಾರ್ಮಿಕ ಚಿಂತಕರು ಸದ್ಭಕ್ತರು ದಿನಪೂರ್ತಿ ಶನಿ ದೇವರ ದರ್ಶನ ಅನುಗ್ರಹ ಪಡೆದು ಪುನೀತರಾದರು.


ಅಧ್ಯಕ್ಷ ಮೋಹನ್ ಜಿ ಬಂಗೇರ ಗೌರವ ಕಾರ್ಯದರ್ಶಿಗಳಾದ ಎಚ್ಎಸ್ ಕರ್ಕೇರ ಎಂ ಎನ್ ಸಾಲ್ಯಾನ್ ಗೌರವ ಕೋಶಾಧಿಕಾರಿಗಳಾದ ಕೆಎನ್ ಸುವರ್ಣ ಅತುಲ್ ಎಂ ಓಝಾ ಸಮಿತಿಯ ಸದಸ್ಯರಾದ ಎಸ್ ಎನ್ ಕೋಟ್ಯಾನ್ ಎನ್ ಎನ್ ಪೂಜಾರಿ ಎಸ್ಎ ಸಾಲ್ಯಾನ್ ಎಂ ಎನ್ ಕೋಟ್ಯಾನ್ ಪಿ ಆರ್ ಅಮೀನ್ ಬಿ ಹೆಚ್ ಹೆಜ್ಮಾಡಿ ಜಯಾ ಎಮ್ ಬಂಗೇರ ತನೂಜ್ ಕಪ್ಪನ್ಕಲ್ ಯು ವಿ ರಾವ್ ಅರ್ಚಕರಾದ ಸುಧಾಕರ್ ಎಂ ಶೆಟ್ಟಿ ಭುವಾಜಿ ಕೆಎನ್ ಸಿ ಸಾಲ್ಯಾನ್ ಉಪ ಸಮಿತಿಯ ಸದಸ್ಯರಾದ ಪಿ ಪಿ ಸಾಲ್ಯಾನ್ ಚಂದ್ರಾವತಿ ಪುತ್ರನ್ ಜಿ ಆರ್ ಸಾಲ್ಯಾನ್ ಸೂರಜ್ ಸುವರ್ಣ ಸುಜಿತ್ ಕರ್ಮೊಕರ್ ಆರ್ ಎಸ್ ದೇವಾಡಿಗ ಆರ್ ವೈ ಪುತ್ರನ್ ಎನ್ ಆರ್ ಬಂಗೇರ ವಿ ಆರ್ ವಾಘ್ಮಾರೆ ಸಹಕರಿಸಿದರು.



Related posts

ಜೇಷ್ಠ ನಾಗರಿಕರಿಗಾಗಿ ಆಯೋಜಿಸಿದ ವಿಶಿಷ್ಟ ಕಾರ್ಯಕ್ರಮ ” ಪಿಂದಣಿಗೆದ ತುಪ್ಪೆ”

Mumbai News Desk

ಅಂಧೇರಿ ಶ್ರೀ ಮಹಾಲಕ್ಷ್ಮೀ ಭಜನಾ ಮಂಡಳಿ ವತಿಯಿಂದ ಒಡಿಯೂರು ಶ್ರೀ ಗಳಿಗೆ ಗುರುವಂದನೆ

Mumbai News Desk

ಶ್ರೀ ಮಹಾಲಕ್ಷ್ಮೀ ಭಜನಾ ಮಂಡಳಿ ಅಂಧೇರಿ ಪಶ್ಚಿಮ –  35ನೇ ವಾರ್ಷಿಕ ಮಹಾಪೂಜೆ ಸಂಪನ್ನ, ಹಿರಿಯ ಸೇವಾ ಕರ್ತರಿಗೆ ಗೌರವ

Mumbai News Desk

ಮುಂಬೈ: ಬಾಂದ್ರಾದಲ್ಲಿ ರೈಲ್ವೆ ಭೂಮಿ ತೆರವು ವೇಳೆ ಭಾರಿ ಹಂಗಾಮು, ಪೊಲೀಸರ ಮೇಲೆ ಕಲ್ಲು ತೂರಾಟ, ಲಾಠಿ ಪ್ರಹಾರ

Mumbai News Desk

ಬೊರಿವಲಿ: ಜಗದೀಶ್ವರಿ ಸನ್ನಿಧಿಯಲ್ಲಿ ಬ್ರಹ್ಮಕಲಶೋತ್ಸವ ಸಂಭ್ರಮ; ಲೋಕಕಲ್ಯಾಣಕ್ಕೆ ಧರ್ಮ ಜಾಗೃತಿ ಅಗತ್ಯ: ಪೇಜಾವರ ಶ್ರೀ

Mumbai News Desk

ಎಸ್ ಎಸ್ ಸಿ ಪರೀಕ್ಷೆಯಲ್ಲಿ ಶ್ರದ್ಧಾ ಗಣೇಶ್ ನಾಯ್ಕ ಗೆ ಶೇ 95.60 ಅಂಕ.

Mumbai News Desk