September 6, 2026
Mumbai News Kannada
ಮುಂಬಯಿ

ಮುಂಬೈ : ಮೊಗವೀರ ಕೋ-ಆಪರೇಟಿವ್ ಬ್ಯಾಂಕ್ ಎಂಪ್ಲಾಯೀಸ್ ಸ್ಪೋರ್ಟ್ಸ್ ಕ್ಲಬ್ ಮತ್ತು ಪೂಜಾ ಸಮಿತಿ: 44ನೇ ವಾರ್ಷಿಕ ಶ್ರೀ ಸತ್ಯನಾರಾಯಣ ಪೂಜಾ ಮಹೋತ್ಸವ ಸಂಪನ್ನ





ಮೊಗವೀರ ಕೋ-ಆಪರೇಟಿವ್ ಬ್ಯಾಂಕ್ ಎಂಪ್ಲಾಯೀಸ್ ಸ್ಪೋರ್ಟ್ಸ್ ಕ್ಲಬ್ ಹಾಗೂ ಪೂಜಾ ಸಮಿತಿಯ ವತಿಯಿಂದ ಮಾರ್ಚ್ 28 ರಂದು 44ನೇ ವಾರ್ಷಿಕ ಶ್ರೀ ಸತ್ಯನಾರಾಯಣ ಪೂಜಾ ಮಹೋತ್ಸವವನ್ನು ಅತ್ಯಂತ ಅಂಧೇರಿ ಪೂರ್ವ ಸಾಕಿನಾಕ ಸಾಕಿ ವಿಹಾರ್ ರೋಡ್ ನಲ್ಲಿರುವ ಪ್ರಣೀಕ್ ಚೇಂಬರ್ ನ ಜಿ 18, 19ರ ಮೊಗವೀರ ಬ್ಯಾಂಕ್ ಶಾಖೆಯಲ್ಲಿ ಶ್ರದ್ಧಾ ಭಕ್ತಿಯಿಂದ ವಿಧಿ-ವಿಧಾನಗಳೊಂದಿಗೆ ಸಂಪನ್ನಗೊಂಡಿತು.
ಅಂದು ಬೆಳಿಗ್ಗೆ ಪುರೋಹಿತರಾದ ರಘುಪತಿ ಭಟ್ ಅವರ ಪೌರೋಹಿತ್ಯದಲ್ಲಿ ಶ್ರೀ ಸತ್ಯನಾರಾಯಣ ಪೂಜೆಯು ಸಮಿತಿಯ ಸದಸ್ಯೆ ದೀಕ್ಷಾ ಜಯೇಶ್ ಕೋಟ್ಯಾನ್ ಅವರ ಯಜಮಾನಿಕೆಯಲ್ಲಿ ಭಕ್ತಿಪೂರ್ವಕವಾಗಿ ಜರುಗಿತು. ಪೂಜಾ ವಿಧಿಯಾದ ಬಳಿಕ ಬ್ಯಾಂಕ್ ನ ಸಿಬ್ಬಂದಿ ವರ್ಗ ಹಾಗೂ ಮಾಜಿ ಸಿಬ್ಬಂದಿಗಳು ಭಜನಾ ಕಾರ್ಯಕ್ರಮವನ್ನು ನೆರವೇರಿಸಿದರು.


ಈ ಸಂದರ್ಭದಲ್ಲಿ ಬ್ಯಾಂಕಿನ ನಿರ್ದೇಶಕ ಭಾಸ್ಕರ್ ಬಿ ಸಾಲ್ಯಾನ್, ಹರೀಶ್ಚಂದ್ರ ಕಾಂಚನ್, ಸಿ ಇ ಓ ಸ್ಮಿತಾ ಕಾಂಚನ್, ಎ ಜಿ ಎಂ ಯದುವೀರ್ ಪುತ್ರನ್, ಬ್ಯಾಂಕ್ ನ ಕಾರ್ಮಿಕ ನಾಯಕ ಮುಖೇಶ್ ಮೆಂಡನ್, ಅಧ್ಯಕ್ಷ ದಿನೇಶ್ ಕೋಟ್ಯಾನ್, ಕಾರ್ಯದರ್ಶಿ ಪ್ರಮೋದ್ ಪುತ್ರನ್, ಕೋಶಾಧಿಕಾರಿ ಅನಿಕೇತ್ ಕರ್ಕೇರ ಸೇರಿದಂತೆ ಸಮಿತಿಯ ಸದಸ್ಯರು, ಮಾಜಿ ಸಿಬ್ಬಂದಿಗಳು ಉಪಸ್ಥಿತರಿದ್ದರು. ಪೂಜಾ ಕಾರ್ಯಕ್ಕೆ ತನು -ಮನ -ಧನದ ಸಹಕಾರವನವಿತ್ತು ಸಹಕರಿಸಿದ ಬ್ಯಾಂಕಿನ ನಿರ್ದೇಶಕ ಮಂಡಳಿಯವರಿಗೂ, ಪ್ರಬಂಧಕರಿಗೂ ಮಾಜಿ ಸಿಬ್ಬಂದಿ ವರ್ಗದ ಸದಸ್ಯರಿಗೂ, ಶ್ರೀ ಮದ್ಭಾರತ ಮಂಡಳಿ, ಅಂಧೇರಿ ಶಾಖೆಯ ಪ್ರಬಂಧಕ ಸುಮನ್ ಕರ್ಕೇರ ಎಲ್ಲಾ ಭಕ್ತಾಭಿಮಾನಿಗಳಿಗೆ ಕಾರ್ಯದರ್ಶಿ ಪ್ರಮೋದ್ ಪುತ್ರನ್ ಧನ್ಯವಾದ ಸಮರ್ಪಿಸಿದರು. ಅಂತಿಮವಾಗಿ ವಾಸು ಉಪ್ಪುರೂ ಮಹಾಮಂಗಳಾರತಿ ಗೈದರು. ಹರೀಶ್ ಪುತ್ರನ್ ಪ್ರಾಥಿಸಿದರು. ಕೊನೆಗೆ ತೀರ್ಥ, ಪ್ರಸಾದ ಹಾಗೂ ಮಹಾ ಪ್ರಸಾದ ವಿನಿಯೋಗದೊಂದಿಗೆ ಕಾರ್ಯಕ್ರಮವು ಸಂಪನ್ನಗೊಂಡಿತು.



Related posts

ಶ್ರೀ ನಿತ್ಯಾನಂದ ಸೇವಾ ಸಂಸ್ಥೆ ಮೀರಾಭಾಯಂದರ್ : ಗುರುಪೂರ್ಣಿಮೆ ಆಚರಣೆ.

Mumbai News Desk

ಮಾನನಷ್ಟ ಪ್ರಕರಣದಲ್ಲಿ ಸಂಜಯ್ ರಾವುತ್ ದೋಷಿ, ಜೈಲು ಶಿಕ್ಷೆ – ನ್ಯಾಯಾಲಯದ ಮಹತ್ತರ ನಿರ್ಧಾರ.

Mumbai News Desk

ಶ್ರೀ ಅಯ್ಯಪ್ಪ ಸೇವಾ ಸಮಿತಿ, ಕಿಸಾನ್ ನಗರ ಥಾಣೆ ಇವರ ಇರುಮುಡಿ ಪೂಜೆ ಸಂಪನ್ನ

Mumbai News Desk

ತುಳು ಸಂಘ ಬೊರಿವಲಿ, 14ನೇ ವಾರ್ಷಿಕ ಮಹಾಸಭೆ, ನೂತನ ಅಧ್ಯಕ್ಷರಾಗಿ ಹರೀಶ್ ಮೈಂದನ್

Mumbai News Desk

ಶ್ರೀ ಮಹಾವಿಷ್ಣು ಮಂದಿರ ಡೊಂಬಿವಲಿ ಯಲ್ಲಿ ಆಷಾಢದಲ್ಲಿ ಒಂದು ದಿನದ ಸಂಭ್ರಮ*

Mumbai News Desk

ಮುಂಬೈ ಲೋಕಲ್ ರೈಲಿನಲ್ಲಿ ಬಾಗಿಲು ಮುಚ್ಚುವ ವಿವಾದ: ಚಾಕು ಇರಿತಕ್ಕೊಳಗಾಗಿದ್ದ ಯುವಕ ಸಾವು, ಆರೋಪಿ ಬಂಧನ

Mumbai News Desk